ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕು ಎಂದರೆ, ಒಬ್ಬರ ಮೇಲೆ ಒಬ್ಬರು ಡೌಟ್ ಪಡಬಾರದು ಎಂದರೆ ಯಾರನ್ನು ಮದುವೆಯಾಗಬೇಕು ಎಂದಿರುವ ಟೆಕ್ಕಿಯ ಮಾತೀಗ ಭಾರಿ ಚರ್ಚೆ ಹುಟ್ಟುಹಾಕಿದೆ.
ಇಂದಿನ ಬ್ಯುಸಿ ಜೀವನದಲ್ಲಿ ಯಾರಿಗೂ ಇತರರೊಂದಿಗೆ ಮಾತನಾಡಲು ಸಮಯವಿಲ್ಲ. ಜನರು ದಿನದ 24 ಗಂಟೆಯೂ ಕೆಲಸದಲ್ಲಿ ನಿರತರಾಗಿರುತ್ತಾರೆ. ತಮಗಾಗಿ ಮತ್ತು ತಮ್ಮ ಪ್ರೀತಿಪಾತ್ರರಿಗೆ ಸಮಯ ಕಂಡುಕೊಳ್ಳುವುದು ಕಷ್ಟಕರವಾಗಿದೆ. ಇನ್ನು ಮದುವೆಯಾದರೂ ಸಂಗಾತಿ ಜೊತೆ ಇರುವುದೇ ಕಷ್ಟ ಎನ್ನಿಸುವ ಸ್ಥಿತಿ ಇದೆ. ಇಬ್ಬರಿಗೂ ದುಡಿಮೆ ಬೇಕು. ಅದರಲ್ಲಿಯೂ ಮಹಾನಗರಗಳಲ್ಲಿ ಇದು ಅನಿವಾರ್ಯವೂ ಆಗಿಬಿಟ್ಟಿದೆ. ದುಡಿಮೆಯ ಬೆನ್ನೇರಿ ಹೋಗಿ ಸಂಬಂಧಗಳೇ ಹಾಳಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಬೆಂಗಳೂರಿನ ಟೆಕ್ಕಿ ಅವರು ಪರಿಹಾರವನ್ನು ನೀಡಿದ್ದಾರೆ. ಈ ಪರಿಹಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ತಮಾಷೆಯ ಜೊತೆ ವಿರೋಧವೂ ವ್ಯಕ್ತವಾಗ್ತಿದೆ.
ಹರ್ಷಿತ್ ಮಹಾವರ್ ಎನ್ನುವ ಟೆಕ್ಕಿ ಒಬ್ಬರು ನೀಡಿರುವ ಸಲಹೆ ಎಂದರೆ ಸಹೋದ್ಯೋಗಿಯನ್ನು ಮದುವೆಯಾಗುವುದು! ಹೌದು. ಕೆಲಸದ ಜೀವನ ಸಮತೋಲನವನ್ನು ಕಾಪಾಡಿಕೊಳ್ಳಲು ಭಾರತೀಯ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳನ್ನು ಮದುವೆಯಾಗಬೇಕು ಎಂದು ಅವರು ಹೇಳಿದ್ದಾರೆ. ಇದರಿಂದ ಆಗುವ ಪ್ರಯೋಜನಗಳ ಪಟ್ಟಿಯನ್ನು ಅವರು ಮಾಡಿದ್ದಾರೆ. ಅವುಗಳನ್ನು ನೋಡುವುದಾದರೆ, ಆಫೀಸ್ ಕ್ಯಾಬ್‌ಗಳಲ್ಲಿ ಹಣ ಉಳಿಸಬಹುದು, ಮನೆಯಿಂದ ಕೆಲಸ ಮಾಡುವುದು ಇದ್ದರೂ ಕಚೇರಿಯಿಂದಲೇ ಕೆಲಸ ಮಾಡುವಂತೆ ಭಾಸವಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ಮೀಟಿಂಗ್ನಲ್ಲಿ ಇಬ್ಬರೂ ಇರುವುದರಿಂದ ಅಲ್ಲಿಯೇ ಇಬ್ಬರ ಒಪೀನಿಯನ್ ಸಿಕ್ಕಿಬಿಡುತ್ತದೆ ಎಂದಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ಕೆಲಸದ ಸ್ಥಳದಲ್ಲಿ ವಿವಾಹೇತರ ಸಂಬಂಧಗಳ ವ್ಯಾಪ್ತಿಯೂ ಕಡಿಮೆಯಾಗುತ್ತದೆ ಎನ್ನುವುದು!
ಬೋಟ್ಮ್ಯಾನ್ ಜೊತೆ ಮದುಮಗನ ಪ್ರೀ ವೆಡ್ಡಿಂಗ್ ಶೂಟ್... ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್!
ಯಾರಾದರೂ ಇನ್ನೂ ಮದುವೆಯಾಗಿಲ್ಲದಿದ್ದರೆ ಇದನ್ನು ಪಾಲಿಸಿ, ಇದರಿಂದ ಸಮಸ್ಯೆ ಉದ್ಭವಿಸುವುದಿಲ್ಲ. ಎಲ್ಲವೂ ಅಲ್ಲಿಯೇ ಸಾಲ್ವ್ ಆಗಿಬಿಡುತ್ತದೆ. ಒಟ್ಟಿಗೇ ಕಚೇರಿಯಲ್ಲಿ ಇರುವುದರಿಂದ ಒಬ್ಬರ ಸಮಸ್ಯೆ ಒಬ್ಬರಿಗೆ ಅರ್ಥವಾಗುತ್ತದೆ. ಕಚೇರಿಯಲ್ಲಿ ಕೆಲಸದ ಒತ್ತಡ ಎಷ್ಟಿರುತ್ತದೆ ಎನ್ನುವುದು ಅಲ್ಲಿಯೇ ತಿಳಿದುಬಿಡುತ್ತದೆ. ಆದರೆ ಬೇರೆ ಬೇರೆ ಕಚೇರಿ ಆಗಿದ್ದರೆ, ಅಲ್ಲಿ ನಿಮ್ಮ ಕೆಲಸ ಏನು, ಒತ್ತಡ ಎಷ್ಟಿರುತ್ತದೆ ಗೊತ್ತಿರುವುದಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಸ್ವಲ್ಪ ಲೇಟ್ ಆಗಿ ಮನೆಗೆ ಬಂದರೆ ಡೌಟ್ ಪಡುವ ಅಗತ್ಯವೂ ಇರುವುದಿಲ್ಲ. ಏಕೆಂದರೆ ಇಬ್ಬರೂಒಟ್ಟಿಗೇ ಒಂದೇ ಕಡೆ ಇರುವುದರಿಂದ ಅಲ್ಲಿಯೇ ಎಲ್ಲವೂ ತಿಳಿದುಬಿಟ್ಟಿರುತ್ತದೆ ಎಂದಿದ್ದಾರೆ.
ಇದಕ್ಕೆ ಥಹರೇವಾರಿ ಕಮೆಂಟ್ಸ್ ಬಂದಿವೆ. ಒಂದಿಬ್ಬರು ತಮ್ಮದು ಒಂದೇ ಕಚೇರಿಯಲ್ಲಿದ್ದುಕೊಂಡು ಲವ್ ಮ್ಯಾರೇಜ್ ಆಗಿ, ಈಗ ಡಿವೋರ್ಸ್ ಪಡೆದಿರುವುದಾಗಿ ಹೇಳಿದ್ದರೆ, ಮತ್ತೆ ಕೆಲವರು, ಹಾಗಿದ್ದರೆ ನಿಮಗೆ ಮನೆ ಏಕೆ? ನೀವು ಕಚೇರಿಯಲ್ಲಿಯೇ ಏಕೆ ಇರಬಾರದು? ಬಾಡಿಗೆ, ಪಾರ್ಕಿಂಗ್, ವಿದ್ಯುತ್ ಮತ್ತು ನೀರಿನ ಬಿಲ್‌ಗಳು ಎಲ್ಲಾ ಫ್ರೀ ಆಗಿಬಿಡುತ್ತದೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, "ಯಾರನ್ನಾದರೂ ಮದುವೆಯಾಗಿ ಅವರನ್ನು ನಿಮ್ಮ ತಂಡಕ್ಕೆ ಸೇರಿಸಿ. ರೆಫರಲ್ ಬೋನಸ್ ಕೂಡ ಪಡೆಯಿರಿ" ಎಂದು ತಮಾಷೆ ಮಾಡಿದ್ದಾರೆ.
ಇದು ಕೋಳಿಯಲ್ಲ, ಕೊಕ್ಕೊಕ್ಕೋ ಎನ್ನೋ ಗಿಳಿ... ನಿಜಾರೀ... ಆನ್ಲೈನ್ನಲ್ಲೂ ಲಭ್ಯ! ಇಲ್ಲೇ ಟೆಸ್ಟ್ ಮಾಡಿ ನೋಡಿ...