Wedding Preparation: ಮಾಡೋ ಕೆಲಸ ಬಿಟ್ಟು ಈ ವಿಷ್ಯಕ್ಕೆ ಜಗಳ ಆಡ್ಕೊಂಡು ಕೂತಿದೆ ಈ ಜೋಡಿ

By Suvarna News  |  First Published Mar 11, 2022, 5:42 PM IST

ಮದುವೆಗೆ ಯಾರನ್ನ ಕರೀಬೇಕು? ಯಾರನ್ನ ಕರೀಬಾರದು? ಎಲ್ಲರನ್ನೂ ಈ ಪ್ರಶ್ನೆ ಕಾಡುತ್ತೆ. ಹೊಂದಾಣಿಕೆ ಮಾಡ್ಕೊಂಡು ಒಂದಿಷ್ಟು ಮಂದಿಗೆ ಕರೆಯೋಲೆ ಕಳಿಸಿರ್ತೇವೆ. ಆದ್ರೆ ಇಲ್ಲೊಂದು ಜೋಡಿ ಗೆಸ್ಟ್ ಲೀಸ್ಟ್ ವಿಷ್ಯಕ್ಕೆ ಕಿತ್ತಾಟ ಶುರು ಮಾಡಿದ್ದಾರೆ. 
 


ಮದುವೆ (Marriage) ಅಂದ್ರೆ ಸುಮ್ನೇನಾ ಸ್ವಾಮಿ? ಮದುವೆ ಫಿಕ್ಸ್ (Fix) ಆಗ್ತಿದ್ದಂತೆ ತಯಾರಿ ಶುರುವಾಗುತ್ತದೆ. ಮದುವೆ ಎಲ್ಲಿ ನಡೆಯಬೇಕು? ಅಲ್ಲಿ ಅಲಂಕಾರ (Decoration) ಹೇಗಿರಬೇಕು ಎಂಬುದರಿಂದ ಹಿಡಿದು ಮದುವೆಯಲ್ಲಿ ಯಾವೆಲ್ಲ ಶಾಸ್ತ್ರಗಳು ನಡೆಯಬೇಕು ಎನ್ನುವವರೆಗೆ ಎಲ್ಲವೂ ಸೇರಿರುತ್ತದೆ. ಮದುವೆ ಉಡುಗೆ, ಶಾಪಿಂಗ್ (Shopping), ಮೇಕ್ಅಪ್ (Makeup) ಹೀಗೆ ಒಂದಾದ್ಮೇಲೆ ಒಂದರಂತೆ ನೂರಾರು ಕೆಲಸ (Work) ಗಳಿರುತ್ವೆ. ಈ ಎಲ್ಲರದ ಜೊತೆ ಅತಿಥಿ (Guest) ಗಳನ್ನು ಮದುವೆಗೆ ಆಹ್ವಾನಿಸೋದು ಬಹುದೊಡ್ಡ ಕೆಲಸ. ಅತಿಥಿಗಳ ಪಟ್ಟಿ ತಯಾರಿಸಲು ತುಂಬಾ ಸಮಯ ಹಿಡಿಯುತ್ತದೆ. ಒಂದು ಕಡೆಯಿಂದ ಲಿಸ್ಟ್ (List ) ಮಾಡ್ತಾ ಬಂದ್ರೂ ಯಾರೋ ಒಬ್ಬರು ತಪ್ಪಿ ಹೋಗಿರ್ತಾರೆ. ಮದುವೆಯಾದ್ಮೇಲೆ ಅವರನ್ನು ಕರೆದಿಲ್ಲ ಎಂಬುದು ಜ್ಞಾಪಕಕ್ಕೆ ಬಂದು ಮುಜುಗರವಾಗುತ್ತದೆ. ಅತೀ ಆಪ್ತರನ್ನೇ ಕರೆಯಲು ಮರೆಯುವವರಿದ್ದಾರೆ. ಹಾಗಾಗಿ ಅತಿಥಿಗಳ ಪಟ್ಟಿ ಮಾಡುವಾಗ ಹೆಚ್ಚು ಜಾಗೃತೆವಹಿಸಬೇಕು. ಕೆಲವರು ಕಡಿಮೆ ಜನರನ್ನು ಮದುವೆಗೆ ಆಹ್ವಾನಿಸಲು ನಿರ್ಧರಿಸುತ್ತಾರೆ. ಆಗ ಲೀಸ್ಟ್ ತಯಾರಿಸುವುದು ಬಹಳ ಕಷ್ಟ. ಯಾಕೆಂದ್ರೆ ಅತ್ಯಾಪ್ತರನ್ನೇ ಪಟ್ಟಿಯಿಂದ ಬಿಡಬೇಕಾಗುತ್ತದೆ. ಮದುವೆ ಫಿಕ್ಸ್ ಆದ್ಮೇಲೆ ಸಣ್ಣ ಸಣ್ಣ ವಿಷ್ಯಕ್ಕೆ ಸಂಗಾತಿ ಮಧ್ಯೆ ಭಿನ್ನಾಭಿಪ್ರಾಯ ಬರುತ್ತದೆ. ಅದನ್ನು ಸರಿ ಮಾಡಿಕೊಂಡು ಮದುವೆ ಮಾಡಿಕೊಳ್ಳುವವರಿದ್ದಾರೆ. ಆದ್ರೆ ಇಲ್ಲೊಂದು ಜೋಡಿಗೆ ಮೇಕಪ್,ಅಡುಗೆ,ಉಡುಗೆ ವಿಷ್ಯಕ್ಕಲ್ಲ ಅತಿಥಿಗಳ ಪಟ್ಟಿ ತಯಾರಿಸುವ ವಿಷ್ಯಕ್ಕೆ ಭಿನ್ನಾಭಿಪ್ರಾಯ ಮೂಡಿದೆ. ವಧು ತನ್ನ ಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.   

ಅತಿಥಿಗಳ ಪಟ್ಟಿಯೇ ವಿವಾದಕ್ಕೆ ಕಾರಣ :  ರೆಡ್ಡಿಟ್‌ನಲ್ಲಿ ವಧು ತನ್ನ ಸಮಸ್ಯೆ ಹೇಳಿಕೊಂಡಿದ್ದಾರೆ. ವಧು-ವರರ ಮಧ್ಯೆ ಬೇರೆ ಯಾವುದೇ ಸಮಸ್ಯೆಯಿಲ್ಲವಂತೆ. ಬೇರೆ ವಿಷ್ಯಕ್ಕೆ ಇಬ್ಬರು ಜಗಳವಾಡಿಯೂ ಇಲ್ವಂತೆ. ಆದ್ರೆ ಅತಿಥಿ ಪಟ್ಟಿಯೇ ಭಿನ್ನಾಭಿಪ್ರಾಯ ಮೂಡಿಸಿದೆಯಂತೆ. ಅಷ್ಟಕ್ಕೂ ಆಗಿದ್ದೇನೆಂದ್ರೆ ವಧು ತನ್ನ ಲೀಸ್ಟ್ ನಲ್ಲಿ ಮಲ ಸಹೋದರ-ಸಹೋದರಿಯರನ್ನು ಸೇರಿಸಿದ್ದಾಳೆ. ಇದು ವರನ ಕೋಪಕ್ಕೆ ಕಾರಣವಾಗಿದೆ. ಅವರು ಕುಟುಂಬಸ್ಥರಲ್ಲವೆಂದು ವರ ಹೇಳಿದ್ದಾನೆ. ಸದ್ಯ ಮದುವೆ ಲೀಸ್ಟ್ ಕೈಬಿಟ್ಟಿರುವ ಜೋಡಿ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರಂತೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಕೇಳಿದ್ದಾಳೆ ವಧು.

Tap to resize

Latest Videos

Relationship Tips: ಪ್ರೀತಿ ಮಾಡು ತಪ್ಪೇನಿಲ್ಲ, ಆದ್ರೆ ಮತ್ತೆ ಮತ್ತೆ ಲವ್ವಲ್ಲಿ ಬೀಳೋದು ಸರಿನಾ ?

ವಧು ದೊಡ್ಡ ಕುಟುಂಬದಿಂದ ಬಂದವಳಂತೆ. ನಾನು ಅವರನ್ನು ಪಟ್ಟಿಯಿಂದ ತೆಗೆದು ಹಾಕುವುದು ಸೂಕ್ತವಲ್ಲ. ಇದು ಅವರ ಮನಸ್ಸನ್ನು ಘಾಸಿಗೊಳಿಸುತ್ತದೆ ಎಂದು ವಧು ಹೇಳಿದ್ದಾಳೆ. ವಿಚಿತ್ರವೆಂದ್ರೆ ವರ,ವಧುವಿನ ಸಲಹೆ ಕೇಳದೆ ಲೀಸ್ಟ್ ನಲ್ಲಿದ್ದ ಮಲ ಸಹೋದರ-ಸಹೋದರಿ ಹೆಸರನ್ನು ರದ್ದು ಗೊಳಿಸಿದ್ನಂತೆ.

ಸಹೋದರಿಯಿಂದ ಗೊತ್ತಾಯ್ತು ವಿಷ್ಯ : ವಧು ಹೇಳುವ ಪ್ರಕಾರ, ಆಕೆ ಮದುವೆಯಾಗುವ ಹುಡುಗ ಈ ವಿಷ್ಯವನ್ನು ಆಕೆಗೆ ಹೇಳಿಲ್ಲವಂತೆ. ಮಲ ಸಹೋದರಿ ಕರೆ ಮಾಡಿ, ಮದುವೆ ಗೆಸ್ಟ್ ಪಟ್ಟಿಯಿಂದ ನಮ್ಮ ಹೆಸರು ತೆಗೆಯಲಾಗಿದೆ ಎಂದಾಗಲೇ ವಧು ಶಾಕ್ ಗೆ ಒಳಗಾಗಿದ್ದಳಂತೆ. ವರನನ್ನು ವಿಚಾರಿಸಿದಾಗ ಇದನ್ನೊಪ್ಪಿಕೊಂಡಿದ್ದಾನಂತೆ. ಲೀಸ್ಟ್ ದೊಡ್ಡದಾಗಿತ್ತು. ಬೇರೆ ಯಾರನ್ನೂ ಪಟ್ಟಿಯಿಂದ ತೆಗೆಯಲು ಸಾಧ್ಯವಿರಲಿಲ್ಲ. ಅವರು ನಿನ್ನ ಕುಟುಂಬದವರಲ್ಲ. ಹಾಗಾಗಿ ಅವರನ್ನೇ ಅನಿವಾರ್ಯವಾಗಿ ಲೀಸ್ಟ್ ನಿಂದ ಕೈಬಿಟ್ಟೆ ಎಂದನಂತೆ.

Dating Appನಲ್ಲಿ ಮ್ಯಾಚ್ ಆಗ್ತಿದೆ ಭಾವನ ಪ್ರೊಫೈಲ್, ಅಕ್ಕನಿಗೆ ಹೇಳೋದ್ ಹೇಗೆ ಅನ್ನೋದಿವಳ ಪ್ರಾಬ್ಲಂ!

ಬಳಕೆದಾರರು ನೀಡಿದ್ದಾರೆ ಈ ಸಲಹೆ : ವಧುವಿನ ಸಮಸ್ಯೆ ಆಲಿಸಿದ ಜನರು ಮಹತ್ವದ ಸಲಹೆ ನೀಡ್ತಿದ್ದಾರೆ. ಹುಡುಗನನ್ನು ಮದುವೆಯಾಗದಿರುವುದೇ ಬೆಸ್ಟ್ ಎನ್ನುತ್ತಿದ್ದಾರೆ. ಮದುವೆಗೆ ಮುನ್ನವೇ ಹೀಗೆ ವರ್ತಿಸುತ್ತಿರುವ,ವಧುವಿನ ಆಸೆ ಈಡೇರಿಸದ,ವಧುವಿನ ಕುಟುಂಬಕ್ಕೆ ಗೌರವ ನೀಡದ ವ್ಯಕ್ತಿ ಮುಂದೆ ಏನು ಮಾಡಬಲ್ಲ ಎಂಬುದನ್ನು ಊಹಿಸಿ. ಮದುವೆ ನಂತ್ರ ಕಷ್ಟಪಡುವ ಬದಲು ಈಗ ಆತನಿಂದ ದೂರ ಸರಿಯುವುದು ಲೇಸು. ಮದುವೆ ಮುರಿದುಕೊಳ್ಳುವುದು ಒಳ್ಳೆಯ ನಿರ್ಧಾರವೆಂದು ಜನರು ವಧುವಿಗೆ ಸಲಹೆ ನೀಡ್ತಿದ್ದಾರೆ.
 

click me!