ಪತಿ ಪತ್ನಿ ಜೊತೆಗೇ ಸ್ನಾನ ಮಾಡೋದು ರೊಮ್ಯಾಂಟಿಕ್ ಲೈಫನ್ನು ಉತ್ತೇಜಿಸುತ್ತಾ?

Published : Feb 05, 2023, 01:25 PM IST
ಪತಿ ಪತ್ನಿ ಜೊತೆಗೇ ಸ್ನಾನ ಮಾಡೋದು ರೊಮ್ಯಾಂಟಿಕ್ ಲೈಫನ್ನು ಉತ್ತೇಜಿಸುತ್ತಾ?

ಸಾರಾಂಶ

ಗಂಡ ಹೆಂಡತಿ ಲೈಪು ಸದಾ ಜೋಶ್‌ಫುಲ್ ಆಗಬೇಕಿದ್ದರೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು ಅಂತಾರೆ ತಿಳಿದವರು. ಅದರಲ್ಲೊಂದು ಜೊತೆಯಾಗಿ ಸ್ನಾನ ಮಾಡೋದು ಅನ್ನೋದು ತಜ್ಞರ ಅಭಿಪ್ರಾಯ.  

ಪತಿ ಪತ್ನಿ ಸಂಬಂಧ ಹತ್ತಿರವಾದಷ್ಟು ಬದುಕಿನ ಖುಷಿ ಹೆಚ್ಚಾಗುತ್ತ ಹೋಗುತ್ತೆ. ವಿವಾಹ ಬಾಹಿರ ಸಂಬಂಧವನ್ನು ದೈಹಿಕ ಆಕರ್ಷಣೆ ಎಂದರೆ ವಿವಾಹ ನಂತರದ ಸಂಬಂಧಕ್ಕೆ ಸಮ್ಮತಿಯ ಅಂಕಿತವಿರುತ್ತದೆ. ಇದು ಗಂಡ ಹೆಂಡತಿ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಮದುವೆ ಒಂದು ಸುಂದರವಾದ ಬಂಧ. ಆ ಬಂಧವನ್ನು ಇನ್ನಷ್ಟು ಗಟ್ಟಿ ಮಾಡುವುದು ಗಂಡ ಹೆಂಡತಿ ನಡುವಿನ ಅನ್ಯೋನ್ಯತೆ ಪ್ರೀತಿ. ಸಂಬಂಧದಲ್ಲಿ ಬಾಂಧವ್ಯ ಹೊಂದುವುದು ಸುಲಭ, ಆದರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ಹಾಗೆ ಕಾಪಾಡಿಕೊಳ್ಳಲು ಪೂರಕವಾಗಿರೋದು ಗಂಡ ಹೆಂಡತಿ ನಡುವಿನ ರೊಮ್ಯಾಂಟಿಕ್ ಕ್ಷಣಗಳು. ಈ ಕ್ಷಣಗಳೇ ದಾಂಪತ್ಯವನ್ನು ಜೀವಂತವಾಗಿಡುತ್ತದೆ. ಗಂಡ ಹೆಂಡತಿ ನಡುವೆ ಸೌಹಾರ್ದ, ಸ್ನೇಹ, ಬಂಧ ಹೆಚ್ಚಾಗುವಂತೆ ಮಾಡುತ್ತದೆ. ಸೆಕ್ಸ್ ಅಂದಾಗ ಕೆಲವೊಮ್ಮೆ ಆ ಕಾರಣಕ್ಕೇ ದಾಂಪತ್ಯದಲ್ಲಿ ಟೆನ್ಶನ್ ಹೆಚ್ಚಾಗೋದುಂಟು. ಆದರೆ ರೊಮ್ಯಾಂಟಿಕ್ ಆಗಿರೋದು ಲೈಂಗಿಕತೆ ಉತ್ತೇಜಿಸೋ ಜೊತೆ ಬದುಕಿನ ಖುಷಿಯನ್ನೂ ಹೆಚ್ಚಿಸುತ್ತದೆ.

ಹಾಗೆ ನೋಡಿದರೆ ಹೆಚ್ಚಿನವರು ರಾತ್ರಿ ಮಾತ್ರ ರೋಮ್ಯಾಂಟಿಕ್ ಆಗಿರಲು ಪ್ರಯತ್ನಿಸುತ್ತಾರೆ. ಆದರೆ ನಿಮ್ಮ ವೈವಾಹಿಕ ಜೀವನವನ್ನು ಸಂತೋಷಪಡಿಸಲು ಮತ್ತು ನಿಮ್ಮ ಸಂಗಾತಿಯೊಂದಿಗೆ ಬಲವಾದ ಬಂಧವನ್ನು ಬೆಳೆಸಲು, ದಿನದಲ್ಲಿ ಆಗಾಗ ನಡೆಯುವ ಸಣ್ಣ ಪ್ರಣಯ ಅತ್ಯುತ್ತಮ. ಇದರಿಂದ ನಿಮ್ಮ ಇಡೀ ದಿನ ಆಹ್ಲಾದಕರವಾಗಿರುತ್ತದೆ. ಬೆಳಿಗ್ಗೆ ಶುಭೋದಯವನ್ನು ತಿಳಿಸುವ ಮೂಲಕ ನಿಮ್ಮ ಸಂಗಾತಿಯನ್ನು ಪ್ರೀತಿಯ ನಗುವಿನೊಂದಿಗೆ ಸ್ವಾಗತಿಸಿದರೆ, ಅದು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಇಡೀ ದಿನವನ್ನು ಸಂತೋಷಪಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಒಬ್ಬರಿಗೊಬ್ಬರು ನಗು ಮತ್ತು ಅಪ್ಪುಗೆಯೊಂದಿಗೆ ಶುಭೋದಯವನ್ನು ತಿಳಿಸಿ ನಿಮ್ಮ ಮನಸ್ಥಿತಿಯಲ್ಲಾಗುವ ಹಠಾತ್ ಬದಲಾವಣೆಯನ್ನು ನೋಡಿ. ಬೆಳಗಿನ ಉಪಾಹಾರವನ್ನು ಒಟ್ಟಿಗೆ ಸೇವಿಸುವುದರ ಲಾಭವೆಂದರೆ ನೀವಿಬ್ಬರೂ ಒಟ್ಟಾಗಿ ಇನ್ನಷ್ಟು ಬಾಂಧವ್ಯವನ್ನು ಹೊಂದುವುದು. ಈ ಮಧ್ಯೆ ಜೋಕ್‌ಗಳನ್ನು ಹೇಳಿ, ಅದು ನಿಮ್ಮ ದಿನವನ್ನು ಸಂತೋಷದ ಮೋಡ್‌ನಲ್ಲಿ ಪ್ರಾರಂಭಿಸಲು ಸಹಾಯಮಾಡುತ್ತದೆ.

Valentine's Day ಬಂತು; ನಿಮ್ಮ ಪ್ರಪೋಸಲ್ ಒಪ್ಪಿಕೊಳ್ಳುತ್ತಾರೋ, ಇಲ್ಲವೋ?

ಸಂಗಾತಿ ಜೊತೆಗೆ ನಡೆಯುವ ಲೈಂಗಿಕತೆಗೆ ಪೂರಕ ಪತಿ ಪತ್ನಿ ಜೊತೆಗೆ ಸ್ನಾನ ಮಾಡುವುದು. ಇದು ನಿಮ್ಮ ಲೈಂಗಿಕತೆಯನ್ನು ಉತ್ತೇಜಿಸುವುದು ಮಾತ್ರವಲ್ಲ, ಒಟ್ಟಿಗೆ ಸ್ನಾನ ಮಾಡುವುದು ಪತಿ ಪತ್ನಿ ಒಟ್ಟಿಗೆ ಕಳೆಯಬಹುದಾದ ಮೋಜಿನ ಸಮಯವಾಗಿರುತ್ತದೆ. ಲೈಂಗಿಕತೆಯು ಇಬ್ಬರನ್ನು ಹತ್ತಿರ ತಂದಾಗ, ಅದು ಇಬ್ಬರಿಗೂ ಮೋಜಿನ ವಿಷಯವಾಗಿ ಬದಲಾಗುತ್ತದೆ. ಜೊತೆ ಸ್ನಾನ (Bath ಮಾಡುವುದು ಇಬ್ಬರ ನಡುವಿನ ಗ್ಯಾಪನ್ನು ಕಡಿಮೆ ಮಾಡುತ್ತದೆ. ದೇಹವನ್ನು ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಬ್ಬರ ನಡುವಿನ ಲೈಂಗಿಕತೆಯ ಆನಂದವನ್ನು ಹೆಚ್ಚಿಸುತ್ತದೆ. ಲೈಂಗಿಕತೆಯಲ್ಲಿನ ಏಕತಾನತೆಯನ್ನು ತೊಡೆದು ಹಾಕುತ್ತದೆ. ಇಬ್ಬರ ನಡುವಿನ ಅನಾಕರ್ಷಣೆ ಕಡಿಮೆಯಾಗಿ ಆಕರ್ಷಣೆ(Attraction) ಹೆಚ್ಚಾಗುತ್ತದೆ.

ಇದರ ಜೊತೆಗೆ ಒಟ್ಟಿಗೆ ಮಾಡುವ ವರ್ಕೌಟ್, ವ್ಯಾಯಾಮ(Exercise) ಒಬ್ಬರಿಗೊಬ್ಬರು ಪ್ರೇರೇಪಿಸುವುದರ ಜೊತೆಗೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಇದು ಉತ್ತಮ ಮತ್ತು ಮೋಜಿನ ಸಮಯವಾಗಿರುತ್ತದೆ. ಹೆಚ್ಚಿನವರ ಮುಂಜಾನೆ ಕಚೇರಿಗೆ ಹೋಗುವ ಗಡಿಬಿಡಿಯಲ್ಲಿಯೇ ಕಳೆಯುತ್ತದೆ. ನೀವು ಮಕ್ಕಳನ್ನು ಹೊಂದಿದ್ದರೆ, ನಿಮ್ಮ ಕಾರ್ಯನಿರತತೆಯು ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಇದೆಲ್ಲದರ ನಡುವೆಯೂ ಒಬ್ಬರನ್ನೊಬ್ಬರು ಮತ್ತೆ ಮತ್ತೆ ಮುಟ್ಟುವ ಅವಕಾಶವನ್ನು ಹುಡುಕುತ್ತಲೇ ಇರಿ.

ಬೆಳಿಗ್ಗೆ ಉಪಾಹಾರ ಮಾಡುವಾಗ ಕೈಗಳನ್ನು ಸ್ಪರ್ಶಿಸುವುದು, ಕೆಲಸ ಮಾಡುವಾಗ ನಿಮ್ಮ ಭುಜಗಳನ್ನು ತಟ್ಟುವುದು ಅಥವಾ ಕಚೇರಿಗೆ ಹೋಗುವ ದಾರಿಯಲ್ಲಿ ಚುಂಬಿಸುವುದು ಮುಂತಾದ ಸಣ್ಣ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಜೀವನ (Life) ಮತ್ತು ಸಂಬಂಧದ ಮೇಲೆ ಪಾಸಿಟಿವ್ ಪರಿಣಾಮ ಬೀರುವುದು. ಜೊತೆಗೆ ಮಾಡುವ ಸ್ನಾನ ಇಬ್ಬರ ಲೈಂಗಿಕತೆಯನ್ನು(Sex) ಉತ್ತೇಜಿಸುವುದರ ಜೊತೆಗೆ ದಾಂಪತ್ಯ ಜೀವನವನ್ನೂ ಚೆನ್ನಾಗಿರುವಂತೆ ಮಾಡುತ್ತದೆ.

ಡಿವೋರ್ಸ್ ಆಗಿಲ್ಲ, ಮತ್ತೊಂದು ಮಗದೊಂದು ಮದುವೆಯಾದ ಬಾಲಿವುಡ್ ಸ್ಟಾರ್ಸ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಸ ವರ್ಷಕ್ಕೆ ಈ ರಾಶಿಗೆ ಹೊಸ ಪ್ರೀತಿ, ಸಂಗಾತಿ ಭಾಗ್ಯ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ