ನೀವು ಇತ್ತೀಚೆಗೆ ಹೊಸದಾಗಿ ಪರಿಚಯ ಆದವರಿಂದ ಅತಿಯಾದ ಪ್ರೀತಿಯ ಪ್ರದರ್ಶವನ್ನು ಅನುಭವಿಸಿದ್ದೀರಾ? ಈ ಪ್ರೀತಿ ತಡೆದುಕೊಳ್ಳಲು ಸಾಧ್ಯವಿಲ್ಲದ್ದು ಎಂದು ನಿಮಗೆ ಅನಿಸಿದೆಯಾ? ಹಾಗಿದ್ದರೆ ಅದು ಲವ್ ಬಾಂಬಿಂಗೇ ಸರಿ.
ಕೆಲವೊಮ್ಮೆ ಪ್ರೀತಿಯನ್ನು ಸುರಿಸುವುದು ಸಹಜವೇ ಇರಬಹುದು. ಆದರೆ ಲವ್ ಬಾಂಬ್ ದಾಳಿ ಮಾತ್ರ ಒಂದು ರೀತಿಯ ನೆಗೆಟಿವ್ ತಂತ್ರ. ಇದು ಯಾಕೆ, ಇದು ಹೇಗೆ ಅಂತ ತಿಳಿಯೋಣ ಬನ್ನಿ.
ಲವ್ ಬಾಂಬ್ ದಾಳಿ ಎಂದರೇನು?
ಲವ್ ಬಾಂಬ್ ದಾಳಿ ಒಂದು ನೆಗೆಟಿವ್ ತಂತ್ರ. ಒಬ್ಬ ವ್ಯಕ್ತಿಯು ಸಂಬಂಧದಲ್ಲಿ ಅತಿಯಾದ ಪ್ರೀತಿ, ಗಮನ ಮತ್ತು ಮೆಚ್ಚುಗೆಯನ್ನು ಇನ್ನೊಬ್ಬರಿಗೆ ನೀಡುತ್ತಾನೆ. ಇತರ ವ್ಯಕ್ತಿಯ ಭಾವನೆಗಳು ಮತ್ತು ನಿರ್ಧಾರಗಳ ಮೇಲೆ ನಿಯಂತ್ರಣ ಸಾಧಿಸಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಲವ್ ಬಾಂಬ್ ದಾಳಿಯು ಅಬ್ಯೂಸಿವ್ ಅಥವಾ ನಿಯಂತ್ರಣ ಸಂಬಂಧದ ಆರಂಭ ಇರಬಹುದು. ಇದನ್ನು ಸಾಮಾನ್ಯವಾಗಿ ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಿಮ್ಮನ್ನು ಆ ವ್ಯಕ್ತಿಯ ಹಿಡಿತದಲ್ಲಿರಿಸುತ್ತದೆ. ಇದು ನಿಮ್ಮ ಭಾವನಾತ್ಮಕ ಏರುಪೇರಿಗೆ ಕಾರಣವಾಗಬಹುದು.
ಲವ್ ಬಾಂಬ್ ದಾಳಿಯ ಚಿಹ್ನೆಗಳು
ಲವ್ ಬಾಂಬ್ ದಾಳಿ ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು. ಅಂಥ ಕೆಲವು ಚಿಹ್ನೆಗಳು ಇಲ್ಲಿವೆ:
1. ಸಿಕ್ಕಾಪಟ್ಟೆ ಗಮನ ಮತ್ತು ಸಂವಹನ
ಆ ವ್ಯಕ್ತಿ ನಿಮಗೆ ಮೆಸೇಜ್‌ಗಳು, ಕರೆಗಳು ಮತ್ತು ಇಮೇಲ್‌ಗಳ ಮೂಲಕ ಬಾಂಬ್ ಸುರಿಮಳೆ ಸ್ಫೋಟಿಸಬಹುದು. ಮುಖಾಮುಖಿಯಾಗಿಯೂ ಬಲವಾದ ಭಾವನೆಗಳನ್ನು ವ್ಯಕ್ತಪಡಿಸಬಹುದು. ನಿರಂತರ ಅವರೊಂದಿಗೆ ಮಾತನಾಡುತ್ತಿರಲು, ಸಂವಹನಕ್ಕೆ ಒತ್ತಾಯಿಸಬಹುದು. ನೀವು ತಕ್ಷಣ ಉತ್ತರಿಸದಿದ್ದರೆ ಆತಂಕಕ್ಕೆ ಒಳಗಾಗಬಹುದು.
Intimate Health: ಮಹಿಳೆಯರ ಸೆಕ್ಸ್ ಡ್ರೈವ್ ಹೆಚ್ಚಾಗೋಕೆ ಇದು ಕಾರಣ
2. ಅತಿಯಾದ ಉಡುಗೊರೆ, ಸೂಚನೆ
ಅವರು ನಿಮ್ಮನ್ನು ಅದ್ದೂರಿ ಉಡುಗೊರೆಗಳೊಂದಿಗೆ ಮುದ್ದಿಸಬಹುದು. ಅತಿರಂಜಿತ ಡೇಟಿಂಗ್ ಮಾಡಬಹುದು. ನಿಮ್ಮ ಸಂಬಂಧದ ಗಾಢತೆ ಸಾಕಾಗುತ್ತಿಲ್ಲ ಎಂದು ಪೀಡಿಸಬಹುದು. ಉಡುಗೊರೆಗಳನ್ನು ನೀಡುವುದು ಹೀಗೇ ಕೆಟ್ಟದ್ದಲ್ಲವಾದರೂ, ಅದರ ತೀವ್ರತೆ ಮತ್ತು ಪದೇ ಪದೇ ಹಾಗೆ ಮಾಡುವುದು ಲವ್ ಬಾಂಬ್ ದಾಳಿಯ ಸಂಕೇತ.
3. ಸಂಬಂಧದ ವಿಪರೀತತೆ
ಲವ್ ಬಾಂಬರ್ ಸಂಬಂಧದ ಹೊಸದರಲ್ಲಿ ಗಂಭೀರವಾದ ಸ್ಥಿತಿಯನ್ನು ತಂದಿಡಬಹುದು. ಭೇಟಿಯಾದ ಹೊಸತರಲ್ಲೇ ಒಟ್ಟಿಗೆ ಡೇಟ್ ಹೋಗುವುದು, ಮದುವೆಯಾಗುವುದು ಅಥವಾ ಇತರ ದೀರ್ಘಾವಧಿಯ ಯೋಜನೆಗಳ ಬಗ್ಗೆ ಮಾತನಾಡಬಹುದು. ನೀವು ಒಬ್ಬರನ್ನೊಬ್ಬರು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಮಯವನ್ನು ಹೊಂದುವ ಮೊದಲು ನಿಮ್ಮನ್ನು ಭದ್ರಪಡಿಸಿಕೊಳ್ಳಲು ವಿಪರೀತ ಆತುರ ಮಾಡಬಹುದು.
4. ನಿರಂತರ ಹೊಗಳಿಕೆ
ಅವರು ನಿಮ್ಮನ್ನು ಅಗತ್ಯವಿಲ್ಲಿದ್ದಾಗಲೂ ಹೊಗಳಿಕೆಗಳು ಮತ್ತು ಅಭಿನಂದನೆಗಳಿಂದ ತೋಯಿಸಬಹುದು. ಇದು ನಿಮ್ಮ ಸುತ್ತಲಿರುವ ಇತರರ ರಕ್ಷಣೆಯನ್ನು ಕಡಿಮೆ ಮಾಡಿ ಇವರ ಮೇಲೆ ಹೆಚ್ಚು ಭಾವನಾತ್ಮಕವಾಗಿ ಅವಲಂಬಿತವಾಗುವಂತೆ ಮಾಡುವ ತಂತ್ರವಾಗಿದೆ.
ಮದ್ವೆಗೂ ಮೊದ್ಲು ಬ್ಯಾಂಕಾಕ್‌ಗೆ ಹೋಗೋದು ತಪ್ಪು ಎಂದಿದ್ದ ಪೃಥ್ವಿ ಅಂಬಾರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
5. ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕತೆ (Detachment with Friends and Family)
ಲವ್ ಬಾಂಬರ್‌ಗಳು ಸಾಮಾನ್ಯವಾಗಿ ನಿಮ್ಮ ಸಮಯವನ್ನು ಪೂರ್ತಿ ಕಬಳಿಸಲು ಪ್ರಯತ್ನಿಸುತ್ತಾರೆ. ಇತರರೊಂದಿಗೆ ಸಮಯ (Time) ಕಳೆಯದಂತೆ ಮಾಡುತ್ತಾರೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ನಿಮ್ಮಿಂದ ಪ್ರತ್ಯೇಕಿಸುವ ಪ್ರಯತ್ನ ಮಾಡಬಹುದು. ನೀವು ಅವರ ಮೇಲೆ ಹೆಚ್ಚು ಅವಲಂಬಿತರಾಗುವಂತೆ ಮಾಡಬಹುದು.
6. ಭಾವನೆಗಳನ್ನು ತಿರುಚುವುದು
ನೀವು ಸಂಬಂಧದಿಂದ ಹಿಂತೆಗೆದುಕೊಳ್ಳುವ ಅಥವಾ ಸಂಬಂಧವನ್ನು ಪ್ರಶ್ನಿಸುವ ಬಗ್ಗೆ ಸೂಚನೆ ನೀಡಿದರೆ, ಅವರು ಅತಿಯಾದ ಪ್ರೀತಿಯಿಂದ ಬೆದರಿಕೆ ಕಡೆಗೆ ತಿರುಗಬಹುದು. ಈ ಭಾವನಾತ್ಮಕ ಮ್ಯಾನಿಪ್ಯುಲೇಶನ್ (Manipulation) ನಿಮ್ಮನ್ನು ಹತ್ತಿರದಲ್ಲಿಟ್ಟುಕೊಳ್ಳುವ ಗುರಿಯನ್ನು ಹೊಂದಿದೆ. ಇದು ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ಮೂಡಿಸುವುದರಿಂದ ಹಿಡಿದು ಬಲಿಪಶುವಿನಂತೆ ಆಡುವವರೆಗೆ ಇರಬಹುದು.
ಲವ್ ಬಾಂಬ್ ದಾಳಿ ಕೆಟ್ಟದ್ದೇ?
ಲವ್ ಬಾಂಬ್ ದಾಳಿ ನಿಜವಾದ ಪ್ರೀತಿಯಲ್ಲ (Love) ಅಥವಾ ಪ್ರೀತಿಯ ಸಂಕೇತವಲ್ಲ ಎಂದು ಗುರುತಿಸುವುದು ಮುಖ್ಯ. ಬದಲಾಗಿ, ಇದು ನಿಮಗೆ ಎಚ್ಚರಿಕೆಯ ಸಂಕೇತವಾಗಿದೆ. ಆರೋಗ್ಯಕರ (Healthy)ಸಂಬಂಧಗಳು ನಿಧಾನವಾಗಿ ಬೆಳೆಯುತ್ತವೆ. ಪರಸ್ಪರ ಗೌರವ, ತಿಳುವಳಿಕೆ ಮತ್ತು ಆರೋಗ್ಯಕರ ಗಡಿಗಳನ್ನು ಹೊಂದಿರುತ್ತವೆ.