ಹಿಮ ಕವಿದ ವಾತಾವರಣದಲ್ಲಿ ಮದುವೆಯಾಗುವ ಮೂಲಕ ಗುಜರಾತಿನ ಜೋಡಿಯೊಂದು ಅಚ್ಚರಿ ಮೂಡಿಸಿದೆ. ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿಯ ಮುರಂಗ್ ಗ್ರಾಮದಲ್ಲಿ ಈ ವಿವಾಹ ಜರುಗಿದೆ. ಅಚ್ಚ ಬಿಳಿಯ ಹೊದಿಕೆ ಹೊದ್ದ ಸ್ಥಳದಲ್ಲಿ ವಿವಾಹದ ರಂಗು ಮೂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ.
ಸುತ್ತಲೂ ಹಿಮಾಚ್ಛಾದಿತ ವಾತಾವರಣ. ಹಿಮದಲ್ಲಿ ಮುಳುಗಿ ನಿಂತ ಭೂಮಿ. ಅಚ್ಚ ಬಿಳಿಯ ಪರಿಸರದಲ್ಲಿ ರಂಗುರಂಗಿನ ದಿರಿಸು ತೊಟ್ಟ ವಧುವರರು ವಿವಾಹವಾಗುವುದನ್ನು ನೋಡುವುದೇ ರೋಮಾಂಚನ. ಇದೊಂದು ಬರೀ ರೋಮ್ಯಾಂಟಿಕ್ ವಿಚಾರ ಎನ್ನಬಹುದು, ಅಂತಹ ಚಳಿಯ ವಾತಾವರಣದಲ್ಲಿ ಯಾರು ವಿವಾಹವಾಗುತ್ತಾರೆ ಎಂದು ಪ್ರಶ್ನಿಸಬಹುದು. ಆದರೆ, ನಿಜವಾಗಿಯೂ ಅಂಥದ್ದೊಂದು ವಿವಾಹ ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ವ್ಯಾಲಿಯಲ್ಲಿ ಜರುಗಿದೆ. ದೂರದ ಸ್ವಿಸ್ ನಲ್ಲೋ, ಯುರೋಪಿನ ಮಂಜು ಕವಿದ ನೆಲದಲ್ಲೋ ಈ ಮದುವೆ ನಡೆದಿಲ್ಲ. ನಮ್ಮದೇ ದೇಶದ ಹಿಮಾಚಲ ಪ್ರದೇಶದಲ್ಲಿ ಜರುಗಿರುವ ಈ ವಿವಾಹ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ವಿವಾಹವನ್ನು ಸ್ಮರಣೀಯವನ್ನಾಗಿಸಿಕೊಳ್ಳಲು ಕೆಲ ಜೋಡಿಗಳು ಏನಾದರೊಂದು ವಿನೂತನ ವಿಚಾರದೊಂದಿಗೆ ಮುನ್ನಡೆಯುತ್ತಾರೆ. ಗುಜರಾತಿನ ನವ ಜೋಡಿಯೊಂದು ಇದೇ ರೀತಿ ಹಿಮಾಚಲ ಪ್ರದೇಶಕ್ಕೆ ಬಂದು ಮದುವೆಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಲಾಹೌಲ್ ಸ್ಪಿತಿ ಕಣಿವೆಯ ಮುರಂಗ್ ಎನ್ನುವ ಗ್ರಾಮ ಈ ವಿಶಿಷ್ಟ ವಿವಾಹಕ್ಕೆ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ವಿವಾಹದ ವೀಡಿಯೋ ವೈರಲ್ ಕೂಡ ಆಗಿದೆ.
ಸಾಮಾಜಿಕ ಜಾಲತಾಣದ (Social Media) ಎಕ್ಸ್ ಖಾತೆಯಲ್ಲಿ ಹಿಮಾಚಲ ಪ್ರದೇಶ (Himachal Pradesh) ಸರ್ಕಾರದ ಅಸಿಸ್ಟಂಟ್ ಪಬ್ಲಿಕ್ ರಿಲೇಷನ್ ಆಫೀಸರ್ ಆಗಿರುವ ಅಜಯ್ ಬನ್ಯಾಲ್ ಅವರು ಈ ವಿವಾಹದ (Marriage) ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಸಾವಿನ ಮನೆಯಲ್ಲೂ ಸೆಲ್ಫಿ ಕೇಳಿದ ಫ್ಯಾನ್: ಮುಜುಗರಕ್ಕೊಳಗಾದರು ತಾಳ್ಮೆ ವಹಿಸಿದ ವಿದ್ಯಾ ಬಾಲನ್
“ಇಂತಹ ಮದುವೆಯೂ (Wedding) ನಡೆಯುತ್ತದೆ. ಹುಡುಗಿಯ (Girl) ಹಠದಿಂದಾಗಿ ಗುಜರಾತಿನ ಹುಡುಗ ಸ್ಪಿತಿ ಕಣಿವೆ ತಲುಪಿದ್ದಾರೆ ಹಾಗೂ ಇಲ್ಲಿ ಮದುವೆಯಾಗುತ್ತಿದ್ದಾರೆ. ಮೈನಸ್ 25 ಡಿಗ್ರಿ (Minus 25 Digree) ವಾತಾವರಣದಲ್ಲಿ ಮಂಟಪ ಸಿದ್ಧವಾಗಿದೆ. ಗುಜರಾತಿನ ಜೋಡಿ (Gujarat Couple) ವಿಶಿಷ್ಟ ರೀತಿಯಲ್ಲಿ ಮದುವೆಯಾಗುತ್ತಿದೆ. ಇದೇ ಮೊದಲ ಬಾರಿ ಮುರಂಗ್ ನಲ್ಲಿ ನಡೆಯುತ್ತಿರುವ ಇಂತಹ ವಿಶೇಷ ವಿವಾಹ ಜರುಗುತ್ತಿದೆ. ಡೆಸ್ಟಿನೇಷನ್ (Destination) ವೆಡ್ಡಿಂಗ್ ಗೆ ಇದು ಅತ್ಯುತ್ತಮ ಉದಾಹರಣೆ’ ಎಂದು ಬನ್ಯಾಲ್ ಹೇಳಿದ್ದಾರೆ.
एक विवाह ऐसा भी! गुजरात का प्रेमी जोड़ा, प्रेमिका की जिद्द ने स्पीति पहुंचाया, फिर माईनस 25 डिग्री तापमान में सजाया मंडप, यह अपने आप में पहली तरह का मामला है।
स्पीति के मुरंग में आज हुआ अनोखा विवाह।
यह है डेस्टिनेशन वेडिंग का example। pic.twitter.com/4lnaRl0c5h
ಮೈನಸ್ 25 ಡಿಗ್ರಿ ವಾತಾವರಣದಲ್ಲಿ ಮದುವೆ
ಕೈಕಾಲುಗಳನ್ನು ಮರಗಟ್ಟಿಸುವಂತಹ ಚಳಿಯಲ್ಲಿ ವಧು (Bride) ವಾಹನದಲ್ಲಿ ವಿವಾಹದ ಸ್ಥಳಕ್ಕೆ ಬಂದಿಳಿಯುವ ಸನ್ನಿವೇಶದಿಂದ ವೀಡಿಯೋ ಆರಂಭವಾಗುತ್ತದೆ. ವಧುವಿನ ಡ್ರೆಸ್ ನೊಂದಿಗೆ, ಅಲಂಕೃತ ಕಾರಿನಲ್ಲಿ ಆಕೆ ಬಂದಿಳಿಯುತ್ತಾಳೆ. ಸುತ್ತೆಲ್ಲ ಹಿಮಾಚ್ಛಾದಿತ (Snow) ವಾತಾವರಣ. ಅದೂ ಅಂದು ಬರೋಬ್ಬರಿ ಮೈನಸ್ 25 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವಿತ್ತು ಎನ್ನಲಾಗಿದೆ. ಬಳಿಕ, ವಿವಾಹದ ಸನ್ನಿವೇಶದಲ್ಲಿ ವಧುವರರು ಪರಸ್ಪರ ಆಲಿಂಗಿಸಿಕೊಳ್ಳುವುದು ಸೆರೆಯಾಗಿದೆ. ಹಿಮದಿಂದ ಆವೃತವಾದ ಬೆಟ್ಟಗುಡ್ಡಗಳ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.
ವಿಶ್ವದ ಅತಿ ಎತ್ತರದ ವ್ಯಕ್ತಿ ಹಾಗೂ ಅತ್ತಿ ಕುಳ್ಳ ಮಹಿಳೆ ಜೊತೆಯಾದಾಗ..
ಇನ್ ಸ್ಟಾಗ್ರಾಮ್ ಖಾತೆಯಲ್ಲೂ ವಿವಾಹದ ವೀಡಿಯೋವನ್ನು (Video) ಪೋಸ್ಟ್ ಮಾಡಲಾಗಿದೆ. ಕಠೋರವಾದ ಚಳಿಯಲ್ಲೂ ಅವರು ತೆರೆದ ವಾತಾವರಣದಲ್ಲಿ ಮದುವೆಯಾಗಿರುವುದಕ್ಕೆ ಭಾರೀ ಕಾಮೆಂಟ್ ಗಳು ಬಂದಿವೆ. ವಿವಾಹದ ಬಳಿಕ ಗುಜರಾತಿನ ಜೋಡಿ ರಸ್ತೆ ಮಾರ್ಗದಲ್ಲೇ ತಮ್ಮ ತಾಯ್ನೆಲಕ್ಕೆ ಸಾಗಲು ನಿರ್ಧರಿಸಿರುವುದು ಸಹ ಅವರ ಕ್ಯಾಪ್ಷನ್ ನಿಂದ ತಿಳಿದುಬರುತ್ತದೆ. “ಲಾಂಗೆಸ್ಟ್ ರೋಡ್ ಟ್ರಿಪ್ (Road Trip) ವೆಡ್ಡಿಂಗ್ ಎಕ್ಸ್ ಪೆಡಿಷನ್’ ಎಂದು ಹೇಳಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ವಿವಾಹದ ಸ್ಥಳದಿಂದ ಜೋಡಿ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಯುವತಿ ಡ್ರೈವ್ ಮಾಡಲು ಕುಳಿತರೆ ಪಕ್ಕದಲ್ಲಿ ಯುವಕ ಕುಳಿತುಕೊಳ್ಳುತ್ತಾನೆ, ಇಬ್ಬರೂ ಜತೆಯಾಗಿ ವಾಹನದಲ್ಲಿ ಸಾಗುತ್ತಾರೆ.
ಕಿಂಗ್ ಕೊಹ್ಲಿಯ 2ನೇ ಮಗುವಿನ ಬಗ್ಗೆ 8 ವರ್ಷದ ಹಿಂದೇ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಫ್ಯಾನ್ಸ್‌ಗೆ ಅಚ್ಚರಿ!
ರೀಲ್ಸ್ ಗೆ ರಿಯಾಕ್ಟ್
ಎರಡೂ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಸಾವಿರಾರು ಜನ ವೀಕ್ಷಣೆ ಮಾಡಿದ್ದಾರೆ. ಅಸಾಂಪ್ರದಾಯಿಕ ವಿವಾಹಕ್ಕೆ ಜನ ರಿಯಾಕ್ಟ್ ಮಾಡಿದ್ದಾರೆ. ಅನೇಕರು ಸ್ಪಿತಿಯಲ್ಲಿ (Spiti) ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಒಬ್ಬರು, “ನೈಸರ್ಗಿಕ ಸೌಂದರ್ಯಕ್ಕೆ ಹಾನಿ ಮಾಡಿದ್ದಾರೆ’ ಎಂದು ಹೇಳಿದರೆ, ಯಾರೋ ಒಬ್ಬರು ತಮಾಷೆಯಾಗಿ, “ದೀದಿ ಸ್ವಿಸ್ ವೆಡ್ಡಿಂಗ್ ಅನ್ನು ಭಾರತದಲ್ಲಿ ಮರುನಿರ್ಮಿಸಲು ಮುಂದಾಗಿದ್ದಾರೆ’ ಎಂದು ಹೇಳಿದ್ದಾರೆ. “ಹಿಮದಲ್ಲಿ ಮದುವೆಯಾಗುತ್ತಿರುವುದನ್ನು ಇದೇ ಮೊದಲ ಬಾರಿ ನೋಡಿದ್ದೇನೆ’ ಎಂದು ಹಲವರು ಹೇಳಿದ್ದಾರೆ.