ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಬಂದಿದೆ Birth Control Pills

By Suvarna News  |  First Published Jul 14, 2022, 6:56 PM IST

ಅನಗತ್ಯ ಗರ್ಭಧಾರಣೆ ವಿಷ್ಯ ಬಂದಾಗ ಮಹಿಳೆಯರು ಟೆನ್ಷನ್ ಗೊಳಗಾಗ್ತಾರೆ. ಯಾಕೆಂದ್ರೆ ಗರ್ಭ ನಿರೋಧಕ ಆಯ್ಕೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿತ್ತು. ಆದ್ರೆ ಇನ್ಮುಂದೆ ಪುರುಷರೂ ಈ ಜವಾಬ್ದಾರಿ ಹೊತ್ತುಕೊಳ್ಳಬಹುದು. ಅವರಿಗಾಗಿಯೇ ಜನನ ನಿಯಂತ್ರಣ ಮಾತ್ರೆ ಲಭ್ಯವಾಗ್ತಿದೆ.   
 


ಅನಗತ್ಯ ಗರ್ಭಧಾರಣೆ (Pregnancy) ತಪ್ಪಿಸಲು ಅನೇಕ ವಿಧಾನಗಳಿವೆ. ಇಬ್ಬರು ಮಕ್ಕಳನ್ನು ಹೊಂದಿರುವ ಬಹುತೇಕ ಮಹಿಳೆಯರು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗ್ತಾರೆ. ಗರ್ಭಧಾರಣೆ ತಪ್ಪಿಸಲು ಕೆಲ ಮಹಿಳೆಯರು ನೈಸರ್ಗಿಕ ವಿಧಾನ ಪಾಲನೆ ಮಾಡ್ತಾರೆ. ಮತ್ತೆ ಬಹುತೇಕ ದಂಪತಿ ಕಾಂಡೋಮ್ (Condom) ಬಳಸಿದ್ರೆ ಇನ್ನೂ ಕೆಲ ಮಹಿಳೆಯರು ಜನನ ನಿಯಂತ್ರಣ ಮಾತ್ರೆ ಸೇವನೆ ಮಾಡ್ತಾರೆ. ಪುರುಷ (Male)ರಿಗೂ ಸಂತಾನ ಹರಣ ಶಸ್ತ್ರಚಿಕಿತ್ಸೆ ಲಭ್ಯವಿದೆ. ಆದ್ರೆ ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳಗಾಗುವ ಪುರುಷರ ಸಂಖ್ಯೆ ಕಡಿಮೆ. ಇಷ್ಟು ದಿನ ಜನನ ನಿಯಂತ್ರಣ ಮಾತ್ರೆ (Pill) ಮಹಿಳೆಯರಿಗೆ ಮಾತ್ರ ಲಭ್ಯವಿತ್ತು. ಇದು ಗರ್ಭಧಾರಣೆ ತಡೆಯುತ್ತದೆ. ಆದ್ರೆ ಇದ್ರಿಂದಲೂ ಕೆಲವು ಅಡ್ಡಪರಿಣಾಮಗಳಿವೆ ಎಂದು ಕೆಲ ವರದಿಗಳು ಹೇಳಿವೆ. ಅದೇನೇ ಇರಲಿ, ಈಗ ಮಹಿಳೆಯರು ಖುಷಿಪಡುವ ಸುದ್ದಿಯೊಂದಿದೆ. ಜನನ ನಿಯಂತ್ರಣಕ್ಕೆ ಇನ್ಮುಂದೆ ನೀವೇ ಮಾತ್ರೆ ಸೇವನೆ ಮಾಡ್ಬೇಕಾಗಿಲ್ಲ. ಪುರುಷರಿಗೂ ಈಗ ಗರ್ಭನಿರೋಧಕ ಮಾತ್ರೆಗಳು (Contraceptive Pills) ಬಂದಿವೆ. ಪುರುಷರ ಆರೋಗ್ಯಕ್ಕೆ ಹಾನಿಯಾಗದಂತೆ ಸಂಗಾತಿಯ ಗರ್ಭಧಾರಣೆಯನ್ನು ತಡೆಯಲು ಈ ಮಾತ್ರೆ ಸಹಾಯ ಮಾಡುತ್ತದೆ. ಪುರುಷರಿಗಾಗಿ ಸಿದ್ಧವಾದ ಗರ್ಭನಿರೋಧಕ ಮಾತ್ರೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಪುರುಷರಿಗಾಗಿ ಗರ್ಭ ನಿರೋಧಕ ಮಾತ್ರೆ : ಪುರುಷರಿಗಾಗಿ ಗರ್ಭ ನಿರೋಧಕ ಮಾತ್ರೆಯನ್ನು ಸಿದ್ಧಪಡಿಸಲಾಗಿದೆ. ಅಟ್ಲಾಂಟಾ (Atlanta ) ದಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ. ಪುರುಷರ ಗರ್ಭನಿರೋಧಕ ಮಾತ್ರೆಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪುರುಷರ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

Tap to resize

Latest Videos

ಆಫೀಸ್‌ ಹುಡುಗೀನಾ ಪ್ರೀತಿಸ್ತಿದ್ದೇನೆ, ಆಕೆ ಹೊಸದಾಗಿ ಜಾಯಿನ್ ಆದವನನ್ನು ಲವ್ ಮಾಡ್ತಿದ್ದಾಳೆ, ಏನ್ಮಾಡ್ಲಿ ?

ಎರಡು ಹಂತಗಳಲ್ಲಿ ಸಂಶೋಧನೆ  : ಈ ಕುರಿತು ಎರಡು ಹಂತಗಳಲ್ಲಿ ಸಂಶೋಧನೆ ನಡೆಸಲಾಗಿದೆ. ಸಂಶೋಧನೆಯ ಕ್ಲಿನಿಕಲ್ ಪ್ರಯೋಗವು 96 ಆರೋಗ್ಯವಂತ ಪುರುಷರನ್ನು ಒಳಗೊಂಡಿತ್ತು ಮತ್ತು 28 ದಿನಗಳವರೆಗೆ ದಿನಕ್ಕೆ ಎರಡು ಅಥವಾ ನಾಲ್ಕು ಮಾತ್ರೆಗಳನ್ನು ನೀಡಲಾಯಿತು. 7 ದಿನಗಳ ನಂತರ ಅವರ ಪರೀಕ್ಷೆ ಮಾಡಲಾಯ್ತು. 7 ದಿನಗಳ ನಂತ್ರ ಔಷಧಿಯನ್ನು ತೆಗೆದುಕೊಳ್ಳುವ ಜನರ ಟೆಸ್ಟೋಸ್ಟೆರಾನ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.  ಸಾಮಾನ್ಯವಾಗಿ  ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವ ಅನೇಕ ಔಷಧಿಗಳಿವೆ. ಆದ್ರೆ ಅವುಗಳು ಅನೇಕ ಅನಾನುಕೂಲತೆಗಳನ್ನು ಹೊಂದಿವೆ. ಆದ್ರೆ ಈ ಔಷಧವು ಟೆಸ್ಟೋಸ್ಟೆರಾನ್ ಅನ್ನು  ಕಡಿಮೆ ಮಾಡುವುದಲ್ಲದೆ ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲವೆಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.  

ಅಬ್ಬಬ್ಬಾ...! ಇಲ್ಲಿ ಮದುವೆಯಾದ 3 ದಿನಗಳವರೆಗೆ ವಧು, ವರ ಟಾಯ್ಲೆಟ್‌ಗೆ ಹೋಗುವಂತಿಲ್ಲ!

ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿದ ಔಷಧಿ : ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್ ಡೆವಲಪ್‌ಮೆಂಟ್‌ನ ಪ್ರಧಾನ ಸಂಶೋಧಕ ಜಾಕೋಬ್ಸನ್ ಈ ವರದಿ ನೀಡಿದ್ದಾರೆ.  ಪುರುಷರಲ್ಲಿ ಗರ್ಭಧಾರಣೆ ತಡೆಯುವ ವಿಧಾನಗಳು ಸೀಮಿತವಾಗಿವೆ. ಪ್ರಸ್ತುತ ಶಸ್ತ್ರಚಿಕಿತ್ಸೆ ಮತ್ತು ಕಾಂಡೋಮ್‌ ಎರಡೇ ವಿಧಾನ ಲಭ್ಯವಿದೆ. ಇದು ಮಹಿಳೆಯರಿಗೆ ಲಭ್ಯವಿರುವ ಗರ್ಭನಿರೋಧಕ ಆಯ್ಕೆಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಪುರುಷರಿಗೆ ಪರಿಣಾಮಕಾರಿ ಗರ್ಭನಿರೋಧಕ ವಿಧಾನಗಳ ಆವಿಷ್ಕಾರವು ಪುರುಷರು ಮತ್ತು ಮಹಿಳೆಯರಲ್ಲಿ ಅನಗತ್ಯ ಗರ್ಭಧಾರಣೆಯನ್ನು ಕಡಿಮೆ ಮಾಡುವ ಮೂಲಕ ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕ್ಲಿನಿಕಲ್ ಪ್ರಯೋಗದಲ್ಲಿ ಧನಾತ್ಮಕ ಫಲಿತಾಂಶ ಸಿಕ್ಕಿದೆ.  ಔಷಧ ಸೇವಿಸಿದ ಶೇ.75 ರಷ್ಟು ಪುರುಷರು ಭವಿಷ್ಯದಲ್ಲಿ ಅದನ್ನು ಬಳಸಲು ಬಯಸುವುದಾಗಿ ಹೇಳಿದ್ದಾರೆ. ಒಂದ್ವೇಳೆ ಇದನ್ನು ಬಳಸುವ ಪುರುಷರ ಸಂಖ್ಯೆ ಭವಿಷ್ಯದಲ್ಲಿ ಹೆಚ್ಚಾದ್ರೆ ಅನಗತ್ಯ ಗರ್ಭಧಾರಣೆ ನಿಯಂತ್ರಣ ಮತ್ತಷ್ಟು ಸುಲಭವಾಗಲಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ. 
 

click me!