Love Life : ಮತ್ತೆ ನಿಮ್ಮ ಸನಿಹ ಬರಲು ಬಯಸೋ ಎಕ್ಸ್ ನೀಡೋ ಸಿಗ್ನಲ್ ಇದು

By Suvarna News  |  First Published Jan 11, 2022, 4:31 PM IST

ಪ್ರೀತಿಸಿದ ಹುಡುಗಿಯನ್ನು ಮರೆಯೋದು ಸುಲಭವಲ್ಲ. ಆಕೆ ಮತ್ತೆ ಬರಲಿ ಎಂಬ ಬಯಕೆಯಿರುತ್ತದೆ. ಆಕೆ ಮನಸ್ಸಿನಲ್ಲಿ ಏನಿದೆ ಎಂಬ ಕುತೂಹಲವಿರುತ್ತದೆ. ಮಾಜಿಗೂ ನಿಮ್ಮನ್ನು ಮರೆಯಲು ಸಾಧ್ಯವಾಗದೆ ಹೋದಾಗ ಆಕೆ ಕೆಲ ಸಂಕೇತಗಳನ್ನು ನೀಡಿ, ನಿಮ್ಮನ್ನು ಸೆಳೆಯುವ ಪ್ರಯತ್ನ ನಡೆಸ್ತಾಳೆ.
 


ಪ್ರೀತಿ(Love)ಯ ಅಮಲಲ್ಲಿರುವಾಗ ಒಂದೇ ಬಾರಿ ಆಕಾಶದಿಂದ ಕೆಳಗೆ ಬಿದ್ದ ಅನುಭವ ನೀಡುವುದು ಬ್ರೇಕ್ ಅಪ್ (Break Up). ನಿಮ್ಮ ಊಹೆಗೂ ಮೀರಿದ್ದು ನಡೆದು ಹೋಗಿರುತ್ತದೆ. ಜೀವನ ಪೂರ್ತಿ ಜೊತೆಯಾಗಿರ್ತೇನೆ ಎಂದಿದ್ದ ಹುಡುಗಿ,ಮುಖ ತಿರುಗಿಸಿ ಹೋಗಿರ್ತಾಳೆ. ಆಕೆಯನ್ನು ಮರೆಯಲಾಗದೆ ಒದ್ದಾಡ್ತಿರುತ್ತೀರಿ. ಅಂಥ ಸಂದರ್ಭದಲ್ಲಿ ನಿಮ್ಮ ಮಾಜಿಗೂ ನಿಮ್ಮ ನೆನಪು ಕಾಡ್ತಿರುತ್ತದೆ. ವಾಪಸ್ ನಿಮ್ಮ ಬಳಿ ಬರುವ ಬಯಕೆ ಆಕೆಗಿರುತ್ತದೆ. ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಆಕೆ ನಿರ್ಧರಿಸಿರುತ್ತಾಳೆ.

ನಿಮ್ಮ ಜೊತೆ ಜೀವನ (Life )ಕಳೆಯುವ ಆಸೆ ಆಕೆಗಿರುತ್ತದೆ. ಆದ್ರೆ ಯಾವಾಗ್ಲೂ ಹುಡುಗಿಯರು ಹೆಜ್ಜೆ ಮುಂದಿಡುವುದಿಲ್ಲ. ಆತನೇ ತನ್ನ ಬಳಿ ಬರಲಿ,ಕ್ಷಮೆ ಕೇಳಲಿ ಎಂಬುದು ಬಹುತೇಕ ಹುಡುಗಿಯರ ಮನಸ್ಸಿನಲ್ಲಿರುವ ಭಾವನೆ. ಮತ್ತೆ ನೀನು ಬೇಕು ಎಂಬುದನ್ನು ಹುಡುಗಿ (Girl)ಯಾದವಳು ಕೆಲ ಚಿಹ್ನೆಗಳ ಮೂಲಕ ತೋರಿಸ್ತಾಳೆ. ಅದನ್ನು ಹುಡುಗನಾದವನು ಅರ್ಥ ಮಾಡಿಕೊಳ್ಳಬೇಕು. ಇಂದು ಮಾಜಿ ಪ್ರೇಯಸಿ (Ex Girlfriend) ವಾಪಸ್ ಬರುವ ಮೊದಲು ಯಾವ ಸಂಕೇತಗಳನ್ನು ನೀಡ್ತಾಳೆ ಎಂಬುದನ್ನು ಇಲ್ಲಿ ಹೇಳ್ತೇವೆ.

Tap to resize

Latest Videos

undefined

ಬ್ರೇಕ್ ಅಪ್ ನಂತ್ರ ಪ್ಯಾಚ್ ಅಪ್ ಗೆ ನೀಡುವ ಹಿಂಟ್ :

ಸಾಮಾಜಿಕ ಜಾಲತಾಣದ ಮೇಲೆ ಕಣ್ಣು : ಮಾಜಿ ಗೆಳತಿ ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದರೆ,ಇನ್ನೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಫಾಲೋ ಮಾಡ್ತಿರುತ್ತಾಳೆ. ನಿಮ್ಮ ಎಲ್ಲಾ ಆನ್‌ಲೈನ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಾಳೆ. ನೀವು ಹಾಕುವ ಪೋಸ್ಟ್ ಇಷ್ಟವಾದರೆ ಅದಕ್ಕೆ ಕಮೆಂಟ್ ಮಾಡ್ತಾರೆ. ಇದು ನಿಮ್ಮನ್ನು ಈಗ್ಲೂ ನಿಮ್ಮ ಮಾಜಿ ಇಷ್ಟಪಡ್ತಿದ್ದಾಳೆ ಎಂಬ ಸೂಚನೆ ನೀಡುತ್ತದೆ.

ನಿಮ್ಮ ಸಂಪರ್ಕಕ್ಕೆ ಬರಲು ಕಾರಣ ಹುಡುಕುವುದು : ಮಾಜಿ ನಿಮ್ಮ ಬಗ್ಗೆ ಇನ್ನೂ ಆಸಕ್ತಿ ಹೊಂದಿದ್ದರೆ ಒಂದಲ್ಲ ಒಂದು ಕಾರಣ ಹೇಳಿ ನಿಮ್ಮ ಸಂಪರ್ಕಕ್ಕೆ ಬರಲು ಪ್ರಯತ್ನಿಸುತ್ತಾಳೆ. ನೀನು ಹೇಗಿದ್ದೀಯಾ ಎಂದು ಕೇಳಲು ಕರೆ ಮಾಡ್ಬಹುದು ಇಲ್ಲವೆ ಮೆಸ್ಸೇಜ್ ಕಳುಹಿಸಬಹುದು. ಇಂಟರ್ನೆಟ್ ನಲ್ಲಿ ಆಸಕ್ತಿ ಹೊಂದಿದ್ದರೆ ಆಕೆ ನೋಡಿದ ವಿಡಿಯೋಗಳನ್ನು ನಿಮಗೆ ಟ್ಯಾಗ್ ಮಾಡಬಹುದು ಅಥವಾ ನಿಮ್ಮ ಸ್ನೇಹಿತರ ಬಳಿ ನಿಮ್ಮ ಬಗ್ಗೆ ವಿಚಾರಿಸಬಹುದು. 

Break Up : ನಿಮ್ಮ ಹುಡುಗಿ ಮುನಿಸು ಕಡಿಮೆಯಾಗ್ತಿಲ್ವಾ? ಈಗ್ಲೇ ಎಚ್ಚೆತ್ತುಕೊಳ್ಳಿ

ಹಳೆಯ ವಿಷಯಗಳ ಮೆಲುಕು : ಮಾಜಿ ಗೆಳತಿ ನಿಮ್ಮೊಂದಿಗೆ ಮಾತನಾಡುವಾಗ ಹಳೆಯ ವಿಷಯಗಳನ್ನು ಮೆಲುಕು ಹಾಕುತ್ತಾಳೆ. ಇಬ್ಬರ ನಡುವೆ ನಡೆದ ಸಂತೋಷದ ಕ್ಷಣಗಳನ್ನು ನೆನಪಿಸುತ್ತಾಳೆ. ಹಿಂದೆ ಸಂಬಂಧ ಮುರಿದು ಬೀಳುವ ಸಂದರ್ಭದಲ್ಲಿ ಆಕೆ ಅದನ್ನು ಹೇಗೆ ಉಳಿಸಿದ್ದಳು ಅಥವಾ ನಮ್ಮಿಬ್ಬರ ಜೋಡಿ ಹೇಗಿತ್ತು?ನೀವು ,ಆಕೆ ಜೊತೆ ಹೇಗೆ ನಡೆದುಕೊಂಡಿದ್ದಿರಿ ಹೀಗೆ ಅನೇಕ ಹಳೆಯ ವಿಷ್ಯಗಳನ್ನು ನಿಮ್ಮ ಬಳಿ ಹೇಳುತ್ತಾಳೆ.

ಬ್ರೇಕ್ ಅಪ್ ಕಾರಣ : ಬ್ರೇಕ್ ಅಪ್ ಮಾಡಿಕೊಂಡ ನಂತ್ರ ಕಾರಣ ಹೇಳದೆ ಹೋಗುವ ಹುಡುಗಿ, ನಿಮ್ಮೊಂದಿಗೆ ಮತ್ತೆ ಬರಲು ಬಯಸಿದ್ರೆ ಬ್ರೇಕ್ ಅಪ್ ಕಾರಣ ಹೇಳಲು ಶುರು ಮಾಡ್ತಾಳೆ. ಸಣ್ಣ ಕಾರಣಕ್ಕೆ ಬ್ರೇಕ್ ಅಪ್ ಆಯ್ತು ಎಂದು ಹುಡುಗಿ ಪದೇ ಪದೇ ಹೇಳಬಹುದು. ಇದು ಮತ್ತೊಂದು ಅವಕಾಶವನ್ನು ನಿಮಗೆ ನೀಡಲು ಬಯಸ್ತಿದ್ದಾಳೆ ಎಂಬ ಸಂಕೇತವಾಗಿದೆ. ಆಕೆ ಯಾವ ರೀತಿ ಹೇಳ್ತಿದ್ದಾಳೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿ.

Honeymoon ಸದಾ ನೆನಪಿನಲ್ಲಿರಬೇಕೆಂದ್ರೆ ತಯಾರಿ ಹೀಗಿರಲಿ..

ಹೊಸ ಪ್ರೀತಿಗೆ ಬೀಳದಿರುವುದು : ಒಂದು ಪ್ರೀತಿ ಕಳೆದುಕೊಂಡ ತಕ್ಷಣವೇ ಇನ್ನೊಂದು ಪ್ರೀತಿಯಲ್ಲಿ ಬೀಳುವವರ ಸಂಖ್ಯೆ ಕಡಿಮೆ. ಆದ್ರೆ ಇದ್ರ ಬಗ್ಗೆ ಹುಡುಗಿಯರು ಹೇಳುವುದಿಲ್ಲ. ನಿಮ್ಮ ಮಾಜಿಗೆ ನಿಮ್ಮ ಮೇಲೆ ಈಗ್ಲೂ ಮನಸ್ಸಿದೆ ಎಂದಾದ್ರೆ ಬೇರೆಯವರನ್ನು ಪ್ರೀತಿ ಮಾಡುವುದಿಲ್ಲ,ಅದರಲ್ಲಿ ಆಸಕ್ತಿಯಿಲ್ಲ ಎನ್ನುತ್ತಾಳೆ. ಇದು ಕೂಡ ಬಲವಾದ ಸುಳಿವು ನೀಡುತ್ತದೆ.   

click me!