ಈ ಸ್ಟೋರಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಬಳಿಕ ಸಾಕಷ್ಟು ಜನರು ಖುಷಿ ಪಟ್ಟಿದ್ದಾರೆ. ಅಂದಾಜು 20 ಲಕ್ಷ ವೀವ್ಸ್‌ಗಳು ಈ ಟ್ವೀಟ್‌ಗೆ ಬಂದಿದ್ದು, 33 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ.
ಬೆಂಗಳೂರು (ಜೂ.2): ನಡುರಸ್ತೆಯಲ್ಲಿ ಹೆಣ್ಣುಮಗಳನ್ನು ಪಾಪಿಯೊಬ್ಬ ಚೂರಿಯಿಂದ ಚುಚ್ಚುವಾಗ ಅಕ್ಕಪಕ್ಕದ ವ್ಯಕ್ತಿಗಳು ಮನುಷ್ಯತ್ವವೇ ಇಲ್ಲದಂತೆ ನೋಡುತ್ತಾ ನಿಂತಿದ್ದ, ತಮಗೆ ಸಂಬಂಧವೇ ಇಲ್ಲದಂತೆ ತಿರುಗಾಡುತ್ತಿದ್ದ ದೃಶ್ಯಗಳು ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಕೇಸ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು. ಬಹುಶಃ ಮನುಷ್ಯನಲ್ಲಿ ಮಾನವೀಯತೆಯೇ ಕಡಿಮೆಯಾಗಿದೆಯೇನೋ ಎಂದು ಅನಿಸುವಷ್ಟರ ಮಟ್ಟಿಗೆ ಇದ್ದ ಘಟನೆಗಳ ನಡುವೆ ಇಲ್ಲೊಂದು ಘಟನೆ ನಿಮ್ಮ ಮನಸ್ಸಿಗೆ ಮುದ ನೀಡುವುದು ಖಂಡಿತ. ನೀವು ಆರ್ಡರ್ ಮಾಡಿದ ಫುಡ್ ಒಂದು ನಿಮಿಷ ತಡವಾದರೆ, ಡೆಲಿವರಿ ಬಾಯ್‌ಗೆ ಗದರುವ, ಇಲ್ಲವೇ ಆರ್ಡರ್ ಮಾಡಿದ ವ್ಯಕ್ತಿಗಳು ಫೋನ್ ಪಿಕ್ ಮಾಡದೇ ಇದ್ದಾಗ ಅವರು ಬುಕ್ ಮಾಡಿದ ಆಹಾರವನ್ನು ಎಸೆದು ಹೋಗುವ ಡೆಲಿವರಿ ಬಾಯ್‌ಗಳು ಸಾಕಷ್ಟಿದ್ದಾರೆ. ಆದರೆ, ಡೆಲಿವರಿ ಮಾಡುವ ಸಮಯದಲ್ಲಿ ಹೂಕುಂಡ ಒಡೆದು ಹಾಕಿದ್ದಕ್ಕೆ, ಕ್ಷಮೆ ಕೋರಿ ಪತ್ರ ಬರೆದ ವ್ಯಕ್ತಿ, ಅದರ ಬದಲಿಗೆ ಹೊಸ ಹೂಕುಂಡವನ್ನು ಗ್ರಾಹಕನಿಗೆ ಗಿಫ್ಟ್ ಮಾಡಿದ ಘಟನೆ ನಡೆದಿದೆ. ಈ ಕುರಿತಾಗಿ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಇವರ ಟ್ವೀಟ್‌ಗೆ 20 ಲಕ್ಷ ವೀವ್ಸ್‌ಗಳು ಹಾಗೂ 33 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ.
ಮೇ 28 ರಂದು ಟ್ವಿಟರ್‌ನಲ್ಲಿ ಬರೆದುಕೊಂಡಿ ಎಲಿ ಮೆಕ್‌ಕ್ಯಾನ್, 'ನನ್ನ ಪತಿ ಇಂದು ಫುಡ್ ಡೆಲಿವರಿ ಅಪ್ಲಿಕೇಶನ್ ಮೂಲಕ ಆಹಾರ ಬುಕ್ ಮಾಡಿದ್ದರು. ಆದರೆ, ಇದನ್ನು ಮನೆಗೆ ತಂದು ನೀಡುವ ಸಮಯದಲ್ಲಿ ಡೆಲಿವರಿ ಬಾಯ್, ಮನೆಯ ಮುಂಭಾಗದಲ್ಲಿ ಇರಿಸಿದ್ದ ಹೂಕುಂಡವನ್ನು ಒಡೆದುಹಾಕಿದ್ದ. ಬಳಿಕ ನಮ್ಮನ್ನು ಕರೆದ ಆದ ತನ್ನ ತಪ್ಪಿಗೆ ಕ್ಷಮೆಯನ್ನು ಕೇಳಿದ್ದು ಮಾತ್ರವಲ್ಲದೆ, ಹೂಕುಂಡದ ಮೊತ್ತವನ್ನು ಭರಿಸುವುದಾಗಿಯೂ ಹೇಳಿದ್ದ. ಆದರೆ, ನನ್ನ ಪತಿ, ಇದು ಯಾರಿಗೆ ಬೇಕಾದರೂ ಆಗಬಹುದಿತ್ತು. ನೀವು ಬಹಳ ಒಳ್ಳೆಯ ವ್ಯಕ್ತಿ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದರು'. ಆ ಬಳಿಕ ಮೇ 31 ರಂದು ಮೆಕ್‌ಕ್ಯಾನ್ ಮತ್ತೊಮ್ಮೆ ಈ ಘಟನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೂಕುಂಡ ಒಡೆದು ಹಾಕಿದ್ದ ಡೆಲಿವರಿ ಬಾಯ್, ಹೊಸ ಹೂಕುಂಡವನ್ನು ಮನೆಗೆ ಕಳಿಸಿದ್ದಾನೆ ಎಂದು ತಿಳಿಸಿದ್ದಲ್ಲದೆ, ಅವರ ವರ್ತನೆಗೆ ಬಹಳ ಥ್ಯಾಂಕ್ಸ್ ಎಂದಿದ್ದಾರೆ.
ಅದರೊಂದಿಗೆ ಹೂಕುಂಡದ ಚಿತ್ರವನ್ನೂ ಹಾಕಿದ್ದು, ಡೆಲಿವರಿ ಬಾಯ್ ಬರೆದ ಪತ್ರವನ್ನೂ ಶೇರ್ ಮಾಡಿಕೊಂಡಿದ್ದಾರೆ. 'ಫುಡ್ ಡೆಲಿವರಿ ಬಾಯ್ ಈಗ ತಾನೆ ಇದನ್ನು ಮನೆಗೆ ಕಳಿಸಿದ್ದಾನೆ. ಆದರೆ, ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದ ನಾವು ಮನೆಗೆ ಬರುವಂತೆ ತಿಳಿಸಿದ್ದೆವು. ಬಹಳ ಸ್ವೀಡ್ ಹುಡುಗ. ಆಗಿರುವ ಘಟನೆಯ ಬಗ್ಗೆಯೆಲ್ಲಾ ನಾನು ಟ್ವೀಟ್ ಮಾಡಿದ್ದೇನೆ, ಅದು ವೈರಲ್ ಆಗಿದೆ ಎಂದು ಆತನಿಗೆ ತಿಳಿಸಿದೆ' ಎಂದಿದ್ದಾರೆ.
ಇನ್ನು ಆತ ಬರೆದಿರುವ ಪತ್ರದಲ್ಲಿ, 'ಹಲೋ ಇದು ನಿಮ್ಮ ಊಬರ್ ಈಟ್ಸ್ ಡ್ರೈವರ್ ಜೋರ್ಡನ್. ನಾನು ನಿಮಗೆ ಈ ಹೂಕುಂಡವನ್ನು ನೀಡಲು ಬಯಸಿದ್ದೇನೆ. ಭಾನುವಾರ ನಾನು ಬೀಳಿಸಿ ಒಡೆದು ಹಾಕಿದ್ದ ಹೂಕುಂಡಕ್ಕೆ ಬದಲಿಯಾಗಿ ಇದನ್ನು ತೆಗೆದುಕೊಳ್ಳಿ. ಇದು ಯಾವುದೇ ರೀತಿಯಲ್ಲೂ ನಾನು ನೀಡುತ್ತಿರುವ ಉಡುಗೊರೆಯಲ್ಲ ಹಾಗೂ ಆ ಹೂಕುಂಡದ ಜೊತೆಗಿರುವ ನಿಮ್ಮ ಭಾವನೆಗೆ ನೀಡುತ್ತಿರುವ ಬೆಲೆಯಲ್ಲ. ನನಗೆ ಗೊತ್ತು ನಿಮ್ಮಲ್ಲಿದ್ದ, ನಾನು ಬೀಳಿಸಿದ ಹೂಕುಂಡದಷ್ಟು ಇದು ಸುಂದರವಾಗಿಲ್ಲ. ಆದರೆ, ಇದನ್ನು ನೀವು ಬಳಕೆ ಮಾಡಿಕೊಳ್ಳುತ್ತೀರಿ ಎನ್ನುವ ನಂಬಿಕೆ ನನಗಿದೆ-ಜೋರ್ಡನ್' ಎಂದು ಬರೆದಿರುವ ಪತ್ರವನ್ನೂ ಹಂಚಿಕೊಂಡಿದ್ದಾರೆ.
'ನಿನ್ನ ಖುಷಿಯೇ ನನ್ನ ಖುಷಿ' ಕೈಹಿಡಿದ 20 ದಿನಕ್ಕೆ ಪತ್ನಿಯನ್ನು ಲವರ್‌ಗೆ ಕೊಟ್ಟು ಮದುವೆ ಮಾಡಿಸಿದ ಪತಿ!
ಈ ವಿವರಗಳನ್ನು ಶೇರ್ ಮಾಡಿಕೊಂಡಿರುವ ಟ್ವೀಟ್ ವೈರಲ್ ಆಗಿದ್ದು, ಜೋರ್ಡನ್ ಒಬ್ಬ ಏಂಜೆಲ್ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ನಾನು ಇಡೀ ಸ್ಟೋರಿಯನ್ನು ಬಹಳ ಇಷ್ಟಪಟ್ಟಿದ್ದೇನೆ. ನಿಜಕ್ಕೂ ನನ್ನ ಹೃದಯ ತುಂಬಿ ಹೋಗಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಇನ್ನು ಮುಂದೆ ಈ ಹೂಕುಂಡ ಬಹಳ ವಿಶೇಷವಾಗಿ ಇರಲಿದೆ. ಇದು ಬಹಳ ಪ್ರೀತಿಪಾತ್ರದ ಕಥೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
Break Up ಆದ ಕೂಡಲೇ ಮತ್ತೊಂದು ಲವ್ವಾ? ಬೇಡ, ಸ್ವಲ್ಪ ಸ್ಪೇಸ್ ಇರಲಿ!