ಬಾಲಿವುಡ್ ಖ್ಯಾತ ರ‍್ಯಾಪರ್ ಬಾದ್ ಷಾ. ಇವರ ಪ್ರತಿಯೊಂದೂ ಹಾಡು ದೊಡ್ಡ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತದೆ. ಸೂಪರ್‌ಸ್ಟಾರ್ ನಟ-ನಟಿಯರೊಂದಿಗೆ ಬಾದ್‌ಷಾ ಆಲ್ಬಂ ಮಾಡುತ್ತಾರೆ. ಸದ್ಯ ಈ ರ‍್ಯಾಪರ್ ಬಾದ್ ಷಾ ಪಾಕ್ ನಟಿಯೊಬ್ಬಳನ್ನು ಡೇಟ್ ಮಾಡುತ್ತಿದ್ದಾರೆ ಅನ್ನೋ ರೂಮರ್ಸ್ ಕೇಳಿ ಬರ್ತಿದೆ.
ಬಾಲಿವುಡ್ ಖ್ಯಾತ ರ‍್ಯಾಪರ್ ಬಾದ್ ಷಾ. ಇವರ ಪ್ರತಿಯೊಂದೂ ಹಾಡು ದೊಡ್ಡ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತದೆ. ಸೂಪರ್‌ಸ್ಟಾರ್ ನಟ-ನಟಿಯರೊಂದಿಗೆ ಬಾದ್‌ಷಾ ಆಲ್ಬಂ ಮಾಡುತ್ತಾರೆ. ಮಾತ್ರವಲ್ಲ ಹೊಸಬರಿಗೂ ಅವಕಾಶ ನೀಡುತ್ತಾರೆ. ಹೀಗಾಗಿ ಹಲವರು ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿ ಹಿಟ್ ಆಗಿ ಮತ್ತಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಸದ್ಯ ಈ ರ‍್ಯಾಪರ್ ಬಾದ್ ಷಾ ಪಾಕ್ ನಟಿಯೊಬ್ಬಳನ್ನು ಡೇಟ್ ಮಾಡುತ್ತಿದ್ದಾರೆ ಅನ್ನೋ ರೂಮರ್ಸ್ ಕೇಳಿ ಬರ್ತಿದೆ.
ಪಾಕಿಸ್ತಾನಿ ನಟಿ ಹನಿಯಾ ಅಮೀರ್‌ನನ್ನು ರಕ್ಷಿಸಲು ಬಾದ್‌ಶಾ ಇತ್ತೀಚೆಗೆ ಚಂಡೀಗಢದಿಂದ ದುಬೈಗೆ ಪ್ರಯಾಣ ಬೆಳೆಸಿದ್ದರು. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಹನಿಯಾ ಅಮೀರ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದುಬೈನಲ್ಲಿ ಜೋಡಿಯು ಎಂಜಾಯ್ ಮಾಡುತ್ತಿರುವ ಫೋಟೋಸ್ ಹಾಗೂ ವೀಡಿಯೋಗಳನ್ನು ಶೇರ್ ಮಾಡಲಾಗಿದೆ.
Hania Aamir: ನಾಟು ನಾಟು ಹಾಡಿಗೆ ಪಾಕ್ ಬೆಡಗಿಯ ಭರ್ಜರಿ ಸ್ಟೆಪ್: ನೆಟ್ಟಿಗರು ಫಿದಾ
ತಮ್ಮ ಮೊದಲ ಪೋಸ್ಟ್‌ನಲ್ಲಿ, ಹನಿಯಾ ಅವರು ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಬಾದ್‌ಶಾ ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುತ್ತಿದ್ದಾರೆ. ಹನಿಯಾ ಟೀ-ಶರ್ಟ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡಿದ್ದರೆ, ಬಾದ್‌ಶಾ ಕಪ್ಪು ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ನಂತರ ಡಿನ್ನರ್‌ನ ಪೋಟೋವನ್ನು ಶೇರ್ ಮಾಡಿದ್ದಾರೆ.
ವೀಡಿಯೋದಲ್ಲಿ ಬಾದ್‌ಷಾ ದುಬೈನ ಆಗಸವನ್ನು ತೋರಿಸುತ್ತಾ, ಸುಂದರವಾದ ಆಕಾಶ ಎಂದು ಹೇಳುತ್ತಾರೆ. ನಂತರ ಹನಿಯರನ್ನು ತೋರಿಸುತ್ತಾರೆ. ನಂತರ ಇಬ್ಬರೂ ಜೋರಾಗಿ ನಗುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಈ ಫೋಟೋಗಳಿಗೆ ಹನಿಯಾ ಅಮೀರ್, 'ಚಂಡೀಗಡದಿಂದ ಪಾರು ಮಾಡಲು ಬಂದವರು' ಎಂದು ಶೀರ್ಷಿಕೆ ನೀಡಿದ್ದಾರೆ.
ಪಾಕ್ ಮಾಜಿ ನಾಯಕ ಬಾಬರ್ ಅಜಂ ಪ್ರೇಯಸಿ ಈಕೆ, ಫ್ಯಾನ್ಸ್ ಪಾಕಿಸ್ತಾನದ 'ಅನುಷ್ಕಾ ಶರ್ಮ' ಅಂತಾರಂತೆ!
ಹನಿಯಾ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಜೋಡಿಯು ಗಾರ್ಡನ್‌ನಲ್ಲಿ ಕುಳಿತು ನಗುತ್ತಿರುವಾಗ ಸಂಗೀತ ಕಚೇರಿಯಲ್ಲಿರುವಂತೆ ನಟಿಸಿದ್ದಾರೆ. ರಾಪರ್ ಹಾಡುತ್ತಿದ್ದಂತೆ, ಹನಿಯಾ, 'ಲವ್ ಯು, ಬಾದ್‌ಶಾ' ಎಂದು ಹೇಳುತ್ತಾಳೆ. ನಂತರ, ಬಾದ್‌ಶಾ, ಹನಿಯಾಳನ್ನು ಪರಿಚಯಿಸುತ್ತಾ, ಇಂದು ನಮ್ಮೊಂದಿಗೆ ಪಾಕಿಸ್ತಾನದ ಪ್ರಸಿದ್ಧ ನಟಿ ಹಮಿಯಾ ಅಮೀರ್ ಇದ್ದಾರೆ ಎಂದು ಹೇಳುತ್ತಾರೆ. ಇವರಿಬ್ಬರೂ ದುಬೈನಲ್ಲಿ ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2023ರಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ ಸಮಯ ಕಳೆದಿದ್ದರು. ಹೀಗಾಗಿ ಇಬ್ಬರೂ ರಿಲೇಶನ್ ಶಿಪ್‌ನಲ್ಲಿದ್ದಾರೆ ಅನ್ನೋ ವದಂತಿ ಸಹ ಇದೆ.