2ನೇ ಮದುವೆಯ ಗುಟ್ಟು ಬಿಚ್ಚಿಟ್ಟ Bigg Boss ವರ್ತೂರು ಸಂತೋಷ್​: ಯಾರವರು? ಈ ಮೌನವೇಕೆ

Published : Aug 23, 2026, 12:52 PM IST
Varthur Santosh

ಸಾರಾಂಶ

ಬಿಗ್​ಬಾಸ್​ ಖ್ಯಾತಿಯ ವರ್ತೂರು ಸಂತೋಷ್ ತಮ್ಮ ಎರಡನೇ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದ ನಂತರ, ವಯಸ್ಸಾದ ತಾಯಿಗೆ ಆಸರೆಯಾಗಲು ಹಾಗೂ ಮನೆಗೆಲಸಕ್ಕಾಗಿ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಪತ್ನಿಯ ಗುರುತನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.

ಬಿಗ್​ಬಾಸ್​ 10ರಲ್ಲಿ ಕೊನೆಯವರೆಗೂ ಮಿಂಚಿದ ವರ್ತೂರು ಸಂತೋಷ್​ (Varthur Santhosh) ಹಳ್ಳಿಕಾರ್​ ಎಂದೇ ಫೇಮಸ್​ ಆದವರು. ಇವರು ಇನ್ನಷ್ಟು ಫೇಮಸ್​ ಆಗಲು ಕಾರಣ, ಇವರು ಧರಿಸಿದ್ದ ಹುಲಿಯ ಪೆಂಡೆಂಟ್​ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರಿಂದ. ಬಿಗ್​ಬಾಸ್​ ಮನೆಯಿಂದ ಜೈಲಿಗೂ ಹೋಗಿ ರಾಜಕೀಯ ವಲಯದಲ್ಲಿಯೂ ಕೋಲಾಹಲ ಸೃಷ್ಟಿಸಿದ್ದು ಈಗ ಎಲ್ಲವೂ ಇತಿಹಾಸ. ಇಂತಿಪ್ಪ ವರ್ತೂರು ಫೇಮಸ್​ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್​ ಇರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.

ಎರಡನೆಯ ಮದುವೆಯ ಬಗ್ಗೆ...

ಇದೀಗ ಅವರು ಎರಡನೆಯ ಮದುವೆಯ ಬಗ್ಗೆ ಓಪನ್‌ ಆಗಿ ಮಾತನಾಡಿದ್ದಾರೆ. janataanewsdigital2 ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ವರ್ತೂರು ಅವರು, ಎರಡನೆಯ ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅದು ನಡೆದದ್ದು ಬಿಗ್‌ಬಾಸ್‌ ಮನೆಯಿಂದ ಹೊರಕ್ಕೆ ಬಂದ ಮೇಲೆ ಎಂದಿದ್ದಾರೆ. ಎರಡನೇ ಮದುವೆ ʻಬಿಗ್‌ ಬಾಸ್‌ʼನಿಂದ ಹೊರಗೆ ಬಂದ ಮೇಲೆ ಆಗಿದ್ದು ನಿಜ. ನೀವು ಕೇಳಿದ್ರಿ ಅಂತ ಅದನ್ನು ಈಗ ಹೇಳಿತ್ತಿದ್ದೇನೆ ಅಷ್ಟೇ. ಇವೆಲ್ಲಾ ಪರ್ಸನಲ್‌ ಮ್ಯಾಟರು. ಫ್ಯಾಮಿಲಿಯನ್ನ ಪಬ್ಲಿಕ್‌ಗೆ ತರೋದು ತಪ್ಪು. ಆದರೆ ಯಾವುದೋ ಒಂದು ಫಂಕ್ಷನ್‌ಗಳಲ್ಲಿ ಯಾರಾದ್ರೂ ನೋಡಿದ್ರೆ ಸುಮ್ಮನೇ ಬೇರೆ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಈ ವಿಷಯವನ್ನು ಈಗ ಹೇಳುತ್ತಿದ್ದೇನೆ ಎಂದಿದ್ದಾರೆ ವರ್ತೂರು ಸಂತೋಷ್.‌

ಮನೆಗೆ ಬಂದ ಅತಿಥಿಗಳಿಗೆ ಆತಿಥ್ಯ ನೀಡಲು ಹಾಗೂ ವಯಸ್ಸಾದ ತಾಯಿಗೆ ಆಸರೆಯಾಗಲು ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ತಾಯಿ ಸಾಯೋವರೆಗೂ ಕೆಲಸ ಮಾಡಿಕೊಂಡೇ ಇರುವುದು ನನಗೆ ಇಷ್ಟವಾಗಲಿಲ್ಲ. ನನಗೆ ಹಿಟ್ಟು ಮಾಡಿಡೋಕೆ, ಬಂದೋರು-ಹೋದೋರಿಗೆ ಟೀ-ಕಾಫಿ ಮಾಡಿಡೋಕೆ ಹುಡುಗಿ ಬೇಕಿತ್ತು. ಅಮ್ಮನಿಗೆ ಆಸರೆಯಾಗಿ ಒಬ್ಬಾಕೆ ಬೇಕಿತ್ತು. ಅದಕ್ಕಾಗಿ ಮದುವೆ ಆಗಿದ್ದೇನೆ ಎಂದಿರುವ ವರ್ತೂರು, ಇದು ಎರಡನೇಯ ಮದುವೆಯೂ ಹೌದು ಎಂದಿದ್ದಾರೆ.

ಪತ್ನಿ ಬಗ್ಗೆ ಮೌನ

ಇದು ಲವ್‌ ಮ್ಯಾರೇಜೋ, ಅರೇಂಜ್ಡೋ ಎನ್ನುವ ಪ್ರಶ್ನೆಗೂ ಉತ್ತರಿಸಿರುವ ಅವರು, ಅದನ್ನ ನಾನು ಲವ್‌ ಮಾಡಿಯೇ ಆಗಿರೋದು. ಲವ್‌ ಕಮ್‌ ಅರೇಂಜ್ಡ್. ಮನೆಯವರನ್ನೆಲ್ಲಾ ಒಪ್ಪಿಸಿ ಆಗಿರೋದು ಎಂದು ಹೇಳಿದ್ದಾರೆ. ಆದರೆ ಪತ್ನಿ ಯಾರು ಎನ್ನುವ ಬಗ್ಗೆ ಇನ್ನೂ ರಿವೀಲ್​ ಮಾಡಲಿಲ್ಲ. ಮದುವೆಯಾಕೆ ಆದೆ ಎನ್ನೋದನ್ನು ಹೇಳಿದ್ದಾರೆ ಬಿಟ್ಟರೆ, ಪತ್ನಿಯ ಬಗ್ಗೆ ಗುಟ್ಟಾಗಿಯೇ ಇಟ್ಟಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

"WFH ಇರದಿದ್ದರೆ ಅಪ್ಪನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ!":ವೈರಲ್ ಆಯ್ತು ಟೆಕ್ಕಿಯ ಭಾವುಕ ಪೋಸ್ಟ್!
ಸ್ಟೈಲ್​ನಲ್ಲಿ ಅಪ್ಪನನ್ನೇ ಸೈಡ್​ ಹೊಡೀತಿದ್ದಾಳೆ ಯಶ್​ ಪುಟಾಣಿ ಕಂದ: ಕ್ಯೂಟ್​ ವಿಡಿಯೋ ಪುನಃ ವೈರಲ್​