
ನನ್ನ ಹೆಸರು ವೃಂದಾ. ಇದು ನನ್ನ ತಪ್ಪೊಪ್ಪಿಗೆ (confession box). ನಾನು ಪೋಸ್ಟ್ ಗ್ರಾಜ್ಯುಯೇಷನ್ ಮಾಡ್ತಿದ್ದೀನಿ. ನಾನು ಮತ್ತು ನನ್ನ ಫ್ರೆಂಡ್ ಒಂದೇ ರೂಮ್‌ನಲ್ಲಿದ್ದೀವಿ. ಅವಳಿಗೊಬ್ಬ ಬಾಯ್ ಫ್ರೆಂಡ್ (Boyfriend) ಇದ್ದಾನೆ. ಅವನ ಜೊತೆಗೆ ಲಾಂಗ್ ಡ್ರೈವ್‌ಗೆ, ಸಿನಿಮಾಕ್ಕೆಲ್ಲ ಹೋಗುತ್ತಿರುತ್ತಾಳೆ. ಅವನ ಬಗ್ಗೆ ನನ್ನ ಜೊತೆಗೆ ತುಂಬ ಹೇಳ್ತಾನೂ ಇರ್ತಾಳೆ. ಆದರೆ ಅವರಿಬ್ಬರ ನಡುವೆ ಲೈಂಗಿಕ ಸಂಬಂಧ ಇದೆ ಅಂತ ಗೊತ್ತಿರಲಿಲ್ಲ. ಒಂದು ಘಟನೆ ಆದ್ಮೇಲಿಂದ ನನಗೆ ತಲೆ ಕೆಟ್ಟು ಹೋಗಿದೆ. ಅವತ್ತು ಕ್ಲಾಸ್ ಬೇಗ ಮುಗೀತು ಅಂತ ರೂಮ್‌ಗೆ ಬಂದೆ. ನೋಡಿದ್ರೆ ರೂಮ್ ಬೀಗ ತೆಗೆದಿತ್ತು. ಒಳಗಿಂದ ಲಾಕ್ ಆಗಿತ್ತು. ನನ್ನ ಫ್ರೆಂಡ್ ಬಂದಿರ್ತಾಳೆ ಅಂದುಕೊಂಡು ಬಾಗಿಲು ತಟ್ಟಲು ಹೊರಟವಳು ಒಳಗಿನಿಂದ ಏನೋ ಸೌಂಡ್ ಕೇಳಿದಂತಾಗಿ ಹಿಂತೆಗೆದೆ. ಸೈಡ್‌ನಿಂದ ಹೋಗಿ ರೂಮ್‌ನ ಕಿಟಕಿಯಲ್ಲಿ ಇಣುಕಿದೆ. ಒಳಗೆ ನನ್ನ ಫ್ರೆಂಡ್ ಮತ್ತು ಅವಳ ಬಾಯ್ ಫ್ರೆಂಡ್ ನೋಡಬಾರದ ಸ್ಥಿತಿಯಲ್ಲಿದ್ದರು.
ನನಗೆ ಒಂದು ಕ್ಷಣ ಅದನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಅವರೆಲ್ಲಿ ನನ್ನ ನೋಡ್ತಾರೋ ಅಂತ ಭಯ ಆಯ್ತು. ಆದರೂ ಒಂಥರಾ ಕುತೂಹಲ. ಅವರು ಇರೋ ಸ್ಥಿತಿಯನ್ನು ನೋಡಿದೆ. ನನ್ನ ಫ್ರೆಂಡ್ ಆ ಕ್ರಿಯೆಯಿಂದ ಉನ್ಮತ್ತಳಾಗಿದ್ದಂತೆ ಇತ್ತು. ತುಂಬಾ ಅನಂದಿಸುತ್ತಾ ಇದ್ದಳು. ನಾವಿಬ್ಬರೂ ಜೊತೆಗಿದ್ದಾಗ ಅವಳು ಎಂದೂ ಅಂಥ ಆನಂದ ಹೊಂದಿದ್ದನ್ನು ನಾನು ಕಂಡಿರಲಿಲ್ಲ. ಅವರಿಬ್ಬರೂ ಬೆತ್ತಲೆಯಾಗಿದ್ದರು. ಪರಸ್ಪರರ ಶರೀರವನ್ನು ಮುಟ್ಟಿಕೊಳ್ಳುತ್ತಾ ತುಂಬಾ ಸವಿಯುತ್ತಾ ಇದ್ದರು. ಅದನ್ನು ನೋಡುತ್ತಾ ನನ್ನ ಮೈಯಲ್ಲಿ ಉದ್ರೇಕವಾಯ್ತು. ಆಕೆಯ ಬಗ್ಗೆ ಹೊಟ್ಟೆಕಿಚ್ಚು ಕೂಡ ಆಯ್ತು.
ಸದ್ದಿಲ್ಲದಂತೆ ಹೋಗಿ ಪಾರ್ಕ್‌ನಲ್ಲಿ ಕೂತೆ. ಆಮೇಲೆ ನನ್ನ ಟೈಮ್‌ಗೆ ವಾಪಾಸ್ ಬಂದೆ. ಅಷ್ಟರಲ್ಲಿ ಅವನು ಹೋಗಿ ಆಗಿತ್ತು. ಅವಳು ಎಂದಿನಂತೆ ಇದ್ದಳು. ಆದರೆ ಅದನ್ನು ನೋಡಿದಾಗಿನಿಂದ ನನ್ನ ಮನಸ್ಸು ಒಂಥರಾ ಆಗಿದೆ. ಬೇಡ ಬೇಡ ಅಂದರೂ ಆ ದೃಶ್ಯ ಕಣ್ಮುಂದೆ ಬರುತ್ತೆ. ಅವರೇನು ಮಾಡಿರಬಹುದು ಅನ್ನುವ ಕಲ್ಪನೆಗಳೆಲ್ಲ ಬರುತ್ತೆ. ಅವಳ ಬಾಯ್ ಫ್ರೆಂಡ್‌ನ ಆ ಸ್ಥಿತಿಯಲ್ಲಿ ನೋಡಿದ ಮೇಲಿಂದ ಅವನ ಬಗ್ಗೆ ಒಂಥರ ಅಟ್ರಾಕ್ಷನ್ ಶುರುವಾಗಿದೆ. ಅವನ ಕಟ್ಟುಮಸ್ತಾದ ಶರೀರ ತಲೆಯಲ್ಲಿ ಕೂತಿದೆ. ಮನಸ್ಸು ನನ್ನ ಹತೋಟಿಗೆ ಬರುತ್ತಿಲ್ಲ. ಅವನ ಜೊತೆಯಲ್ಲಿ ನಾನೂ ಅದೇ ಭಂಗಿಯಲ್ಲಿ ಇದ್ದಂತೆಲ್ಲ ಕಲ್ಪನೆಗಳೆಲ್ಲ ತಲೆಗೆ ಬರ್ತಿದೆ. ಯಾವತ್ತೂ ಹೀಗಾಗಿರಲಿಲ್ಲ. ಏನು ಮಾಡೋದು ಅಂತ ಗೊತ್ತಾಗ್ತಿಲ್ಲ. ಚೆನ್ನಾಗಿ ಓದಬೇಕು ಅಂತ ಬಹಳ ಕನಸಿಟ್ಟುಕೊಂಡವಳು ನಾನು. ಈಗ ಪುಸ್ತಕ ಓದಲಿಕ್ಕೇ ಆಗ್ತಿಲ್ಲ. ಕ್ಲಾಸ್‌ನಲ್ಲಿ ಪಾಠ ಕೇಳುವಾಗಲೂ ಏಕಾಗ್ರತೆ ಬರುತ್ತಿಲ್ಲ.
ಒಂದು ಸಲ, ಆಕೆಯ ಗೆಳೆಯನ ಜೊತೆಗೆ ನಾನೂ ಸ್ವಲ್ಪ ಸಲಿಗೆ ವಹಿಸಲಾ ಅಂತಲೂ ಯೋಚಿಸಿದೆ. ಅವಳ ಜೊತೆಗೆ ಆನಂದಿಸಿದಂತೆ ನನ್ನ ಜೊತೆಗೂ ಅವನು ಖುಷಿಪಡಬಹುದಲ್ವೇ? ಇಬ್ಬರ ಜೊತೆ ಸರಸವಾಡೋದು ಅವನಿಗೂ ಇಷ್ಟವಾಗೀತಲ್ವೇ? ಇಬ್ಬರದೂ ಹೆಣ್ಣು ದೇಹವೇ ತಾನೆ? ಅವಳ ಹಾಗೇ ಎಲ್ಲೆಲ್ಲಿ ಏನಿರಬೇಕೋ ಅದೆಲ್ಲ ನನಗೂ ಇದೆ. ಎಂದೆಲ್ಲ ಯೋಚನೆಗಳು ತಲೆಯಲ್ಲಿ ಬಂದವು. ಆದರೆ ಮರುಕ್ಷಣದಲ್ಲೇ ವಾಸ್ತವವನ್ನೂ ಯೋಚಿಸಿದೆ. ಈಗ ನನ್ನ ಕಾಮನೆಗಳಿಗೆ ವಶವಾಗಿ ಗೆಳತಿಯ ಬಾಯ್‌ಫ್ರೆಂಡ್ ಅನ್ನು ಬಳಸಿಕೊಳ್ಳಲು ಮುಂದಾದರೆ ಏನಾದೀತು? ಅವನು ನಿರಾಕರಿಸಿದರೆ ಅವಮಾನ. ಗೆಳತಿಗೆ ಗೊತ್ತಾದರೆ ಆಕೆಯನ್ನೂ ಕಳೆದುಕೊಳ್ಳುತ್ತೇನೆ. ಅವನ್ನೂ ಕಳೆದುಕೊಳ್ಳಬೇಕಾಗಬಹುದು. ನನ್ನ ಕ್ಯಾರೆಕ್ಟರ್ ಬಗ್ಗೆಯೂ ಒಳ್ಳೆಯ ಹೆಸರು ಉಳಿಯಲಿಕ್ಕಿಲ್ಲ. ಇದನ್ನೆಲ್ಲ ಯೋಚಿಸಿ ಸುಮ್ಮನಾದೆ.
ಆದರೂ ನಾನೆಲ್ಲಿ ಹಾದಿ ತಪ್ಪಿ ಬಿಡಬಹುದೋ ಅನ್ನೋ ಭಯ ಕಾಡಿತು. ಇದರಿಂದ ತಪ್ಪಿಸಿಕೊಳ್ಳಲು ಪರಿಸರ ಬದಲಾವಣೆ ಮಾಡಿಕೊಳ್ಳಲು ಒಂದಿಷ್ಟು ದಿನ ಊರಿಗೆ, ಸಂಬಂಧಿಕರ ಮನೆಗೆ, ಪ್ರವಾಸಕ್ಕೆ ಹೋಗಿಬಂದೆ. ಇಂಥ ಯೋಚನೆಗಳು ಬಂದ ಕೂಡಲೇ ಅದನ್ನು ಡೀವಿಯೇಟ್ ಮಾಡಿ ಬೇರೆ ವಿಷಯಗಳತ್ತ ಹರಿಸಿದೆ. ಸಿನಿಮಾ ನೋಡಿದೆ. ಪುಸ್ತಕ ಓದಿದೆ. ತೀವ್ರವಾಗಿ ಆಟ ಆಡಿದೆ. ಶಟಲ್ ಬ್ಯಾಡ್ಮಿಂಟನ್, ರನ್ನಿಂಗ್ ಇತ್ಯಾದಿ. ಆದರೂ ಮನಸ್ಸು ತಹಬಂದಿಗೆ ಬರುತ್ತಿಲ್ಲ ಕೌನ್ಸಿಲರ್ ಬಳಿಗೆ ಹೋಗಬೇಕು ಎಂದು ಅನಿಸುತ್ತಿದೆ. ಅದನ್ನೂ ಪ್ರಯತ್ನಿಸಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.