ಮನುಷ್ಯರೂ ನಾಯಿಯಂತೆ ಮೂಸಿ ನೋಡ್ತಾರಾ ? ಒಂದೇ ಮೈ ವಾಸನೆ ಇರುವವರ ಮಧ್ಯೆ ಒಡನಾಟ ಹೆಚ್ಚಂತೆ !

By Suvarna NewsFirst Published Jun 29, 2022, 10:58 AM IST
Highlights

ಯಾವುದೇ ಸಂಬಂಧ (Relationship)ವಾಗಿರಲಿ ಸಾಮಾನ್ಯವಾಗಿ ಎಂಥವರ ಮಧ್ಯೆ ಒಡನಾಟ ಹೆಚ್ಚಿರುತ್ತೆ. ಒಂದೇ ರೀತಿಯ ಮನಸ್ಥಿತಿ, ಯೋಚನೆ ಇದ್ದವರ ಮಧ್ಯೆ ಅಲ್ವಾ. ಆದರೆ ಇದಲ್ಲದೆಯೂ . ಮೈ ವಾಸನೆ (Smell)ಯಲ್ಲಿ ಸಾಮ್ಯತೆ ಇದ್ದವರ ಮಧ್ಯೆ ಒಡನಾಟ ಹೆಚ್ಚು ಇರುತ್ತದೆ ಎಂಬುದು ಹೊಸ ಸಂಶೋಧನೆ (Study)ಯಿಂದ ಬಹಿರಂಗಗೊಂಡಿದೆ. 

ಸಮಾಜ (Society)ದಲ್ಲಿರುವ ಹಲವಾರು ಸಂಬಂಧ (Relationship0ಗಳು ನಾವು ಗಮನಿಸಬಹುದು. ಕೆಲವೊಬ್ಬರು ಸಂಪೂರ್ಣವಾಗಿ ಒಂದೇ ಮನಸ್ಥಿತಿಯನ್ನು ಹೊಂದಿದ್ದರೆ, ಇನ್ನು ಕೆಲವರು ಪ್ರತ್ಯೇಕ ಮನಸ್ಥಿತಿಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಒಂದೇ ರೀತಿಯ ಯೋಚನೆ, ಆಯ್ಕೆ, ಅಭಿರುಚಿ ಇದ್ದವರೂ ಬೇಗ ಸ್ನೇಹಿತ (Friends)ರಾಗುತ್ತಾರೆ, ಆಪ್ತರಾಗುತ್ತಾರೆ. ಆದರೆ ಇದಲ್ಲದೆಯೂ ಅಚ್ಚರಿಪಡುವ ಹೊಸ ಕಾರಣವೊಂದರಿಂದ ಒಡನಾಟ ಹೆಚ್ಚು ಇರುತ್ತದೆ ಎಂಬುದು ಹೊಸ ಸಂಶೋಧನೆ (Study)ಯಿಂದ ಬಹಿರಂಗಗೊಂಡಿದೆ. ಒಂದೇ ರೀತಿಯ ದೇಹದ ವಾಸನೆಯನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಜನರು ಸ್ನೇಹ ಬೆಳೆಸುವ ಪ್ರವೃತ್ತಿಯನ್ನು ಹೊಂದಿರಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಮೂಗು ಅಥವಾ ಇನೋಸ್ ಎಂದು ಕರೆಯಲ್ಪಡುವ ಸಾಧನದಿಂದ ಮೊದಲು ವಾಸನೆ (Smell) ಮಾಡುವ ಮೂಲಕ ಸಂಪೂರ್ಣ ಅಪರಿಚಿತರ ನಡುವಿನ ಸಾಮಾಜಿಕ ಸಂವಹನಗಳ ಗುಣಮಟ್ಟವನ್ನು ಊಹಿಸಲು ಸಂಶೋಧಕರು ಸಮರ್ಥರಾಗಿದ್ದರು. ಈ ಸಂಶೋಧನೆಗಳು ವಾಸನೆಯ ಅರ್ಥವು ಹಿಂದೆ ಯೋಚಿಸಿದ್ದಕ್ಕಿಂತ ಮಾನವ ಸಾಮಾಜಿಕ ಸಂವಹನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಸೂಚಿಸುತ್ತದೆ. ಪ್ರೊ.ನೋವಮ್ ಸೋಬೆಲ್ಸ್ ಲ್ಯಾಬೊರೇಟರಿಯ ಸಂಶೋಧನಾ ವಿದ್ಯಾರ್ಥಿನಿ ಇನಬಲ್ ರಾವ್ರೆಬೈ, ಡಾ.ಕೋಬಿ ಸ್ನಿಟ್ಜ್ ಮೊದಲಾದವರು ನಡೆಸಿದ ಅಧ್ಯಯನದಲ್ಲಿ ಮನುಷ್ಯರು ಮೈವಾಸನೆಗಳಿಂದ ಆಕರ್ಷಿತರಾಗುವುದನ್ನು ಪತ್ತೆ ಹೆಚ್ಚಿದ್ದಾರೆ. ಈ ಸಂಶೋಧನೆಗೆ ವಿವಿಧ ರೀತಿಯ ಸ್ವಭಾವದ ಜನರನ್ನು ಆಯ್ದುಕೊಳ್ಳಲಾಗಿತ್ತು. 

ಅವಳಲ್ಲ ಅವನು: ಮದುವೆಗೆ ಮನೆಯವರಿಂದ ವಿರೋಧ, ಲಿಂಗ ಬದಲಾಯಿಸಿಕೊಂಡ ಯುವತಿ

ಮನುಷ್ಯರೂ ಮೂಸಿ ನೋಡುತ್ತಾರಂತೆ !
ನಾಯಿಗಳನ್ನು ಹತ್ತಿರದಿಂದ ಬಲ್ಲವರಿಗೆ ಈ ವಾಸನೆಯ ವಿಚಾರ ಗೊತ್ತಿರಬಹುದು. ಅಪರಿಚಿತ ನಾಯಿಗಳು ಮುಖಾಮುಖಿಯಾದಾಗ ಮೊದಲು ಮೂಸಿ ನೋಡುತ್ತವೆ. ಆ ಬಳಿಕ ತುಂಟಾಟ ನಡೆಸುವುದೋ ಅಥವಾ ಕಚ್ಚಾಟ ಮಾಡುವುದೋ ಎಂಬುದನ್ನು ನಿರ್ಧರಿಸುತ್ತವೆ. ಇದು ನಾಯಿಯಷ್ಟೇ ಅಲ್ಲ ನೆಲದ ಮೇಲಿರುವ ಎಲ್ಲಾ ಪ್ರಾಣಿಗಳಲ್ಲೂ ಇರುವ ಗುಣ ಅಥವಾ ಸ್ವಭಾವ. ಇದು ವಿವಿಧ ಅಧ್ಯಯನಗಳಲ್ಲಿ ದಾಖಲಾಗಿದೆ. ಆದರೆ, ಮೈ ಮೂಸುವ ಸ್ವಭಾವ ಇಲ್ಲದ ಮನುಷ್ಯರ ಮೇಲೆ ಪ್ರಯೋಗ ಮಾಡಿದ್ದು ಇದೇ ಮೊದಲು. ಮನುಷ್ಯರೂ ಮೂಸುತ್ತಾರಂತೆ ಇಸ್ರೇಲ್‌ನ ಈ ಸಂಶೋಧಕರು ಕಂಡುಹಿಡಿದ ಪ್ರಮುಖ ಸಂಗತಿಯಲ್ಲಿ ಮನುಷ್ಯರೂ ಕೂಡ ಮೈವಾಸನೆಯ ಆಘ್ರಾಣಿಸುತ್ತಾರಂತೆ. 

ಲೈಂಗಿಕ ಸಂಭೋಗ ಅಥವಾ ರೋಮ್ಯಾನ್ಸ್ ಮಾಡುವಾಗ ಮನುಷ್ಯರು ಈ ರೀತಿಯ ಮೂಸುವುದುಂಟು. ಆದರೆ, ಅಪರಿಚಿತರಲ್ಲೂ ನಾವು ಹೀಗೆ ಮಾಡುತ್ತೇವಾ ಎಂದು ಅಚ್ಚರಿ ಅನಿಸಬಹುದು. ನಮಗೆ ಅರಿವಿಲ್ಲದೆಯೇ ನಾವು ನಮ್ಮ ಮೈವಾಸನೆಯನ್ನು ಮತ್ತು ನಮ್ಮ ಜೊತೆಗಿರುವವರ ಮೈ ವಾಸನೆಯನ್ನೂ ಮೂಸಲು ಯತ್ನಿಸುತ್ತೇವಂತೆ. ವಾಸನೆಯಲ್ಲಿ ಸಾಮ್ಯತೆ ಇರುವ ವ್ಯಕ್ತಿಗಳು ಬೇಗ ಒಡನಾಟಕ್ಕೆ ತೆರೆದುಕೊಳ್ಳುತ್ತಾರೆ ಎಂಬುದು ಈ ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ. 

ಪುರುಷರ ಈ ಗುಣಗಳು ಮಹಿಳೆಯರ ಮೂಡ್ ಆನ್ ಮಾಡತ್ತೆ, ಯಾವುದು ಆ ಗುಣಗಳು?

ಅಧ್ಯಯನ ನಡೆಸಿದ್ದು ಹೇಗೆ ?
ಈಗಾಗಲೇ ಗಾಢ ಸ್ನೇಹಿತರಾದ ಜೋಡಿಗಳು ಹಾಗು ಒಬ್ಬರಿಗೊಬ್ಬರು ಪರಿಚಯ ಇಲ್ಲದ ಜೋಡಿಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿತ್ತು. ಈಗಾಗಲೇ ಸ್ನೇಹಿತರಾಗಿದ್ದ ಇಬ್ಬರು ವ್ಯಕ್ತಿಗಳ ಮೈವಾಸನೆಯ ಸ್ಯಾಂಪಲ್ ಅನ್ನು ಪಡೆಯಲಾಯತು. ಹಾಗೆಯೇ, ಬೇರೆ ಜೋಡಿಗಳ ವಾಸನೆಯ ಸ್ಯಾಂಪಲ್‌ಗಳನ್ನು ಪಡೆಯಲಾಯಿತು. ಅದನ್ನು ಇಟ್ಟುಕೊಂಡು ಎರಡು ಪ್ರಯೋಗಗಳನ್ನು ಸಂಶೋಧಕರು ಮಾಡಿದ್ದಾರೆ. ಮೊದಲ ಪ್ರಯೋಗದಲ್ಲಿ ಇನೋಸ್ ಬಳಸಿ ವಾಸನೆಗಳ ರಾಸಾಯನಿಕ ಗುಣವನ್ನು ಅವಲೋಕಿಸಲಾಯಿತು. ಮತ್ತೊಂದು ಪ್ರಯೋಗದಲ್ಲಿ ವಾಲಂಟಿಯರ್‌ಗಳ ಸಹಾಯ ಪಡೆಯಲಾಯಿತು. ಅದರಲ್ಲಿ ಎರಡೂ ಗುಂಪಿನವರ ಮೈ ವಾಸನೆಯ ಸ್ಯಾಂಪಲ್‌ಗಳನ್ನು ಮೂಸಿ ನೋಡುವಂತೆ ವಾಲಂಟಿಯರ್‌ಗಳಿಗೆ ತಿಳಿಸಲಾಯಿತು. ಸ್ನೇಹಿತರಿಬ್ಬರ ಮೈ ವಾಸನೆ ಒಂದೇ ರೀತಿಯಲ್ಲಿದ್ದುದು ದೃಢಪಟ್ಟಿತ್ತು. 

ಈಗಾಗಲೇ ಸ್ನೇಹಿತರಾದವರ ಮಧ್ಯೆ ಒಂದೇ ರೀತಿಯ ಮೈವಾಸನೆಗೆ ಬೇರೆ ಕಾರಣವೂ ಇರುವ ಸಾಧ್ಯತೆ ಇರುತ್ತದೆ. ಅಂದರೆ ಇಬ್ಬರು ಒಂದೇ ರೀತಿಯ ಆಹಾರ ಸೇವಿಸುವುದು ಇತ್ಯಾದಿ ಎಲ್ಲವೂ ಅವರ ಮೈ ವಾಸನೆಯ ಸಾಮ್ಯತೆಗೆ ಕಾರಣವಾಗಿರಬಹುದು ಎಂಬ ಸಂಶಯ ಬರುತ್ತದೆ. ಈ ನಿಟ್ಟಿನಲ್ಲಿ ಸಂಶೋಧಕರು ಮತ್ತೊಂದು ಪ್ರಯೋಗ ಮಾಡಿದರು. ಅದರಲ್ಲಿ ಪರಸ್ಪರ ಪರಿಚಯ ಇಲ್ಲದ ವ್ಯಕ್ತಿಗಳನ್ನು ಪ್ರಯೋಗಕ್ಕೆ ಆರಿಸಲಾಯಿತು. ಅವರ ಮೈ ವಾಸನೆಯ ಸ್ಯಾಂಪಲ್ ಸಂಗ್ರಹಿಸಿ, ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡಲಾಯಿತು. ಅದರಲ್ಲಿ ಒಂದೇ ರೀತಿಯ ಮೈವಾಸನೆ ಇದ್ದವರು ಬೇಗನೇ ಆಪ್ತರಾಗಿದ್ದು ಕಂಡುಬಂದಿತಂತೆ.

click me!