ಬಿಜೆಪಿ ನಾಯಕ ರೇಣುಕಾಚಾರ್ಯ ಪುತ್ರನ ಮದುವೆಗೆ ಸಿದ್ದರಾಮಯ್ಯಗೆ ಆಹ್ವಾನ, ಹೊನ್ನಾಳಿ ಸೊಸೆ ಯಾರು?

Published : Oct 30, 2026, 01:50 PM IST
Renukacharya Son Wedding Siddaramaiah Gets Invitation

ಸಾರಾಂಶ

ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಪುತ್ರ ಚಂದನ್ ಮದುವೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ. ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಹೊನ್ನಾಳಿ ಸೊಸೆ ಯಾರು?

ಬೆಂಗಳೂರು (ಅ.30) ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಪುತ್ರ ಚಂದನ್ ಮದುವೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ. ಡಿಸೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದೆ. ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಇದೀಗ ಕಾಂಗ್ರೆಸ್ ನಾಯಕರು, ಸರ್ಕಾರದ ಸಚಿವರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲಾಗುತ್ತಿದೆ. ಬಿಜೆಪಿ ಹಿರಿಯ ನಾಯಕರನ್ನು ಮದುವೆಗೆ ಆಹ್ವಾನಿಸಲಾಗಿದೆ.

ಮಾಣಿಕ್ಯ ವಜ್ರ ಅರಮನೆ ಮೈದಾನದಲ್ಲಿ ಮದುವೆ

ಮಾರ್ಚ್ 28ರಂದು ಅರಮನೆ ಮೈದಾನದಲ್ಲಿ ಚಂದನ್ ನಿಶ್ಚಾರ್ಥ ನೆರವೇರಿತ್ತು. ಡಿಸೆಂಬರ್ 10 ರಂದು ಮಾಣಿಕ್ಯ ಚಾಮರಾಜ ವಜ್ರ ಅರಮನೆ ಮೈದಾನದಲ್ಲಿ ರೇಣುಕಾಚಾರ್ಯ ಪುತ್ರನ ವಿವಾಹ ಸಮಾರಂಭ ನಡೆಯಲಿದೆ. ಈ ಕುರಿತು ಎಂಪಿ ರೇಣುಕಾಚಾರ್ಯ ಹಾಗೂ ಕುಟುಂಬಸ್ಥರು ಭರ್ಜರಿ ತಯಾರಿಯಲ್ಲಿದ್ದಾರೆ. ನಾಯಕ ರೇಣುಕಾಚಾರ್ಯ ತಮ್ಮ ಮಗನ ಮದುವೆ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿಶ್ಚಿತಾರ್ಥಕ್ಕೆ ಆಗಮಿಸಿತ್ತು ಗಣ್ಯರ ದಂಡು

ಮಾರ್ಚ್ 28, 2026ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಚಂದನ್ ರೇಣುಕಾಚಾರ್ಯ ನಿಶ್ಚಿತಾರ್ಥ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ನಾಯಕರು ಆಗಮಿಸಿ ಶುಭಕೋರಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು.

ಎಂಪಿ ರೇಣುಕಾಚಾರ್ಯ ಪುತ್ರ ಚಂದನ್ ತಂದೆಯ ರಾಜಕೀಯದಲ್ಲಿ, ಸಾರ್ವಜನಿಕ ಜೀವನದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಹೊನ್ನಾಳಿಯಲ್ಲಿ ಜನಪ್ರಿಯರಾಗಿದ್ದಾರೆ. ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಚಂದನ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ, ಸಕ್ರಿಯವಾಗಿಲ್ಲ. ಆದರೆ 2022ರಲ್ಲಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ನಿಗೂಢ ಸಾವಿನ ಸಂದರ್ಭದಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದರು. ಸಂಬಂಧಿಯ ನಿಗೂಢ ಸಾವಿನ ತನಿಖೆಗೆ ಆಗ್ರಹಿಸಬೇಕು ಎಂದು ಭಾವುಕರಾಗಿದ್ದರು.

ಎಂಪಿ ರೇಣುಕಾಚಾರ್ಯ ರಾಜಕೀಯ

ಎಂಪಿ ರೇಣುಕಾಚಾರ್ಯ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡ ನಾಯಕ. ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಂಪಿ ರೇಣುಕಾಚಾರ್ಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಡಿಜಿ ಶಾಂತನಗೌಡ ಬರೋಬ್ಬರಿ 17 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಹೊನ್ನಾಳಿ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಎಂಪಿ ರೇಣುಕಾಚಾರ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಡನ ಆಯಸ್ಸು ವೃದ್ಧಿಗೆ ರಜಪೂತ ವಂಶಸ್ಥೆ Amruthadhaare ಛಾಯಾ ಸಿಂಗ್​ ಕರ್ವಾ ಚೌತ್​ ಆಚರಣೆ
ಕರವಾ ಚೌತ್ ದಿನ ಬಾಯ್‌ ಫ್ರೆಂಡ್ ಇಲ್ಲ ಅಂತ ಸಾಬೀತುಪಡಿಸೋಕೆ ಇಂಥ ಕೆಲ್ಸ ಮಾಡಿದ ಯುವತಿ ! ಅನುಮಾನ ಹೆಚ್ಚಾಗಲು ಕಾರಣವಾಯ್ತು ಸಮಯ