IT ಸಿಟಿಗಳಲ್ಲಿ ಯಾಕೆ ಹೆಚ್ಚಾಗ್ತಿದೆ Co-living ಟ್ರೆಂಡ್… ಜನ ಇದನ್ನ ಇಷ್ಟಪಡೋದಕ್ಕೆ ಕಾರಣ ಏನು?

Published : Jun 16, 2026, 10:29 PM IST
Co Living

ಸಾರಾಂಶ

Co-living : ಇತ್ತೀಚಿನ ದಿನಗಳಲ್ಲಿ, ಪ್ರಮುಖ ಐಟಿ ನಗರಗಳ ಯುವಕರಲ್ಲಿ "Co-living” ಹುಚ್ಚು ವೇಗವಾಗಿ ಬೆಳೆಯುತ್ತಿದೆ. ಆದರೆ ಇದು ಕೇವಲ ಕೂಲ್ ಜೀವನಶೈಲಿಯೇ ಅಥವಾ ಅದರ ಹಿಂದೆ ಏನಾದರೂ ಸತ್ಯವಿದೆಯೇ? ಕೋ ಲಿವಿಂಗ್ ನಿಂದ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ತಿಳಿಯಿರಿ. 

ಐಟಿ ಸಿಟಿಗಳಲ್ಲಿ ಯಾಕೆ ಹೆಚ್ಚಾಗ್ತಿದೆ Co-living

ಇತ್ತೀಚಿನ ದಿನಗಳಲ್ಲಿ, ಪ್ರಮುಖ ಮಹಾನಗರಗಳು ಮತ್ತು ಐಟಿ ನಗರಗಳಲ್ಲಿ ಜೀವನಶೈಲಿಯ ವಿಷಯಕ್ಕೆ ಬಂದಾಗ, ಈ ಒಂದು ಹೊಸ ಪದವು ಹೆಚ್ಚಾಗಿ ಕೇಳಿಬರುತ್ತಿದೆ ಅದು ಸಹ-ಜೀವನ (Co-living). ಒಂದು ಕಾಲದಲ್ಲಿ ವಿದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸಂಸ್ಕೃತಿ ಈಗ ಪ್ರಮುಖ ಭಾರತೀಯ ಐಟಿ ಕೇಂದ್ರಗಳಿಗೆ (ಹೈದರಾಬಾದ್, ಬೆಂಗಳೂರು, ಪುಣೆ ಮತ್ತು ನೋಯ್ಡಾದಂತಹ) ಹರಡಿದೆ. ಈ ನಗರಗಳಲ್ಲಿ ಕೆಲಸ ಮಾಡುವ ಯುವ ಜನರು ಮದುವೆ ಆಗದೆ ಆಹಾರ, ಕೊಠಡಿಗಳು ಮತ್ತು ಹಾಸಿಗೆಗಳನ್ನು ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಟ್ರೆಂಡ್ ವೇಗವಾಗಿ ಬೆಳೆಯುತ್ತಿದೆ. ಆದರೆ ಇದು ಕೇವಲ ಹೊಸ ಲೈಫ್ ಸ್ಟೈಲ್ ಟ್ರೆಂಡ್ ಮಾತ್ರ ಅಲ್ಲ, ಅ ಯುವಜನರಲ್ಲಿ ಬದಲಾಗುತ್ತಿರುವ ಮನಸ್ಥಿತಿಯಿಂದಾಗಿ ಈ ಸಂಸ್ಕೃತಿ ಟ್ರೆಂಡ್ ನಲ್ಲಿದೆ.

ಏನಿದು Co-living?. ಯುವಜನರಲ್ಲಿ ಏಕೆ ಜನಪ್ರಿಯತೆ ಗಳಿಸುತ್ತಿದೆ?

ಸಹಜೀವನ( Co-living) ಎಂದರೆ ಇಬ್ಬರು ವ್ಯಕ್ತಿಗಳು (ಗಂಡು ಮತ್ತು ಹೆಣ್ಣು), ಯಾವುದೇ ಸಾಮಾಜಿಕ ಅಥವಾ ಕಾನೂನು ಬಾಧ್ಯತೆಯಿಲ್ಲದೆ (ಉದಾಹರಣೆಗೆ ಮದುವೆ), ಒಂದೇ ಸೂರಿನಡಿ ಪಾರ್ಟ್ನರ್ ಗಳಾಗಿ ಒಟ್ಟಿಗೆ ವಾಸಿಸುತ್ತಾರೆ, ತಮ್ಮ ಖರ್ಚು ಮತ್ತು ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುತ್ತಾರೆ. ಯುವಜನರು ಈ ಟ್ರೆಂಡ್ ನತ್ತ ಆಕರ್ಷಿತರಾಗಲು ಹಲವಾರು ಪ್ರಮುಖ ಕಾರಣಗಳಿವೆ:

ಆರ್ಥಿಕ ಸ್ವಾತಂತ್ರ್ಯ: ದೊಡ್ಡ ನಗರಗಳಲ್ಲಿ, ಒಂದೇ ಫ್ಲಾಟ್‌ನ ಬಾಡಿಗೆ, ವಿದ್ಯುತ್ ಬಿಲ್, ವೈ-ಫೈ ಮತ್ತು ಆಹಾರಕ್ಕಾಗಿ ಪಾವತಿಸುವುದು ನಿಮ್ಮ ಜೇಬಿಗೆ ಹೊರೆಯಾಗಬಹುದು. ಇಬ್ಬರು ಜೊತೆಗಿದ್ದರೆ ಈ ವೆಚ್ಚಗಳನ್ನು ಹಂಚಿಕೊಳ್ಳಬಹುದು. ಇದರಿಂದ ಐಷಾರಾಮಿ ಜೀವನಶೈಲಿಯನ್ನೂ ಸಹ ಬಜೆಟ್‌ನೊಂದಿಗೆ ಎಂಜಾಯ್ ಮಾಡಲು ಸಹಾಯ ಮಾಡುತ್ತದೆ.

ಒಂಟಿಯಾಗಿ ಇರಬೇಕಾಗಿಲ್ಲ: ಇತರ ನಗರಗಳಲ್ಲಿ ತಮ್ಮ ಕುಟುಂಬಗಳಿಂದ ದೂರವಾಗಿ ಒಂಟಿಯಾಗಿ ವಾಸಿಸುವ ಯುವಜನರಿಗೆ ಒಂಟಿತನವು ಒಂದು ಪ್ರಮುಖ ಸಮಸ್ಯೆಯಾಗಿದೆ. ಅಂತಹ ಸಂದರ್ಭಗಳಲ್ಲಿ, Co-living ಅವರಿಗೆ ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ಒದಗಿಸುತ್ತದೆ.

ಸಂಪೂರ್ಣ ಸ್ವಾತಂತ್ರ್ಯ: ಪೋಷಕರು ಅಥವಾ ಸಮಾಜದ ನಿರ್ಬಂಧಗಳಿಂದ ದೂರವಾಗಿ, ಯುವಕರು ಈ ಸಂಸ್ಕೃತಿಯನ್ನು ತಮ್ಮ ಇಚ್ಛೆಯಂತೆ ತಮ್ಮ ಜೀವನವನ್ನು ನಡೆಸುವ ಮಾರ್ಗವಾಗಿ ನೋಡುತ್ತಾರೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ನಗರಗಳು ಈಗ ವಿಶೇಷ Co-living ಹಾಸ್ಟೆಲ್‌ಗಳು ಮತ್ತು ಪಿಜಿಗಳಿಂದ ತುಂಬಿವೆ, ಇದು ಯುವಜನರ ಆದ್ಯತೆಗಳು ಮತ್ತು ಗೌಪ್ಯತೆಗೆ ಅನುಗುಣವಾಗಿ ಸೌಲಭ್ಯಗಳನ್ನು ನೀಡುತ್ತದೆ.

Co-living ಹಿಂದಿರುವ ಅಪಾಯಗಳು

ಈ ಟ್ರೆಂಡ್ ಮೊದಲ ನೋಟದಲ್ಲಿ ಕೂಲ್ ಮತ್ತು ಸುಲಭವಾಗಿ ಕಂಡುಬಂದರೂ, ಅದರ ವಾಸ್ತವತೆ ಮತ್ತು ಇನ್ನೊಂದು ಮುಖ ಭಯ ಹುಟ್ಟಿಸುತ್ತದೆ. ಈ ಅಲ್ಪಾವಧಿಯ ಸಂಬಂಧಗಳಳಿಂದಾಗಿ, ತಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಮನಶ್ಶಾಸ್ತ್ರಜ್ಞರು ಮತ್ತು ಸಲಹೆಗಾರರು ತಿಳಿಸುತ್ತಾರೆ. ಇನ್ನು ಈ ಸಂಬಂಧದಲ್ಲಿ ಯಾವುದೇ ಸಾಮಾಜಿಕ ಅಥವಾ ಕಾನೂನು ಬಾಧ್ಯತೆಗಳಿಲ್ಲದ ಕಾರಣ, ಜನರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಸುಲಭವಾಗಿ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ, ಯುವಕರು (ವಿಶೇಷವಾಗಿ ಹುಡುಗಿಯರು) ಭಾವನಾತ್ಮಕವಾಗಿ ಕನೆಕ್ಟ್ ಆಗಿ ಮತ್ತೆ ಡಿಪ್ರೆಶನ್ ಗೆ ಜಾರುವ ಸಾಧ್ಯತೆ ಕೂಡ ಇದೆ. ಅನೇಕ ಬಾರಿ ಯುವಕರು ದುರುದ್ದೇಶಗಳಿಗಾಗಿ Co-living ನಲ್ಲಿದ್ದುಕೊಂಡು, ಸಂಗಾತಿಯನ್ನು ದೈಹಿಕ ಸುಖಕ್ಕಾಗಿ ಬಳಸಿಕೊಳ್ಳುವುದರಿಂದ ಅನಗತ್ಯ ಗರ್ಭಧಾರಣೆ ಅಥವಾ ಗರ್ಭಪಾತದಂತಹ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಇದು ಅವರ ವೃತ್ತಿಜೀವನದ ಮೇಲೂ ನೇರ ಪರಿಣಾಮ ಬೀರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bigg Boss ರಕ್ಷಿತಾ ಶೆಟ್ಟಿ ಈಗ ಸಾಫ್ಟ್​ವೇರ್​ ಎಂಜಿನಿಯರ್​: ಉದ್ಯೋಗ ಸಿಕ್ಕಿದ್ದು ಹೇಗೆ
Chanakya Niti: ಪತ್ನಿಯನ್ನು ಈ 4 ಜಾಗಕ್ಕೆ ಅಪ್ಪಿತಪ್ಪಿಯೂ ಕರೆದುಕೊಂಡು ಹೋಗಬೇಡಿ ಅಂತಾರೆ ಚಾಣಕ್ಯ!