ನೂಡಲ್ಸ್‌ಗೆ ಕಾರ್ನ್ ಹಾಕಿದ್ದಕ್ಕೇ ಸಂಬಂಧ ಕಡಿದುಕೊಂಡ ಹುಡುಗ, ಇಂಥವನು ಪ್ರೀತಿಗೆ ಅರ್ಹನಾ?

By Suvarna News  |  First Published Jan 4, 2024, 3:51 PM IST

 ಪ್ರತಿಯೊಬ್ಬರ ಆಹಾರದ ಟೇಸ್ಟ್ ಬೇರೆ ಬೇರೆಯಾಗಿರುತ್ತದೆ. ಕೆಲವರು ಅಚ್ಚರಿಯಾಗುವಂತಹ ಕಾಂಬಿನೇಷನ್ ಆಹಾರ ತಿನ್ನುತ್ತಾರೆ. ಆದ್ರೆ ಇದೇ ವಿಚಿತ್ರ ಕಾಂಬಿನೇಷನ್ ಆಹಾರ ಸಂಬಂಧ ಹಾಳು ಮಾಡ್ತು ಅಂದ್ರೆ ನೀವು ನಂಬ್ಲೇಬೇಕು.


ಆಹಾರದ ವಿಷ್ಯ ಬಂದಾಗ ಅನೇಕರು ರಾಜಿ ಮಾಡಿಕೊಳ್ಳೋದಿಲ್ಲ. ಅವರಿಷ್ಟದ ಆಹಾರವನ್ನು ಮಾತ್ರ ಸೇವನೆ ಮಾಡ್ತಾರೆ. ಹೊಸ ಆಹಾರಗಳ ರುಚಿ ನೋಡುವ ಪ್ರಯತ್ನ ಮಾಡೋದಿಲ್ಲ. ಹೊಸ ಕಾಂಬಿನೇಷನ್ ಟ್ರೈ ಮಾಡೋದಿಲ್ಲ. ಅವರಿಗೆ ಇಷ್ಟವಿಲ್ಲ ಎಂಬ ಆಹಾರವನ್ನು ಪ್ಲೇಟ್ ಗೆ ಹಾಕಿದ್ರೆ ಸಂಪೂರ್ಣ ಊಟ ಬಿಡುವವರಿದ್ದಾರೆ. ಈಗಿನ ದಿನಗಳಲ್ಲಿ ಈ ಆಹಾರದ ಆಯ್ಕೆ ಕೂಡ ಸಂಬಂಧವನ್ನು ಹಾಳು ಮಾಡ್ತಿದೆ.

ಪತ್ನಿ ಅಡುಗೆ (Cooking) ಮಾಡಿಲ್ಲ ಎನ್ನುವ ಕಾರಣಕ್ಕೆ, ಇಷ್ಟದ ಅಡುಗೆ ಮಾಡ್ತಿಲ್ಲ ಎಂಬ ಆರೋಪ ಮಾಡಿ ವಿಚ್ಛೇದನ (Divorce) ಕ್ಕೆ ಮುಂದಾದ ಕೆಲ ಪ್ರಕರಣಗಳಿವೆ. ಈಗ ಇನ್ನೊಬ್ಬ ಹುಡುಗಿ ಆಕೆ ಬಾಯ್ ಫ್ರೆಂಡ್ ಬಿಟ್ಟು ಹೋಗಲು ಆಹಾರ (Food) ದ ಆಯ್ಕೆ ಕಾರಣ ಎಂದಿದ್ದಾಳೆ. ಹುಡುಗಿ, ಪ್ರೇಮಿಗೆ ಅವನಿಗಿಷ್ಟವಿಲ್ಲದ ಆಹಾರ ತಿನ್ನುವಂತೆ ಒತ್ತಾಯಿಸಿಲ್ಲ ಇಲ್ಲವೆ ಆತನಿಗೆ ಅಡುಗೆ ಮಾಡಿ ಬಡಿಸಿಲ್ಲ, ಬರೀ ತನ್ನಿಷ್ಟದ ಆಹಾರ ಯಾವುದು ಎಂಬುದನ್ನು ಹೇಳಿದ್ದಾಳೆ. ಆದ್ರೆ ಆಕೆಯ ಕಾಂಬಿನೇಷನ್ ಆತನಿಗೆ ಇಷ್ಟವಾಗಿಲ್ಲ. ಇದೊಂದು ಕ್ಷುಲ್ಲಕ ಕಾರಣಕ್ಕೆ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ ಹುಡುಗ.

Tap to resize

Latest Videos

undefined

ಬೇಕಾ ಬಿಟ್ಟಿ ಸ್ವೀಟ್ಸ್ ತಿಂದ್ರೆ ಆರೋಗ್ಯಕ್ಕೆ ನೂರೆಂಟ್ ಅಪಾಯ ಗ್ಯಾರಂಟಿ!

ರೆಡ್ಡಿಟ್ ನಲ್ಲಿ ಹುಡುಗಿ ಈ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಕಳೆದ ಎರಡು ತಿಂಗಳಿಂದ ಇಬ್ಬರು ಪರಸ್ಪರ ಪರಿಚಿತರಾಗಿದ್ದರು. ಇಬ್ಬರ ಮಧ್ಯೆ ನಿಧಾನವಾಗಿ ಪ್ರೀತಿ ಚಿಗುರಿತ್ತು. ಇಬ್ಬರೂ ಬಾಯ್ ಫ್ರೆಂಡ್ – ಗರ್ಲ್ ಫ್ರೆಂಡ್ ಆಗಿದ್ದು, ಮದುವೆಯಾಗುವ ಆಲೋಚನೆ ಮಾಡಿದ್ದರು. ಈ ಮಧ್ಯೆ ಹುಡುಗಿ ತನ್ನಿಷ್ಟದ ಆಹಾರದ ಬಗ್ಗೆ ಮಾತನಾಡಿದ್ದಾಳೆ. ಆಕೆ ಸ್ಪಾಗೆಟ್ಟಿ (ನೂಡಲ್ಸ್) ಗೆ ಕಾರ್ನ್ ಸೇರಿಸಿಕೊಂಡು ತಿನ್ನೋದಾಗಿ ಬಾಯ್ ಫ್ರೆಂಡ್ ಗೆ ಹೇಳಿದ್ದಾಳೆ. ನನಗೆ ಈ ಕಾಂಬಿನೇಷನ್ ಇಷ್ಟ ಎಂದಿದ್ದಾಳೆ. ನೀನೂ ಒಮ್ಮೆ ಈ ಕಾಂಬಿನೇಷನ್ ಟ್ರೈ ಮಾಡು ಎಂದು ಹುಡುಗಿ ತನ್ನ ಬಾಯ್ ಫ್ರೆಂಡ್ ಗೆ ಹೇಳಿದ್ದಾಳೆ.

ಈ ಅಸಂಬದ್ಧ ಕಾಂಬಿನೇಷನ್ ಕೇಳೋಕೆ ನನಗೆ ಕಷ್ಟವಾಗ್ತಿದೆ ಎಂದ ಬಾಯ್ ಫ್ರೆಂಡ್, ಯಾವುದೇ ಕಾರಣಕ್ಕೂ ನನಗೆ ಇದನ್ನು ಟೇಸ್ಟ್ ಮಾಡುವಂತೆ ಹೇಳ್ಬೇಡ ಎಂದಿದ್ದಾನೆ. ಐದು ನಿಮಿಷ ಬಿಟ್ಟು ಮತ್ತೆ ಇದೇ ವಿಷ್ಯ ಮಾತನಾಡಿದ ಹುಡುಗ, ಗೆಳತಿಯ ಈ ಕಾಂಬಿನೇಷನ್ ಸ್ವಲ್ಪವೂ ಇಷ್ಟವಾಗೋದಿಲ್ಲ. ಕಷ್ಟಪಟ್ಟು ನೀನೇನಾದ್ರೂ ಅಡುಗೆ ಮಾಡಿ, ಅದಕ್ಕೆ ಕಾರ್ನ್ ಸೇರಿಸಿದ್ರೆ ನನಗೆ ಇಷ್ಟವಾಗೋದಿಲ್ಲ. ನಾನು ವಾಂತಿ ಮಾಡ್ತೇನೆ ಎಂದಿದ್ದಾನೆ. ಇದನ್ನು ಕೇಳಿದ ಹುಡುಗಿ ಅಚ್ಚರಿಗೊಳಗಾಗಿದ್ದಾಳೆ.

ಮಾತು ಮುಂದುವರೆಸಿದ ಹುಡುಗಿ, ಟೆನ್ಷನ್ ಮಾಡ್ಕೊಳ್ಬೇಡ, ನಾನು ನೂಡಲ್ಸ್ ಮಾಡಿದ್ರೆ ನಿನ್ನ ಪ್ಲೇಟ್ ಗೆ ಕಾರ್ನ್ ಹಾಕೋದಿಲ್ಲ. ನನ್ನ ಪ್ಲೇಟ್ ಗೆ ಮಾತ್ರ ಹಾಕಿಕೊಳ್ತೇನೆ ಎಂದಿದ್ದಾಳೆ. ಆಕೆ ಇಷ್ಟು ಹೇಳಿದ್ರೂ ಹುಡುಗನಿಗೆ ಸಮಾಧಾನವಿರಲಿಲ್ಲ. ನಿನ್ನ ಆಹಾರದ ಕಾಂಬಿನೇಷನ್ ನನಗೆ ವಿಚಿತ್ರವೆನ್ನಿಸುತ್ತದೆ ಎಂದಿದ್ದಾನೆ. ಅಷ್ಟರಲ್ಲಿ ಹುಡುಗಿಗೆ ಕೆಲಸ ಬಂದಿದ್ದರಿಂದ ಆಮೇಲೆ ಫೋನ್ ಮಾಡೋದಾಗಿ ಹೇಳಿ ಹುಡುಗಿ ಫೋನ್ ಕಟ್ ಮಾಡಿದ್ದಾಳೆ.

ಗರ್ಲ್ ಫ್ರೆಂಡ್ ಕರೆಗೆ ಕಾಯುವಷ್ಟೂ ಹುಡುಗನಿಗೆ ಸಮಯವಿರಲಿಲ್ಲ. ಫೋನ್ ಕಟ್ ಆಗ್ತಿದ್ದಂತೆ ಮೆಸ್ಸೇಜ್ ಮಾಡಿ, ಸಂಬಂಧ ಕಡಿದುಕೊಳ್ತಿರೋದಾಗಿ ಹೇಳಿದ್ದಾನೆ. ಆಕೆಯ ಫುಡ್ ಕಾಂಬಿನೇಷನ್ ಇದಕ್ಕೆ ಕಾರಣ ಎಂದಿದ್ದಾರೆ. 

ಭಾರತೀಯ ಸ್ಟ್ರೀಟ್ ಫುಡ್ ಗೇಲಿ ಮಾಡಿದ ಆಫ್ರಿಕನ್! ವೈರಲ್ ಆಯ್ತು ವೀಡಿಯೋ

ರೆಡ್ಡಿಟ್ ನಲ್ಲಿ ಈ ವಿಷ್ಯವನ್ನು ಹುಡುಗಿ ಹಂಚಿಕೊಳ್ತಿದ್ದಂತೆ ಅನೇಕ ಬಳಕೆದಾರರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಬರಿ ಕಾರ್ನ್ ಗಾಗಿ ನಿನ್ನ ಸಂಬಂಧ ಕಡಿದುಕೊಂಡಿದ್ದಾನೆ ಅಂದ್ರೆ ಅವನಿಗೆ ನಿನ್ನ ಜೊತೆ ವಾಸವಾಗುವ ಅರ್ಹತೆ ಇಲ್ಲ ಎಂದಿದ್ದಾನೆ. ಇನ್ನೊಬ್ಬರು, ಫುಡ್ ಕಾಂಬಿನೇಷನ್ ಬರಿ ನೆಪ. ಅವನು ಮೊದಲೇ ನಿನ್ನನ್ನು ಬಿಡುವ ನಿರ್ಧಾರ ಮಾಡಿದ್ದ ಎಂದು ಕಮೆಂಟ್ ಮಾಡಿದ್ದಾರೆ. ಮದುವೆಗೆ ಮುನ್ನವೇ ಆತನ ಸ್ವಭಾವ ತಿಳಿದಿದ್ದು ಒಳ್ಳೆಯದಾಯ್ತು ಎಂದು ಇನ್ನೊಬ್ಬರು ಬರೆದಿದ್ದಾರೆ. 
 

click me!