ಚುನಾವಣೆ ಸಮಯದಲ್ಲಿ ಪ್ರತ್ಯಕ್ಷರಾದ 2ನೇ ಪತ್ನಿ ಪುತ್ರಿ: ನಟ ಬಿಜೆಪಿ ಸಂಸದ ರವಿ ಕಿಶನ್‌ಗೆ ಸಂಕಷ್ಟ

ತಾನು 1996ರಲ್ಲಿ ರವಿಕಿಶನ್ ಅವರನ್ನು ಮದ್ವೆಯಾಗಿದ್ದೇನೆ, ನಮ್ಮಿಬ್ಬರಿಗೆ ಒಬ್ಬಳು  ಮಗಳಿದ್ದಾಳೆ. ಆಕೆಯನ್ನು ರವಿ ಕಿಶನ್ ತಮ್ಮ ಮಗಳೆಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಮಹಿಳೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Actor BJP MP Ravi Kishan is in trouble during Lok Sabha election Woman Claims 2nd wife and shows daughter akb

ನವದೆಹಲಿ: ಚುನಾವಣೆ ಸಮಯದಲ್ಲಿ ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರು ತಮ್ಮ ಮಗಳನ್ನು ಕರೆದುಕೊಂಡು ಬಂದು ಸುದ್ದಿಗೋಷ್ಠಿ ನಡೆಸಿದ್ದು, ತಾನು ನಟ ಸಂಸದ ರವಿ ಕಿಶನ್ ಅವರ ಪತ್ನಿಯಾಗಿದ್ದು,  ತಾನು 1996ರಲ್ಲಿ ರವಿಕಿಶನ್ ಅವರನ್ನು ಮದ್ವೆಯಾಗಿದ್ದೇನೆ, ನಮ್ಮಿಬ್ಬರಿಗೆ ಒಬ್ಬಳು  ಮಗಳಿದ್ದಾಳೆ. ಆಕೆಯನ್ನು ರವಿ ಕಿಶನ್ ತಮ್ಮ ಮಗಳೆಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಅಪರ್ಣಾ ಠಾಕೂರ್ ಎಂಬುವವರು ಈ ಆರೋಪ ಮಾಡಿದ್ದು, ಈ ಸಂಬಂಧ ಅವರು ನಿನ್ನೆ ತಮ್ಮ ಪುತ್ರಿಯನ್ನು ಕರೆದುಕೊಂಡು ಬಂದು ಲಕ್ನೋದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.  ರವಿ ಕಿಶನ್ ಅವರು ಉತ್ತರ ಪ್ರದೇಶದ ಗೋರಕ್‌ಪುರ ಕ್ಷೇತ್ರದ ಹಾಲಿ ಸಂಸದರಾಗಿದ್ದು, ಆ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿದ್ದಾರೆ. 

ರವಿ ಕಿಶನ್ ಅವರನ್ನು ತನ್ನ ಪತಿಯೆಂದು ಹೇಳಿರುವ ಮಹಿಳೆ ಅಪರ್ಣಾ ಠಾಕೂರ್ ತಾನು ಹಾಗೂ ರವಿ ಕಿಶನ್ ಅವರು 1996ರಲ್ಲಿ ಮದ್ವೆಯಾಗಿದ್ದೇವೆ. ನಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದ್ವೆ ನಡೆದಿದ್ದು, ಮಗಳೂ ಇದ್ದಾಳೆ. ಆದರೆ ಆಕೆಯನ್ನು ರವಿ ಕಿಶನ್ ಸಾಮಾಜಿಕವಾಗಿ ತನ್ನ ಮಗಳು ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಅಪರ್ಣಾ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.

ಭಾರತೀಯ ಸೇನೆ ಸೇರಿದ 'ಹೆಬ್ಬುಲಿ' ವಿಲನ್ ರವಿ ಕಿಶನ್ ಮಗಳು ಇಶಿಕಾ; ಇದಕ್ಕಿಂತ ಹೆಮ್ಮೆ ತಂದೆಗೆ ಇನ್ನೇನಿದೆ?

ಸುದ್ದಿಗೋಷ್ಠಿಗೆ ಮಗಳನ್ನು ಕರೆತಂದಿದ್ದ ಅಪರ್ಣಾ, ರವಿ ಕಿಶನ್ ಅವರು ತಮ್ಮ ಮಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಆಕೆಯನ್ನು ಸಾರ್ವಜನಿಕವಾಗಿ ಮಗಳು ಎಂದು ಒಪ್ಪಿಕೊಳ್ಳುವುದಕ್ಕೆ ಅವರು ಸಿದ್ಧರಿಲ್ಲ ಎಂದು ದೂರಿದರು. ತನ್ನ ಮಗಳಿಗೆ  ಕಿಶನ್ ಮಗಳು ಎಂದು ಹೇಳಿಕೊಳ್ಳುವ ಹಕ್ಕಿದೆ. ಹಾಗೂ ಆಕೆ ಇದಕ್ಕೆ ನ್ಯಾಯಸಮ್ಮತವಾಗಿ ಅರ್ಹಳಾಗಿದ್ದಾಳೆ ಎಂದ ಅಪರ್ಣಾ ಅವರು ರವಿಕಿಶನ್ ಅವರು ಮಗಳನ್ನು ಎತ್ತಿಕೊಂಡಿರುವ ಫೋಟೋವೊಂದನ್ನು ಕೂಡ ಸಾಕ್ಷಿಯಾಗಿ ನೀಡಿದ್ದಾರೆ. ರವಿ ಕಿಶನ್ ತಮ್ಮ ಮಗಳ ಹಕ್ಕಿನ ಬಗ್ಗೆ ಮನ್ನಣೆ ನೀಡದೇ ಇದ್ದಲ್ಲಿ ತಾನು ಕಾನೂನಿನ ಮೊರೆ ಹೋಗುವುದಾಗಿ ಅವರು ಹೇಳಿದ್ದಾರೆ. 

ಇನ್ನು ಸುದ್ದಿಗೋಷ್ಠಿಯಲ್ಲಿ ಅಪರ್ಣಾ ಪುತ್ರಿಯೂ ಮಾತನಾಡಿದ್ದು, ನನಗೆ 15 ವರ್ಷದವಳಿದ್ದಾಗ ರವಿ ಕಿಶನ್ ಅವರು ನನ್ನ ತಂದೆ ಎಂಬುದು ನನಗೆ ತಿಳಿಯಿತು, ಅದಕ್ಕೂ ಮೊದಲು ನಾನು ಅವರನ್ನು ಅಂಕಲ್ ಎಂದು ಕರೆಯುತ್ತಿದೆ. ಅವರು ನನ್ನ ಹುಟ್ಟುಹಬ್ಬದ ಸಮಯದಲ್ಲಿ ನಮ್ಮ ಮನೆಗೆ ಬರುತ್ತಿದ್ದರು.  ಅವರ ಕುಟುಂಬವನ್ನು ಕೂಡ ನಾನು ಭೇಟಿಯಾಗಿದ್ದೇನೆ. ಓರ್ವ ತಂದೆಯಾಗಿ ಅವರು ಯಾವತ್ತೂ ನನ್ನ ಜೊತೆ ಇರಲಿಲ್ಲ, ಅವರು ನನ್ನನ್ನು ಕೂಡ ಅವರ ಮಗಳಾಗಿ ಸ್ವೀಕರಿಸಬೇಕು ಎಂದು ನಾನು ಬಯಸುತ್ತೇನೆ. ಇದೇ ಕಾರಣಕ್ಕೆ ನಾವು ಕೋರ್ಟ್‌ನಲ್ಲಿ ಕೇಸ್ ಹಾಕಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ನಟಿ ನಗ್ಮಾ ಜೊತೆ ಅನೈತಿಕ ಸಂಬಂಧ: ಕೊನೆಗೂ ಮೌನ ಮುರಿದ ನಟ ರವಿ ಕಿಶನ್

ರವಿ ಕಿಶನ್ ಶುಕ್ಲಾ ಅಲಿಯಾಸ್ ರವಿ ಕಿಶನ್ ಅವರು ನಟನಾಗಿ ನಂತರ ರಾಜಕೀಯ ಪ್ರವೇಶಿಸಿದ್ದು, ಭೋಜ್‌ಪುರಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇದರ ಜೊತೆಗೆ ಕೆಲವು ತೆಲುಗು ಹಾಗೂ ಕನ್ನಡ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2006ರಲ್ಲಿ ಹಿಂದಿ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಇವರು ರನ್ನರ್ ಆಪ್ ಆಗಿ ಹೊರಹೊಮ್ಮಿದ್ದರು. ಝಲಕ್ ದಿಕ್ಲಾಜಾದಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. 54 ವರ್ಷದ ಈ ನಟ ಪ್ರಸ್ತುತ ಕೊನೆಯದಾಗಿ ಮಿಷನ್ ರಾಣಿಗಂಜ್ ಸಿನಿಮಾದಲ್ಲಿ ನಟಿಸಿದ್ದು, ಅದು 2023ರ ಆಕ್ಟೋಬರ್‌ನಲ್ಲಿ ತೆರೆ ಕಂಡಿತ್ತು. 

1969ರ ಜುಲೈ 17 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ರವಿ ಕಿಶನ್ ಮುಂಬೈನಲ್ಲೇ ಪಿಯುಸಿ ಮುಗಿಸಿದ್ದರು. ಆದರೆ ಇವರ ಪೋಷಕರು ಮೂಲತಃ ಉತ್ತರ ಪ್ರದೇಶದ ಜಾನ್‌ಪುರ ಜಿಲ್ಲೆಯ ಕೆರಕಾತ್‌ನವರು. 2014 ಲೋಕಸಭಾ ಚುನಾವಣೆಯ ವೇಳೆ ಜಾನ್‌ಪುರ ಕ್ಷೇತ್ರದಿಂದ ಅವರು ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ 2017ರಲ್ಲಿ ಬಿಜೆಪಿ ಸೇರಿದ ಅವರು 2019ರಲ್ಲಿ ಗೋರಕ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಇವರಿಗೆ ಅಧಿಕೃತವಾಗಿ ಪ್ರೀತಿ ಕಿಶನ್ ಎಂಬ ಪತ್ನಿ ಇದ್ದು, ಇಶಿತಾ ಶುಕ್ಲಾ ಎಂಬ ಮಗಳಿದ್ದಾಳೆ.

 

 

Latest Videos
Follow Us:
Download App:
  • android
  • ios