'ಆಕೆ ನನ್ನ ಸ್ವೀಟ್‌ಹಾರ್ಟ್‌ ಆದ್ರೆ ನಾವು ಲೆಸ್ಬಿಯನ್‌ಗಳಲ್ಲ..' ನಟಿ ಸೌಮ್ಯ ಜೊತೆಗಿನ ರಿಲೇಷನ್‌ಷಿಪ್‌ ಗಾಸಿಪ್‌ಗೆ ತೆರೆ ಎಳೆದ ಅಶ್ವತಿ

Published : Jul 08, 2026, 10:44 PM IST
aswathy nair

ಸಾರಾಂಶ

'ಲೇಡೀಸ್ ರೂಮ್' ಖ್ಯಾತಿಯ ನಟಿ ವಿಎಸ್ ಸೌಮ್ಯ, ಫಿಟ್ನೆಸ್ ಟ್ರೈನರ್ ಗೌತಮ್ ಅವರನ್ನು ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯ ವೇದಿಕೆಯಲ್ಲಿ, ಸೌಮ್ಯರ ಆಪ್ತ ಗೆಳತಿ ಅಶ್ವತಿ ನಾಯರ್, ತಮ್ಮಿಬ್ಬರ ಬಗ್ಗೆ ಹರಿದಾಡುತ್ತಿದ್ದ 'ಲೆಸ್ಬಿಯನ್' ಸಂಬಂಧದ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

ತಿರುವನಂತಪುರಂ (ಜು.8): ‘ಲೇಡೀಸ್ ರೂಮ್’ ಎನ್ನುವ ಜನಪ್ರಿಯ ಧಾರವಾಹಿಯ ಮೂಲಕ ಮಿನಿ ಸ್ಕ್ರೀನ್ ಪ್ರೇಕ್ಷಕರ ಮನ ಗೆದ್ದಿರುವ ನಟಿ ವಿಎಸ್ ಸೌಮ್ಯ (V.S. Soumya) ಇತ್ತೀಚೆಗಷ್ಟೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯ ಬೆನ್ನಲ್ಲೇ ಅವರ ವೈಯಕ್ತಿಕ ಜೀವನದ ಕುರಿತಾಗಿದ್ದ ದೊಡ್ಡದೊಂದು ವದಂತಿಗೆ ಬ್ರೇಕ್ ಬಿದ್ದಿದೆ. ಸೌಮ್ಯ ಮತ್ತು ಅವರ ಆಪ್ತ ಗೆಳತಿ, ನಟಿ ಅಶ್ವತಿ ನಾಯರ್ (Aswathy Nair) ಪರಸ್ಪರ 'ಲೆಸ್ಬಿಯನ್' (Lesbian) ಸಂಬಂಧದಲ್ಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುಳ್ಳು ಸುದ್ದಿಗಳಿಗೆ ಅಶ್ವತಿ ಈಗ ಮದುವೆಯ ವೇದಿಕೆಯಲ್ಲೇ ಖಡಕ್ ಉತ್ತರ ನೀಡಿ ಗಾಸಿಪ್‌ಕೋರರ ಬಾಯಿ ಮುಚ್ಚಿಸಿದ್ದಾರೆ.

ದೀರ್ಘಕಾಲದ ಸ್ನೇಹಿತ ಹಾಗೂ ಫಿಟ್ನೆಸ್ ಟ್ರೈನರ್ ಆಗಿರುವ ಗೌತಮ್ ಅವರೊಂದಿಗೆ ಸೌಮ್ಯ ಮದುವೆ ನಡೆದಿದೆ. ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದ ಅತ್ಯಂತ ಸರಳ ಸಮಾರಂಭದಲ್ಲಿ ಇಬ್ಬರು ಹಾರ ಬದಲಾಯಿಸಿಕೊಂಡಿದ್ದಾರೆ. ಈ ಮದುವೆಗೆ ಆಗಮಿಸಿದ್ದ ನಟಿ ಅಶ್ವತಿ ನಾಯರ್, ಮಾಧ್ಯಮಗಳ ಎದುರು ತಮ್ಮಿಬ್ಬರ ಸ್ನೇಹದ ಬಗ್ಗೆ ಇದ್ದ ಅಪಪ್ರಚಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಆ ರೀತಿ ಕರೆಯುವುದನ್ನು ನಿಲ್ಲಿಸಿ: ಅಶ್ವತಿ ಆಕ್ರೋಶ

ತಮ್ಮಿಬ್ಬರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಉತ್ತರಿಸಿದ ಅಶ್ವತಿ, 'ತುಂಬಾ ಜನ ನಮ್ಮನ್ನು ಲೆಸ್ಬಿಯನ್, ಲೆಸ್ಬಿಯನ್ ಎಂದು ನಿರಂತರವಾಗಿ ಕರೆಯುತ್ತಿದ್ದರು. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೇಳುವವರು ಹೇಳಲಿ, ಯಾರ ಬಾಯನ್ನೂ ನಮಗೆ ಮುಚ್ಚಿಸಲು ಸಾಧ್ಯವಿಲ್ಲ ಅಂದುಕೊಂಡಿದ್ದೆವು. ಆದರೆ ಈಗ ಆ ಗಾಸಿಪ್‌ ಮಾಡುವವರಿಗೆ ನಾನು ಹೇಳಲು ಬಯಸುವುದಿಷ್ಟೇ; ಇನ್ನಾದರೂ ನಮ್ಮನ್ನು ಲೆಸ್ಬಿಯನ್ ಎಂದು ಕರೆಯುವುದನ್ನು ನಿಲ್ಲಿಸಿ. ಏಕೆಂದರೆ, ಸೌಮ್ಯ.. ನನ್ನ ಅಕ್ಕ ಈಗ ಮದುವೆಯಾಗಿದ್ದಾಳೆ. ನನಗೂ ನನ್ನದೇ ಆದ ಒಂದು ಒಳ್ಳೆಯ ಜೀವನವಿದೆ. ನಾವು ಕೇವಲ ಬೆಸ್ಟ್ ಫ್ರೆಂಡ್ಸ್ ಅಷ್ಟೇ" ಎಂದು ಹೇಳಿದ್ದಾರೆ.

ಜೀವನಪೂರ್ತಿ ಅವಳು ನನ್ನ ಸ್ವೀಟ್‌ಹಾರ್ಟ್‌

ತಮ್ಮ ನಡುವಿನ ಆತ್ಮೀಯ ಸಂಬಂಧದ ಬಗ್ಗೆ ಮುಂದುವರಿದು ಮಾತನಾಡಿದ ಅಶ್ವತಿ, ಸೌಮ್ಯ ನನ್ನ ಜೀವನದುದ್ದಕ್ಕೂ ನನ್ನ ಸ್ವೀಟ್‌ಹಾರ್ಟ್‌ ಆಗಿ ನನ್ನ ಜೊತೆಯಲ್ಲೇ ಇರುತ್ತಾಳೆ. ಈಗ ಅವಳು ಮಾತ್ರವಲ್ಲ, ಅವಳ ಪತಿ ಗೌತಮ್ ಕೂಡ ನನ್ನ ಬೆಸ್ಟ್ ಫ್ರೆಂಡ್. ಅವರಿಬ್ಬರೂ ನನಗೆ ತುಂಬಾ ಇಷ್ಟ. ನನ್ನ ಪಾಲಿನ ಮುತ್ತುಗಳು ಅವರು," ಎಂದು ಭಾವುಕರಾಗಿ ನುಡಿದಿದ್ದಾರೆ. ಅಶ್ವತಿ ಅವರ ಈ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ನ್ಯಾಷನಲ್ ಮೆಡಲಿಸ್ಟ್ ಅಥ್ಲೀಟ್ ಈ ಸೌಮ್ಯ!

ಕೋಝಿಕೋಡ್‌ನ ಆನಕ್ಕಾಂಪೋಯಿಲ್ ಮೂಲದವರಾದ ಸೌಮ್ಯ ಫಿಟ್ನೆಸ್ ಟ್ರೈನರ್ ಕೂಡ ಹೌದು. ಇನ್ನು ಗೌತಮ್ ಕೂಡ ಇದೇ ಫಿಟ್ನೆಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಲಾ ಅಲ್ಫೋನ್ಸಾ ಕಾಲೇಜಿನಲ್ಲಿ ಬಿಕಾಂ ಶಿಕ್ಷಣ ಮುಗಿಸಿದ ನಂತರ ಸೌಮ್ಯ ನಟನಾ ರಂಗಕ್ಕೆ ಪ್ರವೇಶ ಮಾಡಿದ್ದರು. ಸೌಮ್ಯ ಅವರ ಇನ್‌ಸ್ಟಾಗ್ರಾಮ್ ವೀಡಿಯೊಗಳನ್ನು ನೋಡಿ ಇಷ್ಟಪಟ್ಟ 'ಲೇಡೀಸ್ ರೂಮ್' ಧಾರಾವಾಹಿಯ ನಿರ್ದೇಶಕರು ಅವರಿಗೆ ನಟಿಸಲು ಅವಕಾಶ ನೀಡಿದ್ದರು.

ಇತ್ತೀಚೆಗಷ್ಟೇ ಪ್ರಸಾರ ಅಂತ್ಯಗೊಂಡ 'ಟೀಚರಮ್ಮ' ಸೀರಿಯಲ್‌ನ 'ಕನಿ' ಎಂಬ ಪಾತ್ರದ ಮೂಲಕವೂ ಸೌಮ್ಯ ಮನೆಮಾತಾಗಿದ್ದರು. ಕೇವಲ ನಟನೆ ಮಾತ್ರವಲ್ಲದೆ ಕ್ರೀಡಾರಂಗದಲ್ಲೂ ಸೌಮ್ಯ ದೊಡ್ಡ ಸಾಧನೆ ಮಾಡಿದ್ದಾರೆ. ಪೋಲ್ ವಾಲ್ಟ್ (Pole Vault) ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ (Bronze Medal) ಗೆದ್ದ ಹೆಮ್ಮೆಯ ಅಥ್ಲೀಟ್ ಇವರಾಗಿದ್ದಾರೆ. ಸದ್ಯ ಸೌಮ್ಯ ಹಾಗೂ ಗೌತಮ್ ಅವರ ಮದುವೆಯ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Govt Job: ಅಪ್ಪನಿಂದ ಬಂದಿದ್ದ ಸರ್ಕಾರಿ ನೌಕರಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಡುಡುಂ ಮಾಡಿಸಿದ ಮಗಳು!
ಕೊನೆಗೂ ಈಡೇರಲಿಲ್ಲ ನಟ ಪವನ್​ ಕಲ್ಯಾಣ್​ ಆಸೆ: ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ ಪುಟ್ಟ ಅಭಿಮಾನಿ