ಮದುವೆಯಾಗಿ ಇದೇ ಮೊದಲ ಬಾರಿಗೆ ಸೆಕ್ಸ್‌ಗೆ ತೆರೆದುಕೊಳ್ಳುತ್ತಿರುವ ಯುವಜೋಡಿಯ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿರುತ್ತವೆ. ಅವುಗಳಲ್ಲಿ ಕೆಲವು ತಪ್ಪು ಕಲ್ಪನೆಗಳ ನಿವಾರಣೆ ಇಲ್ಲಿದೆ.
ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತನಾಲ್ಕು. ಇನ್ನು ಕೆಲವೇ ದಿನಗಳಲ್ಲಿ ಮದುವೆ (Marriage) ಆಗುತ್ತಿದ್ದೇನೆ. ಪತ್ನಿಯಾಗುವವಳ ವಯಸ್ಸು ಇಪ್ಪತ್ತೆರಡು. ನಮ್ಮಿಬ್ಬರ ಕುಟುಂಬಗಳೂ ತುಂಬಾ ಸಾಂಪ್ರದಾಯಿಕ ಹಿನ್ನೆಲೆಯವು. ನಮ್ಮಿಬ್ಬರಿಗೂ ಸೆಕ್ಸ್ ಬಗ್ಗೆ ಏನೇನೂ ಗೊತ್ತಿಲ್ಲ. ನನಗೆ ಗೆಳತಿಯರೊಂದಿಗಾಗಲೀ, ಆಕೆಗೆ ಗೆಳೆಯರ ಜೊತೆಗಾಗಲೀ ಈ ಹಿಂದೆ ಸೆಕ್ಸ್ (Sex) ಮಾಡಿದ, ಸೆಕ್ಸ್ ಬಗ್ಗೆ ಮಾತನಾಡಿದ ಅನುಭವವೂ ಇಲ್ಲ. ಹೀಗಾಗಿ ನಮ್ಮಿಬ್ಬರ ಮೊದಲ ರಾತ್ರಿಯ ಅನುಭವದ ಬಗ್ಗೆ ಕಾತರ, ಭಯ, ಆತಂಕ ಎಲ್ಲವೂ ಇವೆ. 'ತುಂಬಾ ನೋವಾಗುತ್ತದೆ ಅಲ್ವಾ?' ಎಂದು ಆಕೆ ಕೇಳಿದ್ದಾಳೆ. ನನಗೆ ಗೊತ್ತಿಲ್ಲ ಅಂದಿದ್ದೇನೆ. ಮಾರ್ಗದರ್ಶನ ಮಾಡಿ.
ಉತ್ತರ: ನಿಮ್ಮ ಅಮಾಯಕತೆ ಇಷ್ಟವಾಯಿತು. ಸೆಕ್ಸ್‌ಗೆ ಸಂಬಂಧಿಸಿ ಅಮಾಯಕತೆಯೂ ಕೆಲವೊಮ್ಮೆ ರೋಮಾಂಚಕಾರಿಯೇ ಆಗಿರುತ್ತದೆ. ಏನೂ ಭಯ ಪಡಬೇಡಿ. ಮೊದಲ ರಾತ್ರಿಯಂದೇ ನೀವು ಆಗಬೇಕು ಅಂದುಕೊಂಡಿದ್ದು ಆಗದೇ ಇರಬಹುದು; ಮಾಡಬೇಕು ಅಂದುಕೊಂಡದ್ದು ಮಾಡದೇ ಇರಬಹುದು. ಬೇಸರ ಬೇಡ. ಒಂದೊಂದೇ ವಿಷಯ ತಿಳಿಯುತ್ತಾ ತಿಳಿಯುತ್ತಾ ಪ್ರವೀಣರಾಗುತ್ತೀರಿ.
ಮೊತ್ತಮೊದಲ ಬಾರಿಗೆ ಮೊದಲ ರಾತ್ರಿ (First Night) ಗಂಡು ಹೆಣ್ಣು ಸಂಧಿಸುವಾಗ ಸಹಜವಾಗಿ ಇಬ್ಬರಲ್ಲೂ ಒಂದು ಬಗೆಯ ಭಯ, ಕಾತುರತೆ, ರೋಮಾಂಚನ ಇದ್ದೇ ಇರುತ್ತದೆ. ಮೊದಲನೇ ಬಾರಿ ಹೇಗೋ ಏನೋ ಎಂಬ ದುಗುಡವೂ ಹೊಟ್ಟೆಯಲ್ಲಿ ಕಚಗುಳಿ ಇಡುತ್ತಿರುತ್ತದೆ. ಅಷ್ಟೇ ಏಕೆ, ಅನೇಕ ತಪ್ಪು ಕಲ್ಪನೆಗಳು ಕೂಡ ಮನೆ ಮಾಡಿರುತ್ತವೆ. ಈ ತಪ್ಪುಕಲ್ಪನೆಗಳೇ ಮತ್ತಷ್ಟು ಹೆದರಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಕ್ಷಣದ ರೋಮಾಂಚನವನ್ನು ಕಿತ್ತುಕೊಂಡುಬಿಡುತ್ತದೆ. ಹಾಗಾಗಿ, ಮೊದಲ ಬಾರಿಗೆ ಸಂಭೋಗಿಸುವಾಗ ಈ ಕೆಳಗಿನ ಅಂಶಗಳ ಬಗ್ಗೆ ಗಮನವಿಟ್ಟರೆ ಉತ್ತಮ.
No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?
ರಕ್ತಸ್ರಾವ ಆಗಬೇಕು (Bleeding) : ಮೊದಲ ಬಾರಿ ಕೂಡಿಕೊಂಡಾಗ ರಕ್ತಸ್ರಾವವಾದರೆ ಮಾತ್ರ ಹೆಣ್ಣು ಇನ್ನೂ ಕನ್ಯೆಯಾಗಿದ್ದಾಳೆ ಎಂಬ ತಪ್ಪುಕಲ್ಪನೆ ಅನೇಕ ಗಂಡಸರಲ್ಲಿರುತ್ತದೆ. ಆದರೆ, ಎಲ್ಲ ಮಹಿಳೆಯರಲ್ಲಿಯೂ ರಕ್ತಸ್ರಾವವಾಗುವುದಿಲ್ಲ. ಸಂಧಿಸುವಾಗ ಕನ್ಯಾಪೊರೆ (Hymen) ಹರಿಯುವ ಸಾಧ್ಯತೆಗಳಿರುತ್ತದೆ, ಆಗ ರಕ್ತಸ್ರಾವವಾಗುತ್ತದೆ. ಕನ್ಯಾಪೊರೆ ಹರಿದಾಗ ಕೆಲ ಬಾರಿ ರಕ್ತಸ್ರಾವ ಕೂಡ ಆಗುವುದಿಲ್ಲ. ಆ ಭಾಗದಲ್ಲಿ ರಕ್ತನಾಳಗಳು ಹೆಚ್ಚಾಗಿದ್ದಲ್ಲಿ ಮಾತ್ರ ರಕ್ತಸ್ರಾವವಾಗುತ್ತದೆ. ಇಂದಿನ ದಿನಗಳಲ್ಲಿ ಮದುವೆಯಾಗುವ ಮೊದಲೇ ಕನ್ಯಾಪೊರೆ ಹರಿದಿರುವ ಸಾಧ್ಯತೆಗಳೂ ಇರುತ್ತವೆ. ಆಗ ಸಹಜವಾಗಿ ರಕ್ತಸ್ರಾವ ಆಗುವುದಿಲ್ಲ.
ತುಂಬಾ ನೋವಾಗುತ್ತದೆ: ಇದು ಮತ್ತೊಂದು ತಪ್ಪು ಕಲ್ಪನೆ. ಇದು ಅವರವರ ಭಾವನೆಗಳ ಮೇಲೆ ಅವಲಂಬಿತವಾಗಿರುತ್ತದೆ. ತಪ್ಪುಕಲ್ಪನೆ ಇದ್ದಷ್ಟೂ ಮೊದಲ ಬಾರಿ ಸಂಭೋಗಿಸುವಾಗ ಹೆದರಿಕೆ ಮತ್ತೂ ಹೆಚ್ಚುತ್ತದೆ. ಪುರುಷರ ಜನನಾಂಗ ಸ್ತ್ರೀಯರ ಜನನಾಂಗದಲ್ಲಿ ತೂರಿಕೊಂಡಾಗ ಕನ್ಯಾಪೊರೆ ಹರಿಯದಿರುವುದು ಮತ್ತು ನವೆಯಾಗುವುದು ಸಹಜ. ಅದಕ್ಕೂ ಮೊದಲೇ ಸೈಕ್ಲಿಂಗ್, ಸ್ಟ್ರೆಚಿಂಗ್‌ನಂಥ ಕೆಲ ವ್ಯಾಯಾಮಗಳನ್ನು ಮಾಡಿ ಕನ್ಯಾಪೊರೆ ಹರಿದುಕೊಂಡರೆ ನೋವಾಗುವುದು ತುಸು ಕಡಿಮೆಯಾಗುತ್ತದೆ. ಸಂಭೋಗಿಸುವಾಗ ನೋವಾಗುತ್ತಿದ್ದರೆ ಮೊದಲೇ ಮಾತಾಡಿಕೊಂಡರೆ ನಿಧಾನವಾಗಿ ಕ್ರಿಯೆ ಮಾಡಿ ನೋವು ಕಡಿಮೆ ಮಾಡಿಕೊಳ್ಳಬಹುದು.
Menstruation and Sex: ಮುಟ್ಟಾದಾಗ ಸೆಕ್ಸ್‌ಗೆ ಒತ್ತಾಯಿಸುವ ಗಂಡ, ಇದೇನು ವಿಚಿತ್ರ!
ಯೋನಿಯ ಉರಿತ: ಸಂಭೋಗವನ್ನು ಮೊದಲ ಬಾರಿ ಮಾಡುತ್ತಿರುವುದರಿಂದ ಗಂಡಸರ ಜನನಾಂಗ ಯೋನಿಯನ್ನು ಸೇರಿದಾಗ ಮತ್ತು ನಂತರದ ಘರ್ಷಣೆಯಿಂದ ನೋವಾಗುವುದು ಮತ್ತು ಮೂತ್ರ ವಿಸರ್ಜನೆ ಮಾಡುವಾಗ ಉರಿ ಏಳುವುದು ಸಹಜ. ಇದು ಕೆಲ ದಿನಗಳು ಕಾಲ ಮಾತ್ರ ಇರುತ್ತದೆ. ಇದರಿಂದ ಹೆದರುವ ಅಗತ್ಯವಿಲ್ಲ. ಆ ಉರಿ ಮತ್ತು ನೋವು ಕಡಿಮೆಯಾಗುವವರೆಗೆ ಸಂಭೋಗಿಸಬೇಕಿಲ್ಲ. ಯೋನಿಯ ಒಳಭಾಗ ಒಣವಾಗಿದ್ದರೆ ಉರಿಯುತ್ತದೆ. ಒಂದು ವಾರದ ನಂತರವೂ ಇದೇ ಸ್ಥಿತಿ ಮುಂದುವರೆದರೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು.
ಸಂಭೋಗದ ನಂತರ ಮೂತ್ರ ವಿಸರ್ಜಿಸಿದರೆ ಗರ್ಭಧಾರಣೆಯಾಗುವುದಿಲ್ಲ: ಪ್ರಥಮ ಬಾರಿ ಗಂಡ ಹೆಂಡತಿ ಕೂಡಿಕೊಳ್ಳುವಾಗ ಮಕ್ಕಳು ಬೇಡವೆಂದಿದ್ದರೆ ಕಾಂಡೋಮ್ (Condom) ಉಪಯೋಗಿಸಬೇಕು ಎಂದು ಯೋಚಿಸಿರುವುದಿಲ್ಲ. ಮೊದಲ ಸಂಭೋಗದ ಹುರುಪಿನಲ್ಲಿ ಮತ್ತು ಉತ್ಸಾಹದಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಾಮಕ್ರೀಡೆಯಲ್ಲಿ ತೊಡಗಿಬಿಡುತ್ತಾರೆ. ಯೋನಿಯಲ್ಲಿ ಸ್ರವಿಸಿದ ವೀರ್ಯವನ್ನು ಮೂತ್ರ ವಿಸರ್ಜನೆ (Urination) ಮಾಡುವ ಮುಖಾಂತರ ಹೊರಹಾಕಿ ಗರ್ಭಧಾರಣೆಯನ್ನು ತಪ್ಪಿಸಬಹುದು ಎಂಬ ತಪ್ಪು ಕಲ್ಪನೆ ಅನೇಕ ಮಹಿಳೆಯರಲ್ಲಿ ಇರುತ್ತದೆ. ಇದು ತಪ್ಪುಕಲ್ಪನೆ. ವೀರ್ಯ (Semen) ಅಂಡಾಣುವನ್ನು ಕೂಡಿಕೊಂಡರೆ ಗರ್ಭ ಧರಿಸುವ ಸಾಧ್ಯತೆ ಖಂಡಿತ ಇರುತ್ತದೆ. ಆದ್ದರಿಂದ ಕಾಂಡೋಮ್ ಧರಿಸಿ ಮಿಲನ ಮಹೋತ್ಸವ ಆಚರಿಸಿಕೊಳ್ಳುವುದು ಉತ್ತಮ.