ಲಕ್ಷಾಂತರ ವೀಕ್ಷಕರ ಆಸೆ ಈಡೇರಿಸಲು ಮತ್ತೆ 'ಬದುಕು ಜಟಕಾಬಂಡಿ' ಆರಂಭ- ಆದರೆ ಈ ಬಾರಿ ಟಿವಿಯಲ್ಲಲ್ಲ

Published : Oct 28, 2026, 05:47 PM IST
Malavika Avinash

ಸಾರಾಂಶ

ನಟಿ ಮಾಳವಿಕಾ ಅವಿನಾಶ್ ಅವರ ಜನಪ್ರಿಯ 'ಬದುಕು ಜಟಕಾಬಂಡಿ' ಕಾರ್ಯಕ್ರಮವು ಮತ್ತೆ ಆರಂಭವಾಗಲಿದೆ. ಆದರೆ ಈ ಬಾರಿ ಟಿವಿಯ ಬದಲಾಗಿ ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್ ಮೂಲಕ ವೀಕ್ಷಕರಿಗೆ ಲಭ್ಯವಾಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಖಾಸಗಿಯಾಗಿ ಮತ್ತು ಕಾನೂನಾತ್ಮಕವಾಗಿ ಬಗೆಹರಿಸಲು ಈ ಹೊಸ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಬೆಂಗಳೂರು: ನಟಿ ಮಾಳವಿಕಾ ಅವಿನಾಶ್​ ಅವರ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿಲ್ಲ 'ಬದುಕು ಜಟಕಾಬಂಡಿ' ಕಾರ್ಯಕ್ರಮ ಸಿಕ್ಕಾಪಟ್ಟೆ ಜನಪ್ರಿಯಗೊಂಡಿತ್ತು. ಈ ಷೋ ಮೂಲಕ ಹಲವಾರು ಕುಟುಂಬಗಳ ಸಂಬಂಧ ಸರಿಯಾಗಿತ್ತು. ದಂಪತಿಗಳ ನಡುವಿನ ಮೈಮನಸ್ಸು ಕೊನೆಗೊಂಡಿತ್ತು. ಈ ಷೋ ಒಂದು ರೀತಿಯಲ್ಲಿ ಜಟಕಾ ಬಂಡಿ ಒಂಥರಾ ಕೌಟುಂಬಿಕ ಕೋರ್ಟು ಇದ್ದಂತಿತ್ತು. ಖುದ್ದು ವಕೀಲೆ ಆಗಿರುವ ಮಾಳವಿಕಾ ಅವರು, ಅಲ್ಲಿಯೇ ವಿಚಾರಣೆ ನಡೆಸಿ, ಹಲವಾರು ಫ್ಯಾಮಿಲಿ ಸಮಸ್ಯೆಗಳನ್ನು ಬಗೆಹರಿಸಿದ್ದರು. ಆದ್ದರಿಂದ ಇದು ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ನಟಿ ಮಾಳವಿಕಾ ಅವಿನಾಶ್ ಅವರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿ ಮನೆಮಾತಾಗಿದ್ದರು. ಕುಟುಂಬಗಳಲ್ಲಿನ ವಿವಾದಗಳು, ದಾಂಪತ್ಯ ಸಮಸ್ಯೆಗಳು ಮತ್ತು ಸಾಮಾಜಿಕ ವಿಚಾರಗಳನ್ನು ಈ ಶೋನಲ್ಲಿ ಚರ್ಚಿಸಲಾಗುತ್ತಿತ್ತು.

ಹಲವರ ಅಸಮಾಧಾನ

ಆದರೆ ಈ ಷೋ ನಿಂತ ಮೇಲೆ ಹಲವರಿಗೆ ಅಸಮಾಧಾನವಾಗಿತ್ತು. ಈ ಷೋದಿಂದ ಹಲವು ಕುಟುಂಬಗಳು ಒಂದಾಗಿರುವ ಹಿನ್ನೆಲೆಯಲ್ಲಿ, ಮತ್ತೆ ಈ ಕಾರ್ಯಕ್ರಮವನ್ನು ಮುಂದುವರೆಸಿ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ವಾಹಿನಿಯವರು ಓಕೆ ಎಂದ ಹೊರತೂ ಟಿವಿಯಲ್ಲಿ ಈ ಕಾರ್ಯಕ್ರಮ ಮುಂದುವರೆಸುವುದು ಕಷ್ಟ ಆಗಿರುವ ಹಿನ್ನೆಲೆಯಲ್ಲಿ, ಈಗ ಮಾಳವಿಕಾ ಅವಿನಾಶ್​ (Malavika Avinash) ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಆರಂಭಿಸುವುದಾಗಿ ಹೇಳಿದ್ದಾರೆ.

'ಇನ್​ಸ್ಟಾಗ್ರಾಮ್​ನಲ್ಲಿ ಆರಂಭ

ಆದರೆ, ಈ ಬಾರಿ ಯಾವುದೇ ಟಿವಿ ಚಾನೆಲ್​ನಲ್ಲಿ ಈ ಕಾರ್ಯಕ್ರಮ ಬರುವುದಿಲ್ಲ. ಬದಲಿಗೆ, ಇದಕ್ಕಾಗಿ ಅವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಆಯ್ಕೆ ಮಾಡಿಕೊಂಡಿದ್ದಾರೆ. ನಟಿ ಹೇಳಿದ್ದೇನೆಂದರೆ, 'ಇನ್​ಸ್ಟಾಗ್ರಾಮ್​ನಲ್ಲಿ ಸಬ್​ಸ್ಕ್ರಿಪ್ಷನ್​ (Instagram subscription) ಶುರು ಮಾಡಿದ್ದಾರೆ. ನೀವು ನನ್ನ ಇನ್​ಸ್ಟಾಗ್ರಾಮ್​ ಪುಟಕ್ಕೆ ಸಬ್​ಸ್ಕ್ರಿಪ್ಷನ್​ ಮಾಡಿಕೊಂಡರೆ ನೀವು ಬದುಕು ಜಟಕಾಬಂಡಿಯನ್ನು ವೀಕ್ಷಿಸಬಹುದಾಗಿದೆ. ಇದು ವ್ಯಕ್ತಿಗತವಾಗಿರುತ್ತದೆ. ಬೇರೆಯವರು ನೋಡುವುದಿಲ್ಲ. ಇಲ್ಲದಿದ್ದರೆ ನಿಮ್ಮ ಸಮಸ್ಯೆ ಜಗಜ್ಜಾಹೀರವಾಗುತ್ತದೆ. ನಿಮ್ಮ ಸಮಸ್ಯೆ ಲಕ್ಷಾಂತರ ಮಂದಿ ನೋಡುತ್ತಾರೆ. ಕೆಲವೊಮ್ಮೆ ಇದು ಮುಜುಗರ ತರುತ್ತದೆ. ಆದರೆ ಇಲ್ಲಿ ಹಾಗಾಗಲ್ಲ' ಎಂದಿದ್ದಾರೆ.

ಸಬ್​ಸ್ಕ್ರಿಪ್ಷನ್​ ಮಾಡಿಕೊಂಡಾಗ ವೈಯಕ್ತಿಕವಾಗಿ ಅಥವಾ ಒಂದೇ ನಿಗದಿತ ಗುಂಪು ಮಾತ್ರ ವೀಕ್ಷಿಸಬಹುದು. ಆದ್ದರಿಂದ ಇದನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಸಹಕಾರ ಇದ್ದರೆ ಕೆಲಸ ನೆರವೇರುತ್ತದೆ ಎಂದಿದ್ದಾರೆ. ನನ್ನ ಪೇಜ್​ಗೆ ಹೋದರೆ, ನೀವು ಸಬ್​ಸ್ಕ್ರಿಪ್ಷನ್​ ಮಾಡಿಕೊಂಡರೆ ಎಲ್ಲವೂ ಆಗುತ್ತದೆ ಎಂದಿದ್ದಾರೆ. ಆ ತಾಯಿ ನನ್ನ ಮೂಲಕ ಹೇಳಿಸುವಂಥ ಸೂಕ್ತ ಕಾನೂನಾತ್ಮಕ ಪರಿಹಾರ ನಿಮಗೆ ಕೊಡುತ್ತೇನೆ. ಹಲವರ ಸಮಸ್ಯೆ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಕಾನೂನಿನ ವ್ಯಾಪ್ತಿಯಲ್ಲಿ ಪರಿಹರಿಸುತ್ತೇನೆ ಎಂದಿದ್ದಾರೆ ಮಾಳವಿಕಾ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಂದನ್​ ಶೆಟ್ಟಿ-ನಿವೇದಿತಾ ಜಟಾಪಟಿ ನಡುವೆ 'ಮೈಮಾಟ'ಕ್ಕೆ ಸಕತ್​ ಡಿಮಾಂಡ್​: ನಾಲ್ಕೇ ದಿನದಲ್ಲಿ 17 ಲಕ್ಷ ವ್ಯೂವ್ಸ್​ ಕಂಡ ಹಾಡು
ಸಿಂಹದ ಮರಿ ಜತೆ ಆಡುತ್ತಲೇ 'ಮಗ'ನ ಪರಿಚಯಿಸಿದ Karna Serial ಕಿರಣ್​ ರಾಜ್​: ದುರ್ಯೋಧನ ಎಂದು ನಾಮಕರಣ