ಮದುವೆಗೆ ಸಿದ್ಧವಾಗಲು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ವಧು ಅಲ್ಲಿಂದಲೇ ಪರಾರಿಯಾಗಿದ್ದಾಳೆ. ವಧು ಮಂಟಪದಲ್ಲೇ ಆಕೆಗಾಗಿ ಕಾಯುತ್ತಾ ಕುಳಿತಿದ್ದಾನೆ. ಇಂಥಾ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಸ್ಪೆಷಲ್ ಡೇ ಆಗಿರುತ್ತದೆ. ಕೇವಲ ಮದುಮಕ್ಕಳು ಮಾತ್ರವಲ್ಲ ಕುಟುಂಬ ಸದಸ್ಯರು, ಬಂಧು ಬಳಗದವರು, ಸ್ನೇಹಿತರು ಎಲ್ಲರೂ ಮದುವೆ ದಿನ ಅಂದ್ರೆ ಖುಷಿ ಪಡುತ್ತಾರೆ. ಆದ್ರೆ ಇತ್ತೀಚಿಗೆ ಕೆಲ ವರ್ಷಗಳಿಂದ ಮದುವೆ ಸುಸೂತ್ರವಾಗಿ ನಡೆಯೋದಕ್ಕಿಂತ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೆ ಕ್ಯಾನ್ಸಲ್ ಆಗೋದೆ ಜಾಸ್ತಿ. ನಿಶ್ವಿತಾರ್ಥ, ಮೆಹಂದಿ ಶಾಸ್ತ್ರಗಳು ನಡೆದರೂ ಮದುವೆ ಮಂಟಪದಲ್ಲೇ ಮದ್ವೆ ಕ್ಯಾನ್ಸಲ್ ಆದ ಅದೆಷ್ಟೋ ಘಟನೆಗಳು ನಡೆದಿವೆ. ಕೆಲವೊಮ್ಮೆ ಕೊನೆ ಕ್ಷಣದಲ್ಲಿ ಹುಡುಗ ಅಥವಾ ಹುಡುಗಿಗೆ ಸಂಬಂಧ ಇರೋದು ಗೊತ್ತಾಗಿ ಮದ್ವೆ ಕ್ಯಾನ್ಸಲ್ ಆಗುತ್ತದೆ. ಕೆಲವೊಮ್ಮೆ ಮದುವೆ ಇಷ್ಟವಿಲ್ಲದೆ ವರ, ವಧು ಪರಾರಿಯಾಗುವುದೂ ಇದೆ. ಮಧ್ಯಪ್ರದೇಶದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ.
ಇತ್ತೀಚಿನ ಘಟನೆಯೊಂದರಲ್ಲಿ,, ತನ್ನ ಮದುವೆಗೆ ಸಿದ್ಧವಾಗಲು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ವಧು (Bride) ಅಲ್ಲಿಂದಲೇ ಪರಾರಿಯಾಗಿದ್ದಾಳೆ. ವರ (Groom) ಮಂಟಪದಲ್ಲೇ ಆಕೆಗಾಗಿ ಕಾಯುತ್ತಾ ಕುಳಿತಿದ್ದಾನೆ. ವಧುವಿಗಾಗಿ ಕಾತರದಿಂದ ಕಾಯುತ್ತಿದ್ದ ವರನ ಕಡೆಯವರು ತಾಳ್ಮೆ ಕಳೆದುಕೊಂಡು ಆಕೆ ಎಲ್ಲಿದ್ದಾಳೆ ಎಂದು ವಿಚಾರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಕ್ಷಮಿಸಿ ನಂಗೆ ನಿದ್ದೆ ಬರ್ತಿದೆ..ತಾಳಿ ಕಟ್ಟೋ ಹೊತ್ತಲ್ಲಿ, ಮಂಟಪದಲ್ಲೇ ನಿದ್ರಿಸಿದ ವಧು!
ವರದಿಯ ಪ್ರಕಾರ, ಡಿಡೋಲಿ ಕೊತ್ವಾಲಿ ಮೂಲದ ವಧುವಿನ ವಿವಾಹವು (Wedding) ನೌಗಾವಾನ್ ಸಾದತ್ ನಿವಾಸಿ ವರನೊಂದಿಗೆ ನಿಶ್ಚಯವಾಗಿತ್ತು. ನಿಗದಿತ ದಿನಾಂಕದಂದು ವರನು ಭವ್ಯ ಮೆರವಣಿಗೆಯಲ್ಲಿ ಮದುವೆ ಸ್ಥಳಕ್ಕೆ ಬಂದನು. ವರನು ಜಯಮಾಲಾ ಸಮಾರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದನು. ಜಯಮಾಲಾ ಸಮಾರಂಭಕ್ಕೆ ವೇದಿಕೆಗೆ ಕರೆತರುವಂತೆ ವರನ ಕಡೆಯವರು ವಧುವಿನ ಮನೆಯವರನ್ನು ಕೇಳಿದಾಗ, ವಧುವಿನ ಕಡೆಯವರು ಅವರು ಬ್ಯೂಟಿ ಪಾರ್ಲರ್‌ಗೆ ಹೋಗಿರುವುದಾಗಿ ತಿಳಿಸಿದ್ದಾರೆ. ವಧು ಶೀಘ್ರದಲ್ಲೇ ಹಿಂತಿರುಗುತ್ತಾಳೆ ಎಂದು ವರನ ಮನೆಯವರಿಗೆ ತಿಳಿಸಲಾಯಿತು. ಆದರೆ, ಬಹಳ ಹೊತ್ತಾದರೂ ವಧು ಬಾರದಿರುವುದು ವರನ ಕಡೆಯವರಲ್ಲಿ ಅನುಮಾನ ಮೂಡಿಸಿದೆ.
ನಂತರ ವರನ ಮನೆಯವರು ಪೊಲೀಸ್ ಠಾಣೆಗೆ ಬಂದು ವಧು ಮತ್ತು ಆಕೆಯ ಕುಟುಂಬದವರ ವಿರುದ್ಧ ವಂಚನೆ ಆರೋಪದಡಿ ದೂರು ದಾಖಲಿಸಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ವರನು ವಧು ಇಲ್ಲದೆ ತನ್ನ ಮನೆಗೆ ಮರಳಿದನು. ಮತ್ತೊಂದೆಡೆ, ವಧುವಿನ ಮನೆಯವರು ನಾಪತ್ತೆ ದೂರು ದಾಖಲಿಸಿದ್ದಾರೆ. ವಧುವಿನ ಕಡೆಯವರ ದೂರಿನ ಆಧಾರದ ಮೇಲೆ ಪೊಲೀಸರು ನಾಪತ್ತೆಯಾದ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿ ಹುಡುಕಾಟ ಆರಂಭಿಸಿದ್ದಾರೆ.
ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!
ಕಪ್ಪಗಿರುವ ಹುಡುಗ ಬೇಡವೆಂದು ಮದ್ವೆ ಕ್ಯಾನ್ಸಲ್ ಮಾಡಿದ ವಧು!
ಇಲ್ಲೊಬ್ಬ ವಧು ಮಂಟಪದಲ್ಲಿ ಇನ್ನೇನು ಹುಡುಗ ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾಳೆ. ಅದಕ್ಕೆ ಕಾರಣ ಹುಡುಗ ಕಪ್ಪಾಗಿದ್ದಾನೆ (Dark complexion) ಅನ್ನೋದು. ವರನ ಮೈಬಣ್ಣ ತುಂಬಾ ಕಪ್ಪಾಗಿದೆ ಎಂದು ಹೇಳಿ, ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ವಿವಾಹವನ್ನು ಮೇ 29 ರಂದು ಪಿಪ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಪುರ್ ನಿವಾಸಿ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ನಿಗದಿತ ದಿನದಂದು ವರನು ಅದ್ಧೂರಿಯಾಗಿ ಮದುವೆಯ ಮೆರವಣಿಗೆಯಲ್ಲಿ ಹುಡುಗಿಯ ಮನೆಗೆ ತಲುಪಿದನು. ವಧು ಮದುವೆಯ ವೇದಿಕೆಗೆ ವರಮಾಲೆಗೆ ಬರುವವರೆಗೆ ಎಲ್ಲವೂ ಸರಿಯಾಗಿ ನಡೆಯಿತು.ಹುಡುಗನಿಗೆ ಮಾಲೆ ಹಾಕಲು ಮದುವೆಯ ವೇದಿಕೆಯನ್ನು ತಲುಪಿದ ವಧು ತನ್ನ ವರನನ್ನು ನೋಡಿದ ತಕ್ಷಣ ಆತನಿಗೆ ಹಾರವನ್ನು ಹಾಕಲು ನಿರಾಕರಿಸಿದಳು.