ಗರ್ಭಿಣಿಗೆ ಬೈ ಹೇಳ್ದ ಬಾಯ್ ಫ್ರೆಂಡ್, ಡೇಟಿಂಗ್ ಆ್ಯಪ್ ಬಳಸಿ ಹುಡುಗಿ ಮಾಡಿದ್ದೇನು?

By Suvarna News  |  First Published Oct 3, 2023, 3:25 PM IST

ಆನ್ಲೈನ್ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಸಂಗಾತಿಯನ್ನು ಇಲ್ಲಿ ಆರಾಮವಾಗಿ ಹುಡುಕಬಹುದು. ಅದಕ್ಕಾಗಿಯೇ ಅನೇಕ ಡೇಟಿಂಗ್ ಅಪ್ಲಿಕೇಷನ್ ಲಭ್ಯವಿದೆ. ಇಲ್ಲಿ ಗರ್ಭಿಣಿಯರಿಗೂ ಸಂಗಾತಿ ಸಿಗ್ತಾರೆ ಅಂದ್ರೆ ನೀವು ನಂಬ್ಲೇಬೇಕು. 
 


ಗರ್ಭಿಣಿ ಮನಸ್ಥಿತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಸಮಯದಲ್ಲಿ ಆಕೆ ತನ್ನ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಕಾರಣ ಆಕೆಯ ಮಾನಸಿಕ ಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರಿಗೆ ಆಕೆ ಪತಿ ಸದಾ ಬೆಂಬಲವಾಗಿ ನಿಲ್ಲಬೇಕು. ಆಕೆಗೆ ಧೈರ್ಯ ತುಂಬ್ತಾ, ನಾನು ನಿನ್ನ ಜೊತೆ ಸದಾ ಇದ್ದೇನೆಂಬ ಭರವಸೆ ಮೂಡಿಸಬೇಕು. ಆದ್ರೆ ಕೆಲ ಗರ್ಭಿಣಿಯರ ಸ್ಥಿತಿ ಭಿನ್ನವಾಗಿರುತ್ತದೆ. ಗರ್ಭಾವಸ್ಥೆಯಲ್ಲೇ ಪತಿಯನ್ನು ಕಳೆದುಕೊಳ್ಳುವ ಕೆಲ ಮಹಿಳೆಯರು, ಮಕ್ಕಳಿಗಾಗಿ ಧೈರ್ಯ ತಂದುಕೊಂಡು ಜೀವನ ನಡೆಸ್ತಾರೆ. ಮತ್ತೆ ಕೆಲ ಮಹಿಳೆಯರ ಪತಿ ಕೈಕೊಟ್ಟು ಹೋಗುವುದಿದೆ. ನಾನು ಪ್ರೀತಿಸುತ್ತಿದ್ದ ಹುಡುಗಿ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ಮಹಿಳೆಯೊಬ್ಬಳ ಬಾಯ್ ಫ್ರೆಂಡ್ ಮನೆಯಿಂದ ಕಾಲ್ಕಿತ್ತಿದ್ದಾನೆ. ಈ ಸಂದರ್ಭದಲ್ಲಿ ಏಕಾಂಗಿಯಾದ ಮಹಿಳೆ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾಳೆ. ಆನ್ಲೈನ್ ನಲ್ಲಿ ಇನ್ನೊಬ್ಬ ಪತಿಯನ್ನು ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ.

ಘಟನೆ ನಡೆದಿರೋದು ಜಾರ್ಜಿಯಾ (Georgia) ದಲ್ಲಿ. 24 ವರ್ಷದ ಮೇಗನ್ ಡೌಲಿಂಗ್ 5 ತಿಂಗಳ ಗರ್ಭಿಣಿ (Pregnant) ಯಾದಾಗ ಘಟನೆ ನಡೆದಿದೆ. ಆಕೆಯ ಮಾಜಿ ಬಾಯ್ ಫ್ರೆಂಡ್ ಹಾಗೂ ಆಕೆ ಸ್ನೇಹಿತರೊಬ್ಬರ ಪಾರ್ಟಿ (Party) ಯಲ್ಲಿ ಭೇಟಿ ಆಗಿದ್ದರಂತೆ. ನಂತ್ರ ಇಬ್ಬರ ಮಧ್ಯೆ ಸ್ನೇಹ, ಪ್ರೀತಿ ಚಿಗುರಿತ್ತು. ಇಬ್ಬರು ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು. ಈ ಮಧ್ಯೆ ಮೇಗನ್ ಗರ್ಭ ಧರಿಸಿದ್ದಾಳೆ. ಈ ವಿಷ್ಯವನ್ನು ತನ್ನ ಬಾಯ್ ಫ್ರೆಂಡ್ ಗೆ ಹೇಳಿದ್ದಾಳೆ. ಆರಂಭದಲ್ಲಿ ಈ ಬಗ್ಗೆ ಬಾಯ್ ಫ್ರೆಂಡ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಂತೆ. ಒಂದು ದಿನ, ಮಕ್ಕಳ ಜವಾಬ್ದಾರಿವಹಿಸಿಕೊಳ್ಳಲು ನನಗೆ ಸಾಧ್ಯವಿಲ್ಲ ಎಂದಿದ್ದಾನೆ. ಮೇಗನ್ ಗೆ 5 ತಿಂಗಳಾಗ್ತಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ಬಾಯ್ ಫ್ರೆಂಡ್ ಹೋದ್ಮೇಲೆ ಒಂಟಿಯಾದ ಮೇಗನ್ ಗೆ ಏನು ಮಾಡ್ಬೇಕು ಎಂಬುದು ತಿಳಿಯಲಿಲ್ಲ. ಆಪರೇಷನ್ ಮಾಡಿಕೊಳ್ಳುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಮಗುವನ್ನು ಹೆತ್ತೇ ಹೆರುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದ ಮೇಗನ್, ಆನ್ಲೈನ್ ಸಹಾಯ ಪಡೆದಿದ್ದಾಳೆ.

Latest Videos

undefined

'ನಿಮ್ಮ ಜೋಡಿ ಪರ್ಫೆಕ್ಟ್‌ ಅಲ್ಲ..' ಅನ್ನೋ ಟ್ರೋಲ್‌ಗೆ ಚಾಹಲ್‌ ಪತ್ನಿ ಧನಶ್ರೀ ವರ್ಮಾ ಉತ್ತರ ನೋಡಿದ್ರಾ?

ಮೇಗನ್, ಮೊದಲು ಇನ್ಸ್ಟಾಗ್ರಾಮ್ ನಲ್ಲಿ ತನ್ನ ಕಥೆಯನ್ನು ಹೇಳಿದ್ದಾಳೆ. ಮೇಗನ್ ಪೋಸ್ಟ್ ಗೆ ಅನೇಕರು ಬೆಂಬಲ ಸೂಚಿಸಿದ್ದರು. ಬಾಯ್ ಫ್ರೆಂಡ್ ವಿರುದ್ಧ ಹರಿಹಾಯ್ದಿದ್ದರು. ಈ ಮಧ್ಯೆ ಆನ್ಲೈನ್ ಡೇಟಿಂಗ್ (Online Dating) ಬಗ್ಗೆ ಮೇಗನ್ ಗೆ ಆಕೆ ಸ್ನೇಹಿತರು ಹೇಳಿದ್ದರಂತೆ. ಅಲ್ಲಿ ಸಂಗಾತಿ ಹುಡುಕಾಡುವಂತೆ ಸೂಚಿಸಿದ್ದರಂತೆ. ಅವರ ಮಾತಿನಂತೆ ಮೇಗನ್ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಮೊರೆ ಹೋಗಿದ್ದಾಳೆ. ಅಲ್ಲಿ ಮಕ್ಕಳ ಕಾಲಂನಲ್ಲಿ ನಾನು ಶೀಘ್ರವೇ ತಾಯಿ ಆಗ್ತಾ ಇದ್ದೇನೆ ಎಂದು ಬರೆದಿದ್ದಾಳೆ. ಆನ್ಲೈನ್ ಅಪ್ಲಿಕೇಷನ್ ಗೆ ಹೋದ್ಮೇಲೆ ಮೇಗನ್ ಗೆ ನಿಜ ಸ್ಥಿತಿ ತಿಳಿದಿದೆ. ಬರೀ ತಾನು ಮಾತ್ರವಲ್ಲ ತನ್ನಂತೆ ಅನೇಕ ಗರ್ಭಿಣಿಯರು ಇಂಥ ಸಮಸ್ಯೆ ಎದುರಿಸುತ್ತಿದ್ದಾರೆ, ಬಾಯ್ ಫ್ರೆಂಡ್ ಹುಡುಕಾಟದಲ್ಲಿದ್ದಾರೆ ಎಂಬುದು ಗೊತ್ತಾಗಿದೆ. 

ಮುಖಕ್ಕೆ ಹೊಡೆದ ಹಾಗೆ ಮಾತನಾಡೋ, ಸೂಕ್ಷ್ಮತೆ ಇಲ್ಲದ ಮಂದಿಯಿಂದ ದೂರವಿದ್ದರೆ ಒಳ್ಳೇದು!

ಆಕೆ ಡೇಟಿಂಗ್ ಆಪ್ ಬಳಸಿದ ಕೆಲವೇ ದಿನಗಳಲ್ಲಿ ಮೇಗನ್ ಳನ್ನು ಮಗುವಿನ ಜೊತೆ ಸ್ವೀಕರಿಸುವ ವ್ಯಕ್ತಿಯೊಬ್ಬ ಸಿಕ್ಕಿದ್ದಾನೆ. 43 ವರ್ಷದ ವ್ಯಕ್ತಿ, ಮಗುವಿನ ಜೊತೆ ಮೇಗನ್ ಜೊತೆಗಿರಲು ಒಪ್ಪಿಕೊಂಡಿದ್ದಾನೆ. ಆತನಿಗೂ ಮಗುವಿದೆ. ನನ್ನ ಮಗುವಿನ ಜೊತೆ ನಿನ್ನ ಮಗುವನ್ನು ನೋಡಿಕೊಳ್ತೇನೆಂದು ಆತ ಹೇಳಿದ್ದನಂತೆ. ಇದಕ್ಕೆ ಮೇಗನ್ ಕೂಡ ಒಪ್ಪಿಗೆ ನೀಡಿದ್ದಾಳೆ. ಸದ್ಯ ಮೇಗನ್ ಹಾಗೂ ಆಕೆ ಪತಿ ಇಬ್ಬರೂ ಒಟ್ಟಿಗೆ ಒಂದೇ ಮನೆಯಲ್ಲಿ ಮಕ್ಕಳ ಜೊತೆ ವಾಸವಾಗಿದ್ದಾರೆ. 
 

click me!