Bigg Boss ಮನೆಯಲ್ಲೇ ಸೌಂದರ್ಯ ಮದ್ವೆ ಫಿಕ್ಸ್​: ಯಾರಿಗೆ ಒಲಿದ್ರು ಶೆಟ್ಟಿ ಡಾನ್​? ರಕ್ಷಿತಾ ಎದುರು ಮಾತುಕತೆ

Published : Oct 30, 2026, 12:18 PM IST
Bigg Boss 13

ಸಾರಾಂಶ

ಬಿಗ್‌ಬಾಸ್ 13ನೇ ಸೀಸನ್‌ನಲ್ಲಿ ರಕ್ಷಿತಾ ಶೆಟ್ಟಿ ನೀಡಿದ ಮದುವೆ ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿ ಅವರ ಮನಸ್ಸನ್ನು ಗೆಲ್ಲಲು ಗಗನ್ ಮತ್ತು ಯಶಸ್‌ ನಡುವೆ ತೀವ್ರ ಪೈಪೋಟಿ ನಡೆಯಿತು. ರಕ್ಷಿತಾ ಶೆಟ್ಟಿ ಮಿಡ್ಲ್‌ಮನ್ ಆಗಿ ಅಂಕಗಳನ್ನು ನೀಡಿದ ಬಳಿಕ, ಸೌಂದರ್ಯ ಅವರು ತಮಗೆ ಹತ್ತಿರವಾದ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡು ಮದುವೆ ಟಾಸ್ಕ್‌ಗೆ ಸೈ ಎಂದಿದ್ದಾರೆ. ಯಾರವರು?

ಬೆಂಗಳೂರು: ಬಿಗ್​ಬಾಸ್​​ 13 (Bigg Boss 13) ಈಗ ಏಳನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಮನೆಯೊಳಕ್ಕೆ ರಕ್ಷಿತಾ ಶೆಟ್ಟಿ ಎಂಟ್ರಿಕೊಡುತ್ತಲೇ ಸಪ್ಪೆಯಾಗಿದ್ದ ಬಿಗ್​ಬಾಸ್​​ 13ನೇ ಸೀಸನ್​ ಚಿಗುರಿಕೊಂಡಿದೆ. ಇದಾಗಲೇ ಮನೆಯೊಳಕ್ಕೆ ಮದುವೆಯ ಟಾಸ್ಕ್​ಕೂಡ ನೀಡಲಾಗಿತ್ತು. ಒಂದು ಕಡೆ ಗಗನ್​ ಚಿನ್ನಪ್ಪ ಮತ್ತು ಇನ್ನೊಂದು ಕಡೆ ಯಶಸ್​ ಸೌಂದರ್ಯ ಶೆಟ್ಟಿ ಅವರನ್ನು ಒಲಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಹೆಣ್ಣುಮಕ್ಕಳ ಮನಸ್ಸನ್ನು ಹೇಗೆ ಗೆಲ್ಲಬೇಕು ಎಂದು ರಕ್ಷಿತಾ ಶೆಟ್ಟಿ ಕೂಡ ಟಿಪ್ಸ್​ ಕೊಟ್ಟಿದ್ದರು. ಇವೆಲ್ಲಾ ಆದ ಮೇಲೆ ಸೌಂದರ್ಯ ಅವರ ಮನಸ್ಸನ್ನು ಗೆಲ್ಲುವುದು ಟಾಸ್ಕ್​ ಆಗಿತ್ತು. ಇದಕ್ಕಾಗಿ ಗಗನ್​ ಮತ್ತು ಯಶಸ್​ ನಡುವೆ ಸಾಕಷ್ಟು ಜಟಾಪಟಿಯೂ ನಡೆದಿತ್ತು. ಒಂದು ಹಂತದಲ್ಲಿ ಇಬ್ಬರೂ ಸೀರಿಯಸ್​ ಎನ್ನುವಷ್ಟರ ಮಟ್ಟಿಗೆ ಜಗಳ ಮಾಡಿಕೊಂಡಿದ್ದರು. ಆದರೆ ಕೊನೆಗೆ ಇಬ್ಬರೂ ಒಂದಾಗಿದ್ದರು.

ಯಾರಿಗೆ ಒಲಿದ್ರು ಸೌಂದರ್ಯ

ಇದರ ನಡುವೆಯೇ, ಒಬ್ಬರು ಶೆಟ್ಟಿ ಡಾನ್​ ಎಂದೇ ಫೇಮಸ್​ ಆಗಿರೋ ಸೌಂದರ್ಯ ಶೆಟ್ಟಿ (Bigg Boss Soundarya Shetty) ಮನಸ್ಸನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಸೌಂದರ್ಯ ಒಲಿದಿದ್ದಾರೆ. ಇದರಿಂದಾಗಿ ಬಿಗ್​ಬಾಸ್​ ಮನೆಯೊಳಕ್ಕೆ ಮದುವೆ ಮಾತುಕತೆ ನಡೆದಿದೆ. ಸೌಂದರ್ಯ ಮದ್ವೆಗೆ ಸೈ ಎಂದಿದ್ದಾರೆ. ಅಷ್ಟಕ್ಕೂ ಇದೇನು ಸೀರಿಯಲ್​ ಮದುವೆಯಲ್ಲ. ಕೇವಲ ಟಾಸ್ಕ್​ ಅಷ್ಟೇ ಅನ್ನಿ.

ಆದರೂ, ಇದು ಸೀರಿಯಲ್​ ಎನ್ನುವಷ್ಟರ ಮಟ್ಟಿಗೆ ಹೋಗಿತ್ತು. ಅಷ್ಟಕ್ಕೂ, ಯಶಸ್​ ಮತ್ತು ಸೌಂದರ್ಯ ಬಾಂಡಿಂಗ್​ ಮೊದಲಿನಿಂದಲೂ ಚೆನ್ನಾಗಿಯೇ ಇದೆ. ಗಗನ್​ ಅವರ ಜೊತೆಯೂ ಸೌಂದರ್ಯ ಚೆನ್ನಾಗಿದ್ದಾರೆ. ಆದರೆ ಈ ಹಿಂದೆ ಸೌಂದರ್ಯ ಶೆಟ್ಟಿ ಅವರು ಓಪನ್​ ಆಗಿಯೇ, ಗಗನ್‌ ನನ್ನ ಬೆಸ್ಟ್‌ ಫ್ರೆಂಡ್‌, ಯಶಸ್‌ ಕೃಷ್ಣನ ನಾನು ಸ್ನೇಹಿತ ಅಂತ ಹೇಳಲ್ಲ, ಅದಕ್ಕೂ ಮೀರಿದ ಸಂಬಂಧ ಎಂದು ಹೇಳಿದ್ದೂ ಇದೆ. ಅದಕ್ಕಾಗಿಯೇ ಸಹಜವಾಗಿ ಯಶಸ್​ ಅವರನ್ನು ಸೌಂದರ್ಯ ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಜೋಡಿ ಸಕತ್​ ಆಗಿದೆ ಎಂದು ವೀಕ್ಷಕರು ಮೆಚ್ಚಿಕೊಂಡಿದ್ದಾರೆ, ಜೊತೆಗೆ ಮನೆಯೊಳಕ್ಕೆ ಇರುವ ಆಸಿಯಾ ಕೂಡ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಅವರೇ ಮಿಡ್ಲ್​ಮನ್​

ಅಂದಹಾಗೆ ಇವರಿಬ್ಬರಲ್ಲಿ ಯಾರನ್ನು ಆಯ್ಕೆಮಾಡಬೇಕು ಎನ್ನುವ ಮಿಡ್ಲ್​ಮನ್​ ರೀತಿ ರಕ್ಷಿತಾ ಶೆಟ್ಟಿ ವರ್ತಿಸಿದ್ದರು. ಇಬ್ಬರಿಗೂ ಸಾಕಷ್ಟು ಟಿಪ್ಸ್​ಕೊಟ್ಟಿದ್ದರು. ಕೊನೆಗೆ ರಕ್ಷಿತಾ ಅವರೇ, ಗಗನ್‌ ಒಳ್ಳೆಯ ವ್ಯಕ್ತಿ, ಅವರಿಗೆ ಜವಾಬ್ದಾರಿ ಇದೆ. ಆದರೆ ಸೌಂದರ್ಯ ಶೆಟ್ಟಿ ಜಾಲಿ ಸ್ವಭಾವದವರು. ಆದ್ದರಿಂದ ಇಬ್ಬರೂ ವಿಭಿನ್ನ ಕ್ಯಾರೆಕ್ಟರ್​ ಆಗಿರೋಕಾರಣ, ಅರ್ಥ ಸಂಸಾರಸರಿಯಾಗುತ್ತದೆ ಎಂದು ಆರು ಅಂಕ ಕೊಟ್ಟಿದ್ದರೆ, ಯಶಸ್​ ಕೂಡ ಜಾಲಿ ಹುಡುಗ ಆಗಿರುವುದರಿಂದ ಇಬ್ಬರೂ ಜಾಲಿ ಆದ್ರೆ ಲೈಫ್​ ಕಷ್ಟ ಎಂದು ನಾಲ್ಕೇ ಮಾರ್ಕ್ಸ್​ ಕೊಟ್ಟಿದ್ದರು. ಅಷ್ಟಕ್ಕೂ ಗಗನ್​ ಅವರಿಗೆ ಆರು ಅಂಕ ಕೊಡಿ ಎಂದು ಹೇಳಿದವರು ಕೂಡ ಸೌಂದರ್ಯ ಅವರೇ. ಕೊನೆಗೆ ಎಲ್ಲಾ ಅಳೆದು ತೂಗಿ ರಕ್ಷಿತಾ ಶೆಟ್ಟಿ ಡಿಸೈಡ್​ ಮಾಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿ ನಾಯಕ ರೇಣುಕಾಚಾರ್ಯ ಪುತ್ರನ ಮದುವೆಗೆ ಸಿದ್ದರಾಮಯ್ಯಗೆ ಆಹ್ವಾನ, ಹೊನ್ನಾಳಿ ಸೊಸೆ ಯಾರು?
ಗಂಡನ ಆಯಸ್ಸು ವೃದ್ಧಿಗೆ ರಜಪೂತ ವಂಶಸ್ಥೆ Amruthadhaare ಛಾಯಾ ಸಿಂಗ್​ ಕರ್ವಾ ಚೌತ್​ ಆಚರಣೆ