
ಫೆ.14 ಪ್ರೇಮಿಗಳ ದಿನಾಚರಣೆ. ಪ್ರೇಮಿಗಳು ತಮ್ಮೊಳಗಿನ ಪ್ರೀತಿ, ಪ್ರೇಮ ನಿವೇದನೆ ಮಾಡಲು ಈ ದಿನ ಆರಿಸಿಕೊಳ್ಳುತ್ತಾರೆ. ಪ್ರಣಯ ಹಕ್ಕಿಗಳು ಪಾರ್ಕ್, ಪ್ರವಾಸಿ ತಾಣ ಸೇರಿದಂತೆ ಹಲವೆಡೆ ಸುತ್ತಾಡುತ್ತಾರೆ. ಹೀಗಾಗಿ ಫೆಬ್ರವರಿ 14 ರಂದು ಬಹುತೇಕ ರೋಮ್ಯಾಂಟಿಕ್ ತಾಣಗಳು ಜೋಡಿಗಳಿಂದಲೇ ಭರ್ತಿಯಾಗಿರುತ್ತದೆ. ಪ್ರೀತಿಯ ಮನಸ್ಸುಗಳಿಗೆ ಇದು ಪ್ರೇಮಿಗಳ ದಿನವಾಗಿದ್ದರೆ, ಕೆಲಸದಲ್ಲಿ ನಿರತವಾಗಿರುವರಿಗೆ ಮತ್ತೊಂದು ದಿನವಷ್ಟೆ. ಹಾಗಂತ ಅವರಲ್ಲಿ ಈ ಭಾವನೆ ಇಲ್ಲ ಎಂದಲ್ಲ. ಸಮಯವೂ ಇಲ್ಲ, ಇದಕ್ಕಾಗಿ ಓಡಾಡುವ ವಯಸ್ಸು ಇದಲ್ಲ. ಹೀಗೆ ಗೋವುಗಳಿಗೆ ಮೇವು, ನೀರು, ಆಹಾರ ನೀಡುತ್ತಾ, ಗೋವುಗಳ ಆರೈಕೆ, ಹಾಲನ್ನು ಡೈರಿಗೆ ಹಾಕುತ್ತಾ ದಿನ ಕಳೆಯುತ್ತಿರುವ ವ್ಯಕ್ತಿ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ವಿಡಿಯೋ ವೈರಲ್ ಆಗಿದೆ.
ಹಾಲು ಕರೆಯುವ ಗೋವಿನ ಮೇಲೆ ಪ್ರೇಮಿಗಳ ದಿನಾಚರಣೆ ಆರ್ಟ್ ಬಿಡಿಸಲಾಗಿದೆ. ಪಿಂಕ್ ಬಣ್ಣದ ಡ್ರೆಸ್ ಹಾಕಿರುವ ಹುಡುಗಿ ಹಾಗೂ ಹೂವುಗಳ ಗೊಂಚಲು ಹಿಡಿದು ಹುಡುಗಿಯ ಹಿಂದೆ ಓಡೋಡಿ ಬರುತ್ತಿರುವ ಚಿತ್ರವನ್ನು ಗೋವಿನ ಮೇಲೆ ಬಿಡಿಸಲಾಗಿದೆ. ಗೋವು ನಡೆಯುತ್ತಿದ್ದಂತೆ ಹುಡುಗಿ ನಡೆದಂತೆ ಹಾಗೂ ಹಿಂದಿನಿಂದ ಪ್ರೇಮಿ ಹೂವುಗಳನ್ನು ಹಿಡಿದು ಬರುವಂತೆ ಭಾಸವಾಗುತ್ತಿದೆ.
ನಿಮ್ಮ ಪ್ರೇಮ ಸಂಬಂಧ ದೀರ್ಘವಾಗಿರಲು ಪ್ರೇಮಿಗಳ ದಿನದಂದು ಡ್ರೈ ಡೇಟಿಂಗ್ ಮಾಡಿ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇಳಿವಯಸ್ಸಿನ ವ್ಯಕ್ತಿಯೊಬ್ಬರು ಈ ಗೋವನ್ನು ಹಿಡಿದು ಮುಂದೆ ಸಾಗುತ್ತಿರುವ ಈ ವಿಡಿಯೋಗೆ ಬಾರಿ ಕಮೆಂಟ್ ವ್ಯಕ್ತವಾಗಿದೆ. ಪ್ರೇಮಿಗಳ ದಿನಾಚರಣೆಗ ನಿಜವಾದ ಅರ್ಥಕೊಟ್ಟಿದೆ ಈತ. ಬಾಲ್ಯದ ನೆನಪನ್ನೂ ಗೋವಿನ ಮೇಲೆ ಚಿತ್ರದ ಮೂಲಕ ಬಿಡಿಸಿ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಹ್ಯಾಪಿ ವ್ಯಾಲೆೈಟೈನ್ಸ್ ಡೇ ಎಂದು ಹಲವರು ಶುಭಕೋರಿದ್ದಾರೆ.
ಪ್ರೇಮಿಗಳ ದಿನಾಚರಣೆ ದಿನದ ಸಂಭ್ರಮವನ್ನು ಈ ಗೋವಿಗೆ ಹಗ್ ನೀಡುವ ಮೂಲಕ ಆಚರಿಸಿ ನಿಮ್ಮ ಪ್ರೀತಿ ಯಶಸ್ವಿಯಾಗಲಿದೆ ಎಂದು ಕೆಲವರು ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರೇಮಿಗಳ ಪ್ರೇಮ ನಿವೇದನೆ ಚಿತ್ರವಾಗಿರುವ ಕಾರಣ ಇದು ಪ್ರೇಮಿಗಳ ದಿನಾಚರಣೆಗೆ ಬಿಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಡಿಯೋ ಮಾತ್ರ ವೈರಲ್ ಆಗಿದೆ. ಗೋಶಾಲೆ ವ್ಯಾಲೆಂಟೈನ್ಸ್ ಡೇ ಎಂದು ಬರೆದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
Valentines Day: ಬೆಂಗಳೂರಲ್ಲಿ ಪ್ರೇಮಿಗಳು ವಿಸಿಟ್ ಮಾಡಬಹುದಾದ ರೋಮ್ಯಾಂಟಿಕ್ ರೆಸ್ಟೋರೆಂಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.