ತಡವಾಗಿ ಮದುವೆಯಾದರೆ ಹಲವು ರೀತಿಯಲ್ಲಿ ತೊಂದರೆಯಾಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಬೇಗ ಮದುವೆಯಾಗಿ ಬಿಡುತ್ತಾರೆ. ಆದರೆ ತಡವಾಗಿ ಮದುವೆಯಾಗುವುದರಿಂದ ಹಲವು ಪ್ರಯೋಜನಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಮದುವೆ ಯಾವಾಗ ಆಗಬೇಕು ಅನ್ನೋದು ಪ್ರತಿಯೊಬ್ಬರ ವೈಯುಕ್ತಿಕ ನಿರ್ಧಾರ. ಆದರೆ ಒಂದು ವಯಸ್ಸಿಗೆ ಬಂದ ಮೇಲೆ ಮನೆಯಲ್ಲಿ ಎಲ್ಲರೂ, ಸ್ನೇಹಿತರು, ಪರಿಚಿತರು ಮತ್ತೆ ಮದುವೆಯಾಗುವಂತೆ ಒತ್ತಡ ಹೇರುತ್ತಲೇ ಇರುತ್ತಾರೆ. ಇದು ತುಂಬಾ ಸಾಮಾನ್ಯವಾದ ವಿಷಯ. ಈ ಒತ್ತಡದಿಂದಲೇ ಬಹುತೇಕರು ಬೇಗ ಮದುವೆಯಾಗುತ್ತಾರೆ. ತಡವಾಗಿ ಮದುವೆಯಾದರೆ ಹಲವು ರೀತಿಯಲ್ಲಿ ತೊಂದರೆಯಾಗುತ್ತೆ ಅನ್ನೋ ಕಾರಣಕ್ಕೆ ಹೆಚ್ಚಿನವರು ಬೇಗ ಮದುವೆಯಾಗಿ ಬಿಡುತ್ತಾರೆ. ಆದರೆ ತಡವಾಗಿ ಮದುವೆಯಾಗುವುದರಿಂದ ಹಲವು ಪ್ರಯೋಜನಗಳಿವೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಅವು ಯಾವುವು?
ಸ್ವಾವಲಂಬನೆ
ಮದುವೆಯ ನಂತರ ಹಲವು ಜವಾಬ್ದಾರಿಗಳು ನಿರ್ವಹಿಸಬೇಕಾಗುತ್ತದೆ. ಆದರೆ ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ. ಬೇಗ ಮದುವೆಯಾಗುವುದರಿಂದ ವ್ಯಕ್ತಿಯು ತನ್ನ ಖರ್ಚನ್ನು ನಿಭಾಯಿಸಿಕೊಳ್ಳಲು ಆರ್ಥಿಕವಾಗಿ ಯಾರನ್ನಾದರೂ ಅವಲಂಬಿಸ ಬೇಕಾಗುತ್ತದೆ. ಮದುವೆಗೂ ಮುನ್ನ ಆರ್ಥಿಕವಾಗಿ ಸದೃಢವಾಗಿರುವುದು ಅತ್ಯಗತ್ಯ. ಮದುವೆಯಾದ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗುವುದು ಒಳ್ಳೆಯದಲ್ಲ. ತಡವಾಗಿ ಮದುವೆಯಾದರೆ ಈ ಸಮಸ್ಯೆ ಕಾಡುವುದಿಲ್ಲ.
undefined
ಪ್ರೀತಿ, ಮದ್ವೆ ಗಿದ್ವೆ ಏನೂ ಬೇಡ, ಒಂಟಿಯಾಗೇ ಇರ್ತೇವೆ ಅಂತಿದೆ ಈಗಿನ ಜನರೇಷನ್? ಯಾಕ್ಹೀಗೆ?
ಪ್ರಬುದ್ಧತೆ
ತಡವಾಗಿ ಮದುವೆಯಾಗುವುದರಿಂದ ಇದು ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ. ಒಂದು ವರ್ಷದ ನಂತರ ಪ್ರಬುದ್ಧತೆಯು ಬಹಳವಾಗಿ ಹೆಚ್ಚಾಗುತ್ತದೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ಪತಿ ಪತ್ನಿಯರ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ.
ಕನಸುಗಳನ್ನು ಈಡೇರಿಸಿಕೊಳ್ಳಿ
ಚಿಕ್ಕವಯಸ್ಸಿನಲ್ಲಿ ಮದುವೆ ಮಾಡಿಸಿದರೆ ಅಥವಾ ಮನೆಯಲ್ಲಿ ಒತ್ತಾಯ ಮಾಡಿದರೆ ಜೀವನವಿಡೀ ನರಳಬೇಕಾಗುತ್ತದೆ. ಏಕೆಂದರೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ಆಸೆಯಿರುತ್ತದೆ. ಜಾಬ್, ಟ್ರಾವೆಲಿಂಗ್ ಹೀಗೆ ಏನಾದರೂ ಪ್ಲಾನ್ ಮಾಡಿರುತ್ತಾರೆ.ತಡವಾಗಿ ಮದುವೆಯಾದರೆ ಈ ಆಸೆಗಳನ್ನು ಮತ್ತು ಕನಸುಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಸಮಯ ದೊರಕುತ್ತದೆ.
ಲವ್ ಮಾಡಿದ್ದೀರಿ. ಪೋಷಕರು ಒಪ್ತಾ ಇಲ್ಲವೆಂದರೆ ಹೀಗ್ ಟ್ರೈ ಮಾಡಿ
ಪ್ರಯಾಣ
ಕೆಲವು ಸ್ಥಳಗಳಿಗೆ ಹೋಗಿ ನೋಡಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತಹ ಆಸೆಯನ್ನು ಮದುವೆಗೆ ಮುಂಚಿತವಾಗಿ ಪೂರೈಸುವುದು ಉತ್ತಮ. ಮದುವೆಯ ನಂತರ ಜೀವನ ಹೇಗಿರುತ್ತೋ ಗೊತ್ತಿಲ್ಲ. ಆದರೆ, ಮದುವೆಯ ನಂತರವೂ ಇಬ್ಬರು ಒಟ್ಟಿಗೆ ಪ್ರಯಾಣಿಸಬಹುದು. ಆದರೆ ಇವುಗಳನ್ನು ಮದುವೆಗೂ ಮುನ್ನ ನೋಡಬೇಕು ಎಂದುಕೊಂಡವರೂ ಇದ್ದಾರೆ. ಮದುವೆಗೂ ಮುನ್ನ ಪ್ರಯಾಣ ಮಾಡಿದರೆ ನಿಮಗೆ ಬೇಕಾದುದನ್ನು ನೋಡಬಹುದು. ಅಲ್ಲದೆ ನಿಮಗೆ ಸಾಕಷ್ಟು ಸಮಯವೂ ಇರುತ್ತದೆ.
ಆರ್ಥಿಕ ಸ್ಥಿರತೆ
ತರಾತುರಿಯಲ್ಲಿ ಮದುವೆಯಾಗುವುದು ಉತ್ತಮ ವೃತ್ತಿಜೀವನವನ್ನು ಸ್ಥಾಪಿಸಲು ನಿಮಗೆ ಹೆಚ್ಚು ಸಮಯವನ್ನು ನೀಡುವುದಿಲ್ಲ. ಏಕೆಂದರೆ ಆಗ ಜವಾಬ್ದಾರಿಗಳು ಹೆಚ್ಚಿರುತ್ತದೆ. ಆದ್ದರಿಂದ ಆರ್ಥಿಕವಾಗಿ ಉತ್ತಮವಾದಾಗ ಮದುವೆಯಾಗಿ. ಈ ರೀತಿಯಾಗಿ ಮದುವೆಯ ನಂತರ ನಿಮಗೆ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇರುವುದಿಲ್ಲ.
ಸಂಬಂಧಗಳು ಬಲವಾಗಿರುತ್ತವೆ
ಒಂದು ನಿರ್ದಿಷ್ಟ ವಯಸ್ಸಿನ ನಂತರ ಮದುವೆಯಾಗುವುದು ಪ್ರಬುದ್ಧತೆಯನ್ನು ಹೆಚ್ಚಿಸುತ್ತದೆ. ಧನಾತ್ಮಕವಾಗಿ ಯೋಚಿಸಲು ತಿಳಿದಿರುತ್ತದೆ. ಏನು ಮಾಡಬಾರದು, ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟತೆ ಇರುತ್ತದೆ. ಇದು ಸಂಬಂಧದಲ್ಲಿ ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಇದರಿಂದ ಇಬ್ಬರ ನಡುವೆ ಜಗಳವೂ ಇರುವುದಿಲ್ಲ.
ಮಕ್ಕಳ ಪಾಲನೆ
ತಡವಾಗಿ ಮದುವೆಯಾಗುವುದರಿಂದ ಅನೇಕ ವಿಷಯಗಳಲ್ಲಿ ಅರಿವು ಹೆಚ್ಚಾಗಿರುತ್ತದೆ. ಪ್ರಬುದ್ಧತೆ ಮತ್ತು ಆರ್ಥಿಕ ಸ್ಥಿರತೆಯನ್ನು ಸಹ ಹೊಂರುತ್ತಾರೆ. ಇಂಥವರು ಪೋಷಕರಾದಾಗ ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಲು ಸಾಧ್ಯವಾಗುತ್ತದೆ. ಮಗುವಿನ ಪ್ರತಿಯೊಂದು ಅಗತ್ಯವನ್ನು ಪೂರೈಸುವುದು ಸುಲಭವಾಗುತ್ತದೆ.