
ನಾವು ಪ್ರೀತಿ- ಪ್ರೇಮದ ಬಗೆಗಾದರೂ ಅಷ್ಟೊಂದು ಯೋಚಿಸ್ತೇವೋ ಇಲ್ಲವೋ. ಆದರೆ ಸೆಕ್ಸ್ ಬಗ್ಗೆಯಂತೂ ಯೋಚಿಸೋದು ಖಂಡಿತ. ಯಾಕೆಂದರೆ ಸೆಕ್ಸ್ ಚಟುವಟಿಕೆ ಅನ್ನುವುದು ಹೇಗೆ ದೇಹದ ಅವಶ್ಯಕತೆಯೋ ಹಾಗೇ ಮನಸ್ಸಿನ ಅವಶ್ಯಕತೆ ಕೂಡ ಹೌದು. ದಿನದಲ್ಲಿ ಒಮ್ಮೆಯಾದರೂ ಕಾಮದ ಯೋಚನೆಗಳು ಬರದ ಮನುಷ್ಯ ಪ್ರಾಣಿ ಜಗತ್ತಿನಲ್ಲಿ ಇರಲಾರದೇನೋ. ಹಾಗಿದ್ದರೆ ಗಂಡಸಿಗೆಷ್ಟು ಬಾರಿ, ಹೆಂಗಸಿಗೆಷ್ಟು ಬಾರಿ ಸೆಕ್ಸ್ ಬಗ್ಗೆ ಚಿಂತನೆಗಳು ಬರುತ್ತವೆ?
ಈ ಬಗ್ಗೆ ಕೆಲವು ವರ್ಷಗಳ ಹಿಂದೆ ಒಂದು ಪ್ರಸಿದ್ಧವಾದ ವಿಚಾರ ಹೀಗಿತ್ತು- ಗಂಡಸರು ಪ್ರತಿ 7 ನಿಮಿಷಕ್ಕೊಮ್ಮೆ ಸೆಕ್ಸ್ ಬಗ್ಗೆ ಯೋಚಿಸ್ತಾರೆ. ಯಾರು ಹೀಗೆ ಯೋಚಿಸುವವರು? ಸುಮಾರು 99 ಶೇಕಡ ಗಂಡಸರು ಹೀಗೆ ಯೋಚಿಸ್ತಾರಂತೆ. ಆಗ ಕೆಲವರು ಹೀಗೆ ತಮಾಷೆ ಮಾಡಿದರು- 99 ಶೇಕಡ ಗಂಡಸರು 7 ನಿಮಿಷಕ್ಕೊಮ್ಮೆ ಸೆಕ್ಸ್ ಬಗ್ಗೆ ಯೋಚಿಸೋದೇನೋ ಸರಿ, ಹಾಗಿದ್ರೆ ಉಳಿದ ಒಂದು ಪರ್ಸೆಂಟ್ ಗಂಡಸರು ಯಾವುದರ ಬಗ್ಗೆ ಯೋಚಿಸ್ತಾರೆ? ಅದಕ್ಕಿನ್ನೂ ಯಾರೂ ಉತ್ತರ ಹೇಳಿಲ್ಲ. ಕೆಲವರು ಅದಕ್ಕೆ ಫುಡ್ ಅಂತ ಉತ್ತರ ಹೇಳಿದ್ದಾರೆ. ಅದಿರಲಿ.
ಗಂಡಸರು ಪ್ರತಿ 7 ನಿಮಿಷಕ್ಕೊಮ್ಮೆ ಸೆಕ್ಸ್ ಬಗ್ಗೆ ನಿಜಕ್ಕೂ ಯೋಚಿಸ್ತಾರಾ? ಹಾಗಾದರೆ ದಿನದ 24 ಗಂಟೆಯಲ್ಲಿ, ಅವರು ಸುಮಾರು 2700 ಬಾರಿ ಸೆಕ್ಸ್ ಬಗ್ಗೆ ಚಿಂತನೆ ನಡೆಸುತ್ತಾರೆ ಅಂತಾಯಿತು! ಇದು ಸಾಧ್ಯವಾ? ಟೆರ್ರಿ ಫಿಶರ್ ಎಂಬ ಲೈಂಗಿಕ ವಿಜ್ಞಾನಿ ಈ ಬಗ್ಗೆ ಒಂದು ಸರ್ವೇ ನಡೆಸಿದಳು. ಇದರಲ್ಲಿ ಗೊಂದಲಕಾರಿಯಾದ ಉತ್ತರಗಳು ಕಂಡುಬಂದವು. ಆಕೆ ಅಧ್ಯಯನಕ್ಕೆ ಆಯ್ದುಕೊಂಡದ್ದು 300 ಗಂಡಸರನ್ನು. ಆದರೆ ಇದು ಬಹಳ ಸಣ್ಣ ಸಂಖ್ಯೆ. ಇದರಲ್ಲಿ ಹಲವರು ದಿನಕ್ಕೆ 900 ಬಾರಿ ಚಿಂತಿಸಿದ್ದು ಕಂಡುಬಂದರೆ, ಇನ್ನು ಕೆಲವರು ಒಂದು ಸಲವೂ ಚಿಂತಿಸಿದ್ದು ಗೊತ್ತಾಗಲಿಲ್ಲ. ಹಾಗಾಗಿ ಈ ಮೊದಲಿನ ಹೇಳಿಕೆಗೆ ಯಾವುದೇ ಪೂರಕ ಸಾಕ್ಷಿ ಸಿಗಲಿಲ್ಲ. ಆದರೆ ಮನಸ್ಸಿನ ಚಿಂತನೆಯ ಬಗ್ಗೆ ಯಾವುದೇ ಅಧ್ಯಯನವನ್ನು ನೂರಕ್ಕೆ ನೂರು ನಿಖರ ಅಂತ ಹೇಳುವುದು ಕಷ್ಟ. ಸೆಕ್ಸ್ ಬಗ್ಗೆಯಂತೂ ಇನ್ನೂ ಕಷ್ಟ.
ದಾಂಪತ್ಯ ಸುಖಕ್ಕೆ ಪ್ರೀತಿಯಲ್ಲಿ ಬೀಳ್ಬೇಡಿ, ಪ್ರೀತಿಯಲ್ಲಿ ಎದ್ದೇಳಿ...
ಸರಿ, ಒಂದನ್ನಂತೂ ಒಪ್ಪಿಕೊಳ್ಳಲೇ ಬೇಕು. ಅದೇನು ಅಂದರೆ, ಪುರುಷರು ಸ್ತ್ರೀಯರಿಗಿಂತ ಅತಿ ಹೆಚ್ಚು ಬಾರಿ ಕಾಮುಕ ಯೋಚನೆಗಳನ್ನು ಅನುಭವಿಸುತ್ತಾರೆ ಅಂತ. ಪುರುಷ ಮನೆಯಲ್ಲಿ ಹೆಂಡತಿಯನ್ನು ನೋಡಿಯೂ ಸೆಕ್ಸ್ ಚಿಂತನೆ ಮಾಡಬಲ್ಲ. ಕಚೇರಿಯಲ್ಲಿ ಕೊಲೀಗ್fನು ನೋಡಿದರೂ ಲೈಂಗಿಕ ಯೋಚನೆಗಳನ್ನು ಅನುಭವಿಸಬಲ್ಲ. ಆದರೆ ಸ್ತ್ರೀ ಹಾಗಲ್ಲ. ಆಕೆ ಅಷ್ಟೊಂದು ಮುಕ್ತವಾಗಿ ಅದನ್ನು ಯೋಚಿಸಲಾರಳು. ಅದ್ಯಾಕೆ ಅನ್ನುವುದಕ್ಕೂ ನಮ್ಮ ಸಾಂಸ್ಕೃತಿಕ ಹಿನ್ನೆಲೆಗಳಲ್ಲೇ ಉತ್ತರ ಕಂಡುಕೊಳ್ಳಬಹುದು.
ನಾವು ಗಂಡುಮಕ್ಕಳನ್ನು ಬೆಳೆಸುವುದಕ್ಕೂ ಹೆಣ್ಣುಮಕ್ಕಳನ್ನು ಬೆಳೆಸುವುದಕ್ಕೂ ವ್ಯತ್ಯಾಸವಿದೆ. ಗಂಡುಮಕ್ಕಳು ಸಾಮಾನ್ಯವಾಗಿ ಬೀದಿಯಲ್ಲಿ, ಇತರ ಗಂಡುಮಕ್ಕಳೊಡನೆ ಆಡುತ್ತಾ ಬೆಳೆಯುತ್ತಾರೆ. ಇಂಥ ಕಡೆ ಲೈಂಗಿಕ ಮಾತುಕತೆಗಳು ವಿನಿಮಯ ಆಗುವುದು ಹೆಚ್ಚು. ಹೆಣ್ಣುಮಕ್ಕಳನ್ನು ಇಂಥ ವಿಷಯದ ಬಗ್ಗೆ ಹೆಚ್ಚು ಚಿಂತಿಸದ ಹಾಗೆ ಕಟ್ಟುಪಾಡು ಮಾಡಿ ಬೆಳೆಸಲಾಗುತ್ತದೆ. ಹೀಗಾಗಿ ಸೆಕ್ಸ್ ಯೋಚನೆಗಳು ದೇಹ ಸಹಜವಾಗಿ ಮೂಡಿದರೂ ಅದನ್ನು ಹೆಣ್ಣು ಅದುಮಿಡುತ್ತಾಳೆ. ಒಂದು ವೇಳೆ ಯೋಚನೆ ಬಂದರೂ ಆದನ್ನು ಎಕ್ಸ್‌ಪ್ರೆಸ್ ಮಾಡುವುದಿಲ್ಲ. ಹಾಗಂತ ಸ್ತ್ರೀಯರು ಸೆಕ್ಸ್ ಯೋಚಿಸುವುದೇ ಇಲ್ಲ ಎಂದೇನೂ ಇಲ್ಲ. ಮುಕ್ತವಾಗಿ, ಇತರ ಹೆಣ್ಣುಮಕ್ಕಳ ಜೊತೆ ಲೈಂಗಿಕ ವಿಚಾರಗಳನ್ನು ಹಂಚಿಕೊಂಡು ಬೆಳೆದವರು, ಸೆಕ್ಸನ್ನೂ ತಮ್ಮ ವ್ಯಕ್ತಿತ್ವದ ಇನ್ನೊಂದು ಭಾಗವಾಗಿಯೇ ಪರಿಗಣಿಸುತ್ತಾರೆ. ಹೀಗಾಗಿ ಇವರು ಅದರ ಬಗ್ಗೆ ಗಂಡಸರಷ್ಟೇ ಯೋಚಿಸುತ್ತಾರೆ.
ದಾಂಪತ್ಯದಲ್ಲಿ ಸೆಕ್ಸ್ ಇಲ್ಲದಿದ್ದರೂ ಸುಖ ಜೀವನ ನಡೆಸಬಹುದಾ?
ಗಂಡಸರ ಸೆಕ್ಸ್ ಯೋಚನೆ ಮತ್ತು ಸ್ತ್ರೀಯರ ಸೆಕ್ಸ್ ಯೋಚನೆಗಳ ಸ್ವರೂಪ ಬೇರೆ ಬೇರೆ. ಗಂಡಸು ತನ್ನ ಮುಂದಿರುವ ಹೆಣ್ಣಿನ ಅಂಗಾಂಗಳನ್ನು ಬೆತ್ತಲೆಯಾಗಿ ಕಲ್ಪಿಸಿಕೊಳ್ಳಬಲ್ಲ. ಆಕೆಯ ಅತ್ಯಂತ ಖಾಸಗಿ ಭಾಗಗಳನ್ನೂ ಕಲ್ಪಿಸಿ ನೋಡಬಲ್ಲ. ಆದರೆ ಹೆಣ್ಣು ಅಷ್ಟೆಲ್ಲ ನೇರ ಯೋಚನೆ ಮಾಡುವುದಿಲ್ಲ. ಆಕೆಯದು ಸೆಕ್ಸ್ ಚಟುವಟಿಕೆಗಿಂತಲೂ ಹೆಚ್ಚಾಗಿ ಆಪ್ತತೆಯ, ಭಾವನಾತ್ಮಕವಾದ ಚಿಂತನೆ. ಈ ಹೆಣ್ಣಿನಿಂದ ತನಗೆ ಎಂಥ ಸುಖ ಸಿಗಬಹುದು ಎಂದು ಗಂಡಸಲು ಕಲ್ಪಿಸಿಕೊಂಡರೆ, ಈ ಗಂಡಸು ತನ್ನಲ್ಲು ಎಷ್ಟು ಸುರಕ್ಷಿತ ಬೆಚ್ಚಗಿನ ಸ್ಪಂದನೆಗಳನ್ನು ಮೂಡಿಸಬಲ್ಲ ಅಂತ ಹೆಣ್ಣು ಯೋಚನೆ ಮಾಡುತ್ತಾಳೆ. ಮಾನವನ ಚರಿತ್ರೆಯಲ್ಲಿ ಗಂಡು ಆಕ್ರಮಣಕಾರಿ, ಹೆಣ್ಣು ಸ್ವರಕ್ಷಣಾ ಸ್ವಭಾವದವಳು. ಕಾಮಜೀವನದಲ್ಲೂ ಇದೇ ಕಂಡುಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.