ಈತನೇನು ಕರಡಿಯೇ: ಹಗ್‌ ಮಾಡಿದ್ದ ರಭಸಕ್ಕೆ ಮುರಿದೇ ಹೋಯ್ತು ಯುವತಿಯ ಪಕ್ಕೆಲುಬು

By Suvarna NewsFirst Published Aug 18, 2022, 3:15 PM IST
Highlights

ಸಹೋದ್ಯೋಗಿಯೋರ್ವ ಕಚೇರಿಗೆ ಬಂದ ಯುವತಿಯನ್ನು ಅಪ್ಪಿಕೊಂಡ ರಭಸಕ್ಕೆ ಆಕೆಯ ಎರಡು ಪಕ್ಕೆಲುಬುಗಳೇ ಮುರಿದು ಹೋಗಿವೆಯಂತೆ ಈ ಬಗ್ಗೆ ಸ್ಕ್ಯಾನಿಂಗ್‌ ಮೂಲಕ ತಿಳಿದು ಬಂದಿದ್ದು, 
ಸ್ಕ್ಯಾನಿಂಗ್‌ ವರದಿ ನೋಡಿ ಯುವತಿ ದಂಗಾಗಿದ್ದಾಳೆ. 

ಕಚೇರಿ ಅಥವಾ ಔದ್ಯೋಗಿಕ ಕ್ಷೇತ್ರಗಳಲ್ಲಿ ಅಪ್ಪುಗೆ ಎಂಬುದು ನಮ್ಮ ಭಾರತದಲ್ಲಿ ಅಷ್ಟೊಂದು ಪ್ರಚಲಿತದಲ್ಲಿ ಇಲ್ಲದಿದ್ದರೂ ವಿದೇಶದಲ್ಲಿ ಇದು ಸಾಮಾನ್ಯ. ಕಚೇರಿಗೆ ಬಂದಾಗ ನಮ್ಮಲ್ಲಿ ಕೈ ಕುಲುಕಿ ಅಥವಾ ಹಾಯ್  ಹೇಳುವ ಮೂಲಕ ವಿಶ್‌ ಮಾಡಿದರೆ ವಿದೇಶದಲ್ಲಿ ಹಗ್ ಅಂದರೆ ಪರಸ್ಪರ ಅಪ್ಪಿಕೊಳ್ಳುವ ಮೂಲಕ ವಿಶ್ ಮಾಡುತ್ತಾರೆ. ಬಹುತೇಕರಿಗೆ ಆತ್ಮೀಯರ ಅಪ್ಪುಗೆ ಸುರಕ್ಷಿತ ಭಾವವನ್ನು ಮೂಡಿಸುತ್ತದೆ. ಆದರೆ ಇದೇ ರೀತಿ ಸಹೋದ್ಯೋಗಿಯೋರ್ವ ಕಚೇರಿಗೆ ಬಂದ ಯುವತಿಯನ್ನು ಅಪ್ಪಿಕೊಂಡ ರಭಸಕ್ಕೆ ಆಕೆಯ ಎರಡು ಪಕ್ಕೆಲುಬುಗಳೇ ಮುರಿದು ಹೋಗಿವೆಯಂತೆ ಈ ಬಗ್ಗೆ ಸ್ಕ್ಯಾನಿಂಗ್‌ ಮೂಲಕ ತಿಳಿದು ಬಂದಿದ್ದು, ಇದನ್ನು ಕೇಳಿ ಯುವತಿಯೇ ದಂಗಾಗಿದ್ದಾಳೆ. ಇನ್ನು ಈ ರೀತಿ ಹಗ್‌ ಮಾಡಿ ದೇಹದ ಮೂಳೆಯನ್ನೇ ಮುರಿದ ಸಹೋದ್ಯೋಗಿಯ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾಳೆ. 

ಚೀನಾದ ಹುನಾನ್‌ ಪ್ರಾಂತ್ಯದಲ್ಲಿರುವ ಯುಯಾಂಗ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಯುವಕ ಕರಡಿಯಂತೆ ಅಪ್ಪಿಕೊಂಡ ರಭಸಕ್ಕೆ ಆಕೆಯ ದೇಹದ ಎದೆಭಾಗದ ಮೂರು ಮೂಳೆಗಳು ಮುರಿದಿವೆ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆಯ ಆರೋಪ ಸ್ಕ್ಯಾನಿಂಗ್ ಮೂಲಕ ಸಾಬೀತಾಗಿದೆ. ಕಚೇರಿಗೆ ಬಂದ ಪುರುಷ ಸಹೋದ್ಯೋಗಿಯೊಬ್ಬ ಜೋರಾಗಿ ಯುವತಿಯನ್ನು ತಬ್ಬಿಕೊಂಡಿದ್ದು, ಈತನ ಈ ಮುದ್ದಾಟಕ್ಕೆ ಆಕೆಯ ಮೂಳೆಯೇ ಮುರಿದಿದೆ. ಇದಾದ ಬಳಿಕ ಆಕೆಗೆ ದೇಹದಲ್ಲಿ ನೋವು ಕಾಣಿಸಿಕೊಂಡಿದ್ದು, ಎರಡು ಮೂರು ದಿನ ಕಳೆದರೂ ಆಕೆಗೆ ನೋವು ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಹೋಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಆಕೆಗೆ ವೈದ್ಯರು ಸ್ಕ್ಯಾನಿಂಗ್ ನಡೆಸಿದಾಗ ಶಾಕ್ ಕಾದಿತ್ತು.

50 ದಿನಗಳ ಬಳಿಕ ಭಾರತಕ್ಕೆ ವಾಪಾಸ್ ಆದ ನಟಿ ರುಬೀನಾ; ಏರ್ಪೋರ್ಟ್‌ಲ್ಲೇ ತಬ್ಬಿ ಮುದ್ದಾಡಿದ ಪತಿ

ನಂತರ ಆಕೆ ಮುರಿದ ಪಕ್ಕೆಲುಬುಗಳಿಗಾಗಿ ಚಿಕಿತ್ಸೆ ಪಡೆದಿದ್ದು, ಶಸ್ತ್ರಚಿಕಿತ್ಸೆ ನಡೆದಿದ್ದು, ಆಕೆಯ ಶಸ್ತ್ರಚಿಕಿತ್ಸೆಗೆ ಬರೋಬರಿ ಒಂದೂವರೆ ಲಕ್ಷ ವೆಚ್ಚವಾಗಿದೆಯಂತೆ ಈ ವೆಚ್ಚವನ್ನು ತನ್ನನ್ನು ಅಪ್ಪಿಕೊಂಡ ಯುವಕ ಬರಿಸಬೇಕು ಎಂದು ಯುವತಿ ಈಗ ಕೋರ್ಟ್ ಮೆಟ್ಟಿಲೇರಿದ್ದಾಳೆ. ಆದರೆ ಆತ ಮಾತ್ರ ನಾನು ಹಗ್ ಮಾಡಿದ ಕಾರಣಕ್ಕೆ ಆಕೆಯ ಎಲುಬು ಮುರಿಯುವುದು ಸಾಧ್ಯವಿಲ್ಲ. ಇದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ ಎಂದು ಪರಿಹಾರ ನೀಡಲು ನಿರಾಕರಿಸಿ ತನ್ನ ಮೇಲಿನ ಆರೋಪ ನಿರಾಕರಿಸಿದ್ದಾನೆ. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಈಗ ಆತನಿಗೆ ಛೀಮಾರಿ ಹಾಕಿದ್ದು, ಯುವತಿಯನ್ನು ಕರಡಿಯಂತೆ ತಬ್ಬಿಕೊಂಡಿದ್ದಕ್ಕೆ ಆಕೆಗೆ ಚಿಕಿತ್ಸಾ ವೆಚ್ಚ ನೀಡುವಂತೆ ಆಗ್ರಹಿಸಿದ್ದಾನೆ. 

ಕೆಲ ದಿನಗಳ ಹಿಂದೆ ತಬ್ಬಿ ಮುದ್ದಾಡಿ ಗಂಟೆಗೆ ಸಾವಿರ ಸಾವಿರ ರೂಪಾಯಿ ಸಂಪಾದನೆ ಮಾಡುವ ವ್ಯಕ್ತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುರಕ್ಷತೆ ಎಂಬುದು ಮನುಷ್ಯನಿಗೆ ತುಂಬಾ ಅಗತ್ಯವಾದುದು, ಎಷ್ಟೇ ಸಂಪಾದಿಸಿದರು ಏನೇ ಶ್ರೀಮಂತಿಕೆ ಇದ್ದರೂ ತನಗೆ ಅಭದ್ರತೆ, ಅಸ್ಥಿರತೆ ಕಾಡುತ್ತಿದ್ದರೆ, ಜೊತೆಗೆ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಯಾವುದೇ ಪ್ರಯೋಜನ ಇಲ್ಲ. ಪ್ರಪಂಚದಲ್ಲಿ ನೆಮ್ಮದಿ ಇಲ್ಲದೇ ಕಂಗೆಟ್ಟ ಸಾವಿರಾರು ಜನರಿದ್ದಾರೆ. ಇಂತಹವರನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿಯೊಬ್ಬರು ಗಂಟೆಗೆ ಏಳು ಸಾವಿರ ರೂಪಾಯಿ ದುಡಿಮೆ ಮಾಡುತ್ತಿದ್ದಾರೆ. ಎಂಥಾ ವಿಚಿತ್ರ ಅಲ್ವಾ ಪ್ರಪಂಚದಲ್ಲಿ ಎಂತೆಂಥಾ ಕೆಲಸಗಳಿರುತ್ತವೆ ಅಂತ ನಿಮಗೆ ಅಚ್ಚರಿ ಆಗಬಹುದು. ಇಂಗ್ಲಂಡ್‌ನಲ್ಲಿ ವ್ಯಕ್ತಿಯೊಬ್ಬ ನಿಮಗೆ ಸುರಕ್ಷಿತ ಭಾವ ಮೂಡಿಸುವ ಮೂಲಕ ಗಂಟೆಗೆ ಸಾವಿರಾರು ರೂ. ಸಂಪಾದನೆ ಮಾಡುತ್ತಾರೆ. 30 ವರ್ಷ ಪ್ರಾಯದ ಟ್ರೆವರ್ ಹೂಟನ್ ಎಂಬುವವರೇ ಹೀಗೆ ಅಪ್ಪುಗೆಯ ಮೂಲಕ ನಿಮಗೆ ಸುರಕ್ಷಿತ ಭಾವ ನೀಡಿ ಸಾವಿರಾರು ರೂ ಸಂಪಾದಿಸುವ ವೃತ್ತಿಪರ ಹಗ್ಗರ್.

ರಸ್ತೆ ಬದಿ ವರದಿ ಮಾಡ್ತಿದ್ದ ವರದಿಗಾರ್ತಿಗೆ ಬಿಸಿ ಅಪ್ಪುಗೆ : ಫೋಟೋ ವೈರಲ್‌

click me!