ಮಗುವಿನ ಮೇಲೆ ನಾಯಿಯ ಪೊಸೆಸಿವ್‌ನೆಸ್: ಟಚ್ ಮಾಡಲು ಬಿಡದೆ ಕಾಯುವ ಶ್ವಾನ

By Anusha KbFirst Published Jul 22, 2022, 3:11 PM IST
Highlights

ತಮ್ಮ ಮರಿಗಳಿಗೆ ಹೇಗೆ ಶ್ವಾನಗಳು ಕಾಳಜಿ ವಹಿಸುತ್ತವೋ ಅದೇ ರೀತಿ ಶ್ವಾನಗಳು ತನ್ನ ಮನುಷ್ಯ ಮಾಲೀಕರ ಪುಟ್ಟ ಮಕ್ಕಳ ಬಗ್ಗೆ ಅಮ್ಮನಂತೆ ಕಾಳಜಿ ವಹಿಸುತ್ತವೆ. ಇದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಶ್ವಾನಗಳು ಬಹಳ ಬುದ್ಧಿವಂತ ಪ್ರಾಣಿಗಳು ಮಕ್ಕಳೊಂದಿಗೆ ಅವುಗಳ ಒಡನಾಟ ಅಮೋಘವಾದುದು, ಪುಟ್ಟ ಮಕ್ಕಳೊಂದಿಗೆ ಶ್ವಾನಗಳು ಆಟವಾಡುವ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ತಮ್ಮ ಮರಿಗಳಿಗೆ ಹೇಗೆ ಶ್ವಾನಗಳು ಕಾಳಜಿ ವಹಿಸುತ್ತವೋ ಅದೇ ರೀತಿ ಶ್ವಾನಗಳು ತನ್ನ ಮನುಷ್ಯ ಮಾಲೀಕರ ಪುಟ್ಟ ಮಕ್ಕಳ ಬಗ್ಗೆ ಅಮ್ಮನಂತೆ ಕಾಳಜಿ ವಹಿಸುತ್ತವೆ. ಇದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಗುವೊಂದನ್ನು ಸೋಫಾದಲ್ಲಿ ಮಲಗಿಸಲಾಗಿದ್ದು ಪಕ್ಕದಲ್ಲಿ ಕಪ್ಪು ಬಣ್ಣದ ಶ್ವಾನವೊಂದು ಕುಳಿತಿದೆ. ಮಹಿಳೆ ಬಹುಶಃ ಮಗುವಿನ ತಾಯಿಯೋ ತಿಳಿಯದು ಮಗವನ್ನು ಮುಟ್ಟಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಶ್ವಾನ ಅವರ ಕೈಯನ್ನು ಬಾಯಲ್ಲಿ ನೋವಾಗದಂತೆ ಕಚ್ಚಿ ಹಿಡಿದು ಪಕ್ಕಕ್ಕೆ ಇಟ್ಟು ಬಿಡುತ್ತದೆ. ಮಹಿಳೆ ಮತ್ತೆ ಅದನ್ನೇ ಮಾಡಿದಾಗ ಶ್ವಾನ ಮತ್ತೊಂದು ಕೈಯಲ್ಲಿ ಮಹಿಳೆಯ ಕೈಯನ್ನು ಮಗುವಿನಿಂದ ದೂರು ಸರಿಸುತ್ತದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಪುಟ್ಟ ಮಕ್ಕಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಆಗ ತಾನೇ ಹುಟ್ಟಿದ ಮಕ್ಕಳಿಗೆ ಅಲರ್ಜಿ ರೋಗಗಳು ಕಾಡುವುದು ಸಾಮಾನ್ಯ ಇದೇ ಕಾರಣಕ್ಕೆ ಪೋಷಕರು ಮನೆಯಲ್ಲಿ ನವಜಾತ ಶಿಶುಗಳನ್ನು ಬಹಳ ಜಾಗರೂಕವಾಗಿ ನೋಡಿಕೊಳ್ಳುತ್ತಾರೆ. ಮಕ್ಕಳನ್ನು ಮುಟ್ಟಲು ಮುತ್ತಿಕ್ಕಲು ಅನೇಕ ತಾಯಂದಿರು ಬಿಡುವುದೇ ಇಲ್ಲ, ತುಂಬಾ ಸೂಕ್ಷ್ಮವಾದ ಮಗುವಿನ ಚರ್ಮ ಬೇಗ ಅಲರ್ಜಿಗೆ ಒಳಗಾಗುತ್ತದೆ ಎಂಬುದು ಇದಕ್ಕೆ ಕಾರಣ. ಈ ಕಾರಣದಿಂದಲೇ ಮಗುವಿನ ಸಮೀಪ ಸುಳಿಯಲು ಹೆಚ್ಚಿನವರು ಬಿಡುವುದಿಲ್ಲ. 

ಆದರೆ ಇಲ್ಲಿ ಶ್ವಾನದ ವರ್ತನೆ ಹೇಗಿದೆ ಎಂದರೆ ಈ ಮಗು ನನ್ನದು ನಾನೇ ಹೆತ್ತಿದ್ದು, ಯಾರು ಇದನ್ನು ಮುಟ್ಟಬಾರದು ಮುಟ್ಟಿದ್ರೆ ಅಲರ್ಜಿ ಆಗುತ್ತೆ ಅಂತ ಶ್ವಾನ ಹೇಳುವಂತಿದೆ. ಲಾಪ್ಸ್‌ ಫಾರ್ ಆಲ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೊ ಅಪ್‌ಲೋಡ್ ಆಗಿದೆ. ಜುಲೈ 20 ರಂದು ವಿಡಿಯೋ ಅಪ್‌ಲೋಡ್ ಆಗಿದ್ದು, 1.4 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಒಟ್ಟಿನಲ್ಲಿ ಶ್ವಾನದ ನಡವಳಿಕೆ ಅನೇಕರಿಗೆ ಸೋಜಿಗ ಮೂಡಿಸಿದೆ. ಕೆಲ ದಿನಗಳ ಹಿಂದೆ ತಾಯಿಯಿಂದ ದೂರದ ಮೂರು ಹುಲಿಮರಿಗಳನ್ನು ಶ್ವಾನವೊಂದು ತನ್ನ ಮಕ್ಕಳಂತೆ ಸಲಹುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಲಾಬ್ರಡಾರ್ ತಳಿಯ ಶ್ವಾನವೊಂದು ಮೂರು ಹುಲಿ ಮರಿಗಳನ್ನು ತನ್ನ ಮಕ್ಕಳಂತೆ ಮುದ್ದಾಡುತ್ತಿತ್ತು. ಈ ತಾಯಿ ಶ್ವಾನ (Dog) ಹಾಗೂ ಪುಟ್ಟ ಹುಲಿ ಮರಿಗಳ (Tiger cube) ನಡುವಿನ ಪ್ರೀತಿಯ ಬಂಧಕ್ಕೆ ನೆಟ್ಟಿಗರು ಕೂಡ ಭಾವುಕರಾಗಿ ಶಹಭಾಷ್ ಅಂದಿದ್ದಾರೆ. ಇದು ಚೀನಾದ ವಿಡಿಯೋ ಆಗಿದ್ದು, ಹುಲಿ ಮರಿಗಳು ನಾಯಿಯ ಸುತ್ತ ಸುತ್ತ ಸುತ್ತುತ್ತ ಆಟವಾಡುತ್ತಿವೆ. ಈ ವಿಡಿಯೋ ಮೂಲದ ಪ್ರಕಾರ ಈ ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿ ನಂತರ ಇವುಗಳಿಗೆ ಹಾಲುಡಿಸಲು ನಿರಾಕರಿಸಿತ್ತು ಎಂದು ತಿಳಿದು ಬಂದಿದೆ.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ  A Piece of Nature ಎಂಬ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಈ ವಿಡಿಯೋ ನೋಡಿದ ಹಲವು ಶ್ವಾನ ಪ್ರಿಯರು ಶ್ವಾನದ ಈ ತಾಯಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲ್ಯಾಬ್‌ ಶ್ವಾನಗಳನ್ನು ಹೊಂದಿರುವುದು ನಿಜವಾದ ಆಶೀರ್ವಾದ ಎಂದು ಓರ್ವ ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಮರಿಗಳು ತಮ್ಮ ಹೊಸ ತಾಯಿಯನ್ನು ಇಷ್ಟಪಡಬಹುದು ಅವುಗಳನ್ನು ಬೆಳೆಯಲು ಬಿಡೋಣ. ಹುಲಿ ಹಾಗೂ ಶ್ವಾನ ಬೇರೆಯದೇ ಪ್ರಬೇಧಗಳು ಆದರೆ ಪ್ರೀತಿ ಮಾತ್ರ ಒಂದೇ ಎಂದು ಕಾಮೆಂಟ್ ಮಾಡಿದ್ದಾರೆ.
 

click me!