ಮದುವೆಯಾಗಿ 46 ವರ್ಷ, 50 ವರ್ಷಗಳ ಪ್ರೀತಿ ಸಂಭ್ರಮಾಚರಣೆಯಲ್ಲಿರುವ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಕುರಿತು ಆ್ಯನ್ ಅನ್‌ಕಾಮನ್ ಲವ್ ಕೃತಿ ಬಿಡುಗಡೆಯಾಗಿದೆ. ಸುಧಾಮೂರ್ತಿ ನಾರಾಯಣಮೂರ್ತಿಯ ಪ್ರೇಮ ಕಥೆಯ ಸುಂದರ ಪಯಣ, ಹಲವು ರೋಚಕ ಮಾಹಿತಿಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಬೆಂಗಳೂರು(ಫೆ.13) ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಯಶಸ್ಸಿನ ಕತೆಗಳನ್ನು ಕೇಳಿದ್ದೇವೆ, ಇವರ ಮೌಲ್ಯಯುತ ಜೀವನ ಪಾಠಗಳನ್ನು ಕೇಳಿದ್ದೇವೆ. ಆದರೆ ಇವರ ಪ್ರೀತಿ ಪ್ರೇಮಗಳ ರೋಚಕ ಕತೆ ಕೇಳಿದ್ದು ವಿರಳ. 50 ವರ್ಷದ ಪ್ರೀತಿ, 46ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸುಧಾಮೂರ್ತಿ ನಾರಾಯಣಮೂರ್ತಿ ಅವರ ಪ್ರೇಮಕತೆಗಳ ಕೃತಿ ಬಿಡುಗಡೆಯಾಗಿದೆ. ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ ಹೊಸ ಕೃತಿಯಾಗಿರುವ ʼಆ್ಯನ್ ಅನ್‌ಕಾಮನ್ ಲವ್; ದಿ ಅರ್ಲಿ ಲೈಫ್ ಆಫ್ ಸುಧಾ ಆ್ಯ೦ಡ್ ನಾರಾಯಣಮೂರ್ತಿʼ (An Uncommon Love: The Early Life of Sudha and Narayana Murthy) ಪುಸ್ತಕ ಬಿಡುಗಡೆಯಾಗಿದೆ. ಸಪ್ನಾ ಬುಕ್ ಹೌಸ್ ಮತ್ತು ಜಗರ್‌ನಾಟ್ ಬುಕ್ಸ್ ಜಂಟಿ ಆಶ್ರಯದಲ್ಲಿ ಈ ಕೃತಿ ಬಿಡುಗಡೆಯಾಗಿದೆ. ಈ ಅಪ್ರತಿಮ ಹಾಗೂ ಜನಪ್ರಿಯ ಜೋಡಿಯ 46ನೇ ವಿವಾಹ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಬೆಂಗಳೂರಿನಲ್ಲಿ ಮಾಂತ್ರಿಕ ಸಮಾರಂಭ ಅನಾವರಣಗೊಂಡಿತು.
ಜಗರ್ನಾಟ್ ಬುಕ್ಸ್ ಪ್ರಕಟಿಸಿರುವ ʼಆ್ಯನ್ ಅನ್‌ಕಾಮನ್ ಲವ್... ಈ ಅನನ್ಯ ಕೃತಿಯು ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪ್ರೇಮ ಗಾಥೆಯನ್ನು ಹೃದಯಸ್ಪರ್ಶಿ ರೀತಿಯಲ್ಲಿ ಕಟ್ಟಿಕೊಟ್ಟಿರುವುದರ ಜೊತೆಗೆ ಓದುಗರಿಗೆ ಹಾಸ್ಯದ ಕಚಗುಳಿಯನ್ನೂ ನೀಡುತ್ತದೆ. ʼದಿ ಪ್ಯಾಲೇಸ್ ಆಫ್ ಇಲ್ಯೂಷನ್ಸ್ʼ ನಂತಹ ಅತಿ ಹೆಚ್ಚು ಮಾರಾಟವಾಗುವ ಪುಸ್ತಕಗಳ ಹಿಂದಿನ ಸೃಜನಶೀಲ ಶಕ್ತಿಯಾಗಿರುವ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ ಸಾಹಿತ್ಯ ಬರವಣಿಗೆಯ ವಿಶಿಷ್ಟ ಕೌಶಲ ಮತ್ತು ಮೂರ್ತಿ ದಂಪತಿ ಜೊತೆಗಿನ ಈ ಸಹಯೋಗವು ಓದುಗರನ್ನು ಮರುಳು ಮಾಡುವಂತಹ ಮತ್ತು ಅಧಿಕೃತ ವಿವರ ಹೊರತರುವ ನಿರೂಪಣೆಯನ್ನು ಹೆಣೆದಿದೆ.
ಟೀನೇಜ್ ಮಕ್ಕಳಿಗೆ ಹೀಗೆ ನೋಡಿಕೊಂಡರೆ ದಾರಿ ತಪ್ಪೋದಿಲ್ಲ ಅಂತಾರೆ ಸುಧಾಮೂರ್ತಿ!
ಮೂರ್ತಿ ದಂಪತಿಗಳ ಬದುಕಿನಲ್ಲಿನ ಮಹತ್ವದ ಘಟನೆಗಳು ಮತ್ತು ಮಾತುಕತೆಯ ಸೂಕ್ಷ್ಮ ವಿವರಗಳನ್ನು ನಿರೂಪಿಸುವಲ್ಲಿ ಚಿತ್ರಾ ಅವರು ಪರಿಣತಿ ಮೆರೆದಿದ್ದಾರೆ. ಹೆಚ್ಚಿನ ಮುತುವರ್ಜಿಯಿಂದ ಆಯ್ಕೆಮಾಡಿದ ಘಟನಾವಳಿಗಳ ಮೂಲಕ, ʼಆ್ಯನ್ ಅನ್‌ಕಾಮನ್ ಲವ್.... ಕೃತಿಯು ಓದುಗರನ್ನು ಒಂದು ವಿಶಿಷ್ಟ ಸಮಯ ಮತ್ತು ಸ್ಥಳಕ್ಕೆ ಕುಶಲತೆಯಿಂದ ಕರೆದುಕೊಂಡು ಹೋಗುತ್ತದೆ. ಪಾತ್ರಗಳ ಬೆಳವಣಿಗೆ ಮತ್ತು ಅವರ ಪ್ರೀತಿಪಾತ್ರರ ಬದುಕಿನ ಮಹತ್ವದ ಘಟನಾವಳಿಗಳಿಗೆ ಅರ್ಥಪೂರ್ಣ ಪಯಣದ ಅನುಭವ ನೀಡುತ್ತದೆ.
ತಮ್ಮ ನವಿರು ಹಾಸ್ಯ ಮತ್ತು ಹೃದಯಕ್ಕೆ ತಟ್ಟುವ ಕಥೆ ಹೇಳುವ ಶೈಲಿಯನ್ನು ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಈ ಕೃತಿಯಲ್ಲಿ ಹದವಾಗಿ ಮಿಶ್ರಣ ಮಾಡಿದ್ದಾರೆ. ʼಆ್ಯನ್ ಅನ್‌ಕಾಮನ್ ಲವ್.... ಬರೆಯುವುದು ಒಂದು ಮೋಡಿ ಮಾಡುವಂತಹ ಪಯಣವಾಗಿದೆ. ಮೂರ್ತಿ ದಂಪತಿ ತಮ್ಮ ಬದುಕಿನ ಕಥೆಯನ್ನು ಮಾತ್ರವಲ್ಲದೆ ತಮ್ಮ ತಮಾಷೆ ಪ್ರವೃತ್ತಿಯನ್ನೂ ನನ್ನೊಂದಿಗೆ ಹಂಚಿಕೊಂಡಿದ್ದಾರೆ. ದಂಪತಿಯ ಅನುಭವ ಕಥನದ ಕಾರಣಕ್ಕಾಗಿಯೇ ಈ ಪುಸ್ತಕವು ಪ್ರೀತಿ, ಬದುಕು ಮತ್ತು ಉತ್ತಮ ಹಾಸ್ಯದ ಸಂಭ್ರಮಾಚರಣೆಯಾಗಿದೆʼ ಎಂದು ಚಿತ್ರಾ ಅವರು ಹೇಳಿದ್ದಾರೆ.
ಅಳಿಯನೊಂದಿಗೆ ನಿಕಟ ಸಂಬಂಧವಿದೆ, ಅದು ಅಲ್ಲಿಯೇ ನಿಲ್ಲುತ್ತದೆ ಎಂದ ಇನ್ಫಿ ನಾರಾಯಣಮೂರ್ತಿ
ಈ ವಿಶೇಷ ದಿನ, ಮೂರ್ತಿ ದಂಪತಿಯ ಮಕ್ಕಳಾದ ಅಕ್ಷತಾ ಮತ್ತು ರೋಹನ್ ಸೇರಿದಂತೆ ಮೂರ್ತಿ ಕುಟುಂಬವನ್ನು ಸಪ್ನಾ ಬುಕ್ ಹೌಸ್ ಆತ್ಮೀಯವಾಗಿ ಆಹ್ವಾನಿಸಿದೆ. ಮೂರ್ತಿ ಕುಟುಂಬದ ಸದಸ್ಯರು ನಾಲ್ಕು ದಶಕಗಳ ಪ್ರೀತಿ ಮತ್ತು ಆತ್ಮೀಯ ಒಡನಾಟದ ಸಂಭ್ರಮಾಚರಿಸಲು ಒಟ್ಟುಗೂಡಿದ್ದರು. ಕಾಲ ಮತ್ತು ಕ್ರಮಾವಳಿಗಳನ್ನು ಮೀರಿದ ಪ್ರೇಮ ಕಥೆಗಳಲ್ಲಿ ನಂಬಿಕೆ ಹೊಂದಿರುವವರ ಪಾಲಿಗೆ ಈ ಸಮಾರಂಭವು ಹೃದಯ ಬೆಚ್ಚಗಾಗಿಸುವ ವಿಶಿಷ್ಟ ಅನುಭವ ನೀಡಿತು.