ಆರು ವರ್ಷಗಳ ಸತತ ತಪಸ್ಸಿಗೆ ಫಲ ಸಿಕ್ಕಿದೆ. ಕೊನೆಗೂ ಧರ್ಮಗುರುವನ್ನು ಬಾಲಕಿ ಮದುವೆಯಾಗಿದ್ದಾಳೆ. ಇದು ಆಕೆಯ ಸ್ವಂತ ನಿರ್ಧಾರ, ಇದ್ರಲ್ಲಿ ಕಾನೂನುತರಬೇಡಿ ಎನ್ನುವ ಈ ಜನಾಂಗ ಮದುವೆಯನ್ನು ಅದ್ಧೂರಿಯಾಗಿ ಆಚರಿಸಿದೆ.
ವಿಶ್ವದಾದ್ಯಂತ ಸಂತರ ಸಂಖ್ಯೆ ಸಾಕಷ್ಟಿದೆ. ಅವರನ್ನು ಗೌರವದಿಂದ ಪೂಜಿಸಲಾಗುತ್ತದೆ. ಅವರು ಬ್ರಹ್ಮಚರ್ಯದ ಪಾಲನೆಯನ್ನು ಪಾಲನೆ ಮಾಡ್ತಾರೆ. ಸಂತರು ವಿವಾಹ ಬಂಧನದಲ್ಲಿ ಬಂಧಿಯಾಗೋದಿಲ್ಲ. ಪ್ರತಿಯೊಬ್ಬ ಮಹಿಳೆಯರನ್ನು ಸನ್ಯಾಸಿಗಳು ಶುದ್ಧ ಮನಸ್ಸಿನಿಂದ ತಾಯಿಯ ಸ್ಥಾನದಲ್ಲಿಟ್ಟು ನೋಡ್ತಾರೆ. ಅವರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಅಪರಾಧ ಎಂದು ನಮ್ಮಲ್ಲಿ ನಂಬಲಾಗಿದೆ. ಕೆಲವು ಸಮುದಾಯಗಳ ಆಚಾರ-ವಿಚಾರಗಳು ಅನನ್ಯವಾಗಿವೆ. ಕೆಲ ಸಮುದಾಯದಲ್ಲಿ ಸಂತರೆಲ್ಲ ಬ್ರಹ್ಮಚರ್ಯದ ಪಾಲನೆ ಮಾಡಬೇಕು ಎಂದೇನಿಲ್ಲ. ಅನೇಕ ವಿವಾಹಿತರು ಸಂತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸದ್ಯ ನಡೆದ ಘಟನೆಯೊಂದು ಸಾಕ್ಷ್ಯವಾಗಿದೆ. ಹನ್ನೆರಡು ವರ್ಷದ ಹುಡುಗಿಯೊಬ್ಬಳು ಸನ್ಯಾಸಿಯನ್ನು ಮದುವೆಯಾಗಿ ಚರ್ಚೆಗೆ ಬಂದಿದ್ದಾಳೆ. ಸನ್ಯಾಸಿ ಕ್ರಮವನ್ನು ಜನರು ಖಂಡಿಸುತ್ತಿದ್ದಾರೆ. ಆದ್ರೆ ಈ ಬಗ್ಗೆ ಸಮುದಾಯದವರು ನೀಡಿದ ಕಾರಣ ಹಾಗೂ ಮಾಹಿತಿ ಅಚ್ಚರಿ ಮೂಡಿಸಿದೆ.
63 ವರ್ಷದ ಸನ್ಯಾಸಿ (Monk) ಮದುವೆಯಾದವರು. ಆಫ್ರಿಕಾ (Africa) ದ ಘಾನಾದಲ್ಲಿ ಧರ್ಮಗುರುವನ್ನು ಬಾಲಕಿ ಮದುವೆ (Marriage) ಯಾಗಿದ್ದಾಳೆ. ಸನ್ಯಾಸಿ ವಯಸ್ಸು 63 ವರ್ಷವಾದ್ರೆ ಬಾಲಕಿ ವಯಸ್ಸು 12 ವರ್ಷ. ನುಂಗುವ ಸಮುದಾಯದಲ್ಲಿ ಈ ಮದುವೆ ನಡೆದಿದೆ. ಎರಡು ದಿನಗಳ ಹಿಂದೆ ಮದುವೆ ನಡೆದಿದೆ. ಧಾರ್ಮಿಕ ಮುಖಂಡ ನುಮೊ ಬೊರ್ಕೆಟೆ ಲಾವೆಹ್ ತ್ಸುರು XXXIII ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತ. ನುಂಗುವ ಸಮುದಾಯದ ಹುಡುಗಿಯನ್ನೇ ನುಮೊ ಬೊರ್ಕೆಟೆ ಮದುವೆಯಾಗಿದ್ದಾರೆ.
ಪತ್ನಿ ವಾಟ್ಸ್ ಆ್ಯಪ್ ಸ್ಟೇಟಸ್ ನೋಡಿ ಪೊಲೀಸ್ ಠಾಣೆಗೆ ಓಡಿದ ಪತಿ!
ನುಂಗುವ ಸಂಪ್ರದಾಯದಂತೆ ಮದುವೆ ನಡೆದಿದೆ. ಮದುವೆ ಸಮಾರಂಭದಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಭಾಗಿಯಾಗಿದ್ದರು. ಮದುವೆ ಸಮಯದಲ್ಲಿ ಪತಿಯನ್ನು ಚುಡಾಯಿಸುವಂತಹ ಬಟ್ಟೆ ಧರಿಸುವಂತೆ ಮಹಿಳೆಯರು ಹುಡುಗಿಗೆ ಹೇಳ್ತಿದ್ದರು. ಪರಿಮಳಯುಕ್ತ ಸೆಂಟ್ ಹಾಕಿಕೊಳ್ಳುವಂತೆ ಹೇಳ್ತಿದ್ದರು. ಹೆಂಡತಿಯಾಗಿ ಏನೆಲ್ಲ ಮಾಡಬೇಕು ಎಂಬ ಮಾಹಿತಿಯನ್ನು ಹನ್ನೆರಡು ವರ್ಷದ ಹುಡುಗಿಗೆ ಹಿರಿಯರು ನೀಡ್ತಿದ್ದ ವಿಡಿಯೋ ವೈರಲ್ ಆಗಿದೆ.
ಘಾನಾದಲ್ಲಿ ಮದುವೆಯಾಗಲು ವಯಸ್ಸಿನ ಮಿತಿಯಿದೆ. ಕನಿಷ್ಠ 18 ವರ್ಷ ವಯಸ್ಸಾಗಿದ್ದಲ್ಲಿ ಮಾತ್ರ ಮದುವೆಗೆ ಅನುಮತಿ ನೀಡಲಾಗುತ್ತದೆ. ಆದ್ರೆ ಹನ್ನೆರಡು ವರ್ಷದ ಬಾಲಕಿಗೆ ನಡೆದಿರುವ ಮದುವೆ ಎಲ್ಲರ ಗಮನ ಸೆಳೆದಿದೆ. ಕಾನೂನಿಗೆ ವಿರುದ್ಧವಾಗಿ ನಡೆದ ಮದುವೆ ಇದು ಎಂದು ಜನರು ಕೆಂಡಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ಕಮೆಂಟ್ ಬಂದಿದೆ. ಜನರು ಇದನ್ನು ಬಾಲ್ಯವಿವಾಹ ಎಂದಿದ್ದಾರೆ. ಮತ್ತೆ ಕೆಲವರು ಬಾಲಕಿಗೆ ದೌರ್ಜನ್ಯ ಎಸಗಲಾಗ್ತಿದೆ ಎಂದಿದ್ದಾರೆ. ಕರ್ತವ್ಯ ಮರೆತು ಸದ್ಗುರು ಮದುವೆಯಾಗಿದ್ದಾರೆ ಎಂದು ಅನೇಕರು ಕೋಪ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಮದುವೆಯನ್ನು ಸಮುದಾಯದವರು ಒಪ್ಪಿಕೊಂಡಿದ್ದಾರೆ. ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಪತಿಯೊಂದಿಗೆ ರೊಮ್ಯಾನ್ಸ್ ಮಾಡೋದು ಹೇಗೆ? ಪುರುಷ ಉಪನ್ಯಾಸಕನಿಂದ ವಿವಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಠ!
ಹುಡುಗಿಗೆ ಬಲವಂತವಾಗಿ ಮದುವೆ ಮಾಡಲಾಗಿಲ್ಲ. ನಮ್ಮ ಸಂಪ್ರದಾಯವನ್ನು ಅರ್ಥ ಮಾಡಿಕೊಳ್ಳದ ಜನರು ನಮ್ಮ ಬಗ್ಗೆ ತಪ್ಪಾಗಿ ಹೇಳ್ತಿದ್ದಾರೆಂದು ಸಮುದಾಯದ ಮುಖಂಡರು ಮದುವೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಮುದಾಯದ ನಾಯಕ ನಿಯ್ ಬೋರ್ಟೆ ಕೋಫಿ ಫ್ರಾಂಕ್ವಾ II, ಟೀಕೆಗೆ ಹುರುಳಿಲ್ಲ. ಅಜ್ಞಾನಿಗಳು ಈ ರೀತಿ ಕಮೆಂಟ್ ಮಾಡ್ತಿದ್ದಾರೆ ಎಂದಿದ್ದಾರೆ. ಸಂತರ ಮದುವೆ ನಮ್ಮ ಸಂಪ್ರದಾಯ. ಬಾಲಕಿಯನ್ನು ಬಲವಂತ ಮಾಡಿಲ್ಲ. ಆಕೆ ಆರನೇ ವರ್ಷದಲ್ಲಿಯೇ ಸಂತರನ್ನು ಮದುವೆಯಾಗುವ ತಪಸ್ಸು ಶುರು ಮಾಡಿದ್ದಳು. ಆದ್ರೆ ಆಕೆ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ನಿತ್ಯದ ಕೆಲಸಗಳು ಮೇಲೆ ಇದು ಯಾವುದೇ ಪರಿಣಾಮ ಬೀರಿರಲಿಲ್ಲ. ಬಾಲಕಿ ಕೇವಲ ಸಾಂಪ್ರದಾಯಿಕ ಪತ್ನಿ. ನುಮೊ ಬೊರ್ಕೆಟೆ, ಸಮುದಾಯದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ ಎಂದು ಮುಖಂಡರು ಹೇಳಿದ್ದಾರೆ. ಆದ್ರೆ ಇದು ಸಾಂಪ್ರದಾಯಿಕ ಮದುವೆಯಲ್ಲ, ಆಕೆ ಸನ್ಯಾಸಿ ಮಗುವಿಗೆ ಮುಂದಿನ ದಿನಗಳಲ್ಲಿ ತಾಯಿಯಾಗುವ ಸಾಧ್ಯತೆ ಇದೆ ಎಂದು ಕೆಲವರು ವರದಿ ಮಾಡಿದ್ದಾರೆ.