ನೀವು ಲವ್ ಮಾಡ್ತಿದ್ದೀರಾ? ಚುಚ್ಚು ಮಾತಿನ ಸವಾಲು ಸ್ವೀಕರಿಸಿ ಜಾತ್ರೆಯಲ್ಲೇ ಚುಂಬಿಸಿದ ಜೋಡಿ!

By Chethan Kumar  |  First Published Jul 22, 2024, 12:41 PM IST

ನಿಮ್ಮಿಬ್ಬರ ನಡುವೆ ಲವ್ ಇದೆಯಾ? ಮಾತು ಮಾತಿಗೆ ಸ್ಥಳೀಯರು, ಗ್ರಾಮಸ್ಥರ ಚುಚ್ಚು ಮಾತನ್ನು ಸವಾಲಾಗಿ ಸ್ವೀಕರಿಸಿದ ಜೋಡಿ ಜಾತ್ರೆಯಲ್ಲಿ ಎಲ್ಲರ ಮುಂದೆ ಚುಂಬಿಸಿದ ಘಟನೆ ನಡೆದಿದೆ. ಹಲವರು ಈ ದೃಶ್ಯ ಸೆರೆ ಹಿಡಿದ್ದಾರೆ.
 


ಮೀರತ್(ಜು.22) ಮೆಟ್ರೋ, ಬಸ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜೋಡಿಗಳು ಚುಂಬಿಸುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿದೆ. ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸಿದ ಜೋಡಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದೆ. ಇದೀಗ ಇಲ್ಲೊಂದು ಜೋಡಿ ಸವಾಲನ್ನು ಸ್ವೀಕರಿಸಿ ಜಾತ್ರೆಯಲ್ಲಿ ಎಲ್ಲರ ಮುಂದೆ ಆಲಿಂಗಿಸಿ ಚುಂಬಿಸಿದ ದೃಶ್ಯಗಳು ಹಲವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿದೆ. 

ಉತ್ತರ ಪ್ರದೇಶದ ಮೀರತ್‌ನ ಈ ಯುವ ಜೋಡಿಗೆ ಕಳೆದ ಹಲವು ದಿನಗಳಿಂದ ಸ್ಥಳೀಯರು ಸೇರಿದಂತೆ ಪರಿಯಚಸ್ಥರ ಸಂಬಂಧವನ್ನು ಪ್ರಶ್ನೆ ಮಾಡುತ್ತಲೇ ಬಂದಿದೆ. ನಿಮ್ಮಬ್ಬರ ನಡುವೆ ಏನಿದೆ? ಎಲ್ಲಾ ಕಡೆ ಜೊತೆಯಾಗಿ ಕಾಣಿಸಿಕೊಳ್ಳುತ್ತೀದ್ದೀರಿ ಎಂದೆಲ್ಲಾ ಹಲವು ಪ್ರಶ್ನೆಗಳನ್ನು ಈ ಜೋಡಿ ಎದುರಿಸಿದೆ. ಮೀರತ್‌ನ ನೌಚಂಡಿ ಮೇಳದಲ್ಲೂ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ.ಈ ವೇಳೆ ಸಿಕ್ಕ ಪರಿಚಯಸ್ಥರೂ ಮತ್ತೆ ಗೇಲಿ ಮಾಡಿದ್ದಾರೆ. 

Latest Videos

ಶಿವ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲೇ ಜೋಡಿಯ ರೊಮ್ಯಾನ್ಸ್ ದೃಶ್ಯ ಸೆರೆ, ಭಕ್ತರ ಆಕ್ರೋಶ!

ಚುಚ್ಚು ಮಾತು, ಸಾವಿರ ಪ್ರಶ್ನೆಗಳಿಂದ ರೋಸಿ ಹೋದ ಜೋಡಿ ಇದನ್ನು ಸವಾಲಾಗಿ ಸ್ವೀಕರಿಸಿದೆ. ಬಳಿಕ ನೌಚಂಡಿ ಮೇಳ ಜಾತ್ರೆಯಲ್ಲಿ ಎಲ್ಲರ ಮುಂದೆ ಸುದೀರ್ಘವಾಗಿ ಚುಂಬಿಸಿದೆ. ಈ ಮೂಲಕ ತಮ್ಮ ಸಂಬಂಧವನ್ನು ಎಲ್ಲರ ಮುಂದೆ ಸಾಬೀತುಪಡಿಸಿದ್ದಾರೆ. ಈ ಜೋಡಿಗಳು ಚುಂಬಿಸುತ್ತಿದ್ದಂತೆ ಸುತ್ತ ಮುತ್ತ ನೆರೆದಿದ್ದವರು ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಕೆಲವರು ಈ ಜೋಡಿಯ ಸುತ್ತ ಕುಣಿದು ಕುಪ್ಪಳಿಸಿದ್ದಾರೆ.

 

मेले में खुलेआम किसिंग का ये वीडियो फिलहाल मेरठ के नौचंदी मेले का बताया जा रहा है। कपल को खुलेआम kiss करने का चैलेंज मिला। कपल ने भी चैलेंज मानकर एकदूसरे को kiss कर मेले का माहौल बिगाड़ा।
Note: sensitive content pic.twitter.com/jnLAOEsh4S

— shalu agrawal (@shaluagrawal3)

 

ಇದೇ ವೇಳೆ ಕೆಲ ಆಪ್ತರು, ಮೊಬೈಲ್ ಮೂಲಕ ಸೆರೆ ಹಿಡಿಯದಂತೆ ಮನವಿ ಮಾಡಿದ್ದಾರೆ. ಜೋಡಿಗಳ ಚುಂಬನ ದೃಶ್ಯಗಳನ್ನು ರೆಕಾರ್ಡ್ ಮಾಡದಂತೆ ಸೂಚಿಸಿದ್ದಾರೆ. ಅಷ್ಟರಲ್ಲೇ ಹಲವರ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆಯಾಗಿದೆ. ಬಳಿಕ ಅಷ್ಟೇ ವೇಗದಲ್ಲಿ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಲು ಆರಂಭಿಸಿದೆ. 

ಈ ವಿಡಿಯೋ ವೈರಲ್ ಬಳಿಕ ಜೋಡಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಾರ್ವಜನಿಕ ಪ್ರದೇಶ, ಅದರಲ್ಲೂ ಜಾತ್ರೆಯಲ್ಲಿ ಈ ರೀತಿ ವರ್ತಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ನೌಚಂಡಿ ಮೇಳ 1672ರಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಈ ಮೇಳೆ ನಡೆಯುತ್ತದೆ. ಈ ವೇಳೆ ಕೃಷಿ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುತ್ತದೆ. ಎತ್ತುಗಳ ಓಟದಿಂದ ಆರಂಭಗೊಂಡ ಈ ಜಾತ್ರೆ ಬಳಿಕ ಹಲವು ಚಟುವಟಿಕೆಗಳು ಸೇರಿಕೊಂಡಿದೆ. 2020ರಲ್ಲಿ ಕೊರೋನಾ ಕಾರಣದಿಂದ ಈ ಜಾತ್ರೆ ಮುಂದೂಡಲಾಗಿತ್ತು. 

ಏಳಡಿ ಎತ್ತರದ ಗರ್ಲ್‌ಫ್ರೆಂಡ್ ಜೊತೆ ಮೂರಡಿ ರಾಜನ ಮಸ್ತಿ, ಜೋಡಿ ವಿಡಿಯೋಗೆ ಚಿಂದಿ ಕಮೆಂಟ್!
 

click me!