ಗಂಡನ ಆಯಸ್ಸು ವೃದ್ಧಿಗೆ ರಜಪೂತ ವಂಶಸ್ಥೆ Amruthadhaare ಛಾಯಾ ಸಿಂಗ್​ ಕರ್ವಾ ಚೌತ್​ ಆಚರಣೆ

Published : Oct 30, 2026, 01:31 PM IST
Chaya Singh and Krishna

ಸಾರಾಂಶ

ಅಮೃತಧಾರೆ ಸೀರಿಯಲ್ ನಟಿ ಛಾಯಾ ಸಿಂಗ್ ತಮ್ಮ ಪತಿ ಕೃಷ್ಣ ಅವರ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ವ್ರತವನ್ನು ಆಚರಿಸಿದ್ದಾರೆ. ರಜಪೂತ ಮೂಲದವರಾದ ಛಾಯಾ ಸಿಂಗ್, ತಮಿಳು ನಟ ಕೃಷ್ಣ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಇಬ್ಬರೂ ಬೇರೆ ಬೇರೆ ನಗರಗಳಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ವರ್ಷದಲ್ಲಿ ಕೇವಲ ಕೆಲವೇ ದಿನಗಳು ಮಾತ್ರ ಒಟ್ಟಿಗಿರಲು ಸಾಧ್ಯವಾಗುತ್ತಿದೆ ಎಂದು ನಟಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ.

ಬೆಂಗಳೂರು: ಗಂಡನ ಆಯಸ್ಸು ವೃದ್ಧಿಗೆ ಉತ್ತರ ಭಾರತದಲ್ಲಿ ಅದರಲ್ಲಿಯೂ ಹೆಚ್ಚಾಗಿ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಚರಿಸುವ ಹಬ್ಬ ಕರ್ವಾ ಚೌತ್ (Karwa Chauth). ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ (ನಾಲ್ಕನೇ ದಿನ)ದಿಂದು ಇದನ್ನು ಆಚರಿಸಲಾಗುತ್ತದೆ. ವಿವಾಹಿತೆಯು ತಮ್ಮ ಪತಿಯ ಉತ್ತಮ ಆರೋಗ್ಯ, ಆಯಸ್ಸು ಮತ್ತು ಯೋಗಕ್ಷೇಮಕ್ಕಾಗಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ನೀರು ಸಹ ಸೇವಿಸದೆ ಕಠಿಣ ಉಪವಾಸ ಮಾಡಿ ಇದನ್ನು ಆಚರಿಸುವುದು ಇದೆ. ಸಂಜೆ ಸಮಯದಲ್ಲಿ ಶಿವ, ಪಾರ್ವತಿ ಮತ್ತು ಗಣಪತಿ ಪರಿವಾರವನ್ನು ಪೂಜಿಸಿ, ಕರ್ವಾ ಚೌತ್ ಕಥೆ ಕೇಳಲಾಗುತ್ತದೆ. ರಾತ್ರಿ ಚಂದ್ರೋದಯದ ನಂತರ ಚಂದ್ರನಿಗೆ ಅರ್ಘ್ಯ ನೀಡಿ, ಪತಿಯ ಮುಖ ನೋಡಿ ವ್ರತವನ್ನು ಮುಕ್ತಾಯಗೊಳಿಸಲಾಗುತ್ತದೆ.

ಇದನ್ನು ನಿನ್ನೆ ಆಚರಿಸಲಾಗಿತ್ತು. ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಮಂದಿ ಇದನ್ನು ಆಚರಿಸಿದರು. ಅದೇ ರೀತಿ, ಅಮೃತಧಾರೆ ಸೀರಿಯಲ್​ (Amruthadhaare Serial) ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರೋ ನಟಿ ಛಾಯಾ ಸಿಂಗ್​ ಅವರೂ, ತಮ್ಮ ಪತಿ ಕೃಷ್ಣ ಅವರ ಆಯಸ್ಸು ವೃದ್ಧಿಗೆ ಇದನ್ನು ಆಚರಿಸಿದ್ದು, ಅದರ ವಿಡಿಯೋ ಅನ್ನು ಪತಿ ಕೃಷ್ಣ ಅವರು ಶೇರ್​ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನಟಿ ಛಾಯಾ ಸಿಂಗ್​ ಅವರು ರಜಪೂತರ ಕುಟುಂಬಸ್ಥರು ಎನ್ನಲಾಗಿದೆ. ಇದೇ ಕಾರಣಕ್ಕೆ, ಅವರು ಈ ಹಬ್ಬವನ್ನು ಆಚರಿಸಿದ್ದಾರೆ.

ನಟಿಯ ಮದುವೆಯ ಕುರಿತು...

ನಟಿಯ ಮದುವೆಯ ಕುರಿತು ಹೇಳುವುದಾದರೆ, ಛಾಯಾ ಸಿಂಗ್​ ಮತ್ತು ಕೃಷ್ಣ ಅವರ ದಾಂಪತ್ಯ ಜೀವನಕ್ಕೆ ಈಗ 14 ವರ್ಷ. ಕೃಷ್ಣ ಅವರು ಛಾಯಾ ಅವರಿಗೆ ಪರಿಚಯವಾದದ್ದು ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ. ಕೃಷ್ಣ ಅವರೂ ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ ನಟಿಸಿದ್ದಾರೆ. ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು.

ಮದುವೆ ಸ್ಟೋರಿ

ಅಷ್ಟಕ್ಕೂ ಇವರ ಮದುವೆಯ ಸ್ಟೋರಿಯೂ ಚೆನ್ನಾಗಿದೆ. ಕೃಷ್ಣ ಮತ್ತು ನಮ್ಮಮ್ಮ ಮಾತನಾಡಿಕೊಳ್ತಿದ್ರು. ನನಗೆ ಗೊತ್ತೇ ಇರಲಿಲ್ಲ. ಅದೊಂದು ದಿನ ಕೃಷ್ಣ ಅವರೇ ನನ್ನ ಅಮ್ಮನ ಬಳಿ ಬಂದು ನಿಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ, ಮದ್ವೆಯಾಗ್ತೇನೆ ಎಂದ್ರು. ಅಮ್ಮ ಓಕೆ ಅಂದುಬಿಟ್ರು. ನನಗೆ ಏನು ಆಗ್ತಿದೆ ಎಂದೇ ನಿಜಕ್ಕೂ ಗೊತ್ತಿರಲಿಲ್ಲ. ಹೀಗೆ ನಮಗೆ ಮದ್ವೆಯಾಯ್ತು. ಆದರೆ ಕೃಷ್ಣ ಇರುವುದು ಚೆನ್ನೈನಲ್ಲಿ, ಛಾಯಾ ಇರುವುದು ಬೆಂಗಳೂರಿನಲ್ಲಿ. ಇಬ್ಬರೂ ಶೂಟಿಂಗ್​ನಲ್ಲಿ ಬಿಜಿ. ಇದೇ ಕಾರಣಕ್ಕೆ ವರ್ಷದಲ್ಲಿ 10 ದಿನ ಕೂಡ ಒಟ್ಟಿಗೇ ಇರುವುದು ಕಷ್ಟವಾಗುತ್ತಿದೆ ಎಂದು ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದರು ಛಾಯಾ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರವಾ ಚೌತ್ ದಿನ ಬಾಯ್‌ ಫ್ರೆಂಡ್ ಇಲ್ಲ ಅಂತ ಸಾಬೀತುಪಡಿಸೋಕೆ ಇಂಥ ಕೆಲ್ಸ ಮಾಡಿದ ಯುವತಿ ! ಅನುಮಾನ ಹೆಚ್ಚಾಗಲು ಕಾರಣವಾಯ್ತು ಸಮಯ
ಅಮೆರಿಕಾದಲ್ಲಿ ಕರವಾಚೌತ್‌ ಆಚರಿಸಿಕೊಂಡ ಪ್ರಿಯಾಂಕಾ ಚೋಪ್ರಾ, ಪತಿ ನಿಕ್‌ ಜೋನಸ್‌ ನೀಡಿದ ಸರ್ಪ್ರೈಸ್‌ ಗೆ ಮನಸೋತ ನಟಿ