parenting tips : ಚಿಕ್ಕ ಮಕ್ಕಳ ಮುಂದೆ ಬಟ್ಟೆ ಬದಲಿಸಬಹುದೇ? ಇದರಿಂದ ಮಕ್ಕಳ ಮೇಲಾಗುವ ಪರಿಣಾಮ ಏನು?

Published : Oct 29, 2026, 06:12 PM IST
parenting

ಸಾರಾಂಶ

ಮಕ್ಕಳ ಮುಂದೆ ಬಟ್ಟೆ ಬದಲಿಸಬೇಕೇ ಬೇಡ್ವೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಬಟ್ಟೆ ಬದಲಿಸಿದ್ರೆ ಏನಾಗುತ್ತೆ? ಯಾವ ವಯಸ್ಸಿನವರೆಗೆ ಮಕ್ಕಳ ಮುಂದೆ ಬಟ್ಟೆ ಬದಲಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.

ಮಕ್ಕಳನ್ನು ಬೆಳೆಸುವಾಗ ಪೋಷಕರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡುತ್ತವೆ. ಅವುಗಳಲ್ಲಿ ಒಂದು, ಮಕ್ಕಳ ಮುಂದೆ ಬಟ್ಟೆ ಬದಲಿಸುವುದು ಅಥವಾ ಸ್ನಾನ ಮಾಡುವುದು ಸರಿಯೇ ಎಂಬುದು. ಹೀಗೆ ಮಾಡುವುದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಕೆಲವರು ಭಾವಿಸುತ್ತಾರೆ. ಇನ್ನು ಕೆಲವರು ಚಿಕ್ಕ ಮಕ್ಕಳಿಗೆ ಹೆಚ್ಚು ತಿಳಿವಳಿಕೆ ಇರುವುದಿಲ್ಲ, ಹಾಗಾಗಿ ಅವರ ಮುಂದೆ ಬಟ್ಟೆ ಬದಲಿಸಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದುಕೊಳ್ಳುತ್ತಾರೆ.

ತಜ್ಞರು ಏನು ಹೇಳ್ತಾರೆ?

ಮಕ್ಕಳು ಚಿಕ್ಕವರಿದ್ದಾಗ ಅವರ ಬೆಳವಣಿಗೆಯ ಹಂತದಲ್ಲಿ ಸುತ್ತಮುತ್ತಲಿನ ವಿಷಯಗಳನ್ನು ಗಮನಿಸಿ, ಅರ್ಥಮಾಡಿಕೊಂಡು ಕಲಿಯುತ್ತಾರೆ ಎಂದು ಮಕ್ಕಳ ತಜ್ಞೆ ಹೇಳುತ್ತಾರೆ. ಈ ವಯಸ್ಸಿನಲ್ಲಿ ಪೋಷಕರು ಮಕ್ಕಳ ಮುಂದೆ ಬಟ್ಟೆ ಬದಲಿಸಿದರೆ, ದೇಹದ ವಿವಿಧ ಅಂಗಗಳ ಬಗ್ಗೆ ಮಕ್ಕಳಿಗೆ ಸಹಜವಾದ ತಿಳಿವಳಿಕೆ ಮೂಡುತ್ತದೆ. ಮಾನವ ದೇಹ ಸಹಜವಾದದ್ದು, ಅದರ ಬಗ್ಗೆ ನಾಚಿಕೆಪಡುವ ಅಗತ್ಯವಿಲ್ಲ ಎಂಬುದನ್ನು ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ.

ವಯಸ್ಸಿನ ಮಿತಿ ಇರಲಿ

ಮಕ್ಕಳು ಸುಮಾರು ಮೂರೂವರೆ ಅಥವಾ ನಾಲ್ಕು ವರ್ಷದವರಾಗುತ್ತಿದ್ದಂತೆ ಅವರಿಗೆ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಬಗ್ಗೆ ತಿಳಿಸುವುದು ಮುಖ್ಯವಾಗುತ್ತದೆ. ಈ ವಯಸ್ಸಿನ ನಂತರ ಮಕ್ಕಳ ಮುಂದೆ ಬಟ್ಟೆ ಬದಲಿಸುವುದನ್ನು ತಪ್ಪಿಸಿ. ಇದು ವೈಯಕ್ತಿಕ ಖಾಸಗಿತನಕ್ಕೆ ಸಂಬಂಧಿಸಿದ ವಿಷಯ ಎಂಬುದನ್ನು ಅವರಿಗೆ ಕಲಿಸಬೇಕು. ಬೇರೆಯವರು ಬಟ್ಟೆ ಬದಲಿಸುವಾಗ ಏಕಾಂತ ಬಯಸಿದರೆ ಅವರ ಇಚ್ಛೆಯನ್ನು ಗೌರವಿಸಬೇಕು. ಪೋಷಕರು ಕೂಡ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು.

ಮಕ್ಕಳಿಗೆ ತಮ್ಮ ದೇಹದ ಮೇಲೆ ತಮಗೇ ಹಕ್ಕಿದೆ ಎಂಬುದನ್ನು ತಿಳಿಸುವುದು ಬಹಳ ಮುಖ್ಯ. ಈ ಮೂಲಕ ಮಕ್ಕಳು ಸರಿ-ತಪ್ಪು, ವೈಯಕ್ತಿಕ ಮಿತಿಗಳು ಮತ್ತು ಇತರರ ಒಪ್ಪಿಗೆಯನ್ನು ಗೌರವಿಸುವುದನ್ನು ಕಲಿಯುತ್ತಾರೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರಿಗೆ ಇಂತಹ ವಿಷಯಗಳನ್ನು ತಿಳಿಸಿಕೊಡಬಹುದು. ಮಕ್ಕಳು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ, ಅವರನ್ನು ಗದರಿಸದೆ ಸಮಾಧಾನದಿಂದ ಉತ್ತರಿಸಬೇಕು. ಜೊತೆಗೆ, ಪೋಷಕರು ಮಕ್ಕಳ ವೈಯಕ್ತಿಕ ಮಿತಿಗಳನ್ನೂ ಗೌರವಿಸಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪತ್ನಿ ಹಸಿವಿನಿಂದ ಬಳಲುತ್ತಿದ್ದರೂ ಸುಮ್ಮನಿರುವ ಗಂಡಂದಿರೇ, ನಿಮಗೆ ನಾಚಿಕೆಯಾಗಬೇಕು! ಮನೋವಿಜ್ಞಾನಿ ಆಕ್ರೋಶ
ಪ್ರೀತಿಯಲ್ಲೂ ಬ್ಯಾಕಪ್ ಆಪ್ಷನ್! Gen Z ಡೇಟಿಂಗ್‌ನ ಹೊಸ ಬೆಂಚಿಂಗ್ ಟ್ರೆಂಡ್ ಬಗ್ಗೆ ಗೊತ್ತಾ?