ಪತ್ನಿ ದುಡಿಮೆಯಲ್ಲಿ ಜೀವನ ನಡೆಸೋ ಗಂಡ, ಡಿವೋರ್ಸ್ ನೀಡಿದ ಕೋರ್ಟ್

By Suvarna NewsFirst Published Jul 22, 2022, 4:47 PM IST
Highlights

ಇದು ದುಬಾರಿ ದುನಿಯಾ. ಇಲ್ಲಿ ಒಬ್ಬರ ದುಡಿಮೆ ಸಾಲೋದಿಲ್ಲ. ಅದ್ರಲ್ಲೂ ಪತ್ನಿ ದುಡಿಮೆಯಲ್ಲಿ ಪತಿ ಜೀವನ ಸಾಗಿಸ್ತಾನೆ ಅಂದ್ರೆ ಬದುಕು ಕಷ್ಟವಾಗುತ್ತದೆ. ಪತ್ನಿ ಜೊತೆ ಯಾವುದೇ ಭಾವನಾತ್ಮಕ ಸಂಬಂಧ ಹೊಂದದೆ, ಬರೀ ಆಕೆ ಆದಾಯದ ಮೇಲೆ ಕಣ್ಣಿಡುವ ಪತಿ ಜೊತೆ ಜೀವನ ನಡೆಸುವುದು ಸುಲಭವಲ್ಲ.
 

ದಾಂಪತ್ಯದಲ್ಲಿ ಸಹಬಾಳ್ವೆ ಬಹಳ ಮುಖ್ಯ.  ದಂಪತಿ ಮಧ್ಯೆ ಹೊಂದಾಣಿಕೆ ಇರಬೇಕಾಗುತ್ತದೆ. ಆರ್ಥಿಕ ವಿಷ್ಯಕ್ಕೆ ಬಂದಾಗ್ಲೂ ಇಬ್ಬರ ಮಧ್ಯೆ ಹೊಂದಾಣಿಕೆ ಮುಖ್ಯವಾಗುತ್ತದೆ. ಒಬ್ಬರು ದುಡಿದು ಕುಟುಂಬ ನಿರ್ವಹಣೆ ಮಾಡ್ತಿರುವಾಗ ಇನ್ನೊಬ್ಬರ ಖರ್ಚಿನಲ್ಲಿ ಮಿತಿ ಇರಬೇಕು. ಇಲ್ಲವೆಂದ್ರೆ ಆರ್ಥಿಕ ಹೊಣೆ ಸಂಬಂಧ ಹಾಳು ಮಾಡುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಪುರುಷ ಮನೆಯ ಹೊರಗೆ ದುಡಿಯುವುದು ಅನಿವಾರ್ಯ. ಪತ್ನಿಯಾದವಳು ಕುಟುಂಬದ ಜವಾಬ್ದಾರಿ ಹೊರುವ ಕಾರಣ ಮನೆಯಲ್ಲಿ ಹಾಗೂ ಮನೆಯ ಹೊರಗೆ ದುಡಿಮೆ ಕಷ್ಟವಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡಿ, ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಮಹಿಳೆ ಎಷ್ಟೇ ದುಡಿದ್ರೂ ಪುರುಷ ದುಡಿದ ಹಣವನ್ನು ಮನೆಯ ವ್ಯವಹಾರಕ್ಕೆ ಬಳಸಿಕೊಳ್ಳುವ ನಿಯಮ ಇನ್ನೂ ಭಾರತದ ಅನೇಕ ಮನೆಯಲ್ಲಿದೆ. ಮತ್ತೆ ಕೆಲ ಕುಟುಂಬಗಳು ಖರ್ಚನ್ನು ಹಂಚಿಕೊಳ್ತಿವೆ. ಇನ್ನೂ ಅಪರೂಪಕ್ಕೆ ಅಪರೂಪ ಎನ್ನುವಂತೆ ಕೆಲ ಕುಟುಂಬದಲ್ಲಿ ಮನೆ ಯಜಮಾನ ಕುಳಿತು ಊಟ ಮಾಡಿದ್ರೆ ಮನೆಯೊಡತಿ ಹೊರಗೆ ದುಡಿಯುತ್ತಿದ್ದಾಳೆ. ಪತ್ನಿ ದುಡಿದ ಹಣದಲ್ಲಿಯೇ ಜೀವನ ನಡೆಸ್ತಿದ್ದ ಪತಿಗೆ ಕೋರ್ಟ್ ತಕ್ಕ ಶಿಕ್ಷೆ ನೀಡಿದೆ. ಪತ್ನಿಯ ವಿಚ್ಛೇದನ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ.

ಪತಿ (Husband) ತನ್ನ ಹೆಂಡತಿಯನ್ನೇ ಆದಾಯ (Income) ದ ಮೂಲವೆಂದು ಪರಿಗಣಿಸಿದ ಕಾರಣ, ಕರ್ನಾಟಕ ಹೈಕೋರ್ಟ್ (High Court) ದಂಪತಿಗೆ ವಿಚ್ಛೇದನ ನೀಡಿದೆ. ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ. ಎಂ.ಕಾಜಿ ಮತ್ತು ನ್ಯಾಯಮೂರ್ತಿ ಜೆ.ಜೆ. ಎಂ.ಕಾಜಿ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಹೆಂಡತಿಯನ್ನು ಆದಾಯದ ಏಕೈಕ ಮೂಲವಾಗಿ ಪರಿಗಣಿಸುವುದು ಗಂಡನ ಕ್ರೌರ್ಯ ಎಂದು ಕೋರ್ಟ್ ಹೇಳಿದೆ. ಮಹಿಳೆ ತನ್ನ ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸಿದ್ದಳು. ದಾಖಲೆ ಪ್ರಕಾರ, ಪತ್ನಿ, ಪತಿಗಾಗಿ ಕೆಲ ವರ್ಷಗಳಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.  

ವಿವಾಹಿತೆಯ ಲಿವ್‌ಇನ್‌ ಸಂಬಂಧಕ್ಕೆ ಕಾನೂನು ರಕ್ಷಣೆ ನೀಡಲು ನಿರಾಕರಿಸಿದ ಕೋರ್ಟ್‌

ಪತಿ, ಪತ್ನಿಯನ್ನು ಆದಾಯದ ಸಾಧನವನ್ನಾಗಿ ಮಾಡಿಕೊಂಡಿದ್ದ. ಅವರಿಬ್ಬರ ಮಧ್ಯೆ ಯಾವುದೇ ಭಾವನಾತ್ಮಕ ಬಾಂಧವ್ಯ ಇರಲಿಲ್ಲ. ಪತಿಯ ವರ್ತನೆ ಪತ್ನಿಗೆ ಮಾನಸಿಕ ಕಿರುಕುಳ ನೀಡಿತ್ತು. ಇದು ಮಾನಸಿಕ ಕ್ರೌರ್ಯ ಎಂದ ಕೋರ್ಟ್, ವಿಚ್ಛೇದನಕ್ಕೆ ಅಸ್ತು ಎಂದಿದೆ.  
1999ರಲ್ಲಿ ಚಿಕ್ಕಮಗಳೂರಿನಲ್ಲಿ ಇವರಿಬ್ಬರ ವಿವಾಹವಾಗಿತ್ತು. 2021ರಲ್ಲಿ ಮಗು ಜನಿಸಿದ್ದ. ಪತ್ನಿ 2017 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಮಹಿಳೆಯ ವಿಚ್ಛೇದನ ಅರ್ಜಿಯನ್ನು 2020 ರಲ್ಲಿ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಕೆಳ ನ್ಯಾಯಾಲಯದ ತೀರ್ಪಿನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದಳು. ಅರ್ಜಿದಾರರ  ಮನವಿಯನ್ನು ಆಲಿಸದೆ ಕೌಟುಂಬಿಕ ನ್ಯಾಯಾಲಯ, ಕೆಳ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದೆ. 

ಆತ್ಮವಿಶ್ವಾಸ ಕಡಿಮೆ ಮಾಡೋ ಸಂಗಾತಿ ನಿಮ್ಮವರಾ? ಅದಕ್ಯಾಕೆ ಚಿಂತೆ?

ಪತಿ – ಕುಟುಂಬಕ್ಕಾಗಿ ಪತ್ನಿ ಮಾಡಿದ್ದಳು ಈ ಎಲ್ಲ ಕೆಲಸ : ತನ್ನ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಪತಿ ಹೇಳಿದ್ದನಂತೆ. ಪತ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉದ್ಯೋಗ ಮಾಡ್ತಿದ್ದಳು. ಪತಿಯ ಹೆಸರಿನಲ್ಲಿ ಕೃಷಿ ಭೂಮಿಯನ್ನು ಆಕೆ ಖರೀದಿಸಿದ್ದಳು. ಆದರೆ ಆರ್ಥಿಕವಾಗಿ ಸ್ವಾವಲಂಬಿಯಾಗುವ ಬದಲು ಪತಿ, ಹೆಂಡತಿಯ ಆದಾಯವನ್ನು ಅವಲಂಬಿಸಿದ್ದ. ಇಷ್ಟೇ ಅಲ್ಲ, 2012 ರಲ್ಲಿ ಯುಎಇಯಲ್ಲಿ ತನ್ನ ಪತಿಗಾಗಿ ಸಲೂನ್ ಅನ್ನು ಸಹ ಪತ್ನಿ ತೆರೆದಿದ್ದಳಂತೆ. ಆದರೆ 2013 ರಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು ಎಂದು ಮಹಿಳೆ ಹೇಳಿದ್ದಾಳೆ. ಪತಿಯ ಎಲ್ಲ ಖರ್ಚಿನ ಹೊಣೆ ಹೊತ್ತಿದ್ದ ಮಹಿಳೆ ಈವರೆಗೆ ಸುಮಾರು 60 ಲಕ್ಷಕ್ಕೂ ಹೆಚ್ಚು ಹಣವನ್ನು ಪತಿಗಾಗಿ ಖರ್ಚು ಮಾಡಿದ್ದಳು.  
 

click me!