
ನೀವೇನಾದರೂ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ವೀಕ್ಷಕರಾಗಿದ್ದರೆ ಖಂಡಿತ ನಾವೀಗ ಹೇಳುತ್ತಿರುವ ಸ್ಟೋರಿನಾ ಅದಕ್ಕೆ ಲಿಂಕ್ ಮಾಡಿಕೊಳ್ತೀರಿ. ಯಾಕಂದ್ರೆ ಶೋನಲ್ಲಿ ಸ್ಪರ್ಧಿ ಹುಡುಗಿಯನ್ನು ಮೆಚ್ಚಿಸಬೇಕೆಂದ್ರೆ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನೀವೆಲ್ಲಾ ನೋಡಿರುತ್ತೀರಿ. ಅದೇ ರೀತಿಯ ಘಟನೆ ರಿಯಲ್ ಆಗಿಯೇ ನಡೆದರೆ ಹೇಗಿರುತ್ತದೆ?. ಹೌದು. ಸದ್ಯ Reddit ಪೋಸ್ಟ್ ವೈರಲ್ ಆಗಿದೆ. ಈ ವೈರಲ್ ಪೋಸ್ಟ್‌ನಲ್ಲಿ ಆ ಯುವಕ ಹೇಳಿಕೊಂಡಿರುವ ಪ್ರಕಾರ, ಆತ ಉತ್ತರ ಭಾರತೀಯ. ಆದ್ರೆ ಪ್ರೀತಿಸುತ್ತಿರುವುದು ಕನ್ನಡತಿಯನ್ನ. ಹಾಗಾಗಿ ಆತ ಕನ್ನಡ ಕಲಿತು ತನ್ನ ಪ್ರೇಯಸಿಗೆ ಹಾಗೂ ಆಕೆಯ ಕುಟುಂಬಕ್ಕೆ ಸರ್‌ಪ್ರೈಸ್ ಕೊಡಬೇಕು ಅಂದುಕೊಂಡಿದ್ದಾನೆ.
ಕನ್ನಡ ಕಲಿಯಬೇಕೆಂದ ಉತ್ತರ ಭಾರತೀಯ ಯುವಕ
Reddit ಪೋಸ್ಟ್‌ನಲ್ಲಿ ಯುವಕ ತಿಳಿಸಿರುವ ಹಾಗೆ ಅವನ ಗೆಳತಿ ಕನ್ನಡತಿ. ಕನ್ನಡ ಕಲಿತು ಆಕೆಗೆ ಸರ್‌ಪ್ರೈಸ್ ಕೊಡಬೇಕೆಂಬುದು ಪ್ಲ್ಯಾನ್. ಸದ್ಯ ಈ ಪೋಸ್ಟ್ ಎಲ್ಲರ ಮನಸ್ಸನ್ನು ತಟ್ಟಿದೆಯೆನ್ನಬಹುದು. ತನ್ನ ಪ್ರೇಯಸಿಯು ಕನ್ನಡಿಗಳಾಗಿದ್ದು, ಆಕೆಯ ಕುಟುಂಬದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕನ್ನಡ ಕಲಿಯುತ್ತಿರುವುದಾಗಿ ಆತ ಹಂಚಿಕೊಂಡಿದ್ದಾನೆ. “ಅವರು ಈ ನಿರೀಕ್ಷೆಯಲ್ಲಿಲ್ಲ, ಆದರೆ ನಾನು ಕನ್ನಡದಲ್ಲಿ ಮಾತನಾಡಿದಾಗ ಅವರ ಮುಖದಲ್ಲಿನ ಸಂತೋಷ ಕಾಣಬೇಕು" ಎಂಬ ಸಾಲು ಎಲ್ಲರ ಹೃದಯ ತಟ್ಟಿದೆ. "ಕನ್ನಡ ಮಾತನಾಡಿದರೆ, ಆಕೆ ಮತ್ತು ಅವರ ಕುಟುಂಬ ಖುಷಿಯಿಂದ ನನ್ನನ್ನು ಸ್ವೀಕರಿಸುತ್ತಾರೆ ಎಂದು ನಂಬಿದ್ದೇನೆ." ಎಂಬುದು ಯುವಕನ ಅನಿಸಿಕೆ.
ಈ ಮೊದಲೇ ಹೇಳಿದ ಹಾಗೆ ಯುವಕ ಉತ್ತರ ಭಾರತೀಯನಾದ್ದರಿಂದ ಹಿಂದಿ ಭಾಷೆ ಬರುತ್ತದೆ. ಯಾವುದೇ ದಕ್ಷಿಣ ಭಾರತೀಯ ಭಾಷೆಗಳ ಹಿನ್ನೆಲೆ ಇಲ್ಲದೆ ನೇರವಾಗಿ ಕನ್ನಡ ಕಲಿಯಲು ಮುಂದಾಗಿದ್ದಾನೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಸಹಾಯ ಕೇಳಿದ ಯುವಕ, "ನನಗೆ ಬೇರೆ ಭಾಷೆ ಬರುವುದಿಲ್ಲ. ದಯವಿಟ್ಟು ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುವ ವಿಧಾನವಿದ್ದರೆ ನನಗೆ ಸಹಾಯ ಮಾಡಿ" ಎಂದಿದ್ದಾನೆ.
ಯುವಕನ ಪ್ರೇಮ ಸಂಬಂಧ ಸುಂದರವಾಗಿ ಸಾಗುತ್ತಿದೆ. ಆದರೆ ಭಾಷೆಯ ಅಡೆತಡೆ ಹಲವಾರು ಸಂದರ್ಭಗಳಲ್ಲಿ ಎಡರುತೊಡರಾಗಬಬಹುದು ಎಂಬ ಕಾರಣಕ್ಕೆ ಯುವಕನು ಈ ಆಯ್ಕೆಯನ್ನು ಆರಿಸಿಕೊಂಡಿದ್ದಾನೆ. ಯುವಕ ಪೋಸ್ಟ್‌ನಲ್ಲಿ ತಿಳಿಸಿರುವ ಹಾಗೆ “ನಾವು ಒಂದು ಕುಟುಂಬವಾಗಲು ಸಾಗುತ್ತಿದ್ದೇವೆ. ನಾನು ಅಪ್ಪಟ ಬೆಂಗಳೂರು ಕಲ್ಚರ್‌ಗೆ ಸಿಂಕವಾಗಲು ಬಯಸುತ್ತೇನೆ,” ಎಂದಿದ್ದಾನೆ.
ಸಹಾಯ ಮಾಡಿದ ಇತರ Reddit ಬಳಕೆದಾರರು
ಕನ್ನಡ ಕಲಿಯಲು ಈ ರೀತಿಯಾಗಿ ಪ್ಲಾನ್ ಮಾಡಬಹುದು ಎಂದು ಇತರ Reddit ಬಳಕೆದಾರರು ಸಹಾಯ ಮಾಡಿದ್ದಾರೆ.
ಅಕ್ಷರ ಪರಿಚಯ: ಕನ್ನಡ ಗ್ರಾಮರ್ ಬುಕ್ ತೆಗೆದುಕೊಂಡು ಕನ್ನಡ ಕಲಿಯಲು ಸಲಹೆ.
ದಿನನಿತ್ಯ ಉಪಯೋಗದ ಪದಗಳು: ನಮಸ್ಕಾರ, ಧನ್ಯವಾದಗಳು, ಎಷ್ಟಿದೆ?, ಬಾರದಿರು, ಹೋಗೋಣ – ಹೀಗೆ
ಕನ್ನಡ ಸಿನಿಮಾಗಳಿಂದ ಅಭ್ಯಾಸ: ಸಿನಿಮಾಗಳಲ್ಲಿ ಸಬ್‌ಟೈಟಲ್ ಓದುತ್ತಾ ಕೇಳುವುದು.
ಪಾಡ್‌ಕಾಸ್ಟ್ ಮತ್ತು ಯೂಟ್ಯೂಬ್ ಕನ್ನಡ ಟ್ಯುಟೋರಿಯಲ್ಸ್: 'Kannada Gothilla' ಹಾಗೂ 'Learn Kannada Quickly' ಇತ್ಯಾದಿ ನೋಡಿ ಕಲಿಯಲು ಸೂಚನೆ.
ಸಹಾನುಭೂತಿ ವ್ಯಕ್ತಪಡಿಸಿದ ನೆಟ್ಟಿಗರು
ಈ ಪೋಸ್ಟ್‌ಗೆ ಸಾವಿರಾರು ಲೈಕ್ಸ್, ಶೇರ್ಸ್, ಕಾಮೆಂಟ್ಸ್ ಬಂದಿವೆ. ಹಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ . ಕೆಲವರು ತಮ್ಮ ಕರ್ನಾಟಕದ ಹೆಣ್ಣು ಮಗಳೊಂದಿಗೆ ಜೀವನ ನಡೆಸಲು ಹೋಗುತ್ತಿರುವ ಯುವಕನಿಗೆ ಮೊದಲ ಮಾತೇನೆಂದರೆ “ನಾನು ಓಕೆನಾ, Kannada gothilla!” ಎಂದು ಕೇಳುವುದಾಗಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ವಿಭಿನ್ನ ಭಾಷೆಗಳು ಪ್ರೀತಿ ಪ್ರೇಮಕ್ಕೆ ಅಡ್ಡಿಯಾಗಬಾರದು. ಇದರಲ್ಲಿ ಯುವಕನ ನಿಷ್ಠೆ, ಪ್ರೀತಿ ಎದ್ದು ಕಾಣುತ್ತದೆ. ಈ ರೀತಿಯ ಚಿಕ್ಕ ಚಿಕ್ಕ ಪ್ರಯತ್ನಗಳು ನಿಜವಾದ ಪ್ರೇಮವನ್ನು ಎತ್ತಿ ತೋರಿಸುತ್ತದೆ. ಅದೆಷ್ಟೋ ಜನರು ತಾವು ಕನ್ನಡ ಮಾತನಾಡುವುದಿಲ್ಲ, ಕನ್ನಡ ಗೊತ್ತಿಲ್ಲ ಎಂದು ಹೇಳುತ್ತಿದ್ದರೆ ಈತ ಪ್ರಾಮಾಣಿಕವಾಗಿ ತನ್ನ ಹುಡುಗಿಗಾಗಿ ಹಾಗೂ ಆಕೆಯ ಮನೆಯವರಿಗೆ ಕನ್ನಡದಲ್ಲಿ ಮಾತನಾಡಿ ಸರ್ಪ್ರೈಸ್ ಕೊಡಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.