
ಜೋಧ್’ಪುರ್(ಜು.19): ಈ ಜಗತ್ತಿನಲ್ಲಿ ತಾಯಿ ಹೃದಯಕ್ಕಿಂತ ಮಿಗಿಲಾದ ಸಂಗತಿ ಮತ್ತೊಂದಿಲ್ಲ. ತಾಯಿ ಪ್ರೀತಿ ಕರುಳ ಬಳ್ಳಿಗೆ ಮಾತ್ರವಲ್ಲ, ಪ್ರತಿಯೊಂದೂ ಕಂದನಿಗೂ ಸಮಾನವಾಗಿ ಹಂಚಿಕೆಯಾಗುವ ಪ್ರೀತಿ ಅದು.
ಅದರಲ್ಲೂ ಮಕ್ಕಳಿಗೆ ಹಾಲುಣಿಸುವ ವಿಚಾರದಲ್ಲಿ ತಾಯಿ ಬೇಧಭಾವ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಜೋಧ್ಪುರದ ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಮರಿ ಜಿಂಕೆಗೆ ಹಾಲುಣಿಸುತ್ತಿರುವ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಎಲ್ಲರೂ ತಲೆದೂಗಿದ್ದು, ಅವರೊಬ್ಬರು ಜಗತ್ತಿನ ಶ್ರೇಷ್ಠ ತಾಯಿಯಾಗಿದ್ದು ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.