Viral Video: ಮದುವೆ ಸಂಪ್ರದಾಯಗಳ ಮಧ್ಯೆ ನಿದ್ರೆ ಹೋದ ವಧು; ವರ ಏನ್ಮಾಡ್ತಾನೆ ನೋಡಿ!

Published : Dec 25, 2023, 05:30 PM IST
Viral Video: ಮದುವೆ ಸಂಪ್ರದಾಯಗಳ ಮಧ್ಯೆ ನಿದ್ರೆ ಹೋದ ವಧು; ವರ ಏನ್ಮಾಡ್ತಾನೆ ನೋಡಿ!

ಸಾರಾಂಶ

ಮದುವೆಯ ಸಂಪ್ರದಾಯಗಳ ವೇಳೆ ವಧುವಿಗೆ ನಿದ್ರೆ ಬಂದಂತಾಗುವುದು ಅಪರೂಪವಲ್ಲ. ಆದರೆ, ಆಕೆ ನಿಜವಾಗಿಯೂ ನಿದ್ರೆ ಹೋಗಿ, ಆಕೆಯನ್ನು ವರ ಎಚ್ಚರಿಸುವುದು ಮಾತ್ರ ಅಪರೂಪ. ಇಂತದ್ದೊಂದು ಘಟನೆಗೆ ಈ ವೀಡಿಯೋ ಸಾಕ್ಷಿಯಾಗಿದೆ. 

ಮದುವೆ ಎಂದ ಮೇಲೆ ಒಂದಿಷ್ಟು ಸಂಪ್ರದಾಯ, ಪದ್ಧತಿಗಳ ಆಚರಣೆ ಇರುವುದು ಸಹಜ. ಭಾರತೀಯರ ಮದುವೆಗಳಂತೂ ಈ ವಿಚಾರದಲ್ಲಿ ಇನ್ನೊಂದು ಕೈ ಮುಂಚೆ. ಸಂಪ್ರದಾಯಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಬಹುಶಃ ವಾರಗಟ್ಟಲೆ ಸಮಯ ಬೇಕಾಗಬಹುದು. ಹಿಂದೆಲ್ಲ ಬರೋಬ್ಬರಿ 8 ದಿನಗಳ ಕಾಲ ಮದುವೆಯನ್ನು ಆಚರಿಸಲಾಗುತ್ತಿತ್ತು ಎನ್ನುವುದನ್ನು ಕೇಳಿದ್ದೇವೆ. ಈಗಲೂ ಕೆಲವು ಕುಟುಂಬ, ಊರುಗಳಲ್ಲಿ 3-4 ದಿನಗಳ ಕಾಲ ಒಂದಾದ ಮೇಲೆ ಒಂದು ಸಂಪ್ರದಾಯಗಳನ್ನು ಪಾಲಿಸುವುದು ಕಂಡುಬರುತ್ತದೆ. ಆದರೆ, ಬಹಳಷ್ಟು ಮದುವೆಗಳು ಇತ್ತೀಚೆಗೆ ಸರಳವಾಗಿವೆ. ಒಂದೂವರೆ ದಿನದಲ್ಲಿ ಎಲ್ಲ ಮುಗಿದುಹೋಗುತ್ತದೆ. ಆ ಈ ಸಮಯದಲ್ಲಿ ಅನುಸರಿಸುವ ಪದ್ಧತಿಗಳು ಮದುಮಕ್ಕಳನ್ನು ಸುಸ್ತಾಗಿಸುವುದರಲ್ಲಿ ಅನುಮಾನವಿಲ್ಲ. ಇದರಿಂದಾಗಿ, ಎಷ್ಟೋ ಮದುಮಕ್ಕಳು ಮದುವೆಯ ಮಾರನೆಯ ದಿನ ಅಥವಾ ಮದುವೆಯ ದಿನದಂದೇ ಅನಾರೋಗ್ಯಕ್ಕೆ ತುತ್ತಾಗಿಬಿಡುತ್ತಾರೆ. ಇನ್ನು ಸಾಕಷ್ಟು ಜನರಿಗೆ ಸುಸ್ತಂತೂ ಆಗುತ್ತದೆ. ಆಗ ಕುಳಿತಲ್ಲಿ ನಿಂತಲ್ಲಿ ನಿದ್ದೆ ಬಂದಂತಾಗುವುದು ಸಹಜ. ಇಲ್ಲೊಂದು ರಾಜಸ್ಥಾನಿ ಮದುವೆಯಲ್ಲೂ ಹೀಗೆಯೇ ಆಗಿತ್ತು ಎನ್ನುವುದು ವೈರಲ್ ಆಗಿರುವ ವೀಡಿಯೋವೊಂದು ಬಹಿರಂಗಪಡಿಸುತ್ತಿದೆ.
ಸಾಮಾಜಿಕ ಜಾಲತಾಣದ (Social Media) ಇನ್ ಸ್ಟಾಗ್ರಾಮ್ ಖಾತೆಯೊಂದರಲ್ಲಿ ಸಾಂಪ್ರದಾಯಿಕ (Traditional) ರಾಜಸ್ಥಾನಿ ಮದುವೆಯ (Rajasthani Marriage) ಚಿತ್ರಣದ ವೀಡಿಯೋವೊಂದನ್ನು ಶೇರ್ ಮಾಡಲಾಗಿದೆ.

 

56 weds 33! ಮಂಟಪಕ್ಕೆ ಬಂದ 56ರ ಮದುಮಗ ಅರ್ಬಾಜ್ ಖಾನ್: ಮದ್ವೆಮನೆ ವಿಡಿಯೋ ವೈರಲ್​

ಅದರಲ್ಲಿ ಮದುವೆಯ ಸಾಂಪ್ರದಾಯಿಕ ದಿರಿಸನ್ನು ತೊಟ್ಟ ವಧು (Bride), ವರನ (Groom) ಪಕ್ಕ ಕುಳಿತಿದ್ದಾಳೆ. ಅಲ್ಲಿ ಸಂಪ್ರದಾಯಬದ್ಧವಾಗಿ ಯಾವುದೋ ಆಚರಣೆ ನಡೆಯುತ್ತಿದೆ. ಆದರೆ, ವಧುವಿಗೆ ನಿದ್ರೆಯೋ ನಿದ್ರೆ (Sleep). ಮುಖಕ್ಕೆ ಕೈಕೊಟ್ಟು ಕುಳಿತಿರುವ ಆಕೆಗೆ ಸಿಕ್ಕಾಪಟ್ಟೆ ನಿದ್ರೆ ಎಳೆಯುತ್ತಿದೆ. ಅದನ್ನು ಫೋಟೊ ತೆಗೆಯುವಾತ ಗಮನಿಸಿದ್ದಾನೆ ಮತ್ತು ಆಕೆ ನಿದ್ರೆ ಮಾಡುತ್ತಿರುವುದನ್ನು ವರನಿಗೆ ಸೂಚಿಸಿದ್ದಾನೆ ಎನಿಸುತ್ತದೆ. ಆದರೆ, ವರ ನಗುವುದಿಲ್ಲ, ಗಾಬರಿಯೂ ಆಗುವುದಿಲ್ಲ. ತುಂಬ ಜೆಂಟಲ್ (Gentle) ಆಗಿ ಪರಿಸ್ಥಿತಿಯನ್ನು ನಿಭಾಯಿಸುವುದು ಕಂಡುಬರುತ್ತದೆ. ಆಕೆಯ ಮಂಡಿಯನ್ನು ನಿಧಾನವಾಗಿ ತಟ್ಟಿ (Nudge) ಅವಳನ್ನು ಎಚ್ಚರಿಸುತ್ತಾನೆ. ಈ ವೀಡಿಯೋವೀಗ ಸಖತ್ ವೈರಲ್ (Viral) ಆಗಿದೆ. ಅಸಲಿಗೆ ಇದು ಭಾರೀ ನಗು ಮೂಡಿಸುವಂತಹ ವೀಡಿಯೋ ಆಗುತ್ತಿತ್ತು. ಆದರೆ, ವರನ ಜೆಂಟಲ್ ನೆಸ್ ನಿಂದಾಗಿ ಮುದ ನೀಡುತ್ತದೆ. ವರ ಎಂತಹ ಸಮಯದಲ್ಲೂ ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವವನಂತೆ ವರ್ತಿಸಿರುವುದರಿಂದ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. 

ವರನ ಪ್ರತಿಕ್ರಿಯೆ ಕ್ಯೂಟ್ (Cute)
ವೀಡಿಯೋ ಶೇರ್ ಆದ ಕೆಲವೇ ಸಮಯದಲ್ಲಿ ಇದನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ಅಜ್ಜಿಗೆ ಪಂಚ್‌ ಮಾಡಿದ ಚೀನಾದ ವೈದ್ಯ ಅಮಾನತು; ಮಹಿಳೆಯ ಕಣ್ಣೂ ಢಮಾರ್: ವಿಡಿಯೋ ವೈರಲ್‌

ವರನ ಪ್ರತಿಕ್ರಿಯೆ ಕ್ಯೂಟ್ ಆಗಿದೆ ಎಂದು ಬಹಳಷ್ಟು ಜನ ಕಾಮೆಂಟ್ (Comment) ಮಾಡಿದ್ದಾರೆ. ಕ್ಲಿಪ್ ಆಫ್ ದಿ ಡೇ ಎನ್ನುವ ಲೇಬಲ್ ಅನ್ನೂ ಇದಕ್ಕೆ ನೀಡಲಾಗಿದೆ. “ಇದೊಂದು ಭಾರೀ ಮೆಚ್ಚುಗೆಯ (Adorable) ಸಂಗತಿ’ ಎನ್ನಲಾಗಿದೆ. ವರನ ಪ್ರತಿಕ್ರಿಯೆಯನ್ನು ನಾನಂತೂ ಭಾರೀ ಇಷ್ಟಪಟ್ಟಿದ್ದೇನೆ ಎಂದು ಹಲವರು ಹೇಳಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವ್ಯಕ್ತಿಯ ಸ್ವಭಾವ ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಹೇಳಿಕೊಟ್ಟ ಚಾಣಕ್ಯರು
ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ