ಗಂಡನ ಸಾವಿನ ನೋವಿನಲ್ಲಿ ಬಿಕ್ಕುತ್ತಿದ್ದರೆ ತಂಗಿ - ತಾಯಿಗೆ ಆಕೆಯ ಗೌನ್‌ ಮೇಲೆ ಕಣ್ಣು

Published : Jul 11, 2022, 05:52 PM ISTUpdated : Jul 11, 2022, 06:13 PM IST
ಗಂಡನ ಸಾವಿನ ನೋವಿನಲ್ಲಿ ಬಿಕ್ಕುತ್ತಿದ್ದರೆ ತಂಗಿ -  ತಾಯಿಗೆ ಆಕೆಯ ಗೌನ್‌ ಮೇಲೆ ಕಣ್ಣು

ಸಾರಾಂಶ

ಸಾವಿನ ನೋವಿನಲ್ಲಿರುವವರಿಗೆ ಸಾಂತ್ವಾನದ ಅಗತ್ಯವಿರುತ್ತದೆ. ಆದ್ರೆ ಆಪ್ತರೆನ್ನಿಸಿಕೊಂಡವರೆ ಮತ್ತೊಂದಿಷ್ಟು ನೋವು ನೀಡಿದ್ರೆ ? ಈ ಯುವತಿ ಸ್ಥಿತಿಯೂ ಅದೇ ಆಗಿದೆ. ಪ್ರೇಮಿ ಕಳೆದುಕೊಂಡು ದುಃಖದಲ್ಲಿರುವ ಯುವತಿಗೆ ಸಹೋದರಿ ಹಾಗೂ ತಾಯಿ ಮಾತು ಮತ್ತಷ್ಟು ನೋವುಂಟು ಮಾಡ್ತಿದೆ.   

ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಹೊಸ ಜೀವನ ನಡೆಸಬೇಕೆಂಬ ಕಾತುರದಲ್ಲಿದ್ದಾಗ ಸಂಗಾತಿ ಸಾವನ್ನಪ್ಪಿದ್ರೆ ಅದರ ನೋವನ್ನು ವಿವರಿಸಲು ಸಾಧ್ಯವಿಲ್ಲ. ಅವರ ನೆನಪಿನಲ್ಲಿಯೇ ವರ್ಷಗಳನ್ನು ಕಳೆಯುವವರಿದ್ದಾರೆ. ಸತ್ಯವನ್ನು ಅಪ್ಪಿಕೊಂಡು ಜೀವನ ನಡೆಸಲು ತುಂಬಾ ಸಮಯ ಬೇಕಾಗುತ್ತದೆ. ಹಾಗೆಯೇ ಸಾವನ್ನಪ್ಪಿದವರ ಜೊತೆ ಸಂಪರ್ಕಕ್ಕೆ ಬಂದಿದ್ದ ಕೆಲ ವಸ್ತುಗಳ ಮೇಲೆ ನಮಗೆ ಅತಿಯಾದ ಮೋಹವಿರುತ್ತದೆ. ಅದನ್ನು ನಾವು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಯುವತಿಯೊಬ್ಬಳು ಮದುವೆಗೆ ಒಂದು ತಿಂಗಳ ಮೊದಲು ತನ್ನ ಭಾವಿ ಪತಿಯನ್ನು ಕಳೆದುಕೊಂಡಿದ್ದಾಳೆ. ಆತನ ನೆನಪಿನಲ್ಲಿರುವ ಯುವತಿಗೆ ಈಗ ಸಹೋದರಿ ಹಾಗೂ ಆಕೆ ತಾಯಿಯ ಮಾತುಗಳು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂದೇನು ಮಾಡ್ಬೇಕೆಂಬ ಪ್ರಶ್ನೆ ಕಾಡ್ತಿದೆ.

ರೆಡ್ಡಿಟ್ ನಲ್ಲಿ ಯುವತಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. 2021ರಲ್ಲಿ ನಿಶ್ಚಿತಾರ್ಥವಾಗಿದ್ದ ಭಾವಿ ಪತಿಯನ್ನು ಈಕೆ ಕಳೆದುಕೊಂಡಿದ್ದಾಳೆ. ಮದುವೆಗೆ ಎಲ್ಲ ಸಿದ್ಧತೆ ಆಗಿತ್ತಂತೆ. ಮದುವೆಗಾಗಿ ಚೆಂದದ ಗೌನ್ ಖರೀದಿಸಿದ್ದಳಂತೆ. ಆದ್ರೀಗ ಭಾವಿ ಪತಿ ಇಲ್ಲದ ನೋವು ಆಕೆಯನ್ನು ಕಾಡ್ತಿದೆ. ನೋವು ಮರೆಯಲು ಪಾಲಕರ ಜೊತೆ ವಾಸ ಶುರು ಮಾಡಿದ್ದಾಳೆ. ಮದುವೆಗೆ ಧರಿಸಬೇಕೆಂದು ಖರೀದಿ ಮಾಡಿದ್ದ ಗೌನ್ ಕೂಡ ತನ್ನೊಂದಿಗೆ ಇಟ್ಟುಕೊಂಡಿದ್ದಾಳೆ. 

ಇದನ್ನೂ ಓದಿ: ಮಾಲೆ ಹಾಕಿದ ಮರುಕ್ಷಣವೇ ವರನಿಂದ ಒಪ್ಪಂದಕ್ಕೆ ಸಹಿ ಹಾಕಿಸಿದ ವಧು, ಪೇಪರ್ ಓದಿದವನಿಗೆ ನಡುಕ!

ಗೌನ್ ಮೇಲೆ ಸಹೋದರಿ – ತಾಯಿ ಕಣ್ಣು : ಈ ಮಧ್ಯೆ ಯುವತಿಯ ಸಹೋದರಿ ಮದುವೆ ನಿಶ್ಚಯವಾಗಿದೆ. ಮುಂದಿನ ತಿಂಗಳು ಸಹೋದರಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾಳೆ. ಆದ್ರೆ ಮದುವೆಗೆ ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ಸಹೋದರಿ ಹಾಗೂ ಪಾಲಕರು ಇಲ್ಲವಂತೆ. ಸದಾ ಮದುವೆಗೆ ಹೆಚ್ಚು ಖರ್ಚಾಗ್ತಿದೆ ಹಾಗೆ ಅಥಿತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸುತ್ತಿದ್ದಾರೆಂದು ಭಾವಿ ಅಳಿಯನಿಗೆ ತಾಯಿ ಬೈಯ್ಯುತ್ತಿರುತ್ತಾಳಂತೆ. ಇಷ್ಟೇ ಅಲ್ಲ, ತಾಯಿ ಹಾಗೂ ಸಹೋದರಿ, ಯುವತಿಯ ಗೌನ್ ಕೇಳಿದ್ದಾರೆ. ಯುವತಿ ಮದುವೆಗೆ ಧರಿಸಬೇಕೆಂದು ಖರೀದಿ ಮಾಡಿದ್ದ ಗೌನ್ ನೀಡುವಂತೆ ಸಹೋದರಿ ಕೇಳಿದ್ದಾಳೆ. ಹೊಸ ಗೌನ್ ಖರೀದಿಗೆ ಹಣ ವ್ಯರ್ಥವಾಗುತ್ತದೆ. ಈ ಗೌನ್ ಹಾಗೆಯೇ ಇದೆ. ಹಾಗಾಗಿ ಮದುವೆಗೆ ನಿನ್ನ ಗೌನ್ ನೀಡು ಎಂದು ಕೇಳಿದ್ದಾಳಂತೆ. ಈ ಮಾತನ್ನು ಕೇಳಿ ಯುವತಿ ಶಾಕ್ ಆಗಿದ್ದಾಳೆ. ಇವರಿಬ್ಬರ ವರ್ತನೆಗೆ ಆಕೆಗೆ ವಿಚಿತ್ರವೆನ್ನಿಸಿದೆ. ಯುವತಿ, ವಿನಮ್ರವಾಗಿ ನಿರಾಕರಣೆ ಕೂಡ ಮಾಡಿದ್ದಾಳೆ. ಆದ್ರೆ ತಾಯಿ- ಸಹೋದರಿ ಅಷ್ಟಕ್ಕೆ ಬಿಡ್ತಿಲ್ಲ. ಯುವತಿ ಮಾತಿಗೆ ತೃಪ್ತರಾಗದ ಅವರು ಒತ್ತಾಯ ಮುಂದುವರೆಸಿದ್ದಾರೆ.

ಆರ್ಥಿಕ ಪರಿಸ್ಥಿತಿ ಹೇಗಿದೆ, ಮನೆಯಲ್ಲಿ ಎಷ್ಟು ಸಮಸ್ಯೆಯಿದೆ ಎಂಬುದನ್ನೆಲ್ಲ ತಾಯಿ ಯುವತಿ ಮುಂದೆ ಹೇಳಿದ್ದಾಳಂತೆ. ಸ್ವಾರ್ಥಿ ಎಂದು ಸಹೋದರಿ ನನ್ನನ್ನು ಕರೆದಿದ್ದಾಳೆ. ನನಗೆ ಈ ಗೌನ್ ಮೇಲೆ ವಿಶೇಷ ಬಾಂಧವ್ಯವಿದೆ. ನಾನು ಮದುವೆಯಾಗಿಲ್ಲ, ಮದುವೆಗೆ ಇದನ್ನು ಧರಿಸಿಲ್ಲ ನಿಜ. ಆದ್ರೆ ನನ್ನ ಮಾಜಿ ಪತಿಯ ನೆನಪು ಇದರಲ್ಲಡಗಿದೆ ಎನ್ನುತ್ತಾಳೆ ಯುವತಿ. 

ಇದನ್ನೂ ಓದಿ: ಹುಡುಗಿಯರಿಗೆ ಹೆಚ್ಚು ಹೈಟ್ ಇರೋ ಹುಡುಗರು ಇಷ್ಟವಾಗೋದು ಯಾಕೆ ?

ಭಾವಿ ಪತಿ ಹಿಂತಿರುಗುವುದಿಲ್ಲ. ಗೌನ್ ಸುಮ್ಮನೆ ಕ್ಲೋಸೆಟ್ ನಲ್ಲಿ ನೇತಾಡುತ್ತಿರುತ್ತದೆ. ನಿನ್ನ ಭಾವನೆ ಬದಿಗಿಟ್ಟು ಗೌನ್ ನೀಡು ಎಂದು ತಾಯಿ ಮತ್ತೆ ಮತ್ತೆ ಒತ್ತಾಯಿಸುತ್ತಿದ್ದಾಳಂತೆ. ತಂದೆ ತನ್ನ ಪರವಾಗಿದ್ದಾರೆ. ಆದ್ರೆ ಸಹೋದರಿ ಮದುವೆಗೆ ನಾನು ಸಹಾಯ ಮಾಡುತ್ತಿಲ್ಲ ಎಂಬ ಭಾವನೆ ನನ್ನನ್ನು ಕಿತ್ತು ತಿನ್ನುತ್ತಿದೆ ಎಂದು ಯುವತಿ ಬರೆದುಕೊಂಡಿದ್ದಾಳೆ. ಹಾಗೆ ಇದೇ ಕಾರಣಕ್ಕೆ ನಮ್ಮಿಬ್ಬರ ಸಂಬಂಧ ಹಾಳಾಗಬಹುದು ಎಂಬ ಭಯವಿದೆ ಎಂದು ಬರೆದಿದ್ದಾಳೆ.ರೆಡ್ಡಿಟ್ ನಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಮದುವೆ ಡ್ರೆಸ್ ಕೇಳುವುದು ಸರಿಯಲ್ಲವೆಂದು ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯುವತಿಗೆ ಧೈರ್ಯ ತುಂಬಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌