ಬಾಯ್ ಫ್ರೆಂಡ್ ಖಾಲಿ ಪರ್ಸ್ ನೋಡಿ MNC ಗರ್ಲ್ ಫ್ರೆಂಡ್ ರಿಯಾಕ್ಷನ್ ಇದು!

Published : Sep 15, 2023, 01:15 PM IST
ಬಾಯ್ ಫ್ರೆಂಡ್ ಖಾಲಿ ಪರ್ಸ್ ನೋಡಿ MNC ಗರ್ಲ್ ಫ್ರೆಂಡ್ ರಿಯಾಕ್ಷನ್ ಇದು!

ಸಾರಾಂಶ

ಪರ್ಸ್ ಖಾಲಿ ಇದ್ರೆ ಅವರಿಗೆ ಬೆಲೆ ಇಲ್ಲ. ತುಂಬಿದ ಪರ್ಸ್ ಹೊಂದಿದ್ರೆ ಜನ ಹಿಂದೆ ಬರ್ತಾರೆ. ಈಗಿನ ದಿನಗಳಲ್ಲಿ ಪ್ರೀತಿ ಕೂಡ ಶ್ರೀಮಂತರಿಗೆ ಎನ್ನುವಂತಾಗಿದೆ. ಹಾಗಿರುವಾಗ ಈ ಎಂಎನ್ಸಿಯಲ್ಲಿ ಕೆಲಸ ಮಾಡುವ ಹುಡುಗಿ ಮಾಡಿದ ಕೆಲಸ ಗಮನ ಸೆಳೆದಿದೆ   

ಹಣದ ಬೆಲೆ ಕೈನಲ್ಲಿ ಕಾಸಿಲ್ಲದವರಿಗೆ ಗೊತ್ತು. ಪ್ರತಿಯೊಬ್ಬ ವ್ಯಕ್ತಿಯೂ ಹಣಕ್ಕಾಗಿ ಹಾತೊರೆಯುತ್ತಾನೆ. ಸಾಕಷ್ಟು ಪರಿಶ್ರಮಪಡ್ತಾನೆ. ಹಣ ಹಾಗೂ ಮಹಿಳೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಜೋಕ್ ಗಳು ಹರಿದಾಡೋದನ್ನು ನೀವು ನೋಡ್ಬಹುದು. ಬೈಕ್ ನಲ್ಲಿ ಬಂದ ಬಾಯ್ ಫ್ರೆಂಡ್ ಬಿಟ್ಟು ಕಾರ್ ನಲ್ಲಿ ಬಂದ ವ್ಯಕ್ತಿ ಜೊತೆ ಹುಡುಗಿ ಹೋಗೋದಿರಲಿ ಇಲ್ಲ ಹಣವಂತ ಸಿಕ್ಕಿದ ಎನ್ನುವ ಕಾರಣಕ್ಕೆ ಗುಣವಂತನನ್ನು ಬಿಟ್ಟು ಹೋದ ವಿಡಿಯೋಗಳನ್ನು, ಜೋಕ್ ಗಳನ್ನು ನೀವು ನೋಡ್ತಿರುತ್ತೀರಿ. ಅನೇಕ ಸಿನಿಮಾಗಳಲ್ಲೂ ಇದನ್ನು ತೋರಿಸಲಾಗಿದೆ. ಆದ್ರೆ ಇದು ಎಲ್ಲ ಹುಡುಗಿಯರಿಗೆ ಅನ್ವಯಿಸೋದಿಲ್ಲ. ಬಹುತೇಕ ಹುಡುಗಿಯರು ವಾಸ್ತವವಾಗಿ ಹಾಗಿರೋದಿಲ್ಲ. ಹಣಕ್ಕಿಂತ ಅವರಿಗೆ ಪ್ರೀತಿ (Love), ಗೌರವ (Respect) ದೊಡ್ಡದಾಗುತ್ತದೆ. ಇದನ್ನು ಯುಪಿಎಸ್ಸಿ ಪರೀಕ್ಷೆಗೆ (UPSC Exam) ಸಿದ್ಧತೆ ನಡೆಸುತ್ತಿರುವ ವ್ಯಕ್ತಿಯೊಬ್ಬ ಸ್ಪಷ್ಟಪಡಿಸಿದ್ದಾರೆ. ತನ್ನ ಗರ್ಲ್ ಫ್ರೆಂಡ್ ಮಾಡಿದ ಕೆಲಸವನ್ನು ಅವನು ಸಾಮಾಜಿಕ ಜಾಲತಾಣ, ಹಿಂದೆ ಟ್ವಿಟರ್ ಆಗಿದ್ದ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾನೆ. ಬಾಯ್ ಫ್ರೆಂಡ್ ಪರ್ಸಲ್ಲಿ  ಕಾಸಿಲ್ಲ ಎಂಬುದು ಗೊತ್ತಾದ ನಂತ್ರ ಗರ್ಲ್ ಫ್ರೆಂಡ್ ಮಾಡಿದ್ದೇನು, ನನ್ನ ಕಣ್ಣು ತುಂಬಿದ್ದೇಕೆ ಎಂಬುದನ್ನು ಆತ ಬರೆದುಕೊಂಡಿದ್ದಾನೆ.

@iUtkarshNeil ಹೆಸರಿನ ಖಾತೆಯಲ್ಲಿ ಐದು ನೂರು ರೂಪಾಯಿ ನೋಟು (Note) ಗಳ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋ  ಮೇಲೆ ನಡೆದ ಘಟನೆಯೇನು ಎಂಬುದನ್ನು ವ್ಯಕ್ತಿ ಬರೆದಿದ್ದಾನೆ. ಅವರಿಬ್ಬರು ಐದು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ವ್ಯಕ್ತಿ ಪಬ್ಲಿಕ್ ಯೂನಿಯನ್ ಸರ್ವೀಸ್ ಕಮಿಷನ್ (UPSC) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ. ಇಬ್ಬರು ಯುಪಿಎಸ್ಸಿ ಕೋಚಿಂಗ್ ಸೆಂಟರ್ ನಲ್ಲಿ ಮೊದಲ ಬಾರಿ ಭೇಟಿ ಆಗಿದ್ದರು. ಅಲ್ಲಿಯೇ ಇಬ್ಬರ ಮಧ್ಯೆ ಪ್ರೀತಿ (Love) ಚಿಗುರಿತ್ತು. ಈಗ ಹುಡುಗಿ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ. ಆದ್ರೆ ಹುಡುಗ ಈಗ್ಲೂ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾನೆ. ಈ ಬಾರಿ ಗರ್ಲ್ ಫ್ರೆಂಡ್ ಭೇಟಿ ಮಾಡಲು ಹೋದಾಗ ಘಟನೆ ನಡೆದಿದೆ. ಬಾಯ್ ಫ್ರೆಂಡ್ ಪರ್ಸ್ ನಲ್ಲಿ ಕಡಿಮೆ ಹಣವಿರೋದನ್ನು ಹುಡುಗಿ ನೋಡಿದ್ದಾಳೆ. ಆತನಿಗೆ ತಿಳಿಯದೆ ರಹಸ್ಯವಾಗಿ ಆತನ ಪರ್ಸ್ ನಲ್ಲಿ ಹಣವನ್ನು ಇಟ್ಟಿದ್ದಾಳೆ ಹುಡುಗಿ. ಆಕೆ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಿಟ್ಟಾಗ ಪರ್ಸ್ ನೋಡಿದ್ದಾನೆ. ಪರ್ಸ್ ತುಂಬಾ ಹಣ ಇರೋದನ್ನು ನೋಡಿ ಅಳು ಬಂದಿದೆ. ಸುಲಿಗೆ ನಡೆಯುವ ಸಮಯದಲ್ಲಿ ನಿಮ್ಮನ್ನು ಬೆಂಬಲಿಸುವ ಇಂಥ ವ್ಯಕ್ತಿಗಳು ಸಿಕ್ಕಿದ್ರೆ ಎಷ್ಟು ಒಳ್ಳೆಯದು ಎಂದು ವ್ಯಕ್ತಿ ಬರೆದಿದ್ದಾನೆ. 

ಮಕ್ಕಳ ಪಾಲನೆ ಬಗ್ಗೆ ಅಭಿಷೇಕ್ ಬಚ್ಚನ್ ಕಿವಿ ಮಾತು, ಮಗಳು ಆರಾಧ್ಯ ನೋಡಿಕೊಳ್ಳೋದು ಯಾರು?

ಯುಪಿಎಸ್ಸಿ ಆಕಾಂಕ್ಷಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2.2 ಮಿಲಿಯನ್ಸ್ ಬಾರಿ ಇದನ್ನು ನೋಡಲಾಗಿದೆ. 20 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 2 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.

ನೆಟ್ಟಿಗರು ಹುಡುಗಿ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಯುಪಿಎಸ್ಸಿ ಪಾಸ್ ಆದ್ಮೇಲೆ ಅವಳನ್ನು ನೆಗ್ಲೆಟ್ ಮಾಡ್ಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಇನ್ನೂ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದು ಬೇಸರ ತಂದಿದೆ. ಹೆಚ್ಚು ಬೇಡಿಕೆಯಲ್ಲಿರುವ ಕೋರ್ಸ್ ಮಾಡಿ ಒಂದು ಒಳ್ಳೆ ಕೆಲಸ ಗಿಟ್ಟಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ಸಲಹೆ ನೀಡಿದ್ದಾರೆ.

ಮಗಳು ಬೇಕೆಂದು 9 ಮಕ್ಕಳನ್ನು ಹೆತ್ತ ಅಮ್ಮ, ಕಡೆಗಾದರೂ ಹುಟ್ಟಿತಾ ಹೆಣ್ಣು!?

ಐದು ವರ್ಷದಿಂದ ಸಂಬಂಧದಲ್ಲಿದ್ದು, ಯುಪಿಎಸ್ಸಿ ಆಕಾಂಕ್ಷಿಗೆ ಸಹಾಯ ಮಾಡ್ತಿರುವ, ಬೆಂಬಲ ನೀಡ್ತಿರುವ ಹುಡುಗಿಯಂತ ಗರ್ಲ್ ಫ್ರೆಂಡ್ ಎಲ್ಲರಿಗೂ ಸಿಗ್ಲಿ ಎಂದು ಅನೇಕರು ಹರಸಿದ್ದಾರೆ. 
ಪುರುಷರು ತಮ್ಮ ಸಂಬಂಧದಲ್ಲಿ ಕ್ಷುಲ್ಲಕರಾಗಿರುತ್ತಾರೆ. ಆದರೆ ಮಹಿಳೆಯರು ತಮ್ಮ ಬದ್ಧತೆಗಳಲ್ಲಿ ಹೆಚ್ಚು ಪ್ರಾಮಾಣಿಕವಾಗಿರುತ್ತಾರೆ. ಈ ರತ್ನವನ್ನು ಬಿಡಬೇಡಿ. ಅವಳು ಎಂದಾದರೂ ಸ್ವಾತಂತ್ರ್ಯವನ್ನು ಬಯಸಿದರೆ ಅದನ್ನು ಅವಳಿಗೆ ಕೊಡಿ. ಇದು ಅವಳಿಗೆ ನಿಮ್ಮ ಉಡುಗೊರೆಯಾಗಿರುತ್ತದೆ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Most Expensive Divorce: ವಿಶ್ವದಲ್ಲಿಯೇ ಅತ್ಯಂತ ದುಬಾರಿ 10 ವಿಚ್ಛೇದನಗಳು!
Savings Tips : ಕಪಲ್ಸ್ ಪ್ರತಿ ತಿಂಗಳು ಈ ರೀತಿ ಉಳಿತಾಯ ಮಾಡಿದ್ರೆ… ತಲೆ ಬಿಸಿನೇ ಇರೋದಿಲ್ಲ