
ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಫೆ.25): ಮಕ್ಕಳಿಗೆ ಹೆತ್ತವರು ಬೇಡ ಅವರ ಆಸ್ತಿ ಮಾತ್ರ ಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ತನ್ನೆಲ್ಲ ಆಸ್ತಿ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಹಿರಿಯ ನಾಗರಿಕರೊಬ್ಬರಿಗೆ ನ್ಯಾಯ ಸಿಕ್ಕಿಲ್ಲ.
ಈ ಫೋಟೋದಲ್ಲಿ ಕಾಣುತ್ತಿರುವ ಹಿರಿಯ ನಾಗರಿಕರ ಹೆಸರು ಪ್ರಹ್ಲಾದ ಕುಲಕರ್ಣಿ. ಧಾರವಾಡದ ಸಂಗೊಳ್ಳಿ ರಾಯಣ್ಣ ನಗರದವರಾದ ಇವರಿಗೆ ವಯಸ್ಸು 84 ವರ್ಷ ಪಿಡಬ್ಲುಡಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ತಮಗಿರುವ ಮೂವರು ಮಕ್ಕಳಿಗೆ ಆಸ್ತಿಯನ್ನು ಸಮನಾಗಿ ಹಂಚಿ, ತಮ್ಮ ಹೆಸರನಲ್ಲೂ ಒಂದಿಷ್ಟು ಆಸ್ತಿ ಇಟ್ಟುಕೊಂಡಿದ್ದರು.
ಪ್ರಹ್ಲಾದ ಅವರಿಗೆ ಸಂಜೀವ ವೆಂಕಟಗಿರಿ ಹಾಗೂ ವಿಜಯ್ ಎಂಬ ಮೂವರು ಪುತ್ರರಿದ್ದಾರೆ ಮೂವರೂ ಮಕ್ಕಳಿಗೆ ಆಸ್ತಿ ಸಮನಾಗಿ ಹಂಚಲಾಗಿತ್ತು. ಆದರೆ ವೆಂಕಟಗಿರಿ ಅವರು ತಮ್ಮ ತಂದೆಗೆ ಎಂದು ಇಟ್ಟಿದ್ದ ಆಸ್ತಿ ಹಾಗೂ ಕುಟುಂಬದ ಚರಾಸ್ತಿ ಮತ್ತು ಸ್ಥಿರಾಸ್ತಿಯ ದಾಖಲೆ ಪತ್ರಗಳನ್ನಿಟ್ಟುಕೊಂಡು ತಾನೊಬ್ಬನೇ ಉಪಯೋಗಿಸಿಕೊಳ್ಳುತ್ತಿದ್ದಾನೆ ಎಂದು ಪ್ರಹ್ಲಾದ ಕುಲಕರ್ಣಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಹ್ಲಾದ ಅವರು ಕಳೆದ 2023 ಜೂನ್ ತಿಂಗಳಲ್ಲಿ ಧಾರವಾಡದ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ಮಗ ವೆಂಕಟಗಿರಿ, ಸೋಸೆ ನಂದಾ ಅವಳ ಮೆಲೆ ದೂರು ದಾಖಲು ಮಾಡಿದ್ದರು. ಅಲ್ಲಿಂದ ಇಲ್ಲಿಯವರಗೆ ತಮ್ಮ ಮೂಲ ದಾಖಲಾತಿಗಳನ್ನ ಪಡೆದುಕ್ಕೊಳ್ಳುವುದರ ಬಗ್ಗೆ 2 ವರ್ಷದಿಂದ ಹೋರಾಟವನ್ನ ನಡೆಸುತ್ತಿದ್ದಾರೆ.
ಇದನ್ನೂ ಓದಿ: 2ನೇ ಪುತ್ರನಿಗೆ ಅರ್ಥಗರ್ಭಿತ ನಾಮಕರಣ ಮಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಉಪವಿಭಾಗಾಧಿಕಾರಿಗಳ ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕ್ಷೇಮಾಭಿವೃದ್ಧಿ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ಕೋರ್ಟ್‌ನಲ್ಲಿ ಪ್ರಹ್ಲಾದ ಅವರ ಆಸ್ತಿಯ ದಾಖಲೆ ಪತ್ರಗಳನ್ನು ಹಿಂದಿರುಗಿಸಬೇಕು ಹಾಗೂ ಹಿರಿಯರಾದ ಪ್ರಹ್ಲಾದ ಅವರಿಗೆ ತೊಂದರೆ ಕೊಟ್ಟಲ್ಲಿ ಸಂಬಂಧಿಸಿದ ಪೊಲೀಸರು ಕಾನೂನು ಕ್ರಮ ಜರುಗಿಸಬೇಕು ಎಂದು ಆದೇಶವಾಗಿತ್ತು. ಆದರೆ, ಪೊಲೀಸರಿಂದ ನ್ಯಾಯ ಸಿಗದೇ ಹೋದಾಗ ಮತ್ತೆ ಪ್ರಹ್ಲಾದ ಅವರು ಜಿಲ್ಲಾಧಿಕಾರಿ ಮೊರೆ ಹೋಗಿದ್ದರು. ಅಲ್ಲೂ ಕೂಡ ಪ್ರಹ್ಲಾದ ಕುಲಕರ್ಣಿ ಅವರ ಪರವಾಗಿಯೇ ಆದೇಶವಾಗಿತ್ತು. ಡಿಸಿ ಹಾಗೂ ಎಸಿ ಆದೇಶಕ್ಕೂ ಕಿಮ್ಮತ್ತು ಕೊಡದ ಪ್ರಹ್ಲಾದ ಅವರ ಪುತ್ರ ವೆಂಕಟಗಿರಿ ಸ್ಥಿರಾಸ್ತಿ ಹಾಗೂ ಚರಾಸ್ತಿಯ ದಾಖಲೆಗಳನ್ನು ಹಿಂದಿರುಗಿಸಿಲ್ಲ. ಅಲ್ಲದೇ ಪೊಲೀಸರ ಯಾವ ಭಯವೂ ಆತನಿಗೆ ಇಲ್ಲದಾದಾಗ ಆತನ ಮೇಲೆ ನಾವು FIR ಸಹ ಮಾಡಿದ್ದೆವು ಎಂದು ವೆಂಕಟಗಿರಿ ಸಹೋದರ ಸಂಜೀವ ಹೇಳಿದರು.
ಕಳೆದ 2 ವರ್ಷಗಳ ಹಿಂದೆ ಪೋರ್ಜರಿ ಸಹಿ ಮಾಡಿ ಒಂದು ಮನೆಯನ್ನು ನಿಸ್ಸಾರ ಅಹ್ಮದ್ ಎಂಬುವರಿಗೆ ಮಾರಾಟ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಇನ್ನಿಬ್ಬರು ಪುತ್ರರ ಮೇಲೆ ಸುಳ್ಳು ದೂರು ದಾಖಲಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಈ ಸಂಬಂಧ ಸ್ವತಃ ಪೊಲೀಸ್ ಆಯುಕ್ತರೇ ನ್ಯಾಯ ಒದಗಿಸುವಂತೆ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಸೂಚಿಸಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಿರುವ ಕುಲಕರ್ಣಿ ಕುಟುಂಬ ಈ ಎಲ್ಲ ವಿಚಾರಗಳ ಸಂಬಂಧ ಇದೀಗ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಲು ಸಜ್ಜಾಗಿದೆ. ಅಲ್ಲದೇ ತಮ್ಮ ಆಸ್ತಿ ತಮಗೆ ಉಳಿಸಿಕೊಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನ ಆಟೋ ಚಾಲಕರಿಗೆ 1600 ಎಕರೆ ಜಾಗದಲ್ಲಿ ಮನೆ ನಿರ್ಮಾಣ: ಸಚಿವ ಜಮೀರ್ ಅಹಮದ್ ಖಾನ್!
ಒಟ್ಟಿನಲ್ಲಿ ನಕಲಿ ಸಹಿ ಮಾಡಿದರ ಬಗ್ಗೆ ವಿದ್ಯಾಗಿರಿ ಪೋಲಿಸರು ಸದ್ಯ ಪ್ರಹ್ಲಾದ್ ಕುಲಕರ್ಣಿ ಅವರ ಸಹಿ ಮತ್ತು ಮನೆ ಮಾರಾಟ ಮಾಡುವಾಗ ನಕಲಿ ಸಹಿ ಮಾಡಿದ ದಾಖಲಾತಿಗಳನ್ನ ಎಪ್ ಎಸ್ ಎಲ್ ಗೆ ಕಳುಹಿಸಲಾಗಿದೆ ಆದರೆ ಇನ್ನುವರೆಗೆ ಕಳೆದ ಒಂದು ವರೆ ತಿಂಗಳಿಂದ ಎಪ್ ಎಸ್ ಎಲ್ ವರದಿ ಬಾರದ ಹಿನ್ನಲೆಯಿಂದ ಸದ್ಯ ಪ್ರಹ್ಲಾದ್ ಕುಲಕರ್ಣಿ ಮತ್ತು ಅವರ ಮಗ ಸಜೀವ ಕುಲಕರ್ಣಿ ಅವರು ನ್ಯಾಯಕ್ಕಾಗಿ ಮಾದ್ಯಮಗಳ ಮೊರೆ ಹೋಗಿದ್ದಂತು ಸತ್ಯ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.