ಮಾ.20ಕ್ಕೆ ಚಹಾಲ್-ಧನಶ್ರೀ ಡಿವೋರ್ಸ್ ಅಧಿಕೃತ, ಜೀವನಾಂಶ ಮೊತ್ತ ಎಷ್ಟು?

ಐಪಿಎಲ್ 2025 ಟೂರ್ನಿ ಆರಂಭಕ್ಕೂ ಮೊದಲೇ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಡಿವೋರ್ಸ್ ಅಧಿಕೃತಗೊಳ್ಳಲಿದೆ. ಇದೀಗ ಬಾಂಬೈ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಇದರ ಜೊತೆಗೆ ಕ್ರಿಕೆಟಿಗ ಚಹಾಲ್, ಮಾಜಿ ಪತ್ನಿಗೆ ಎಷ್ಟು ಜೀವನಾಂಶ ಕೊಡಬೇಕು?

Bombay High Court direct Yuzvendra Chahal Dhanashree Verma divorce by march 20

ಮುಂಬೈ(ಮಾ.19) ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ವಿವಾಹ ವಿಚ್ಚೇದನ ಕೆಲವೇ ನಾಳೆ(ಮಾ.20) ಅಧಿಕೃತಗೊಳ್ಳಲಿದೆ. ಬಾಂಬೇ ಹೈಕೋರ್ಟ್ ಈ ಕುರಿತು ಸ್ಪಷ್ಟ ಸೂಚನೆ ನೀಡಿದೆ. ಪ್ರಮುಖವಾಗಿ ಐಪಿಎಲ್ 2025 ಆರಂಭ ಗಮನದಲ್ಲಿಟ್ಟುಕೊಂಡು ಚಹಾಲ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಚಹಾಲ್ ಹಾಗೂ ಧನಶ್ರೀ ವರ್ಮಾ ಅರ್ಜಿ ಪುರಸ್ಕರಿಸಿದ ಬಾಂಬೇ ಹೈಕೋರ್ಚ್ ಇದೀಗ ಕೌಟುಂಬಿಕ ನ್ಯಾಯಾಲಕ್ಕೆ ಮಹತ್ವದ ಆದೇಶ ನೀಡಿದೆ. ಯುಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಅವರಿಗೆ ಕಾನೂನಿನ ಪ್ರಕಾರ ಮನಸ್ಸು ಬದಲಾಯಿಸಲು, ಮತ್ತೆ ಒಂದಾಗಲು ಅಥವಾ ಸೆಟ್ಲೆಮೆಂಟ್ ಪೂರ್ಣಗೊಳಿಸಲು ನೀಡುವ 6 ತಿಂಗಳ ಕಾಲಾವಾಕಶ ರದ್ದುಗೊಳಿಸಿ, ಮಾರ್ಚ್ 20 ರೊಳಗೆ ಪ್ರಕರಣ ಇತ್ಯರ್ಥಗೊಳಿಸಲು ಸೂಚಿಸಿದೆ. 

ಮಾರ್ಚ್ 22ರಿಂದು ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಮಾರ್ಚ್ 23ರಂದು ಯಜುವೇಂದ್ರ ಚಹಾಲ್ ಆಡುತ್ತಿರುವ  ರಾಜಸ್ಥಾನ ರಾಯಲ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಹೋರಾಟ ನಡೆಸಲಿದೆ. ಹೀಗಾಗಿ ಇದಕ್ಕೂ ಮೊದಲೇ ಡಿವಿರ್ಸ್ ಪ್ರಕರಣ ಇತ್ಯರ್ಥಗೊಳಿಸಲು ಹೈಕೋರ್ಟ್ ಕೌಟುಂಬಿಕ ನ್ಯಾಯಾಲಕ್ಕೆ ಸೂಚಿಸಿದೆ. ಹೈಕೋರ್ಟ್ ಸೂಚನೆಯಂತೆ ಮಾರ್ಚ್ 20 ರಂದು ಯುಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆಯಲಿದ್ದಾರೆ.

Latest Videos

 

ಕಳೆದ ಒಂದೂವರೆ ವರ್ಷದಿಂದ ಬೇರೆ ಬೇರೆಯಾಗಿ ನೆಲೆಸಿರುವ ಚಹಾಲ್ ಹಾಗೂ ಧನಶ್ರೀ ವರ್ಮಾ ಫೆಬ್ರವರಿ 5 ರಂದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆಯಲು ಕೌಟುಂಬಿಕ ನ್ಯಾಯಾಲಕ್ಕೆ ಮನವಿ ಮಾಡಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಕಾನೂನಡಿಯಲ್ಲಿರುವ 6 ತಿಂಗಳ ಕೂಲಿಂಗ್ ಪೀರಿಯೆಡ್ ಕಾರಣಕ್ಕಾಗಿ ತ್ವರಿತವಾಗಿ ವಿಚ್ಚೇದನ ನೀಡಲು ಕೋರ್ಟ್ ನಿರಾಕರಿಸಿತ್ತು. ಹೀಗಾಗಿ 6 ತಿಂಗಳ ಬಳಿಕ ವಿಚ್ಚೇದನ ಅರ್ಜಿ ಪರಿಗಣಿಸುವುದಾಗಿ ಕೌಟುಂಬಿಕ ನ್ಯಾಯಾಲಯ ಹೇಳಿತ್ತು.

ಕೌಟುಂಬಿಕ ನ್ಯಾಯಾಲಯ ಆದೇಶದ ವಿರುದ್ಧ ಯುಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಇಬ್ಬರೂ ಜೊತೆಗೆ ಸೇರಿ ಕೂಲಿಂಗ್ ಪಿರಿಯೆಡ್ ರದ್ದುಗೊಳಿಸಿ ತ್ವರಿತವಾಗಿ ವಿಚ್ಚೇದನ ನೀಡಬೇಕು ಎಂದು  ಬಾಂಬೇ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಇಷ್ಟೇ ಅಲ್ಲ ಒಂದೂವರೆ ವರ್ಷಗಳಿಂದ ಬೇರೆ ಬೇರೆಯಾಗಿ ನೆಲೆಸಿರುವುದಾಗಿ ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ಕೂಲಿಂಗ್ ಪೀರಿಯೆಡ್ ರದ್ದುಗೊಳಿಸಿ ಆದೇಶ ನೀಡಿತ್ತು. ಇಷ್ಟೇ ಅಲ್ಲ ಕೌಟುಂಬಿಕ ನ್ಯಾಯಾಲಯ ಮಾರ್ಚ್ 20ರೊಳಗೆ ವಿಚ್ಚೇದನ ಅರ್ಜಿ ಇತ್ಯರ್ಥಗೊಳಿಸಲು ಆದೇಶ ನೀಡಿದೆ.

ಜೀವನಾಂಶಕ್ಕೆ ಕೋರ್ಟ್ ಆದೇಶ
ಅಧಿಕೃತ ವಿಚ್ಚೇದನ ಪಡೆಯುವ ಮೊದಲು ಯುಜುವೇಂದ್ರ ಚಹಾಲ್ ಮಾಜಿ ಪತ್ನಿ ಧನಶ್ರೀ ವರ್ಮಾಗೆ ಒಟ್ಟು 4.75 ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್ ಸೂಚಿಸಿದೆ. ಈ ಮೊತ್ತದಲ್ಲಿ ಚಹಾಲ್ ಈಗಾಗಲೇ ಧನಶ್ರೀ ವರ್ಮಾಗೆ 2.37 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ. ಇನ್ನುಳಿದ ಮೊತ್ತವನ್ನು ಚಹಾಲ್, ಧನಶ್ರೀ ವರ್ಮಾಗೆ ಪಾವತಿ ಮಾಡಬೇಕು.

click me!