
ಬಿಗ್ಬಾಸ್ 12 (Bigg Boss 12) ಸಿಕ್ಕಾಪಟ್ಟೆ ವೀಕ್ಷಕರಿಗೆ ಖುಷಿ ಕೊಟ್ಟಿರುವುದಕ್ಕೆ ಕಾರಣ, ಒಂದು ಗಿಲ್ಲಿ ನಟನ ಕಾಮಿಡಿ ಹಾಗೂ ಇನ್ನೊಂದು ರಕ್ಷಿತಾ ಶೆಟ್ಟಿ ಅವರ ಕನ್ನಡ. ಪಟಪಟಾ ಅಂತ ತುಳು ಮಿಕ್ಸ್ ಕನ್ನಡ ಮಾತನಾಡುತ್ತಾ ಎಲ್ಲರ ಮನಸ್ಸನ್ನು ಗೆದ್ದು ಮಂಗಳೂರು ಪುಟ್ಟಿ ಎಂದೇ ಫೇಮಸ್ ಆದವರು ರಕ್ಷಿತಾ ಶೆಟ್ಟಿ (Rakshita Shetty). ಬಿಗ್ಬಾಸ್ 13 ಯಾಕೋ ವೀಕ್ಷಕರಿಗೆ ಹಿಡಿಸುತ್ತಲೇ ಇಲ್ಲ. ಇದರಿಂದ ಹೆಚ್ಚು ಟಿಆರ್ಪಿ ತರುವುದಕ್ಕಾಗಿ ಹಲವಾರು ಸಾಹಸ ಮಾಡುತ್ತಿದ್ದರೂ, ಕಳೆದ ಸೀಸನ್ ಗುಂಗಿನಲ್ಲಿಯೇ ಇರುವ ವೀಕ್ಷಕರು ಈ ಬಾರಿ ಸಿಕ್ಕಾಪಟ್ಟೆಸಪ್ಪೆ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಇದಾಗಲೇ ಬಿಗ್ಬಾಸ್ ಮನೆಗೆ ಕುಮಾರಿಯನ್ನು ಕಳುಹಿಸಲಾಗಿತ್ತು. ಆದರೆ ಅದ್ಯಾಕೋ ವರ್ಕ್ಔಟ್ ಆಗಿಲ್ವೋ ಏನೊ, ಇದೀಗ ರಕ್ಷಿತಾ ಶೆಟ್ಟಿಯನ್ನು ಬಿಗ್ಬಾಸ್ ಮನೆಯೊಳಕ್ಕೆ ಕಳುಹಿಸಲಾಗಿದೆ. ಇವರು ಅತಿಥಿಯಾಗಿ ಹೋಗಿದ್ದಾರೆ ಎನ್ನಲಾಗುತ್ತಿದೆ.
ರಕ್ಷಿತಾ ಶೆಟ್ಟಿ ಎಂದ್ಮೇಲೆ ಅಲ್ಲಿ ಒಂದಷ್ಟು ತಮಾಷೆ ಇರಲೇಬೇಕು. ಅಷ್ಟಕ್ಕೂ ಬಿಗ್ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟನ ಸ್ನೇಹದ ಬಗ್ಗೆಯೂ ಸಿಕ್ಕಾಪಟ್ಟೆ ತಮಾಷೆ ಸನ್ನಿವೇಶಗಳು ನಡೆದಿದ್ದವು. ಒಂದು ಹಂತದಲ್ಲಿ ನನಗೆ ಗಿಲ್ಲಿಯಂಥ ಹುಡುಗ ಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಿದಾಗ, ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ಎಐನಲ್ಲಿ ಮಾಡಿ ಮದುವೆಯನ್ನೇ ಮಾಡಿಸಿದ್ದು ಇದೆ. ಹೀಗೆಲ್ಲಾ ರಕ್ಷಿತಾ ಶೆಟ್ಟಿ ಫೇಮಸ್ ಆಗಿದ್ರು.
ಇದೀಗ ಅವರ ಮದುವೆಯ ಸುದ್ದಿಯನ್ನೇ ಮತ್ತೊಮ್ಮೆ ಕೇಳಲಾಗಿದೆ. ಅದಕ್ಕೆ ರಕ್ಷಿತಾ ಶೆಟ್ಟಿ ಪುನಃ ತಮ್ಮದೇ ಆದ ಹಾಸ್ಯದ ರೀತಿಯಲ್ಲಿ ಉತ್ತರ ಕೊಟ್ಟಿದ್ದು, ಅದನ್ನು ಕಲರ್ಸ್ ಕನ್ನಡ ವಾಹಿನಿ ಶೇರ್ಮಾಡಿದೆ. ಇಲ್ಲಿ ರಕ್ಷಿತಾ ಏನೇನು ಕ್ವಾಲಿಟಿ ಹೇಳಿದ್ದಾರೆ ನೋಡಿ.
- ತುಂಬಾ ತುಂಬಾ ತುಂಬಾ ಸೀರಿಯಲ್ ಇರಬಾರದು. 100 ಪರ್ಸೆಂಟ್ನಲ್ಲಿ 2 ಪರ್ಸೆಂಟ್ ಸೀರಿಯಸ್ನೆಸ್ ಇದ್ದರೆ ಸಾಕು.
- ತುಂಬಾ ಸೆನ್ಸ್ ಆಫ್ ಹ್ಯೂಮರ್ಸ್ ಇರಬೇಕು. ನನಗಂತೂ ತುಂಬಾ ನಗ್ತಾ ನಗ್ತಾ ಇರೋಕೆ ಇಷ್ಟ.
- ಕಿಚನ್ನಲ್ಲಿ ಊಟ ಮಾಡಿದ್ರೆ (ಅಡುಗೆ) ಅವರು ತಿನ್ನಬೇಕು
- ನನ್ನ ವಿಡಿಯೋಸ್ ತೆಗೆದುಕೊಳ್ಳಲು ಅವರು ಆಗಲ್ಲ ಅಂತ ಪ್ಚಿಪ್ಚಿ ಮಾಡಬಾರದು
- ಅವರಿಗೆ ಯಾವಾಗ್ಲೂ ಸುಸ್ತಾಗಬಾರದು.
- ಅವರ ಕೈಯಲ್ಲಿ ಯಾವಾಗ್ಲೂ ಫೋನ್ ಇರಬೇಕು (ರಕ್ಷಿತಾ ವಿಡಿಯೋ ಬೇಕು ಎಂದಾಗಲೆಲ್ಲಾ ಶೂಟ್ ಮಾಡಲು)
- ರಾತ್ರಿ ಬೇಗ ಮಲಗಬಾರದು. ರಾತ್ರಿ ಇಡೀ ಮಾತಾಡ್ತಾ ಇರಬೇಕು.
- ಅವರು ಪ್ರಾಣಿ ಲವರ್ ಇರಬೇಕು. ನಾನು ನಾಯಿ ಬೇಕು ಎಂದ್ರೆ ಅವ್ರು ನಾಯಿ ತಗೊಂಡು ಬರಬೇಕು.
- ತೊಟ್ಟಿ ಮನೆ ಇರಬೇಕು. ಆ ಮನೆಯಲ್ಲಿ ನಾವಿಬ್ರೂ ಡಾನ್ಸ್ ಮಾಡಬೇಕು. ಡಾನ್ಸ್ಗೆ ನೋ ಅಂತ ಹೇಳಬಾರದು
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.