ಯಪ್ಪಾ..ಮದ್ವೆಗೆ ಬಂದ ಅತಿಥಿಗಳಿಂದ್ಲೇ ಹನಿಮೂನ್‌ ಹೋಗೋಕೆ ದುಡ್ಡು ಕಲೆಕ್ಟ್ ಮಾಡಿದ ವಧು !

By Suvarna News  |  First Published Jun 29, 2022, 11:43 AM IST

ಇವತ್ತಿನ ಕಾಲದ ಮದ್ವೆ (Marriage) ಅಂದ್ರೆ ಗೊತ್ತಲ್ಲ. ಫುಲ್ ಧಾಂ ಧೂಂ ಆಗಿರ್ಬೇಕು. ಮಂಟಪ, ಮದುಮಕ್ಕಳ (Bride-groom) ಉಡುಗೆ, ಊಟ ಎಲ್ಲವೂ ಅದ್ಧೂರಿಯಾಗಿರ್ಬೇಕು. ಇಲ್ಲಾಂದ್ರೆ ಜನ್ರು ಆಡಿಕೊಳ್ಳೋದು ತಪ್ಪಲ್ಲ. ಇಷ್ಟೆಲ್ಲಾ ಮಾಡಿ ಹನಿಮೂನ್‌ (Honeymoon)ಗೆ ಹೋಗೋಣ ಅಂದ್ರೆ ದುಡ್ಡಾದ್ರು ಎಲ್ಲಿರುತ್ತೆ ಹೇಳಿ. ಇದಕ್ಕೆ ಇಲ್ಲೊಂದು ನವಜೋಡಿ ಏನ್ ಐಡಿಯಾ ಮಾಡಿದೆ ನೋಡಿ. 


ಹಿಂದೆಲ್ಲಾ ವರ-ವಧು (Groon-Bride), ಬೆರಳೆಣಿಕೆಯ ಅತಿಥಿಗಳಿದ್ದರೆ ಸಾಕು ಮದುವೆ (Marriage) ಮುಗಿದು ಬಿಡ್ತಿತ್ತು. ಅದನ್ನು ನಿಭಾಯಿಸಲು ಅಷ್ಟೊಂದು ದುಡ್ಡು ಸಹ ಬೇಕಾಗ್ತಿರಲ್ಲಿಲ್ಲ. ಆದ್ರೆ ಈಗಂತೂ ಸಾವಿರಗಟ್ಟಲೆ ಅತಿಥಿಗಳು, ಮಂಟಪ, ಡೆಕೊರೇಷನ್, ಊಟ ಅಂತ ಬೇಕಾಗೋ ತಯಾರಿ ಒಂದೆರಡಲ್ಲ. ಎಂಗೇಜ್‌ಮೆಂಟ್‌, ಹಳದಿ ಸೆರಮನಿ, ಪಾರ್ಟಿ, ಮದ್ವೆ ಅಂತ ಆಡಂಬರದ ಮದುವೆಗೆ ಲಕ್ಷಗಟ್ಟಲೆ ದುಡ್ಡು ಮುಗಿಯುತ್ತೆ. ಇಷ್ಟೆಲ್ಲಾ ದುಡ್ಡು ವ್ಯಯಿಸದಿದ್ದರೆ ಅದು ಮದ್ವೆ ಅಂತಾನೆ ಅನಿಸ್ಕೊಳ್ಳಲ್ಲ. ಇಷ್ಟು ಮಾತ್ರವಲ್ಲ, ಇಷ್ಟೆಲ್ಲಾ ಗ್ರ್ಯಾಂಡ್‌ ಆಗಿ ಮದ್ವೆಯಾಗಿ ಹನಿಮೂನ್‌ಗೆ ಹೋಗದಿದ್ರೆ ಹೇಗಿರುತ್ತೆ. ಅದಕ್ಕೂ ಪ್ಲಾನ್ ಮಾಡ್ಬೇಕಲ್ವಾ. ಅದಕ್ಕೂ ಮತ್ತೊಮ್ಮೆ ಲಕ್ಷಗಟ್ಟಲೆ ಖರ್ಚು. ಬಂದ ಅತಿಥಿ (Guests)ಗಳೇನೋ ಉಂಡೂ ಹೋದ, ಕೊಂಡೂ ಹೋದ ಅಂತ ಹಾಯಾಗಿರ್ತಾರೆ. ಲಕ್ಷಗಟ್ಟಲೆ ಖರ್ಚು ಮಾಡಿದ ಮನೆ ಮಂದಿ ಮಾತ್ರ ತಲೆಸುತ್ತಿ ಬೀಳೋ ಪರಿಸ್ಥಿತಿ.

ಹಾಗಂತ ಮದುವೆ ಮಾಡೋರು ಕೈ ಹಿಡಿತ ಮಾಡೋ ಹಾಗಿಲ್ಲ. ಭರ್ಜರಿ ಊಟ, ಡ್ರಿಂಕ್ಸ್ ಅಂತೂ ಮಿಸ್ ಮಾಡೋ ಹಾಗೆ ಇಲ್ಲ. ಇದೆಲ್ಲದರ ಮಧ್ಯೆ ಹನಿಮೂನ್‌ (Honeymoon)ಗೆ ದುಡ್ಡು ಹೊಂದಿಸೋದು ಹೇಗಪ್ಪಾ ಅನ್ನೋ ಚಿಂತೆಯಲ್ಲಿದ್ದ ವಧು ಸೂಪರ್ ಐಡಿಯಾ ಮಾಡಿದ್ದಾಳೆ. 

Tap to resize

Latest Videos

Wedding Tips: ಮದುವೆಗೂ ಮುನ್ನವೇ ಸಂಗಾತಿಗಿದ್ಯಾ ಈ ಅಭ್ಯಾಸ ಗಮನಿಸಿ!

ಹನಿಮೂನ್‌ ಹೋಗೋಕೆ ದುಡ್ಡು ಕೊಡಿ, ಬೇಕಾದಷ್ಟು ಕುಡೀರಿ !
ಇವತ್ತಿನ ಕಾಲದಲ್ಲಿ ಮದುವೆಗಳು ದುಬಾರಿ (Costly)ಯಾಗಿದೆ. ಹೀಗಾಗಿ ದಂಪತಿಗಳು ಯಾವಾಗಲೂ ಹಣವನ್ನು ಉಳಿಸುವ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ಎಲ್ಲದರಲ್ಲೂ ಹಿಡಿತ ಮಾಡುವ ಹಾಗಿಲ್ಲವಲ್ಲ. ಅದಕ್ಕೆ ಈ ವಧು ಸೂಪರ್ ಐಡಿಯಾ ಮಾಡಿದ್ದಾಳೆ. ಮದುವೆಯಲ್ಲಿ ಭರ್ಜರಿ ಊಟ, ತೆರೆದ ಬಾರ್‌ನ ವ್ಯವಸ್ಥೆ ಮಾಡಿಡಲಾಗಿತ್ತು. ಆದರೆ ಬೇಕಾಬಿಟ್ಟಿ ಕುಡಿಯುವುದೇನೋ ಸರಿ. ಆದ್ರೆ ಹೀಗೆ ಕುಡಿಯೋರು ಹನಿಮೂನ್‌ಗೆ ದುಡ್ಡು ಕೊಡ್ಬೇಕು ಅನ್ನೋ ಷರತ್ತು ವಿಧಿಸಿದ್ದಾಳೆ. ವಧು-ವರರು ತಮ್ಮ ಹನಿಮೂನ್ ಅಥವಾ ಹೊಸ ಮನೆ ನಿಧಿಗೆ ಕಡ್ಡಾಯವಾಗಿ ದೇಣಿಗೆ ನೀಡಿದರೆ, ಎಲ್ಲಾ ಅತಿಥಿಗಳಿಗೆ ಅನಿಯಮಿತ ಡ್ರಿಂಕ್ಸ್ ಸರಬರಾಜು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ರೆಡ್ ಇಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆರತಕ್ಷತೆಗಾಗಿ, ನಾವು ಸ್ನೇಹಿತ ಬಾರ್ಟೆಂಡಿಂಗ್‌ನೊಂದಿಗೆ ತೆರೆದ ಬಾರ್ ಅನ್ನು ಯೋಜನೆ ಮಾಡುತ್ತಿದ್ದೇವೆ. ಇಲ್ಲಿಗೆ ಆಗಮಿಸುವ ಅತಿಥಿಗಳು ಇದನ್ನು ಎಷ್ಟು ಬೇಕಾದರೂ ಕುಡಿಯಬಹುದು. ಆದರೆ ನಮ್ಮ ಹನಿಮೂನ್ ಅಥವಾ ಹೊಸ ಮನೆ ನಿಧಿಗೆ ಕಡ್ಡಾಯವಾಗಿ ಹಣ ನೀಡುವಂತೆ ಕೇಳಿಕೊಂಡಿದ್ದಾರ. ನೀವು ನಿಮ್ಮ ಮೊದಲ ಪಾನೀಯವನ್ನು ಪಡೆಯಲು ಹೋದಾಗ  ಹಣವನ್ನು ಪಾವತಿಸಿದರೆ ಸಾಕು. ಉಳಿದ ಡ್ರಿಂಕ್ಸ್ ಉಚಿತವಾಗಿರುತ್ತದೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಈ ನಿರ್ಧಾರ ಸ್ವಾರ್ಥಿಯಂತೆ ನಿಮಗೆ ಅನಿಸಬಹುದು. ಆದರೆ ಮನೆಮಂದಿಗೆ ಆರ್ಥಿಕವಾಗಿ ತೊಂದರೆ ನೀಡದೆ ಹನಿಮೂನ್ ಮಾಡಲು ನಾವು ಈ ನಿರ್ಧಾರ ತೆಗೆದುಕೊಂಡೆವು ಎನ್ನುತ್ತಾರೆ ನೂತನ ದಂಪತಿ. 

ಲವ್ ಮ್ಯಾರೇಜ್‌ಗಿಂತ ಆರೇಂಜ್ಡ್‌ ಮ್ಯಾರೇಜ್‌ ಒಳ್ಳೇದು ಅಂತಾರಲ್ಲ, ಯಾಕೆ ?

ವಧು ಬೇಕಾಗಿದ್ದಾಳೆ ಎಂದು  ಊರಿಡೀ ಪೋಸ್ಟರ್‌ ಹಾಕಿದ ಯುವಕ
ಇನ್ನೊಂದೆಡೆ, ತಮಿಳುನಾಡಿ (Tamilnadu)ನಲ್ಲಿನ ಯುವಕನೊಬ್ಬ ಹುಡುಗಿಯನ್ನು ಹುಡುಕಲು ಮಾಡಿರುವ ಐಡಿಯಾಗೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ತಮಿಳುನಾಡಿನ ಎಂ.ಎಸ್ ಜಗನ್‌ ಎಂಬವರ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿನ ಮ್ಯಾಟ್ರಿಮೋನಿಯಲ್ (Matrimony) ಜಾಹೀರಾತುಗಳು ಮತ್ತು ಪ್ರೊಫೈಲ್‌ಗಳು ಎಲ್ಲೆಡೆ ವೈರಲ್ ಆಗಿವೆ. ಯಾಕೆಂದರೆ ಇವರು ಊರಲ್ಲಿ ಎಲ್ಲೆಡೆ ಹುಡುಗಿ ಬೇಕೆಂಬ ಪೋಸ್ಟ್‌ನ್ನು ಲಗತ್ತಿಸಿದ್ದಾರೆ.

ಹಲವಾರು ವರ್ಷಗಳಿಂದ ಸೂಕ್ತ ಸಂಗಾತಿಯನ್ನು ಹುಡುಕುತ್ತಿರುವ ಜಗನ್‌ ಬ್ರೋಕರ್‌ಗಳಲ್ಲಿ ತಮ್ಮ ಪ್ರೊಫೈಲ್‌ನ್ನು ನೀಡಿದ್ದರು. ಮಾತ್ರವಲ್ಲ ಮ್ಯಾಟ್ರಿಮೋನಿ ಸೈಟ್‌ನಲ್ಲೂ ಪ್ರೊಫೈಲ್ ಅಟ್ಯಾಚ್ ಮಾಡಿದ್ದರು. ಆದರೆ ಯಾವ ರೀತಿಯಲ್ಲಿ ಹುಡುಕಿದರೂ ಸೂಕ್ತ ಸಂಗಾತಿ ಸಿಕ್ಕಿರಲ್ಲಿಲ್ಲ. ಹೀಗಾಗಿ ಮಧುರೈನ ವಿಲ್ಲುಪುರಂನ ಎಂಎಸ್ ಜಗನ್ ಎಂಬ 27 ವರ್ಷದ ಇಂಜಿನಿಯರ್ ಅವರು ತಮ್ಮ ವೈಯಕ್ತಿಕ ವಿವರಗಳನ್ನು ಹೊಂದಿರುವ ದೊಡ್ಡ ಪೋಸ್ಟರ್‌ಗಳನ್ನು ತಮ್ಮ ಊರಿನ ಸುತ್ತಲೂ ಹಾಕಿದ್ದಾರೆ.

click me!