ಪ್ರೀತಿ ಹೆಸರಿನಲ್ಲಿ ನಾಲ್ವರು ಮಹಿಳೆಯರಿಗೆ ಮೂರು ಕೋಟಿ ವಂಚಿಸಿದ ಭೂಪ!

By Suvarna News  |  First Published Feb 14, 2024, 5:55 PM IST

ಯಾವುದೇ ವ್ಯಕ್ತಿಯನ್ನು ಕಣ್ಮುಚ್ಚಿ ನಂಬೋದು ಅಪಾಯಕಾರಿ. ಈಗಿನ ದಿನಗಳಲ್ಲಿ ಪ್ರೀತಿ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಿದೆ. ಕೈನಲ್ಲಿ ಹಣವಿದೆ, ಸಮಾಜದಲ್ಲಿ ಹೆಸರಿದೆ ಅಂದ್ರೆ ಅವರ ಹಿಂದೆ ಬರುವವರು ಪ್ರೀತಿಗಿಂತ ಮೋಸದ ಆಲೋಚನೆ ಮಾಡಿರ್ತಾರೆ. 


ವಿಶ್ವದಲ್ಲಿ ಮೋಸ ಮಾಡೋರ ಸಂಖ್ಯೆ ಸಾಕಷ್ಟಿದೆ. ಪ್ರೀತಿ – ಪ್ರೇಮದ ಹೆಸರಿನಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಎರಡು, ಮೂರು ಪ್ರೇಮಿಗಳ ಜೊತೆ ಪ್ರೀತಿಯ ಆಟ ಆಡ್ತಾ ಮೋಸ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇನ್ನು ಕೆಲವರು ಪ್ರೀತಿ ಜೊತೆ ಹಣಕಾಸಿನ ವಿಷ್ಯದಲ್ಲೂ ಪ್ರೇಮಿಗಳಿಗೆ ದ್ರೋಹ ಬಗೆಯುತ್ತಾರೆ. ನಾನಾ ಕಾರಣ ಹೇಳಿ ಪ್ರೇಮಿಗಳಿಂದ ಹಣ ಪಡೆಯುವ ಜನರು ನಂತ್ರ ಅವರನ್ನು ದೂರ ತಳ್ಳುತ್ತಾರೆ. ಪ್ರೀತಿಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಜನರು ನಮ್ಮಲ್ಲಿದ್ದಾರೆ. ಈ ವ್ಯಕ್ತಿ ಕೂಡ ಅದೇ ದಾರಿಯಲ್ಲಿದ್ದ. ಒಂದೇ ಬಾರಿ ನಾಲ್ಕು ಹುಡುಗಿಯರನ್ನು ಯಾಮಾರಿಸಿ, ಹಣ ಸಂಪಾದನೆ ಮಾಡಿದ್ದ. ಆತನ ಐಷಾರಾಮಿ ಜೀವನಕ್ಕೆ ಮರುಳಾದ ಶ್ರೀಮಂತ ಮಹಿಳೆಯರು, ಕೈ ಬಿಚ್ಚಿ ಹಣ ನೀಡ್ತಿದ್ದರು. ಕೊನೆಗೂ ಈತನ ಬಣ್ಣ ಬಯಲಾಗಿದೆ. ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ಆತನ ಹೆಸರು ಸಿಯಾರನ್ ಮೆಕ್‌ನಮಾರಾ. ವಯಸ್ಸು 37 ವರ್ಷ. ಸಿಯಾರನ್ ಗ್ರಿಫಿನ್, ಕ್ರಿಶ್ಚಿಯನ್ ಮೆಕ್‌ನಮಾರಾ ಮತ್ತು ಮೈಲ್ಸ್ ಮೆಕ್‌ನಮರಾ ಎಂಬ ನಾನಾ ಹೆಸರುಗಳನ್ನು ಇಟ್ಟುಕೊಂಡು ಈತ ಮಹಿಳೆಯರಿಗೆ ಮೋಸ (Cheating) ಮಾಡಿದ್ದಾನೆ. ಬ್ರಿಟನ್‌ ನಿವಾಸಿಯಾದ ಈತ, ಐಷಾರಾಮಿ (luxury) ಜೀವನ ನಡೆಸುತ್ತಿದ್ದ. ಪ್ರಥಮ ದರ್ಜೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದನಲ್ಲದೆ, ಸ್ಟಾರ್ (Star) ಹೊಟೇಲ್ ಗಳಲ್ಲಿ ತಂಗುತ್ತಿದ್ದ. ನಾಲ್ಕು ಮಹಿಳೆಯರಿಗೆ ಒಟ್ಟೂ 300,000 ಪೌಂಡ್ ಅಂದರೆ ಸುಮಾರು 3.14 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಕೊವೆಂಟ್ರಿ ನಿವಾಸಿ ಸಿಯಾರನ್, ಮಹಿಳೆಯರನ್ನು ನಾನಾ ಕಡೆ ಭೇಟಿ ಮಾಡ್ತಿದ್ದ. ಆನ್ಲೈನ್ ನಿಂದ ಹಿಡಿದು ಸ್ಟಾರ್ ಹೊಟೇಲ್ ನಲ್ಲಿ ಕೂಡ ಅವರ ಜೊತೆ ಮಾತುಕತೆ ನಡೆಸುತ್ತಿದ್ದ. 

Tap to resize

Latest Videos

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಬ್ರಿಟನ್ ನಲ್ಲಿ ತಾನು ಹೈ ಪ್ರೊಫೈಲ್ ಬ್ಯುಸಿನೆಸ್ ಮೆನ್ ಎಂದೇ ಮಹಿಳೆಯರಿಗೆ ಪರಿಚಯ ಮಾಡಿಕೊಂಡಿದ್ದ. ಲಂಡನ್ ಮತ್ತು ಚೆಷೈರ್‌ನಲ್ಲಿರುವ ಮಹಲುಗಳಲ್ಲಿರುವ ಫೋಟೋಗಳನ್ನು ಈತ ಮಹಿಳೆಯರಿಗೆ ತೋರಿಸುತ್ತಿದ್ದ. ಮಹಿಳೆಯರಿಗೆ ದುಬಾರಿ ಗಿಫ್ಟ್ ನೀಡೋದಲ್ಲದೆ ಅವರನ್ನು ದುಬಾರಿ ಹೊಟೇಲ್ ಗಳಿಗೆ ಪಾರ್ಟಿಗೆಂದು ಕರೆದುಕೊಂಡು ಹೋಗ್ತಿದ್ದ.

Valentines Day: ಬೆಂಗಳೂರಲ್ಲಿ ಪ್ರೇಮಿಗಳು ವಿಸಿಟ್ ಮಾಡಬಹುದಾದ ರೋಮ್ಯಾಂಟಿಕ್ ರೆಸ್ಟೋರೆಂಟ್‌

ಮಹಿಳೆಯರು ಸಂಪೂರ್ಣ ತನ್ನನ್ನು ನಂಬುವಂತೆ ಮಾಡುವುದು ಅವನ ಮೊದಲ ಉದ್ದೇಶವಾಗಿತ್ತು. ನಂತ್ರ ಬ್ಯುಸಿನೆಸ್ ವಿಷ್ಯವನ್ನು ಶುರು ಮಾಡುತ್ತಿದ್ದ. ಬ್ಯುಸಿನೆಸ್ ನಲ್ಲಿ ಸ್ವಲ್ಪ ನಷ್ಟವಾಗಿದೆ, ಹಣದ ಅವಶ್ಯಕತೆ ಇದೆ ಎಂದು ಮಹಿಳೆಯರ ಮುಂದೆ ಹೇಳುತ್ತಿದ್ದ. ಈತನ ಟಾರ್ಗೆಟ್ ಶ್ರೀಮಂತ ಮಹಿಳೆಯರೇ ಆಗಿದ್ದ ಕಾರಣ, ಅವರಿಗೆ ಹಣದ ಕೊರತೆ ಇಲ್ಲ ಎಂಬುದು ಮೊದಲೇ ಸ್ಪಷ್ಟವಾಗಿರುತ್ತಿತ್ತು. ಈತನ ಫೋಟೋ, ಉಡುಗೊರೆ, ಐಷಾರಾಮಿ ಬದುಕನ್ನು ನೋಡಿದ ಮಹಿಳೆಯರು ಕೂಡ, ಈತ ಒಳ್ಳೆ ಬ್ಯುಸಿನೆಸ್ ಮೆನ್ ಎಂದು ನಂಬುತ್ತಿದ್ದರು. ಹಣ ವಾಪಸ್ ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಆತ ಕೇಳಿದಾಗಲೆಲ್ಲ ಹಣ ನೀಡುತ್ತಿದ್ದರು.

ಒಬ್ಬಳು ನೀಡಿದ ಹಣದಲ್ಲಿ ಇನ್ನೊಬ್ಬಳಿಗೆ ಉಡುಗೊರೆ ನೀಡ್ತಿದ್ದ ಈತ ಅದೇ ಹಣದಲ್ಲಿ ಹೊಟೇಲ್ ನಲ್ಲಿ ವಾಸ ಮಾಡ್ತಿದ್ದ. ಸೆಪ್ಟೆಂಬರ್ 1, 2022 ರಿಂದ ಕಳೆದ ವರ್ಷ ಸೆಪ್ಟೆಂಬರ್ 25 ರ ನಡುವೆ, ಮೆಕ್‌ನಮರಾ,  ಚೆಷೈರ್, ವಾರ್ವಿಕ್‌ಷೈರ್ ಮತ್ತು ಹರ್ಟ್‌ಫೋರ್ಡ್‌ಶೈರ್‌ನಲ್ಲಿ ನಾಲ್ಕು ಮಹಿಳೆಯರಿಗೆ 3.14 ಕೋಟಿ ರೂಪಾಯಿ ವಂಚಿಸಿದ್ದಾನೆ. ಆದ್ರೆ ಇದ್ರಲ್ಲಿ ಒಬ್ಬ ಮಹಿಳೆಗೆ ಅನುಮಾನ ಬಂದು ಪೊಲೀಸರಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಮೆಕ್ ನಮರಾ ಬಣ್ಣ ಬಹಿರಂಗವಾಗಿದೆ. ಆತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, 20.47 ಲಕ್ಷ ಮೌಲ್ಯದ ಹೊಚ್ಚ ಹೊಸ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 1.99 ಲಕ್ಷ ಮೌಲ್ಯದ ಬರ್ಬೆರಿ ಕೋಟ್, 42 ಸಾವಿರ ರೂಪಾಯಿಯ ಬರ್ಬೆರಿ ಸ್ಕಾರ್ಫ್, ದುಬಾರಿ ಶೂ ಸೇರಿದೆ. ಮೆಕ್ ನಮರಾ ಒಬ್ಬ ಮೋಸಗಾರ. ಆತನ ಸತ್ಯ ಹಾಗೂ ಸುಳ್ಳಿನ ಮಧ್ಯೆ ವ್ಯತ್ಯಾಸ ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. 

click me!