ಮಡದಿ ಕರೆ ತರಲು ಪಾಕ್‌ಗೆ ತೆರಳಿದ ವ್ಯಕ್ತಿಗೆ ನಿರಾಸೆ, ಬರೋಲ್ಲ ಅಂದಿದ್ಯಾಕೆ ಹೆಂಡ್ತಿ?

By Suvarna News  |  First Published Apr 23, 2024, 5:07 PM IST

ಪತ್ನಿ ಜೊತೆ ವಾಪಸ್ ಬರುವ ಕನಸು ಹೊತ್ತು ಪಾಕಿಸ್ತಾನಕ್ಕೆ ತೆರಳಿದ್ದ ವ್ಯಕ್ತಿಗೆ ನಿರಾಸೆಯಾಗಿದೆ. ಒಂದ್ಕಡೆ ಪತ್ನಿ ಕೈಕೊಟ್ರೆ ಮತ್ತೊಂದು ಕಡೆ ವೀಸಾ ವಿಸ್ತರಣೆಯಲ್ಲಿ ತೊಂದರೆಯಾಗಿದೆ. ಏನೂ ಇಲ್ಲದೆ ಜೈಲಿನಲ್ಲಿ ಕಾಲ ಕಳೆದ ವ್ಯಕ್ತಿ ಕೊನೆಗೂ ವಾಪಸ್ ಬಂದಿದ್ದಾನೆ.
 


ಪಾಕಿಸ್ತಾನದಲ್ಲಿರುವ ಪತಿಗೆ ಗುಡ್ ಬೈ ಹೇಳಿ ಪ್ರೇಮಿ ಜೊತೆ ಜೀವನ ನಡೆಸಲು ಭಾರತಕ್ಕೆ ಬಂದ ಸೀಮಾ ಹೈದರ್ ಒಂದ್ಕಡೆ ಚರ್ಚೆಯಲ್ಲಿದ್ದರೆ, ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋದ ಮಹಿಳೆಯೊಬ್ಬಳು ಪತಿ ಜೊತೆ ಭಾರತಕ್ಕೆ ಬರಲು ನಿರಾಕರಿಸಿದ ಇನ್ನೊಂದು ಘಟನೆ ಸದ್ಯ ಚರ್ಚೆಯಲ್ಲಿದೆ. ಪಾಕಿಸ್ತಾನ ಮೂಲದ ಮಹಿಳೆ ತನ್ನ ಐವರು ಮಕ್ಕಳ ಜೊತೆ ತವರಿಗೆ ತೆರಳಿದವಳು ವಾಪಸ್ ಬಂದಿರಲಿಲ್ಲ. ಆಕೆಯನ್ನು ಮನೆಗೆ ವಾಪಸ್ ಕರೆತರಲು ಸಾಕಷ್ಟು ಪ್ರಯತ್ನಪಟ್ಟ ಪತಿ ಕೊನೆಗೂ ಬರಿಗೈನಲ್ಲಿ ಹಿಂದಿರುಗಿದ್ದಾನೆ. ತನ್ನ ಪತ್ನಿ ಮತ್ತು ಐವರು ಮಕ್ಕಳನ್ನು ಮರಳಿ ಮನೆಗೆ ಕರೆತರಲು ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯನನ್ನು ಅಟ್ಟಾರಿ ಭೂ ಗಡಿಯ ಮೂಲಕ ಸೋಮವಾರ ಬರಿಗೈಯಲ್ಲಿ ಗಡಿಪಾರು ಮಾಡಲಾಗಿದೆ.

ಉತ್ತರ ಪ್ರದೇಶ (Uttar Pradesh ) ದ ಮೊರಾದಾಬಾದ್‌ನ 56 ವರ್ಷದ ಅಜ್ಮತ್ ಅಲಿ ಪತ್ನಿಯನ್ನು ಕರೆತರಲು ಪಾಕಿಸ್ತಾನ (Pakistan) ಕ್ಕೆ ತೆರಳಿದ ವ್ಯಕ್ತಿ. ಅಜ್ಮತ್ ಅಲಿ ಅವರು 90 ದಿನಗಳ ವೀಸಾ (Visa) ಪಡೆದು ಮೇ 16, 2022 ರಂದು ಪಾಕಿಸ್ತಾನವನ್ನು ತಲುಪಿದ್ದರು. ಅವರ ಪತ್ನಿ ಪಾಕಿಸ್ತಾನಿ. ಆಕೆಯನ್ನು ಮತ್ತು ಐವರು ಮಕ್ಕಳನ್ನು ಮರಳಿ ಪಡೆಯಲು ಅಜ್ಮಿತ್ ಅಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದ್ರೆ ಆಕೆ ಭಾರತಕ್ಕೆ ವಾಪಸ್ ಆಗಲು ನಿರಾಕರಿಸಿದ್ದಳು.

Tap to resize

Latest Videos

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಗ್ರ್ಯಾಂಡ್‌ ವೆಡ್ಡಿಂಗ್ ನಡೀತಿರೋ ಸ್ಟೋಕ್‌ಪಾರ್ಕ್‌ ಹೇಗಿದೆ?

ಅಜ್ಮತ್ ಅವರ ಎಲ್ಲಾ ಐವರು ಮಕ್ಕಳು ಭಾರತೀಯರು. 90 ದಿನಗಳ ವೀಸಾ ಮೇಲೆ ಪಾಕಿಸ್ತಾನಕ್ಕೆ ತೆರಳಿದ್ದ ಅಜ್ಮಿತ್, ವೀಸಾ ಅವಧಿ ಮುಗಿಯುತ್ತಿದ್ದಂತೆ ವೀಸಾ ವಿಸ್ತರಣೆಗಾಗಿ ಪಾಕಿಸ್ತಾನ ಆಂತರಿಕ ಸಚಿವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ವೀಸಾ ವಿಸ್ತರಣೆ ಆಗಲಿಲ್ಲ. ವೀಸಾ ಅವಧಿ ಮುಗಿದಿದೆ ಎನ್ನುವ ಕಾರಣಕ್ಕೆ ಪೊಲೀಸರು ಅಜ್ಮಿತ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ಲಾಹೋರ್ ಮೂಲದ ವಕೀಲ ತೌಸೀಫ್ಜಾದಾ ಖಾನ್ ಹೇಳಿದ್ದಾರೆ. 

ಅಜ್ಮತ್ 25 ವರ್ಷಗಳ ಹಿಂದೆ ಲಾಹೋರ್‌ನ ನಹೀದ್ ರಜಾ ಅವರನ್ನು ವಿವಾಹವಾಗಿದ್ದರು.  ದಂಪತಿಗೆ ಐದು ಮಕ್ಕಳು. ನಹೀದ್ ರಜಾ ಮತ್ತು ಅಜ್ಮಿತ್ ಕುಟುಂಬದ ಮಧ್ಯೆ ಸಣ್ಣ ಗಲಾಟೆಯಾಗಿತ್ತು. ಇದ್ರಿಂದ ನೊಂದ ನಹೀದ್ ರಜಾ ಮಕ್ಕಳನ್ನು ಕರೆದುಕೊಂಡು ತನ್ನ ಪಾಲಕರಿರುವ ಪಾಕಿಸ್ತಾನಕ್ಕೆ ತೆರಳಿದ್ದಳು. ಆ ನಂತ್ರ ಆಕೆ ಭಾರತಕ್ಕೆ ಬರಲಿಲ್ಲ.

ಗಂಡ-ಹೆಂಡ್ತಿ ಸಂಬಂಧದಲ್ಲಿ 3ನೇಯವರು ಬರ್ಬಾರದು ಅಂದ್ರೆ, ಹೀಗಿರಿ!

ಪತ್ನಿ ಮತ್ತು ಮಕ್ಕಳನ್ನು ಭಾರತಕ್ಕೆ ಕರೆತರಲು ಅಜ್ಮತ್, ಅತ್ತೆ ಮನೆಯವರ ಸಲಹೆಯಂತೆ ವೀಸಾ (Visa) ಪಡೆದು ಪಾಕಿಸ್ತಾನಕ್ಕೆ ತೆರಳಿದ್ದರು. ಅಲ್ಲಿ ಪತ್ನಿ ಮನವೊಲಿಸುವ ಕೆಲಸ ನಡೆದಿತ್ತು. ಜೊತೆಗೆ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ಮಧ್ಯೆ ವೀಸಾ ಗಲಾಟೆಯಾದ ಕಾರಣ, ಅಜ್ಮತ್ ಮೂರು ತಿಂಗಳು ಜೈಲಿನಲ್ಲಿ ಕಳೆದರು. ಜೈಲಿನಲ್ಲಿಯೂ ಅಜ್ಮಿತ್ ಸುಮ್ಮನಿರಲಿಲ್ಲ.  ವೀಸಾ ವಿಸ್ತರಣೆ (Visa Extension) ಮಾಡುವಂತೆ ನಿರಂತರವಾಗಿ ಪಾಕಿಸ್ತಾನದ ಆಂತರಿಕ ಸಚಿವಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ತಾಂತ್ರಿಕ ದೋಷದಿಂದ ಅಜ್ಮತ್ ವೀಸಾ ವಿಸ್ತರಣೆಯನ್ನು ನಿರಾಕರಿಸಲಾಗಿತ್ತು ಎಂದು ಮೂಲಗಳು ಹೇಳಿವೆ. ಇದೇ ಕಾರಣಕ್ಕೆ ಅಜ್ಮತ್ ತನ್ನ ಮಕ್ಕಳ ಪಾಲನೆ ಮತ್ತು ವಾಪಸಾತಿಗಾಗಿ ತನ್ನ ಪ್ರಕರಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಜ್ಮತ್ ರನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡ ಅವರ ಅತ್ತೆ ಮನೆಯವರು, ಅಜ್ಮಿತ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಅಜ್ಮತ್ ದಾಖಲೆಯನ್ನು ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿರಲಿಲ್ಲ. ಇದ್ರಿಂದ ಅವರ ವೀಸಾ ವಿಸ್ತರಣೆ ಮೊದಲು ವಿಳಂಬವಾಯ್ತು ನಂತ್ರ ನಿರಾಕರಿಸಲ್ಪಟ್ಟಿತು ಎಂದು ವಕೀಲರು ಹೇಳಿದ್ದಾರೆ. ಪತ್ನಿ – ಮಕ್ಕಳಿಗಾಗಿ ಪಾಕಿಸ್ತಾನಕ್ಕೆ ಹೋದ ವ್ಯಕ್ತಿ ಮೂರು ತಿಂಗಳು ಜೈಲೂಟ ತಿಂದು ಬರಿಗೈನಲ್ಲಿ ಬಂದಿದ್ದು ವಿಷಾದನೀಯ. 

click me!