ಲವ್ ಮ್ಯಾರೇಜ್‌ಗಳಿಗೆ ಹೋಲಿಸಿದರೆ ಆರೇಂಜ್ಡ್ ಮ್ಯಾರೇಜ್ ಆಗುವ ದಂಪತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಅಪರಿಚಿತರೊಂದಿಗೆ ಪರಿಚಿತರಂತೆ ಬೆರೆಯಲು ಹೆಚ್ಚು ಸಮಯಾವಕಾಶದ ಅಗತ್ಯವಿರುತ್ತದೆ. ತಮ್ಮ ಪತಿಯನ್ನು ನಾವು ಹೇಗೆ ಪ್ರೀತಿ ಮಾಡಿದೆವು ಎಂಬ ಅನುಭವವನ್ನು ಕೆಲ ವಿವಾಹಿತ ಮಹಿಳೆಯರು ಹಂಚಿಕೊಂಡಿದ್ದಾರೆ. ಅವುಗಳನ್ನು ತಿಳಿದ್ರೆ ನಿಮಗೂ ಅಚ್ಚರಿಯಾಗೋದು ಖಂಡಿತ.
ಪ್ರೀತಿ ಮಾಡುವುದಲ್ಲ, ಅದು ತನ್ನಿಂದ ತಾನೇ ಸಂಭವಿಸುತ್ತದೆ ಅನ್ನೋ ಮಾತೇ ಇದೆ. ಹೀಗಾಗಿಯೇ ಹಲವರು ಜಾತಿ-ಧರ್ಮ, ಆಸ್ತಿ-ಅಂತಸ್ತನ್ನು ಬಿಟ್ಟು ತಾವು ಪ್ರೀತಿಸಿದವರನ್ನು ಮದುವೆ ಆಗುತ್ತಾರೆ. ಲವ್ ಮ್ಯಾರೇಜ್‌ನಲ್ಲಿ ಈಗಾಗಲೇ ಇಬ್ಬರ ನಡುವೆ ಪ್ರೀತಿಯಿರುತ್ತದೆ. ಆದರೆ ಆರೇಂಜ್ಡ್ ಮ್ಯಾರೇಜ್‌ನಲ್ಲಿ ಇಬ್ಬರ ನಡುವೆ ಪ್ರೀತಿ ಮೂಡುವುದು ಸ್ಪಲ್ಪ ಕಷ್ಟ. ಯಾಕೆಂದರೆ ಇಬ್ಬರೂ ಸಂಪೂರ್ಣ ಅಪರಿಚಿತರಾಗಿರುತ್ತಾರೆ. ಹೀಗಿದ್ದಾಗ ಆರೇಂಜ್ಡ್ ಮ್ಯಾರೇಜ್‌ನಲ್ಲಿ ಮಹಿಳೆಯರು ಸಂಗಾತಿಯನ್ನು ಪ್ರೀತಿಸಲು ಎಷ್ಟು ಕಷ್ಟಪಟ್ಟರು. ಕೆಲ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಗಂಡನನ್ನು ಪ್ರೀತಿಸಲು ಮೂರು ವರ್ಷ ಬೇಕಾಯಿತು: ಮದುವೆ (Marriage)ಯಾಗಿ ಮೂರು ವರ್ಷದ ಬಳಿಕ ಗಂಡನ ಮೇಲೆ ಲವ್ ಆಗಿದ್ದಾಗಿ ಮಹಿಳೆ (Woman)ಯೊಬ್ಬರು ಹೇಳಿಕೊಂಡಿದ್ದಾರೆ. 'ನನಗೆ ಬ್ರೇಕಪ್ ಆಗಿತ್ತು. ಹೆತ್ತವರು ನನಗೆ ಹುಡುಗನನ್ನು ನೋಡಿದರು. ನನ್ನ ತಂದೆ-ತಾಯಿಯ ಇಚ್ಛೆಯಂತೆ ಅರೇಂಜ್ಡ್ ಮ್ಯಾರೇಜ್ ಆದೆ. ಆದರೆ ನನ್ನ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇರಲ್ಲಿಲ್ಲ. ನನ್ನ ಪತಿ ತುಂಬಾ ಒಳ್ಳೆಯ ವ್ಯಕ್ತಿ. ಆದರೆ ಮದುವೆಯ ಆರಂಭಿಕ ವರ್ಷಗಳಲ್ಲಿ, ನಮ್ಮ ಸಂಬಂಧ (Relationship)ವನ್ನು ಬಲಪಡಿಸಲು ನಾನು ಶ್ರಮಿಸಿದೆವು. ಇದು ನನಗೆ ಸ್ವಲ್ಪವೂ ಸುಲಭವಾಗಿರಲಿಲ್ಲ. ಆದರೆ ಮದುವೆಯಾಗಿ ಮೂರು ವರ್ಷದ ಬಳಿಕ ನಾನು ಅವರನ್ನು ಪ್ರೀತಿಸಲು (Love) ಆರಂಭಿಸಿದೆ' ಎಂದು ಮಹಿಳೆ ಹೇಳಿದ್ದಾರೆ.
ಮನೆಯಲ್ಲಿಯೇ ನೋಡಿದ ಹುಡುಗಿ, ಹುಡುಗನನ್ನು ಮದುವೆಯಾಗೋ ಮುನ್ನ...
ಮದುವೆಗೆ ಮೊದಲು ಉತ್ತಮ ಸ್ನೇಹಿತರಾಗಿದ್ದೆವು: ಇನ್ನೊಬ್ಬ ಮಹಿಳೆ 'ಗಂಡ-ಹೆಂಡತಿಯೆಂದು (Husband-wife) ನಮ್ಮನ್ನು ನಾವು ಅಂದುಕೊಳ್ಳಲು ನಮ್ಮ ಮದುವೆಗೆ ದೃಢಪಡಿಸಿದ ಸಮಯದಿಂದ ಇನ್ನೂ 9 ತಿಂಗಳುಗಳನ್ನು ತೆಗೆದುಕೊಂಡಿತು. ಇದು ನಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಸಾಕಷ್ಟು ಸಮಯ (Time)ವಾಗಿತ್ತು. ಯಾಕೆಂದರೆ ನಾವಿಬ್ಬರೂ ಮದುವೆಯಾಗುವ ಮೊದಲು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಲು ಬಯಸಿದ್ದೆವು. ನಾವು ಒಬ್ಬರನ್ನೊಬ್ಬರು ಹೆಚ್ಚಾಗಿ ಭೇಟಿಯಾಗುತ್ತಿದ್ದೆವು' ಎಂದು ಮಹಿಳೆ ತಿಳಿಸಿದ್ದಾರೆ. ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದೆವು. ಈ ರೀತಿಯಾಗಿ, ನಾವು ಯಾವುದೇ ಸಮಯದಲ್ಲಿ ಉತ್ತಮ ಸ್ನೇಹಿತ (Friends)ರಾಗಿದ್ದೇವೆ, ಇದು ನಮ್ಮ ಸಂಬಂಧದ ಅತ್ಯಂತ ಆಸಕ್ತಿದಾಯಕ ಭಾಗವಾಗಿತ್ತು. ಯಾಕೆಂದರೆ ಮದುವೆ ಆಗುವ ಹೊತ್ತಿಗೆ ಒಬ್ಬರನ್ನೊಬ್ಬರು ಅಪಾರವಾಗಿ ಪ್ರೀತಿಸಲು ಆರಂಭಿಸಿದ್ದೆವು ಎಂದು ತಿಳಿಸಿದ್ದಾರೆ.
ಗಂಡನ ಕಾಳಜಿಯನ್ನು ನೋಡಿದೆ: ಇನ್ನೊಬ್ಬ ಮಹಿಳೆ ಆರೇಂಜ್ಡ್ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮದುವೆಗಾಗಿ ಆಫೀಸಿಗೆ ಒಂದು ತಿಂಗಳು ರಜೆ ಹಾಕಿದ್ದೆ. ಮದುವೆಯಾದ ಒಂದು ತಿಂಗಳ ನಂತರ, ನಾನು ಕೆಲಸಕ್ಕೆ (Work) ಮರಳಿದೆ. ದುರದೃಷ್ಟವಶಾತ್, ಮೊದಲ ದಿನವೇ ನಾನು ಕಚೇರಿಗೆ ತಡವಾಗಿ ತಲುಪಿದೆ. ನನ್ನ ಕೆಲಸವನ್ನು ಪೂರ್ಣಗೊಳಿಸಲು ನಾನು ಹೆಚ್ಚಿನ ಸಮಯವನ್ನು ಕೆಲಸ ಮಾಡಬೇಕಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ನನ್ನ ಕಾರು ಕೂಡಾ ಕೆಟ್ಟು ನಿಂತಿತು. ಈ ಸಮಯದಲ್ಲಿ ನಾನು ನನ್ನ ಪತಿಗೆ ಕರೆ ಮಾಡಿ ಇಡೀ ಪರಿಸ್ಥಿತಿಯನ್ನು ಹೇಳಿದೆ. ಹೀಗಿರುವಾಗ ಅವರು ನನ್ನ ಬಗ್ಗೆ ಎಷ್ಟು ಕಾಳಜಿ (Care) ವಹಿಸುತ್ತಾರೆ ಎಂಬುದು ಅವರ ಧ್ವನಿಯಿಂದ ತಿಳಿಯುತ್ತಿತ್ತು.
ಇನ್ನೂ ಹೆಚ್ಚು, ಅವರು 15 ನಿಮಿಷಗಳಲ್ಲಿ ಸ್ಥಳವನ್ನು ತಲುಪಿದಾಗ ನನಗೆ ಆಶ್ಚರ್ಯವಾಯಿತು. ಅವರು ನನ್ನ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಅವನು ನನ್ನ ಹತ್ತಿರ ಬಂದ ತಕ್ಷಣ, ನನ್ನನ್ನು ತಬ್ಬಿಕೊಂಡರು. ಆಗ ನನಗೆ ಪ್ರೀತಿಯ, ಮದುವೆಯ ನಿಜವಾದ ಅರ್ಥ ತಿಳಿಯಿತು.
Arranged Marriage: ದಾಂಪತ್ಯದಲ್ಲಿ ಸಮಸ್ಯೆಯಾದಾಗ ಬಗೆಹರಿಸಿಕೊಳ್ಳುವುದು ಹೇಗೆ ?
ಕೇಳದೆ ನನಗೆ ಸಹಾಯ ಮಾಡಿದರು: ಇನ್ನೊಬ್ಬ ಮಹಿಳೆ ಹೇಳಿರುವಂತೆ, ನನ್ನ ಪತಿ ತುಂಬಾ ನಾಚಿಕೆ ಸ್ವಭಾವದವರು. ಅವರು ತನ್ನ ಸ್ನೇಹಿತರನ್ನು ಸಹ ವಿರಳವಾಗಿ ಭೇಟಿಯಾಗುತ್ತಾನೆ. ಒಮ್ಮೆ ನನ್ನ ಆತ್ಮೀಯ ಗೆಳೆಯನಿಗೆ ಅಪಘಾತ ಸಂಭವಿಸಿತು ಮತ್ತು ನಾನು ಕಚೇರಿಯಿಂದ ನೇರವಾಗಿ ಆಸ್ಪತ್ರೆಗೆ ಹೋಗಬೇಕಾಯಿತು. ಇದನ್ನು ನನ್ನ ಪತಿಗೆ ದೂರವಾಣಿ ಮೂಲಕ ಹೇಳಿದ್ದೆ. ನಾನು ಆಸ್ಪತ್ರೆ ತಲುಪುವ ಮೊದಲೇ ಅವರು ಆಸ್ಪತ್ರೆ ತಲುಪಿದ್ದರು. ನಾನು ಇಲ್ಲದೆ ಇಡೀ ಪರಿಸ್ಥಿತಿಯನ್ನು ಅವರು ನಿಭಾಯಿಸಿದನು. ಆ ದಿನ ನಾನು ನನ್ನ ಉಳಿದ ಜೀವನವನ್ನು ಕಳೆಯಲು ಬಯಸುವ ಏಕೈಕ ವ್ಯಕ್ತಿ ನನ್ನ ಪತಿ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.