ಈಗಂತೂ ಮದುವೆ (Marriage) ಯಷ್ಟೇ ಡೈವೋರ್ಸ್ (Divorce) ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳಂತೂ ಮದುವೆಯಾದ ಕೆಲವೇ ವರ್ಷದಲ್ಲಿ ವಿಚ್ಛೇದನ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಹಾಗೆಯೇ ಬಿಲ್‌ಗೇಟ್ಸ್ ದಂಪತಿ (Couple) ಸಹ ದೂರವಾಗುವುದಾಗಿ ಘೋಷಿಸಿದ್ದರು. ಸದ್ಯ ಮೈಕ್ರೋಸಾಫ್ಟ್ ಕಂಪನಿಯ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಾಜಿ ಪತ್ನಿ ಮೆಲಿಂಡಾ (Melinda) ಅವರನ್ನು ಮತ್ತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.
ಮೈಕ್ರೋಸಾಫ್ಟ್ (Microsoft) ಕಂಪನಿಯ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Billgates), ಮಾಜಿ ಪತ್ನಿ ಮೆಲಿಂಡಾ ಅವರನ್ನು ಮತ್ತೆ ಮದುವೆ (Marriage)ಯಾಗುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳನ್ನು ಸಾಕಷ್ಟು ನಾಟಕೀಯ ಘಟನೆ ನಡೆಯಿತೆಂದು ಹೇಳಿಕೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕ (Corona) ಮತ್ತು ಮೆಲಿಂಡಾ ವಿಚ್ಛೇದನದೊಂದಿಗಿನ ವಿಚಿತ್ರವಾದ ವಿಷಯವೆಂದರೆ ಮಕ್ಕಳನ್ನು ಬಿಟ್ಟು ದೂರವಿದ್ದದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಬೆಳೆದು ಸಂಸಾರವನ್ನು ತೊರೆದ ನಂತರ ಪ್ರತಿಯೊಂದು ಮದುವೆಯೂ ಪರಿವರ್ತನೆಯ ಹಾದಿಯತ್ತ ಸಾಗುತ್ತವೆ. ಆದಾಗ್ಯೂ ಅವರು ತಮ್ಮ ಮದುವೆಯನ್ನು ಮಹಾನ್ ಮದುವೆ ಎಂದು ಕರೆದುಕೊಂಡಿದ್ದಾರೆ. ನಾನು ಬೇರೆ ಯಾರನ್ನೂ ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಮತ್ತೆ ಮೆಲಿಂಡಾಳನ್ನು ಮದುವೆಯಾಗುತ್ತೇನೆ. ನನ್ನ ಭವಿಷ್ಯದ ವಿಷಯದಲ್ಲಿ, ನಾನು ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದಿದ್ದಾರೆ. ಮೆಲಿಂಡಾ ಅವರೊಂದಿಗಿನ ಅವರ ಪ್ರಸ್ತುತ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಅವಳೊಂದಿಗೆ ನಾನು ಒಳ್ಳೇಯ ಸ್ನೇಹಿತನಾಗಿಯೇ ಇದ್ದು, ಅವಳೊಂದಿಗೆ ನಾನು ಬಹಳ ಪ್ರಮುಖ ಹಾಗೂ ನಿಕಟ ಸಂಬಂಧವನ್ನು ಹೊಂದಿದ್ದೇನೆ ಎಂದು ತಿಳಿಸಿದರು.
Parenting Tips: ಮಕ್ಕಳು, ಪೋಷಕರ ನಡುವಿನ ಸಂಬಂಧ ಹೇಗಿರಬೇಕು? ಬಿಲ್‌ಗೇಟ್ಸ್ ಏನ್ ಹೇಳ್ತಾರೆ ಕೇಳಿ
ಜೂನ್‍ನಲ್ಲಿ ನಾವಿಬ್ಬರು ಸೇರಿ ವಾರ್ಷಿಕ ಸಭೆಯನ್ನು ಒಟ್ಟಿಗೆ ಆಯೋಜಿಸಲಿದ್ದೇವೆ. ನಾವು ಒಟ್ಟಿಗೆ ಕೆಲಸ ಮಾಡಲು ಇಚ್ಚಿಸುತ್ತೇವೆ. ನನಗೆ ತುಂಬಾ ಸಂತೋಷವಾಗಿದ್ದು, ನಿಜ ಹೇಳಬೇಕಾದರೆ ನಾವಿಬ್ಬರು ಒಟ್ಟಾಗಿಯೇ ಮೈಕ್ರೋಸಾಫ್ಟ್ ಫೌಂಡೇಶನ್ ಅನ್ನು ನಿರ್ಮಿಸಿದ್ದೇವೆ ಎಂದು ಬಿಲ್‌ಗೇಟ್ಸ್ ಹೇಳಿದರು.
ದಂಪತಿ 1994 ರಲ್ಲಿ ವಿವಾಹವಾಗಿದ್ದರು. ಅವರಿಗೆ ಜೆನ್ನರ್, ರೋರಿ ಮತ್ತು ಫೋಬೆ ಎಂಬ ಮೂರು ಮಕ್ಕಳಿದ್ದಾರೆ. 27 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆಯುವುದಾಗಿ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಿದ್ದರು.
ಹಾಗಾದರೆ, ನೀವು ಮೆಲಿಂಡಾ ಫ್ರೆಂಚ್ ಗೇಟ್ಸ್ ಅನ್ನು ಮತ್ತೆ ಮದುವೆಯಾಗಲು ಸಿದ್ಧವಿದ್ದೀರಾ ಎಂದು ಅವರನ್ನು ಪ್ರಶ್ನಿಸಿದಾಗ, ಹೌದು. ನಾನು ಮೆಲಿಂಡಾಳನ್ನು ಮತ್ತೆ ಮದುವೆಯಾಗುವುದರ ಬಗ್ಗೆ ಮಾತನಾಡುತ್ತಿದ್ದೇನೆ. ಭವಿಷ್ಯದ ದೃಷ್ಟಿಯಿಂದ ನನಗೆ ಯಾವುದೇ ಯೋಜನೆಗಳಿಲ್ಲ. ಆದರೆ, ನಾನು ಮದುವೆಯನ್ನು ಅಧಿಕವಾಗಿ ಶಿಫಾರಸ್ಸು ಮಾಡುತ್ತೇನೆ ಎಂದು ಅವರು ಉತ್ತರಿಸಿದ್ದಾರೆ.
ಗರ್ಭಿಣಿ ಮನುಷ್ಯನ ಎಮೋಜಿ ಬಳಸಿ ಬಿಲ್ ಗೇಟ್ಸ್ ಅಪಹಾಸ್ಯ ಮಾಡಿದ ಎಲಾನ್ ಮಸ್ಕ್
ತಾನು ಮತ್ತು ಮಾಜಿ ಪತ್ನಿ ಇಂದಿಗೂ ಸ್ನೇಹಿತರು ಎಂಬುವನ್ನು ಬಿಲ್ ಗೇಟ್ಸ್ ನಂಬುತ್ತಾರಂತೆ. ಮೆಲಿಂಡಾ ಜೊತೆ ಅತ್ಯಂತ ಮುಖ್ಯ, ಸಂಕೀರ್ಣ, ಹತ್ತಿರದ ಸಂಬಂಧವನ್ನು ಹೊಂದಿರುವುದರಿಂದಲೇ ತಾವಿಬ್ಬರು ಜೊತೆಯಾಗಿ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಂಡೆವು ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ನಾವಿಬ್ಬರು ಜೊತೆಯಾಗಿ ಕೆಲಸ ಮಾಡುತ್ತಿರುವುದರ ಬಗ್ಗೆ ನಾನು ತುಂಬಾ ಸಂತುಷ್ಟನಾಗಿದ್ದೇನೆ ಎಂದಿದ್ದಾರೆ.
ತಮ್ಮ ವೈವಾಹಿಕ ಜೀವನ ಹೇಗೆ ಅಂತ್ಯಗೊಂಡದ್ದಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾತನಾಡುತ್ತಾ, ಮದುವೆಗಳು ಎಷ್ಟು ಸಂಕೀರ್ಣವಾಗಿರುತ್ತವೆ ಎಂದರೆ ಅವುಗಳನ್ನು ಪರಿಶೀಲಿಸುವುದು ಯೋಗ್ಯವಲ್ಲ ಎಂದು ಸರಳವಾಗಿ ಉತ್ತರಿಸಿದ್ದಾರೆ. ವಿವಾಹ ವಿಚ್ಚೇದನದ ಪರಿಣಾಮದ ಬಗ್ಗೆ ಮಾತನಾಡುತ್ತಾ, ತಾವಿಬ್ಬರೂ ಅವರಿಂದ ಚೇತರಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.