
ಚೀನಾದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾಗುತ್ತಿರುವ ವಿಷಯವೆಂದರೆ, ಸಾವಿನ ದವಡೆಯಿಂದ ಪತ್ನಿಯನ್ನು ಮರಳಿ ತರಲು ಒಬ್ಬ ಪತಿ ಮಾಡಿದ ಕೆಲಸಗಳು. ಗುವಾಂಗ್ಕ್ಸಿ ಪ್ರಾಂತ್ಯದ ಯುವಕನ ಕುರಿತು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
30 ವರ್ಷದ ಡೆಂಗ್ ಯೂಕಾಯ್ ಅವರ ಪತ್ನಿಗೆ ಕ್ಯಾನ್ಸರ್ ಇತ್ತು. ಅವರನ್ನು ಬದುಕಿಸಲು ಡೆಂಗ್ ತನ್ನನ್ನು ತಾನು ಸಮರ್ಪಿಸಿಕೊಂಡರು. ವೈದ್ಯರು ಭರವಸೆ ಇಟ್ಟುಕೊಳ್ಳುವುದು ಬೇಡ ಎಂದು ಹೇಳಿದರೂ, ಪತ್ನಿಯ ಚಿಕಿತ್ಸೆಗಾಗಿ ಡೆಂಗ್ ಎರಡು ಮಿಲಿಯನ್ ಯುವಾನ್ (₹2,38,88,563.27) ಖರ್ಚು ಮಾಡಿದರು. ಅವರನ್ನು ಒಂದಯ ಕ್ಷಣವೂ ಬಿಟ್ಟು ಹೋಗದೆ, ಅವರೊಂದಿಗೆ ಇದ್ದರು.
2016 ರಲ್ಲಿ ಸ್ನೇಹಿತನ ಮದುವೆಯಲ್ಲಿ ಡೆಂಗ್ ತಮ್ಮ ಪತ್ನಿ ಮೆಯ್ಡಿಯನ್ನು ಭೇಟಿಯಾದರು. ಅವರಿಗೆ ಕ್ಯಾನ್ಸರ್ ಇದೆ ಎಂದು ತಿಳಿದಿದ್ದರೂ, ಅವರೊಂದಿಗೆ ಜೀವನ ನಡೆಸಲು ಡೆಂಗ್ ಬಯಸಿದರು. 2019 ರಲ್ಲಿ ಅವರಿಬ್ಬರೂ ಮದುವೆಯಾದರು. ಸಾಧ್ಯವಾದಷ್ಟು ಚಿಕಿತ್ಸೆ ನೀಡುವುದಾಗಿ ಮತ್ತು ಜೊತೆಯಲ್ಲಿರುವುದಾಗಿ ಡೆಂಗ್ ಮೆಯ್ಡಿಗೆ ಭರವಸೆ ನೀಡಿದರು. 2021 ರಲ್ಲಿ ಅವರಿಗೆ ಹನ್ನಾ ಎಂಬ ಮಗಳು ಜನಿಸಿದಳು.
ಆದರೆ, ಒಂದು ವರ್ಷದ ನಂತರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ನಂತರ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ಹಂತದಲ್ಲಿ ಆರ್ಥಿಕವಾಗಿ ಸಂಕಷ್ಟವಾಗುತ್ತಿರುವುದನ್ನು ಯೋಚಿಸಿ, ಮೆಯ್ಡಿ ಚಿಕಿತ್ಸೆ ಮುಂದುವರಿಸುವುದು ವ್ಯರ್ಥ ಎಂದು ಹೇಳಿ ಮನೆಗೆ ಕರೆದುಕೊಂಡು ಹೋಗಲು ಹೇಳಿದರು.
ಹೀಗೆ ಮೆಯ್ಡಿ ಮನೆಗೆ ಬಂದರು. ಅವರು ತಮ್ಮ ಮಗಳು ಹನ್ಹಾನ್ ಯೇ ಅವರ ಕೆನ್ನೆಗೆ ಮುತ್ತಿಡುವ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಾಗ, ಆ ಕ್ಲಿಪ್ ಲಕ್ಷಾಂತರ ಹೃದಯಗಳನ್ನು ಮುಟ್ಟಿತು. ಇದು ಎಲ್ಲವನ್ನೂ ಬದಲಾಯಿಸಿತು. ನೂರಾರು ಜನರು ಸಹಾಯ ಮಾಡಲು ಮುಂದೆ ಬಂದರು. ಹೀಗೆ ಮೆಯ್ಡಿಯನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಯಿತು.
ಡೆಂಗ್ ಕೆಲಸಕ್ಕೆ ಹೋಗದೆ, ಪ್ರತಿದಿನ ಪತ್ನಿಗಾಗಿ ಹಾಡುತ್ತಾ, ನೃತ್ಯ ಮಾಡುತ್ತಾ ಅವರನ್ನು ಧನಾತ್ಮಕವಾಗಿ ಇರಿಸಲು ಪ್ರಯತ್ನಿಸಿದರು. ಅದ್ಭುತವೆಂದರೆ, ಕೋಮಾದಲ್ಲಿದ್ದ ಮೆಯ್ಡಿ ಇಂದು ಹೊಸ ಜೀವನ ಪಡೆದರು. ಮೂರು ತಿಂಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲಾಯ್ತು. ಮತ್ತೆ ಮಾತನಾಡಲು ಆರಂಭಿಸಿದರು. ತನ್ನ ಕೆಲಸವನ್ನು ತಾನೇ ಮಾಡಲು ಶುರು ಮಾಡಿದರು.
ಅವಳು ನಮ್ಮನ್ನು ಬಿಟ್ಟು ಹೋಗುವುದನ್ನು ನಾನು ಎಂದಿಗೂ ಬಯಸುವುದಿಲ್ಲ. ನಾವು ಇನ್ನೂ ಚಿಕ್ಕವರಾಗಿದ್ದೇವೆ. ಅವಳು ತನ್ನನ್ನು ತಾನು ನೋಡಿಕೊಳ್ಳಲು ಸಾಧ್ಯವಾಗದಿದ್ದರೂ, ಅವಳು ಇನ್ನೂ ನಾನು ಮತ್ತು ನಮ್ಮ ಮಗಳನ್ನು ಹೊಂದಿದ್ದಾಳೆ ಎಂದು ಡೆಂಗ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು 2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇಂದು ಅವರು ಯಾರ ಸಹಾಯವಿಲ್ಲದೆ ನಡೆಯಬಲ್ಲರು, ಒಂದು ಸಣ್ಣ ಅಂಗಡಿಯನ್ನೂ ನಡೆಸುತ್ತಿದ್ದಾರೆ. ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಡೆಂಗ್ ಮತ್ತು ಮೆಯ್ಡಿ ಅವರ ಪ್ರೀತಿ ದೊಡ್ಡ ಚರ್ಚೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.