ಗರ್ಭಿಣಿ ಮನುಷ್ಯನ ಎಮೋಜಿ ಬಳಸಿ ಬಿಲ್ ಗೇಟ್ಸ್ ಅಪಹಾಸ್ಯ ಮಾಡಿದ ಎಲಾನ್ ಮಸ್ಕ್
ಹೋಲ್ ಮಾರ್ಸ್ ಕ್ಯಾಟಲಾಗ್ ಎಂಬ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಮತ್ತು ಬಿಲ್ ಗೇಟ್ಸ್ ನಿಡುವಿನ ಚಾಟ್‌ನಲ್ಲಿನ ಸಂಭಾಷಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ
Elon Musk confronts Bill Gates: ಟೆಸ್ಲಾ ಸಿಇಓ ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್ ಈಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದೆಡೆ, ಟೆಸ್ಲಾ ಸಿಇಒ ಇತ್ತೀಚೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ಸ್ವಾಧೀನಪಡಿಸಿಕೊಳ್ಳಲು ಬಿಡ್ ಮಾಡಿದ್ದು, ಮತ್ತೊಂದೆಡೆ, ಅವರ ವೈಯಕ್ತಿಕ ಸಂಪತ್ತು ಕೂಡ ಅಗಾಧವಾಗಿ ಬೆಳೆಯುತ್ತಿದೆ. ಈ ನಡುವೆ ಬಿಲಿಯನೇರ್ ಮಸ್ಕ್ ಅಮೆರಿಕದ ಉದ್ಯಮಿ ಬಿಲ್ ಗೇಟ್ಸ್ ಅವರೊಂದಿಗೆ ಕಾಳಗಕ್ಕಿಳಿದಂತಿದೆ.
ಹೋಲ್ ಮಾರ್ಸ್ ಕ್ಯಾಟಲಾಗ್ ಎಂಬ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಮತ್ತು ಬಿಲ್ ಗೇಟ್ಸ್ ನಿಡುವಿನ ಚಾಟ್‌ನಲ್ಲಿನ ಸಂಭಾಷಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಇಬ್ಬರು ಬಿಲಿಯನೇರ್‌ಗಳು ಸಂಭಾಷಣೆ ನಡೆಸಿರುವುದು ಕಾಣಬಹುದಾಗಿದೆ. ನಂತರ ಪ್ರತ್ಯೇಕ ಟ್ವೀಟ್‌ನಲ್ಲಿಈ ಸಂಭಾಷಣೆ ಬಗ್ಗೆ ಮಸ್ಕ್ ಖಚಿತಪಡಿಸಿದ್ದಾರೆ.
ಇದು ನಿಜವೇ ಎಂದು ತಿಳಿಯಲು, ಹೋಲ್ ಮಾರ್ಸ್ ಕ್ಯಾಟಲಾಗ್ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಪ್ರತ್ಯುತ್ತರವಾಗಿ "ಹೌದು, ಆದರೆ ನಾನು ಅದನ್ನು NYTಗೆ ಸೋರಿಕೆ ಮಾಡಲಿಲ್ಲ. ಅವರು ಅದನ್ನು ಸ್ನೇಹಿತರ, ಸ್ನೇಹಿತರ ಮೂಲಕ ಪಡೆದಿರಬೇಕು ... ಗೇಟ್ಸ್ ಇನ್ನೂ ಟೆಸ್ಲಾ ವಿರುದ್ಧ ಅರ್ಧ ಬಿಲಿಯನ್ ಕಡಿಮೆ ಹೊಂದಿದ್ದಾರೆ ಎಂದು ಟೆಡ್‌ನಲ್ಲಿ ಅನೇಕ ಜನರಿಂದ ನಾನು ಕೇಳಿದೆ, ಅದಕ್ಕಾಗಿಯೇ ನಾನು ಅವರನ್ನು ಕೇಳಿದೆ, ಆದ್ದರಿಂದ ಇದು ಅತ್ಯಂತ ರಹಸ್ಯವಾಗಿಲ್ಲ." ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಇನ್ನು ಈ ಬಳಿಕ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಮೀಮ್‌ವೊಂದನ್ನು ಹಂಚಿಕೊಂಡಿದ್ದು ಮತ್ತು "in case u need to lose a boner fast" ಎಂದು ಹೇಳಿದ್ದಾರೆ. ಮೀಮ್‌ನಲ್ಲಿ ಗೇಟ್ಸ್ ಮತ್ತು ಗರ್ಭಿಣಿ ವ್ಯಕ್ತಿಯ ಎಮೋಜಿಯ ಚಿತ್ರವನ್ನು ನೋಡಬಹುದು. ಈ ಪೋಸ್ಟ್ ಟ್ವೀಟರ್‌ನಲ್ಲಿ ಸಾಕಷ್ಟು ಪ್ರತಿಕ್ರಯೆಗಳು ಬಂದಿವೆ.
2021 ರಲ್ಲಿ ಮಸ್ಕ್ ಮತ್ತು ಗೇಟ್ಸ್ ಕೂಡ ಕಲಹದಲ್ಲಿ ಭಾಗಿಯಾಗಿದ್ದಾರೆಂದು ತೋರುತ್ತದೆ. ಟೆಸ್ಲಾ ಸಿಇಒ ಪ್ರಕಾರ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಸ್ಟಾಕ್ ಮಾರುಕಟ್ಟೆಯಲ್ಲಿ ಟೆಸ್ಲಾಗೆ ಸೆಡ್ಡು ಹೊಡೆಯುತ್ತಿದ್ದರು. ಆದ್ದರಿಂದ, ಗೇಟ್ಸ್‌ನ ಟೆಸ್ಲಾ ಸ್ಟಾಕ್‌ನ (TSLA) ಶಾರ್ಟಿಂಗ (Shorting Stock) ಜನಪ್ರಿಯವಾಗಿತ್ತು. ಶಾರ್ಟಿಂಗ್ ಅಥವಾ ಶಾರ್ಟ್ ಸೆಲ್ಲಿಂಗ್ ಎಂದರೆ ಭದ್ರತೆಯನ್ನು ನಿಜವಾಗಿ ಹೊಂದಿರದೆ ನಿರ್ದಿಷ್ಟ ಬೆಲೆಗೆ ಮಾರಾಟ ಮಾಡುವುದು ಮತ್ತು ಅದನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮತ್ತೆ ಖರೀದಿಸುವುದು.