ಸಂಬಂಧ ಮುರಿದುಬಿದ್ದ ನಂತರ ಹಳೆ ಪ್ರೇಮಿಯ ಕನಸುಗಳು ಬರುವುದು ಸಾಮಾನ್ಯ. ಈ ಕನಸುಗಳು ಅನೇಕ ವಿಷಯಗಳನ್ನು ತಿಳಿಸುತ್ತೆ. ಅದರ ಬಗ್ಗೆ ತಿಳಿದುಕೊಳ್ಳೋಣ.
relationship Dec 19 2024
Author: Pavna Das Image Credits:pinterest
Kannada
ಮತ್ತೆ ಮತ್ತೆ ಕನಸಿನಲ್ಲಿ ಬರುವ ಮಾಜಿ ಪ್ರೇಮಿ
ಮಾಜಿ ಪ್ರೇಮಿ ಮತ್ತೆ ಮತ್ತೆ ಕನಸಿನಲ್ಲಿ ಬರ್ತಿದ್ದಾನೆ ಅಂದ್ರೆ, ಅವರಿಗಾಗಿ ನಿಮ್ಮ ಮನಸಿನಲ್ಲಿ ಇನ್ನೂ ಫೀಲಿಂಗ್ ಉಳಿದಿದೆ ಎಂದು ಅರ್ಥ.
Image credits: Freepik
Kannada
ತೃಪ್ತಿರಾಗಿಲ್ಲ
ನಿಮ್ಮ ಈಗಿನ ಸಂಬಂಧದಲ್ಲಿ ನೀವು ಸಂಪೂರ್ಣವಾಗಿ ತೃಪ್ತರಾಗಿಲ್ಲದೇ ಇದ್ದರೂ ಕೂಡ ಮಾಜಿ ಪ್ರೇಮಿಯ ಕನಸು ಬೀಳುವ ಸಾಧ್ಯತೆ ಇದೆ.
Image credits: pinterest
Kannada
ಅಪೂರ್ಣ ಸಂಬಂಧ
ಸಂಬಂಧವು ಮುರಿದುಹೋದ ನಂತರ, ಅಪೂರ್ಣ ಸಂಬಂಧದ ನೆನಪು ಸುಪ್ತ ಮನಸ್ಸಿನ ಉಳಿಯುತ್ತೆ, ಈ ಮೂಲಕ ಅದು ಕನಸಾಗಿ ಬದಲಾಗಬಹುದು.
Image credits: Social Media
Kannada
ದುಃಖ
ನೀವು ಬ್ರೇಕ್ ಅಪ್ ಮಾಡಿಕೊಳ್ಳಲು ತಯಾರಿಲ್ಲದ ಸಂದರ್ಭದಲ್ಲಿ ಪ್ರೇಮಿ ನಿಮ್ಮಿಂದ ದೂರ ಹೋಗಿರುವ ಸಂದರ್ಭದಲ್ಲಿ ದುಃಖದಿಂದಾಗಿ ಸಹ ಮಾಜಿ ಪ್ರೇಮಿಯ ಕನಸು ಬೀಳುತ್ತೆ.
Image credits: Freepik
Kannada
ಮೋಸದ ಪರಿಣಾಮ
ಮೋಸದಿಂದಾಗಿ ಹಳೆಯ ಸಂಬಂಧವು ಹಾಳಾಗಿದ್ದರೆ, ಇದೀಗ ನೀವು ಹೊಸ ಸಂಬಂಧದಲ್ಲಿ ಇದ್ದರೂ ಸಹ, ಇದು ಕೂಡ ಹಳೆಯ ಪ್ರೇಮಿಯಂತೆ ಮೋಸ ಮಾಡಬಹುದುದೇ ಎನ್ನುವ ಭಯದಿಂದ ಕನಸು ಬೀಳುತ್ತೆ.
Image credits: Getty
Kannada
ಅಪೂರ್ಣ ಪ್ರಶ್ನೆಗಳು
ನಿಮ್ಮ ಮಾಜಿ ಪ್ರೇಮಿಯಲ್ಲಿ ಕೇಳದೇ ಉಳಿದಿರುವ ಹಲವಾರು ಪ್ರಶ್ನೆಗಳು ಇರಬಹುದು. ಅದು ಇನ್ನೂ ಸಹ ನಿಮ್ಮ ಮನಸಿನಲ್ಲಿ ಇದ್ದರೆ, ಆವಾಗ ಕೂಡ ಕನಸು ಬೀಳುತ್ತೆ.
Image credits: Freepik
Kannada
ನಿಮಗೂ ಕನಸು ಬೀಳುತ್ತಾ?
ನಿಮಗೂ ಮಾಜಿ ಪ್ರೇಮಿಯ ಕನಸು ಬೀಳುತ್ತಿದ್ದರೆ, ಸಾಧ್ಯವಾದಷ್ಟು ನೀವು ಅದರಿಂದ ಹೊರಗೆ ಬರೋದಕ್ಕೆ ಪ್ರಯತ್ನಿಸಿ, ಹೊಸ ಹೊಸ ವಿಷ್ಯಗಳ ಬಗ್ಗೆ ಗಮನ ಹರಿಸಿ, ಇದರಿಂದ ನಿಮ್ಮ ಮನಸು ಎಂಗೇಜ್ ಆಗಿರುತ್ತೆ.