ಡಂಕಿ ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ಬೋ ಅವರನ್ನು ಮದ್ವೆಯಾಗ್ತಿದ್ದಾರೆ ಎಂಬ ಸುದ್ದಿಯ ಬೆನ್ನಲೇ ತಾಪ್ಸಿ ತಮ್ಮ ಹಳೆಯ ಸಂಬಂಧಗಳ ಬಗ್ಗೆ ಒಪನ್ ಆಗಿ ಮಾತನಾಡಿದ್ದಾರೆ.
ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ ಬ್ಯಾಡ್ಮಿಂಟನ್ ಕೋಚ್ ಮಥಾಯಿಸ್ ಬೋ ಅವರನ್ನು ಇದೇ ಮಾರ್ಚ್ ತಿಂಗಳಲ್ಲಿ ಮದ್ವೆಯಾಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ನಟಿ ಟಿವಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದು ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ಆಫೇರ್ ಡೇಟಿಂಗ್‌ಗಳ ಬಗ್ಗೆ ನಟಿ ಮಾತನಾಡಿದ್ದು, ತನ್ನ ಡೇಟಿಂಗ್ ಲೈಫ್ ಅಷ್ಟೊಂದು ಅಬ್ಬರದಿಂದ ಕೂಡಿಲ್ಲದಿದ್ದರೂ ನಾನು ಕೂಡ ಇತರರಂತೆ ನನ್ನ ನಿಜವಾದ ರಾಜಕುಮಾರನ ತಲುಪುವ ಮೊದಲು ಹಲವು ಕಪ್ಪೆಗಳಿಗೆ ಮುತ್ತಿಕ್ಕಿದ್ದೇನೆ ಎಂದು ತೆರೆದ ಹೃದಯದಿಂದ ಮಾತನಾಡಿದ್ದಾರೆ ನಟಿ.
ಆದರೆ ಪ್ರಬುದ್ಧತೆ ಹಾಗೂ ಕೆಲಸ ಮಾಡಲು ಆರಂಭಿಸಿದ ನಂತರ ನಾನು ಓರ್ವ ವ್ಯಕ್ತಿಗೆ ಮೀಸಲಾಗಿರಲು ಬಯಸಿದೆ. ಇದಕ್ಕೆ ಕಾರಣ ನನ್ನವನು. ಅವನು ಕೇವಲ ಹುಡುಗನಲ್ಲ ತುಂಬಾ ಪ್ರಬುದ್ಧ ವ್ಯಕ್ತಿ, ಆತನ ವ್ಯಕ್ತಿತ್ವ ನನ್ನಲ್ಲಿ ತುಂಬಾ ಬದಲಾವಣೆ ತಂದಿತು ಎಂದು ತಾಪ್ಸಿ ಹೇಳಿದ್ದಾರೆ. ಮಥಾಯಿಸ್ ಅವರನ್ನ ಭೇಟಿಯಾಗುವ ಮೊದಲು ಕೇವಲ ಪ್ರಬುದ್ಧ ವ್ಯಕ್ತಿಯಷ್ಟೇ ಸಂಬಂಧದಲ್ಲಿ ನನಗೆ ಬೇಕಾದ ಭದ್ರತೆ ನೀಡಲು ಸಾಧ್ಯ ಎಂದು ನಾನು ಭಾವಿಸಿದ್ದೆ ಎಂದು ಪಿಂಕ್ ನಟಿ ಹೇಳಿದ್ದಾರೆ.
ಇದೇ ಮಾರ್ಚ್‌ನಲ್ಲಿ ರಾಜಸ್ಥಾನದ ಉದಯ್‌ಪುರದಲ್ಲಿ ಮಥಾಯಿಸ್ ಹಾಗೂ ತಾಪ್ಸಿ ಪನ್ನು ಮದ್ವೆಯಾಗುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ನಾನು ಒಂದು ದಿನ ಮದುವೆಯಾಗುತ್ತೇನೆ. ಮದುವೆಯಾದ ಮೇಲಷ್ಟೇ ಜನರಿಗೆ ಗೊತ್ತಾಗಲಿದೆ ಎಂದು ಆಕೆ ಹೇಳಿಕೊಂಡಿದ್ದಳು. ಈಗ ಗಾಸಿಪ್‌ಗಳನ್ನು ಹಬ್ಬಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ನೀವು ಹೀಗೆ ಊಹೆ ಮಾಡಲು ಬಯಸಿದರೆ, ನಾನು ಹತ್ತು ವರ್ಷಗಳ ಹಿಂದೆ ನಾನು ಈ ವ್ಯಕ್ತಿಯೊಂದಿಗೆ ಡೇಟಿಂಗ್ ಪ್ರಾರಂಭಿಸಿದಾಗಿನಿಂದಲೂ ಊಹೆ ಮಾಡಬೇಕಿತ್ತು. ಆದರೆ ಮದುವೆಯಾಗುವುದಾದರೆ ಅವನನ್ನು ಮಾತ್ರ ಎಂಬುದು ನನಗೆ ಗೊತ್ತಿತ್ತು. ಆದರೆ ಮದ್ವೆ ಬಗ್ಗೆ ಅಷ್ಟೊಂದು ಕುತೂಹಲ ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ನಟಿ ಹೇಳಿದ್ದಾರೆ. ಜನ ನಾನು ಮಾಡುವ ಕೆಲಸದ ಕಾರಣಕ್ಕೆ ನನ್ನನ್ನು ಪ್ರೀತಿಸುತ್ತಾರೆ. ಆದರೆ ವೈಯಕ್ತಿಕ ಬದುಕಿನ ಬಗ್ಗೆ ನಾನು ಎಲ್ಲರಿಗೂ ವಿವರ ನೀಡಬೇಕಾದ ಅಗತ್ಯವಿಲ್ಲ ಎಂದು ನಟಿ ಹೇಳಿದ್ದಾರೆ.
ಮಾರ್ಚ್‌ನಲ್ಲಿ ತಾಪ್ಸಿ ಮದ್ವೆ: ದಶಕದ ಗೆಳೆಯ, ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರನ ಕೈ ಹಿಡಿಯಲಿರುವ ನಟಿ
ಇನ್ನು ತಪ್ಸಿ ಸಿನಿಮಾ ಕೆರಿಯರ್ ಬಗ್ಗೆ ಹೇಳುವುದಾದರೆ ಏಲಿಯನ್, ಜನ ಗಣ ಮನ, ಓ ಲಡ್ಕಿ ಹೈ ಕಹಾ, ಫಿರ್ ಆಯಿ ಹಸೀನ್ ದಿಲ್ರುಬಾ ಮುಂತಾದ ಸಿನಿಮಾಗಳು ತಪ್ಸಿ ಕೈಯಲ್ಲಿವೆ. ತಾಪ್ಸಿ ಮದ್ವೆಯಾಗ್ತಿದ್ದಾರೆ ಎಂಬ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ತಾಪ್ಸಿ ಈ ಹಿಂದೆ ಹೇಳಿದ ಮಾತೊಂದು ಸಾಕಷ್ಟು ವೈರಲ್ ಆಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ತಾಪ್ಸಿ ಪನ್ನು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಆಗಾಗ್ಗೆ ಉತ್ತರಿಸುತ್ತಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರು ಮದುವೆಯ ಬಗ್ಗೆ ತಾಪ್ಸಿಗೆ ಪ್ರಶ್ನೆ ಕೇಳಿದ್ದರು. ಮಥಾಯಿಸ್ ಬೋ ಜೊತೆ ಸಕತ್ ಟೂರ್ ಮಾಡುತ್ತ ಲೈಫ್ ಎಂಜಾಯ್ ಮಾಡುತ್ತಿರುವುದನ್ನು ನೋಡಿದ್ದ ಅಭಿಮಾನಿ, ಮದ್ವೆ ಯಾವಾಗ ಕೇಳಿದ್ದರು. ಇಲ್ಲಿ ಕೇಳಿ. ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಆಗುವುದೂ ಇಲ್ಲ. ಇನ್ಯಾಕೆ ಮದ್ವೆ, ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ ಎಂದಿದ್ದರು.
ಪ್ರೆಗ್ನೆಂಟೇ ಆಗ್ಲಿಲ್ಲ, ಮದ್ವೆ ಯಾಕೆ ಅಂದಿದ್ದ ಡಂಕಿ ಬೆಡಗಿ ತಾಪ್ಸಿ ಮದ್ವೆ ನಿಜನಾ? ನಟಿ ಹೇಳಿದ್ದೇನು?